Pranitha Marriage: ಪ್ರಣಿತಾ ಮದುವೆ ಬಳಿಕ ರಮ್ಯಾ ಕಡೆಗೆ ಪ್ರಶ್ನೆ ಎಸೆದ ಅಭಿಮಾನಿಗಳು​; ಏನಿದು ಲಿಂಕ್​?

Pranitha Marriage: ಪ್ರಣಿತಾ ಮದುವೆ ಬಳಿಕ ರಮ್ಯಾ ಕಡೆಗೆ ಪ್ರಶ್ನೆ ಎಸೆದ ಅಭಿಮಾನಿಗಳು​; ಏನಿದು ಲಿಂಕ್​?
ಪ್ರಣಿತಾ ಸುಭಾಷ್​, ನಿತಿನ್​ ರಾಜು, ರಮ್ಯಾ

Ramya: ರಮ್ಯಾ ಮಾಡಿದ ಒಂದು ಕಮೆಂಟ್​ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ನಿಮ್ಮ ಮದುವೆ ಯಾವಾಗ ಎಂದು ಸ್ಯಾಂಡಲ್​ವುಡ್​ ಕ್ವೀನ್​ಗೆ ಅಭಿಮಾನಿಗಳು ಪ್ರಶ್ನೆ ಎಸೆದಿದ್ದಾರೆ. ‘ನಿಮಗೆ ವಯಸ್ಸು ಹೆಚ್ಚುತ್ತಿದೆ. ಬೇಗ ಮದುವೆ ಆಗಿ’ ಎಂದು ಕೆಲವರು ಸಲಹೆ ನೀಡಿದ್ದಾರೆ.

Madan Kumar

|

Jun 01, 2021 | 12:53 PM

ಖ್ಯಾತ ಬಹುಭಾಷಾ ನಟಿ, ಕನ್ನಡತಿ ಪ್ರಣಿತಾ ಸುಭಾಷ್​ ಅವರ ಮದುವೆಯಿಂದ ಅನೇಕರಿಗೆ ಅಚ್ಚರಿ ಆಗಿದೆ. ಯಾರಿಗೂ ಹೇಳದೇ ಕೇಳದೇ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಯಾಕೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಉತ್ತರ ನೀಡಿರುವ ಪ್ರಣಿತಾ ಅವರು ಕೊರೊನಾ ಪರಿಸ್ಥಿತಿಯ ನೆಪವನ್ನೇ ಮುಂದಿಟ್ಟಿದ್ದಾರೆ. ಲಾಕ್​ಡೌನ್​ ಇರುವುದರಿಂದ ಸಿಂಪಲ್​ ಆಗಿ ಮದುವೆ ಆಗಿರುವುದಾಗಿ ಅವರು ಹೇಳಿದರು. ಅದೇನೇ ಇರಲಿ, ಉದ್ಯಮಿ ನಿತಿನ್​ ರಾಜು ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅವರಿಗೆ ಎಲ್ಲರೂ ಶುಭಕೋರುತ್ತಿದ್ದಾರೆ. ನಟಿ ರಮ್ಯಾ ಕೂಡ ಪ್ರಣಿತಾಗೆ ಅಭಿನಂದನೆ ತಿಳಿಸಿದ್ದಾರೆ.

ಯಾರಿಗೂ ಗೊತ್ತಾಗದ ಹಾಗೆ ಗುಟ್ಟಾಗಿ ಮದುವೆ ಆದ ಬಳಿಕ ಕೆಲವು ಫೋಟೋಗಳು ವೈರಲ್​ ಆದವು. ಆಗ ಪ್ರಣಿತಾ ಅವರು ಬಹಿರಂಗವಾಗಿ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಬೇಕಾಯಿತು. ಆ ಪೋಸ್ಟ್​ಗೆ ಪ್ರತಿಕ್ರಿಯಿಸಿದ ರಮ್ಯಾ ಅವರು ಅಭಿನಂದನೆ ತಿಳಿಸಿದ್ದಾರೆ. ‘ಕಂಗ್ರಾಜುಲೇಷನ್ಸ್​ ಪ್ರಣಿತಾ’ ಎಂದು ಅವರು ಕಮೆಂಟ್​ ಮಾಡಿದ್ದಾರೆ.

