ಪ್ರೈಮ್ ಬಳಕೆದಾರರಿಗೆ ಸಿಹಿ ಸುದ್ದಿ; ಸಂಸ್ಥೆಯಿಂದ 61,467 ಕೋಟಿ ಡೀಲ್, ಗಣನೀಯವಾಗಿ ಹೆಚ್ಚಲಿದೆ ಸಿನಿಮಾಗಳ ಸಂಖ್ಯೆ

ಇತ್ತೀಚಿನ ದಿನಗಳಲ್ಲಿ ಒಟಿಟಿಗಳಲ್ಲಿ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚುತ್ತಿದೆ. ಲಾಕ್​ಡೌನ್​ನಿಂದಾಗಿ ಈ ಸಂಖ್ಯೆ ಮತ್ತಷ್ಟು ಏರಿಕೆ ಕಂಡಿದೆ.

ಪ್ರೈಮ್ ಬಳಕೆದಾರರಿಗೆ ಸಿಹಿ ಸುದ್ದಿ; ಸಂಸ್ಥೆಯಿಂದ 61,467 ಕೋಟಿ ಡೀಲ್, ಗಣನೀಯವಾಗಿ ಹೆಚ್ಚಲಿದೆ ಸಿನಿಮಾಗಳ ಸಂಖ್ಯೆ
ಅಮೇಜಾನ್​ ಪ್ರೈಮ್​
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on:May 27, 2021 | 7:26 AM

‘ಮೆಟ್ರೋ ಗೋಲ್ಡ್​​ವಿನ್ ಮೇಯರ್’ ಈ ನಿರ್ಮಾಣ ಸಂಸ್ಥೆ ಹೆಸರನ್ನು ಬಹುತೇಕರು ಕೇಳಿಯೇ ಇರುತ್ತಾರೆ. ಈ ಸಂಸ್ಥೆಯ ಲೋಗೋ ಸಾಕಷ್ಟು ಫೇಮಸ್​. ಅಷ್ಟೇ ಅಲ್ಲ, ಈ ನಿರ್ಮಾಣ ಸಂಸ್ಥೆಯಿಂದ ಮೂಡಿ ಬಂದ ಚಿತ್ರಗಳ ಸಂಖ್ಯೆ 4000 ದಾಟಿದೆ, 17 ಸಾವಿರಕ್ಕೂ ಅಧಿಕ ಟಿವಿ ಶೋಗಳನ್ನು ನಿರ್ಮಾಣ ಮಾಡಿದೆ. ಇಂಥ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯನ್ನು ಅಮೇಜಾನ್​ ಸಂಸ್ಥೆ ಖರೀದಿಸಿದೆ. ಅದೂ ಬರೋಬ್ಬರಿ 61,467 ಕೋಟಿ ರೂಪಾಯಿಗೆ (8.45 ಬಿಲಿಯನ್​) ಅನ್ನೋದು ವಿಶೇಷ.

ಎಂಜಿಎಂ ಅಮೆರಿಕದ ಸಿನಿಮಾ ಸ್ಟುಡಿಯೋ. ಜೇಮ್ಸ್​ ಬಾಂಡ್​ ಫ್ರಾಂಚೈಸಿಯ ಹಕ್ಕನ್ನು ಎಂಜಿಎಂ ಹೊಂದಿದೆ. ಈ ಡೀಲ್​ನಿಂದಾಗಿ ಅಮೇಜಾನ್ ಪ್ರೈಮ್​​ ಸಿನಿಮಾ ಲೈಬ್ರರಿ ದೊಡ್ಡ ಮಟ್ಟದಲ್ಲಿ ವಿಸ್ತರಣೆ ಆಗಲಿದೆ. ಅಲ್ಲದೆ, ನೆಟ್​ಫ್ಲಿಕ್ಸ್​ ಹಾಗೂ ಡಿಸ್ನಿ+ ಹಾಟ್​ಸ್ಟಾರ್​ ಸೇರಿ ಸಾಕಷ್ಟು ಒಟಿಟಿಗಳಿಗೆ ಇದು ಭಾರೀ ದೊಡ್ಡ ಮಟ್ಟದಲ್ಲಿ ಕಾಂಪಿಟೇಷನ್​ ಕೊಡಲಿದೆ.

ನೆಟ್​​ಫ್ಲಿಕ್ಸ್​ನಲ್ಲಿ ಸಿಕ್ಕಷ್ಟು ಇಂಗ್ಲಿಷ್​ ಹಾಗೂ ವೆಬ್​ ಸೀರಿಸ್​​ಗಳು ಬೇರೆ ಕಡೆಗಳಲ್ಲಿ ಸಿಗುವುದಿಲ್ಲ ಎನ್ನುವ ಮಾತು ಪ್ರಚಲಿತದಲ್ಲಿದೆ. ಈಗ, ಅಮೇಜಾನ್​ ಕೈಗೊಂಡಿರುವ ಈ ನಿರ್ಧಾರದಿಂದ ಸಂಸ್ಥೆಗೆ ದೊಡ್ಡ ಮಟ್ಟದಲ್ಲಿ ಸಹಕಾರಿಯಾಗಲಿದೆ. ಅಲ್ಲದೆ, ಪ್ರೈಮ್​ನಲ್ಲಿ ಸಿನಿಮಾಗಳ ಸಂಖ್ಯೆ ಹೆಚ್ಚಲಿದೆ.

ಇತ್ತೀಚಿನ ದಿನಗಳಲ್ಲಿ ಒಟಿಟಿಗಳಲ್ಲಿ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚುತ್ತಿದೆ. ಲಾಕ್​ಡೌನ್​ನಿಂದಾಗಿ ಈ ಸಂಖ್ಯೆ ಮತ್ತಷ್ಟು ಏರಿಕೆ ಕಂಡಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಒಟಿಟಿಗೆ ಬೇಡಿಕೆ ಮತ್ತಷ್ಟು ಹೆಚ್ಚುವ ಎಲ್ಲಾ ಸಾಧ್ಯತೆಗಳಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಅಮೇಜಾನ್​ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

ಎಂಜಿಎಂ ಕೇಬಲ್​ ಟಿವಿ ಹಾಗೂ ಆ್ಯಪ್​ ಕೂಡ ಹೊಂದಿದೆ. ಈ ಡೀಲ್​ನಿಂದ ಇದು ಕೂಡ ಅಮೇಜಾನ್​ ಪಾಲಾಗಿದೆ. ಕಳೆದ ಕೆಲ ತಿಂಗಳ ಹಿಂದೆಯೇ ಎಂಜಿಎಂ ಸೇಲ್​ಗೆ ಇಡಲಾಗಿತ್ತು. ಇದನ್ನು ಖರೀದಿಸಲು ಸಾಕಷ್ಟು ಸಂಸ್ಥೆಗಳು ಮುಂದೆ ಬಂದಿದ್ದವು. ಕೊನೆಗೆ ಅಮೇಜಾನ್​ ಜತೆ ಡೀಲ್​ ಕುದುರಿದೆ. ಈ ಡೀಲ್​ ಅಂತಿಮ ಆಗಲು ಸಮಯ ಸಿಗಲಿದೆ.

ಇದನ್ನೂ ಓದಿ: ಮತ್ತೆ ವಿವಾದ ಮಾಡಿಕೊಳ್ಳಲಿದೆಯೇ ಅಮೇಜಾನ್​ ಪ್ರೈಮ್​? ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​​ಗೆ ವಿಘ್ನ

Published On - 8:58 pm, Wed, 26 May 21