Akshay Kumar: ಅಕ್ಷಯ್ ಕುಮಾರ್ ಕಡೆಯಿಂದ ದೊರಕಿತು ಮತ್ತೊಂದು ದೊಡ್ಡ ಸಹಾಯ
ಕೊವಿಡ್ ಲಾಕ್ಡೌನ್ನಿಂದ ಸಾಕಷ್ಟು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಟ-ನಟಿಯರು ಚಿತ್ರರಂಗದಲ್ಲಿ ತೊಂದರೆಗೆ ಒಳಗಾದವರಿಗೆ ಸಹಾಯ ಮಾಡುತ್ತಿದ್ದಾರೆ. ಅಕ್ಷಯ್ ಕುಮಾರ್ ತಮ್ಮ ಸಹಾಯ ಹಸ್ತವನ್ನು ಮತ್ತಷ್ಟು ಚಾಚಿದ್ದಾರೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್ ಇತ್ತೀಚೆಗೆ ದೇಶಭಕ್ತಿ ಕಥೆ ಆಧಾರಿತ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ, ಸಂಕಷ್ಟದ ಸಮಯದಲ್ಲಿ ದೇಶಕ್ಕಾಗಿ ನಿಲ್ಲುತ್ತಿದ್ದಾರೆ. ಈ ಮೂಲಕ ಅವರು ರಿಯಲ್ ಹೀರೋ ಆಗಿದ್ದಾರೆ. ಈಗ ಕೊವಿಡ್ ಸಂಕಷ್ಟದ ಸಮಯದಲ್ಲಿ ಸಾಕಷ್ಟು ಸಹಾಯವನ್ನು ಅಕ್ಷಯ್ ಕುಮಾರ್ ಮಾಡಿದ್ದಾರೆ.
ಕೊವಿಡ್ ಲಾಕ್ಡೌನ್ನಿಂದ ಸಾಕಷ್ಟು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಟ-ನಟಿಯರು ಚಿತ್ರರಂಗದಲ್ಲಿ ತೊಂದರೆಗೆ ಒಳಗಾದವರಿಗೆ ಸಹಾಯ ಮಾಡುತ್ತಿದ್ದಾರೆ. ಅಕ್ಷಯ್ ಕುಮಾರ್ ತಮ್ಮ ಸಹಾಯ ಹಸ್ತವನ್ನು ಮತ್ತಷ್ಟು ಚಾಚಿದ್ದಾರೆ. ಬರೋಬ್ಬರಿ 3,600 ಡಾನ್ಸರ್ಗಳಿಗೆ ಅಕ್ಷಯ್ ಒಂದು ತಿಂಗಳಿಗೆ ಸಾಕಾಗುವಷ್ಟು ದಿನಸಿ ಕಿಟ್ ನೀಡಿದ್ದಾರೆ. ಈ ಮೂಲಕ ಅವರು ಎಲ್ಲರಿಗೂ ಮಾದರಿ ಆಗಿದ್ದಾರೆ.
ಬಾಲಿವುಡ್ ಕೋರಿಯೋಗ್ರಾಫರ್ ಗಣೇಶ್ ಆಚಾರ್ಯ ಅವರು ಇತ್ತೀಚೆಗೆ 50ನೇ ವಸಂತಕ್ಕೆ ಕಾಲಿಟ್ಟಿದ್ದರು. ಅವರ ಜತೆ ಒಳ್ಳೆಯ ಒಡನಾಟ ಹೊಂದಿರುವ ಅಕ್ಷಯ್, ಏನು ಗಿಫ್ಟ್ ನೀಡಬೇಕು ಎಂದು ಕೇಳಿದ್ದಾರೆ. ಆಗ ಗಣೇಶ್ 3600 ಡಾನ್ಸರ್ಗಳಿಗೆ ಸಹಾಯ ಮಾಡುವಂತೆ ಕೋರಿದ್ದಾರೆ. ಒಂದು ಕ್ಷಣವೂ ಯೋಚನೆ ಮಾಡದೇ ಇದಕ್ಕೆ ಒಪ್ಪಿ ಸಹಾಯ ಮಾಡಿದ್ದಾರೆ.
ಕೊವಿಡ್ ಸಂಕಷ್ಟದ ಸಮಯದಲ್ಲಿ ಅಕ್ಷಯ್ ಸಾಕಷ್ಟು ಸಹಾಯ ಮಾಡುತ್ತಿದ್ದಾರೆ. ಕಳೆದ ವರ್ಷ ಲಾಕ್ಡೌನ್ ಆದಾಗ ನಟ ಅಕ್ಷಯ್ ಕುಮಾರ್ ಅವರು ಪಿಎಂ ಕೇರ್ಸ್ ಫಂಡ್ಗೆ ಬರೋಬ್ಬರಿ 25 ಕೋಟಿ ರೂ.ಗಳನ್ನು ನೀಡಿದ್ದರು. ಈ ವರ್ಷ ಅವರು ಏನು ಮಾಡುತ್ತಿಲ್ಲ ಎನ್ನುವ ಮಾತು ಕೇಳಿ ಬಂದಿತ್ತು. ಇದಕ್ಕೆ ಅಕ್ಷಯ್ ಪತ್ನಿ ಟ್ವಿಂಕಲ್ ಖನ್ನಾ ಖಡಕ್ ಆಗಿ ಉತ್ತರ ನೀಡಿದ್ದರು.
ಸಿನಿಮಾ ವಿಚಾರಕ್ಕೆ ಬರುವುದಾದರೆ ಅಕ್ಷಯ್ ಕುಮಾರ್ ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ. ಅವರ ನಟನೆಯ ಸೂರ್ಯವಂಶಿ ಈಗಾಗಲೇ ಸಿದ್ಧಗೊಂಡಿದ್ದು, ಕೊವಿಡ್ ಕಾರಣದಿಂದ ವಿಳಂಬವಾಗುತ್ತಿದೆ. ಅವರ ನಟನೆಯ ಬೆಲ್ ಬಾಟಂ ಚಿತ್ರದ ಮೇಲೂ ಸಾಕಷ್ಟು ನಿರೀಕ್ಷೆ ಇದೆ. ಕೊವಿಡ್ ತಣ್ಣಗಾದ ನಂತರದಲ್ಲಿ ಈ ಸಿನಿಮಾಗಳು ತೆರೆಗೆ ಬರುವ ನಿರೀಕ್ಷೆ ಇದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಳಿ ಜೂನ್ ತಿಂಗಳಿಂದ ಶೂಟಿಂಗ್ಗೆ ಅವಕಾಶ ನೀಡುವಂತೆ ಅವರು ಕೋರಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Akshay Kumar: ಈ ಕಷ್ಟದಲ್ಲೂ ಅಕ್ಷಯ್ ಕುಮಾರ್ ಏನೂ ಸಹಾಯ ಮಾಡ್ತಿಲ್ವಾ? ಪತ್ನಿ ಟ್ವಿಂಕಲ್ ಖನ್ನಾ ಕೊಟ್ರು ಖಡಕ್ ಉತ್ತರ
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಹಣ ನೀಡಿ: ಅಭಿಮಾನಿಗಳ ಬಳಿ ಅಕ್ಷಯ್ ಕುಮಾರ್ ಮನವಿ