ರಮ್ಯಾ ಮಾಡಿದ ಕಮೆಂಟ್​ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ನಿಮ್ಮ ಮದುವೆ ಯಾವಾಗ ಎಂದು ಸ್ಯಾಂಡಲ್​ವುಡ್​ ಕ್ವೀನ್​ಗೆ ಅಭಿಮಾನಿಗಳು ಪ್ರಶ್ನೆ ಎಸೆದಿದ್ದಾರೆ. ‘ನಿಮಗೆ ವಯಸ್ಸು ಹೆಚ್ಚುತ್ತಿದೆ. ಬೇಗ ಮದುವೆ ಆಗಿ’ ಎಂದು ಕೆಲವರು ಸಲಹೆ ನೀಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಕೆಲವರು, ‘ಅದು ಅವರ ಜೀವನ, ಅವರ ಆಯ್ಕೆ. ನೀವು ಸುಮ್ಮನಿರಿ’ ಎಂದು ರಮ್ಯಾ ಪರವಾಗಿ ಕಮೆಂಟ್​ ಮಾಡಿದ್ದಾರೆ. ಯಾರು ಎನೇ ಹೇಳಿದರೂ ರಮ್ಯಾ ಮಾತ್ರ ಮೌನ ತಾಳಿದ್ದಾರೆ.

ಕೆಲವು ದಿನಗಳ ಹಿಂದೆ ಅಭಿಮಾನಿಗಳ ಜೊತೆ ಇನ್​ಸ್ಟಾಗ್ರಾಮ್​ ಮೂಲಕ ರಮ್ಯಾ ಪ್ರಶ್ನೋತ್ತರ ನಡೆಸಿದ್ದರು. ಆಗಲೂ ಅವರ ಮದುವೆ ಬಗ್ಗೆ ಪ್ರಶ್ನೆ ಎದುರಾಗಿತ್ತು. ಮದುವೆ ಯಾವಾಗ? ನೀವು ಯಾರ ಜೊತೆಗಾದರೂ ಡೇಟಿಂಗ್​ ಮಾಡುತ್ತಿದ್ದಾರಾ ಎಂಬಿತ್ಯಾದಿ ಪ್ರಶ್ನೆಗಳನ್ನು ಅಭಿಮಾನಿಗಳು ಕೇಳಿದ್ದರು. ‘ಮದುವೆ ಮದುವೆ ಮದುವೆ. ಮಾಡೋಕೆ ಇದೊಂದೇ ಕೆಲಸ ಇರುವುದು ಅನ್ನೋ ಹಾಗೆ! ಮದುವೆಯಾಗಿ ಖುಷಿಯಿಂದ ಇರೋಕೆ ಆಗಲ್ಲ ಗೊತ್ತಾ?’ ಎಂದು ರಮ್ಯಾ ಉತ್ತರಿಸಿದ್ದರು. ಮದುವೆ ಆಗುವುದಾದರೆ ಯಾವ ರೀತಿಯ ಹುಡುಗನನ್ನು ಬಯಸುತ್ತೀರಿ ಎಂಬ ಪ್ರಶ್ನೆ ಕೂಡ ಕೇಳಿಬಂದಿತ್ತು. ‘ಸಹಾನುಭೂತಿ, ಕರುಣೆ ಮತ್ತು ಮುಕ್ತ ಮನಸ್ಸು ಇರುವ ವ್ಯಕ್ತಿ ಬೇಕು. ನಾನು ಯಾರ ಜೊತೆಗೂ ಡೇಟಿಂಗ್​ ಮಾಡುತ್ತಿಲ್ಲ’ ಎಂದು ರಮ್ಯಾ ಉತ್ತರಿಸಿದ್ದರು.

ಇದನ್ನೂ ಓದಿ:

ಯಾರಿದು ನಿತಿನ್ ರಾಜು? ಪ್ರಣಿತಾ ಪ್ರೇಮ ಕಥೆ ಆರಂಭವಾಗಿದ್ದು ಹೇಗೆ? ಇಲ್ಲಿದೆ ಉತ್ತರ

‘ನಮ್ಮನ್ನು ಕ್ಷಮಿಸಿ’; ಮದುವೆ ಬೆನ್ನಲ್ಲೇ ಅಭಿಮಾನಿಗಳಿಗೆ ಬಹಿರಂಗ ಪತ್ರ ಬರೆದ ಪ್ರಣಿತಾ ಮತ್ತು ನಿತಿನ್

Follow us on

Related Stories

Most Read Stories

Click on your DTH Provider to Add TV9 Kannada