Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋನು ಸೂದ್​ ದುಡ್ಡಿಗಾಗಿ ಹಪಾಹಪಿಸುವ ವ್ಯಕ್ತಿ ಆಗಿದ್ದರು; ಇನ್ನೊಂದು ಮುಖ ತೆರೆದಿಟ್ಟ ನಿರ್ಮಾಪಕ

Sood Charity Foundation: ಸೋನು ಸೂದ್​ ಈಗ ರಿಯಲ್​ ಹೀರೋ ಆಗಿದ್ದಾರೆ ಎಂಬುದು ನಿಜ. ಆದರೆ ಕೆಲವೇ ವರ್ಷಗಳ ಹಿಂದೆ ಅವರು ದುಡ್ಡು ಕೊಟ್ಟರೆ ಮಾತ್ರ ಕೆಲಸ ಮಾಡಿಕೊಡುವ ವ್ಯಕ್ತಿ ಆಗಿದ್ದರು ಎಂಬುದನ್ನು ನಿರ್ಮಾಪಕರೊಬ್ಬರು​ ನೆನಪಿಸಿಕೊಂಡಿದ್ದಾರೆ.

ಸೋನು ಸೂದ್​ ದುಡ್ಡಿಗಾಗಿ ಹಪಾಹಪಿಸುವ ವ್ಯಕ್ತಿ ಆಗಿದ್ದರು; ಇನ್ನೊಂದು ಮುಖ ತೆರೆದಿಟ್ಟ ನಿರ್ಮಾಪಕ
ಸೋನು ಸೂದ್​
Follow us
ಮದನ್​ ಕುಮಾರ್​
|

Updated on: Jun 01, 2021 | 9:26 AM

ಬಹುಭಾಷಾ ನಟ ಸೋನು ಸೂದ್​ ಅವರನ್ನು ಜನರೆಲ್ಲ ರಿಯಲ್​ ಹೀರೋ ಎಂದು ಒಪ್ಪಿಕೊಂಡಿದ್ದಾರೆ. ಸಿನಿಮಾ ಪರದೆ ಮೇಲೆ ಖಳನಾಯಕನಾಗಿ ಕಾಣಿಸಿಕೊಳ್ಳುವ ಅವರು ನಿಜಜೀವನದಲ್ಲಿ ಲಕ್ಷಾಂತರ ಜನರ ಪಾಲಿಗೆ ಆಪ್ತರಕ್ಷಕನಾಗಿದ್ದಾರೆ. ತಮ್ಮ ಆಸ್ತಿಪಾಸ್ತಿಯನ್ನೆಲ್ಲ ಮುಡಿಪಿಟ್ಟು ಬಡವರ, ಸಂಕಷ್ಟದಲ್ಲಿ ಇರುವವರ ಸಹಾಯಕ್ಕೆ ನಿಂತಿದ್ದಾರೆ. ತೀವ್ರ ಕಷ್ಟಕಾಲದಲ್ಲಿ ಅವರಿಂದ ಸಹಾಯ ಪಡೆದುಕೊಂಡವರು ತಮ್ಮ ಮನೆಗಳಲ್ಲಿ ಸೋನು ಸೂದ್ ಫೋಟೋ ಇಟ್ಟುಕೊಂಡು ಪೂಜೆ ಮಾಡುತ್ತಿದ್ದಾರೆ. ಆದರೆ ಕೆಲವು ವರ್ಷಗಳ ಹಿಂದೆ ಸೋನು ಹೀಗಿರಲಿಲ್ಲವಂತೆ! ಅವರು ದುಡ್ಡಿಗಾಗಿ ಹಪಹಪಿಸುತ್ತಿದ್ದರು ಎಂಬ ಸತ್ಯವನ್ನು ನಿರ್ಮಾಪಕರೊಬ್ಬರು ತೆರೆದಿಟ್ಟಿದ್ದಾರೆ.

ಹಿಂದಿ ಮಾತ್ರವಲ್ಲದೇ ತೆಲುಗಿನ ಅನೇಕ ಸಿನಿಮಾಗಳಲ್ಲಿ ಸೋನು ಸೂದ್​ ನಟಿಸಿದ್ದಾರೆ. ಆ ಮೂಲಕ ಅವರು ಟಾಲಿವುಡ್​ ಮಂದಿಗೂ ಚಿರಪರಿಚಿತರು. ತೆಲುಗಿನಲ್ಲಿ ಅನೇಕ ಸಿನಿಮಾಗಳನ್ನು ನಿರ್ಮಿಸಿರುವ ತಮ್ಮಾರೆಡ್ಡಿ ಭಾರದ್ವಜ್​ ಅವರು ಸೋನು ಸೂದ್​ ಬಗ್ಗೆ ಒಂದು ಅಚ್ಚರಿಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಕೆಲವೇ ವರ್ಷಗಳ ಹಿಂದೆ ಇದೇ ಸೋನು ಸೂದ್​ ಅವರು ದುಡ್ಡು ಕೊಟ್ಟರೆ ಮಾತ್ರ ಕೆಲಸ ಮಾಡಿಕೊಡುವ ವ್ಯಕ್ತಿ ಆಗಿದ್ದರು ಎಂಬುದನ್ನು ತಮ್ಮಾರೆಡ್ಡಿ ಅವರು ನೆನಪಿಸಿಕೊಂಡಿದ್ದಾರೆ.

