ಮದುವೆಯಾದ ಪ್ರಣಿತಾಗೆ ಶುಭಕೋರಿದ ಶಿಲ್ಪಾ ಶೆಟ್ಟಿ; ಇಬ್ಬರ ನಡುವೆ ಗೆಳೆತನ ಬೆಳೆದಿದ್ದು ಹೇಗೆ?

ಮದುವೆಯಾದ ಪ್ರಣಿತಾಗೆ ಶುಭಕೋರಿದ ಶಿಲ್ಪಾ ಶೆಟ್ಟಿ; ಇಬ್ಬರ ನಡುವೆ ಗೆಳೆತನ ಬೆಳೆದಿದ್ದು ಹೇಗೆ?
ನಿತಿನ್​ ರಾಜು, ಪ್ರಣಿತಾ ಸುಭಾಷ್​, ಶಿಲ್ಪಾ ಶೆಟ್ಟಿ

ಪ್ರಣಿತಾ ಹಾಗೂ ನಿತಿನ್​ ರಾಜು ಮದುವೆ ಆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಶಿಲ್ಪಾ ಶೆಟ್ಟಿ, ಶುಭಾಶಯ ಹೇಳಿದ್ದಾರೆ.

Rajesh Duggumane

| Edited By: Madan Kumar

Jun 01, 2021 | 3:23 PM

ನಟಿ ಪ್ರಣಿತಾ ಲಾಕ್​​​ಡೌನ್​ನಲ್ಲಿ ಯಾರಿಗೂ ಹೇಳದೇ ಕೇಳದೇ ಹಸೆಮಣೆ ಏರಿರುವುದು ಅನೇಕರಲ್ಲಿ ಅಚ್ಚರಿ ಮೂಡಿಸಿದೆ. ಕೊರೊನಾ ವೈರಸ್ ಲಾಕ್​​ಡೌನ್ ಇರುವುದರಿಂದ ಸಿಂಪಲ್ ಮದುವೆ ಆಗಿರುವುದಾಗಿ ಅವರು ತಿಳಿಸಿದ್ದಾರೆ. ಈಗ ಪ್ರಣಿತಾಗೆ ಶುಭಾಶಯಗಳ ಸುರಿಮಳೆ ಆಗುತ್ತಿದೆ. ಕರಾವಳಿ ಬೆಡಗಿ, ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಕೂಡ ಪ್ರಣಿತಾಗೆ ವಿಶ್​ ಮಾಡಿದ್ದಾರೆ. ಹಾಗಾದರೆ, ಇವರ ನಡುವೆ ಗೆಳೆತನ ಬೆಳೆದಿದ್ದು ಹೇಗೆ? ಇಬ್ಬರೂ ಮೊದಲಿನಿಂದಲೂ ಗೆಳತಿಯರಾ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಶಿಲ್ಪಾ ಶೆಟ್ಟಿ ಮದುವೆ ಆದ ನಂತರದಲ್ಲಿ ಬಾಲಿವುಡ್​ನಿಂದ ದೂರವೇ ಉಳಿದಿದ್ದರು. ಕುಟುಂಬ ಹಾಗೂ ಮಕ್ಕಳ ಜತೆಯಲ್ಲಿ ಶಿಲ್ಪಾ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಈಗ ಅವರು ಬಾಲಿವುಡ್​ಗೆ ಕಂಬ್ಯಾಕ್​ ಮಾಡುತ್ತಿದ್ದಾರೆ. ಪ್ರಿಯದರ್ಶನ್​ ನಿರ್ದೇಶನದ ‘ಹಂಗಾಮಾ 2’ ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಮತ್ತೊಂದು ಹೀರೋಯಿನ್​ ಆಗಿ ಪ್ರಣಿತಾ ಕಾಣಿಸಿಕೊಂಡಿದ್ದಾರೆ.