ನಾಲ್ಕು ಅಥವಾ ಐದು ವರ್ಷಗಳ ಹಿಂದೆ ನಡೆದ ಘಟನೆ ಇದು. ಅಂಗವಿಕಲರಿಗಾಗಿ ಆಯೋಜಿಸಿದ್ದ ಒಂದು ಕಾರ್ಯಕ್ರಮಕ್ಕೆ ಸೋನು ಸೂದ್​ ಅತಿಥಿಯಾಗಿ ಆಗಮಿಸಬೇಕು ಎಂದು ತಮ್ಮಾರೆಡ್ಡಿ ಆಸೆಪಟ್ಟಿದ್ದರು. ಹಾಗಾಗಿ ಅವರಿಗೆ ಆಹ್ವಾನವನ್ನೂ ನೀಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಸೋನು ಸೂದ್​ ಅವರು ದುಡ್ಡು ಕೊಟ್ಟರೆ ಮಾತ್ರ ಬರುವುದಾಗಿ ಹೇಳಿದ್ದರಂತೆ. ಆ ಘಟನೆಯಿಂದಾಗಿ ಅವರೊಬ್ಬ ದುಡ್ಡಿನ ಹಪಾಹಪಿ ಇರುವ ಮನುಷ್ಯ ಎಂಬುದು ತಮ್ಮಾರೆಡ್ಡಿ ಅವರಿಗೆ ಗೊತ್ತಾಯಿತು. ಆದರೆ ಈಗ ಅವರ ಮೇಲಿದ್ದ ಅಭಿಪ್ರಾಯ ಬದಲಾಗಿದೆ.

‘ಆದರೆ ಸೋನು ಸೂದ್​ ಈಗ ಸಂಪೂರ್ಣ ಬದಲಾಗಿದ್ದಾರೆ. ಅವರ ಕಡೆ ಯಾರೂ ಕೂಡ ಕೈ ತೋರಿಸಿ ಮಾತನಾಡುವಂತಿಲ್ಲ. ಅನೇಕರ ಪಾಲಿಗೆ ಅವರು ದೇವರೇ ಆಗಿದ್ದಾರೆ. ಯಾವ ಸರ್ಕಾರವೂ ಮಾಡದಂತಹ ಸಹಾಯವನ್ನು ಅವರು ಜನರಿಗೆ ಮಾಡುತ್ತಿದ್ದಾರೆ’ ಎಂದು ತಮ್ಮಾರೆಡ್ಡಿ ಅವರು ಮೆಚ್ಚುಗೆ ಸೂಚಿಸಿದ್ದಾರೆ. ಸೋನು ಸೂದ್​ ಅವರ ಇಮೇಜ್​ ಯಾವ ರೀತಿ ಬದಲಾಗಿದೆ ಎಂದರೆ, ಸಿನಿಮಾಗಳಲ್ಲಿ ಕೂಡ ಅವರು ಈಗ ವಿಲನ್​ ಪಾತ್ರ ಮಾಡಲು ಸಾಧ್ಯವಿಲ್ಲ ಎಂಬಂತಾಗಿದೆ. ಅನೇಕ ಸ್ಟಾರ್​ ನಟರು ಕೂಡ ಈ ಮಾತನ್ನು ಹೇಳಿದ್ದಾರೆ. ಒಟ್ಟಿನಲ್ಲಿ ಸೋನು ಮಾಡುತ್ತಿರುವ ಕಾರ್ಯಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅವರು ರಾಜಕೀಯಕ್ಕೆ ಎಂಟ್ರಿ ನೀಡಿ ಪ್ರಧಾನಮಂತ್ರಿ ಆಭ್ಯರ್ಥಿ ಆಗಬೇಕು ಎಂಬುದಾಗಿ ನಟಿ ಹುಮಾ ಖುರೇಶಿ ಇತ್ತೀಚೆಗಷ್ಟೇ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:

ಸೋನು ಸೂದ್​ ಪ್ರಧಾನಮಂತ್ರಿ ಅಭ್ಯರ್ಥಿ? ಮುಂದಿನ ಚುನಾವಣೆ ಬಗ್ಗೆ ಮಾತನಾಡಿದ ಸ್ಟಾರ್​ ನಟಿ

ಕೊವಿಡ್​ನಿಂದ ತಂದೆ-ತಾಯಿ ಕಳೆದುಕೊಂಡ ಮಕ್ಕಳ ಸಹಾಯಕ್ಕೆ ಮುಂದಾದ ಸೋನು ಸೂದ್

ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ
ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು
ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು
ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡ ಡಿಕೆ ಶಿವಕುಮಾರ್
ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡ ಡಿಕೆ ಶಿವಕುಮಾರ್