‘ಹಂಗಾಮಾ 2’ ಚಿತ್ರದಲ್ಲಿ ಪ್ರಣಿತಾ ಹಾಗೂ ಶಿಲ್ಪಾ ನಡುವೆ ಸಾಕಷ್ಟು ಕಾಂಬಿನೇಷನ್​ಗಳು ಬರಲಿವೆ. ಹೀಗಾಗಿ, ಸೆಟ್​ನಲ್ಲಿ ಹೆಚ್ಚು ಸಮಯ ಒಟ್ಟಿಗೆ ಇದ್ದಿದ್ದರಿಂದ ಇಬ್ಬರು ನಡುವೆ ಒಳ್ಳೆಯ ಗೆಳೆತನ ಬೆಳೆದಿದೆ. ಸಿನಿಮಾ ಈಗಾಗಲೇ ಶೂಟಿಂಗ್​ ಪೂರ್ಣಗೊಳಿಸಿಕೊಂಡಿದ್ದು, ಶೀಘ್ರವೇ ತೆರೆಗೆ ಬರಲಿದೆ. ಈಗ ಪ್ರಣಿತಾ ಮದುವೆ ಆಗಿರುವ ವಿಚಾರ ಕೇಳಿ ಶಿಲ್ಪಾ ಶೆಟ್ಟಿ ಖುಷಿಯಾಗಿದ್ದಾರೆ.

ಪ್ರಣಿತಾ ಹಾಗೂ ನಿತಿನ್​ ರಾಜು ಮದುವೆ ಆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಶಿಲ್ಪಾ, ಶುಭಾಶಯ ಹೇಳಿದ್ದಾರೆ. ಈ ಸ್ಟೇಟಸ್​ಅನ್ನು ತಮ್ಮ ಸ್ಟೇಟಸ್​ನಲ್ಲಿ ಪೋಸ್ಟ್​ ಮಾಡಿಕೊಂಡಿರುವ ಪ್ರಣಿತಾ, ಧನ್ಯವಾದ ಹೇಳಿದ್ದಾರೆ.

ಕೆಲವು ವರ್ಷಗಳ ಹಿಂದೆ ಮ್ಯೂಚುವಲ್​ ಫ್ರೆಂಡ್​​​​ ಮೂಲಕ ನಿತಿನ್​ ರಾಜು ಅವರ ಗೆಳೆತನ ಪ್ರಣಿತಾಗೆ ಆಗಿತ್ತು. ಆ ನಂತರ ಇಬ್ಬರ ನಡುವೆ ಒಳ್ಳೆಯ ಫ್ರೆಂಡ್​ಶಿಪ್​ ಬೆಳೆದಿದೆ. ಆ ನಂತರ ಗೆಳೆತನ ಪ್ರೀತಿಯಾಗಿದೆ. ಈಗ ಇಬ್ಬರೂ ಪ್ರೀತಿಗೆ ಹೊಸ ಅರ್ಥ ನೀಡಿದ್ದಾರೆ. ಕನಕಪುರ ರಸ್ತೆಯಲ್ಲಿ ಇರುವ ರೆಸಾರ್ಟ್​ವೊಂದರಲ್ಲಿ ಪ್ರಣಿತಾ ಮದುವೆ ನಡೆದಿದೆ. ನಿತಿನ್​ ರಾಜು​ ಜತೆ ಅವರು ವೈವಾಹಿಕ ಜೀವನ ಆರಂಭಿಸಿದ್ದಾರೆ. ರಮ್ಯಾ ಸೇರಿ ಅನೇಕರು ಪ್ರಣಿತಾಗೆ ಶುಭ ಕೋರಿದ್ದಾರೆ.

ಇದನ್ನೂ ಓದಿ: Pranitha Marriage: ಪ್ರಣಿತಾ ಮದುವೆ ಬಳಿಕ ರಮ್ಯಾ ಕಡೆಗೆ ಪ್ರಶ್ನೆ ಎಸೆದ ಅಭಿಮಾನಿಗಳು​; ಏನಿದು ಲಿಂಕ್​?

Follow us on

Related Stories

Most Read Stories

Click on your DTH Provider to Add TV9 Kannada