AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಮ್ಮನ್ನು ಕ್ಷಮಿಸಿ’; ಮದುವೆ ಬೆನ್ನಲ್ಲೇ ಅಭಿಮಾನಿಗಳಿಗೆ ಬಹಿರಂಗ ಪತ್ರ ಬರೆದ ಪ್ರಣಿತಾ ಮತ್ತು ನಿತಿನ್

2010ರಲ್ಲಿ ದರ್ಶನ್​ ಜೊತೆ ‘ಪೊರ್ಕಿ’ ಸಿನಿಮಾದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಪ್ರಣಿತಾ ಕಾಲಿಟ್ಟರು. ಚೊಚ್ಚಲ ಚಿತ್ರದಲ್ಲಿಯೇ ದರ್ಶನ್​ಗೆ ನಾಯಕಿಯಾಗುವ ಅವಕಾಶ ಸಿಕ್ಕಿದ್ದರಿಂದ ಅವರಿಗೆ ದೊಡ್ಡಮಟ್ಟದ ಜನಪ್ರಿಯತೆ ಸಿಕ್ಕಿತ್ತು.

‘ನಮ್ಮನ್ನು ಕ್ಷಮಿಸಿ’; ಮದುವೆ ಬೆನ್ನಲ್ಲೇ ಅಭಿಮಾನಿಗಳಿಗೆ ಬಹಿರಂಗ ಪತ್ರ ಬರೆದ ಪ್ರಣಿತಾ ಮತ್ತು ನಿತಿನ್
ಪ್ರಣಿತಾ ಮದುವೆ ಆದ ನಿತಿನ್
ರಾಜೇಶ್ ದುಗ್ಗುಮನೆ
|

Updated on:May 31, 2021 | 5:20 PM

Share

ನಟಿ ಪ್ರಣಿತಾ ಸುಭಾಷ್​ ಉದ್ಯಮಿ ನಿತಿನ್​ ರಾಜು ಜತೆ ಗುಟ್ಟಾಗಿ ಮದುವೆ ಆಗಿದ್ದಾರೆ.ಭಾನುವಾರ (ಮೇ 30) ಬೆಂಗಳೂರಿನ ಹೊರ ವಯಲದಲ್ಲಿ ಅವರು ಸಪ್ತಪದಿ ತುಳಿದಿದ್ದಾರೆ. ಮದುವೆ ವಿಚಾರದ ಬಗ್ಗೆ ಎಲ್ಲಿಯೂ ಬಾಯ್ಬಿಟ್ಟಿರಲಿಲ್ಲ. ಈಗ ಪ್ರಣಿತಾ ಅಭಿಮಾನಿಗಳಿಗೆ ಬಹಿರಂಗ ಪತ್ರ ಬರೆದು ಕ್ಷಮೆ ಕೇಳಿದ್ದಾರೆ.   

‘ತುಂಬಾ ಖುಷಿಯಿಂದ ನಾನು ನಿಮಗೆ ಈ ವಿಚಾರ ಹೇಳೋದಕ್ಕೆ ಇಷ್ಟ ಪಡ್ತೀನಿ. ಅದೇನಂದರೇ, ಮೇ 30ರಂದು, ನನ್ನ ಅತ್ಯಂತ ಹತ್ತಿರದವರ ಸಮ್ಮುಖದಲ್ಲಿ ನಾನು ವಿವಾಹವಾಗಿದ್ದೀನಿ. ನಾನು ಹಾಗೂ ನನ್ನ ಪತಿ ಇಬ್ಬರೂ ಕೂಡ ನಿಮ್ಮ ಬಳಿ ಸಾರಿ ಕೇಳೋದಕ್ಕೆ ಇಷ್ಟಪಡ್ತೀವಿ. ಕಾರಣ ಇಷ್ಟೇ, ಈಗಿರೋ ಕೋರೊನಾ ಪರಿಸ್ಥಿತಿಯಿಂದ ನಮಗೆ ಮದುವೆ ಆಗುವುದಕ್ಕೆ ಸರಿಯಾದ ದಿನಾಂಕ​ ಗೊತ್ತಿರಲಿಲ್ಲ. ನಾವು ಯಾವಾಗ ಮದುವೆ ಆಗ್ತೀವಿ, ಎಲ್ಲಿ ಮದುವೆ ಆಗ್ತೀವಿ ಅನ್ನೋದು ನಮಗೇ ಗೊತ್ತಿರಲಿಲ್ಲ. ತುಂಬಾ ಕನ್​ಫ್ಯೂಷನ್ಸ್​ ಇತ್ತು. ಹೀಗಾಗಿ, ಈ ಗೊಂದಲಕ್ಕೆ ನಿಮ್ಮನ್ನೂ ಸಿಲುಕಿಸೋದು ನನಗೆ ಇಷ್ಟ ಇರಲಿಲ್ಲ. ದಯವಿಟ್ಟು, ನಮ್ಮನ್ನ ಕ್ಷಮಿಸಿ’ ಎಂದು ಪ್ರಣಿತಾ ಕೋರಿದ್ದಾರೆ.

‘ಆಗಲೆ ಹೇಳಿದಂತೆ, ತುಂಬಾ ಹತ್ತಿರದವರ ಸಮ್ಮುಖದಲ್ಲಿ ನನ್ನ ಮದುವೆ ಕಾರ್ಯ ನಡೆದಿರೋದು ನನಗೆ ತುಂಬಾ ಖುಷಿ ತಂದಿದೆ. ನೀವೆಲ್ಲರೂ ನನಗೆ ತುಂಬಾ ಬೇಕಾದವರು, ಈ ಸಾಂಕ್ರಾಮಿಕ ಎಲ್ಲ ಮುಗಿದ ಮೇಲೆ ನಾವೆಲ್ಲರೂ ಈ ಖುಷಿಯ ದಿನವನ್ನ ಒಟ್ಟಿಗೆ ಸಂಭ್ರಮಿಸೋಣ’ ಎಂದು ಪ್ರಣಿತಾ ಬರೆದುಕೊಂಡಿದ್ದಾರೆ.

View this post on Instagram

A post shared by Bhuvi (@bujji5749)

2010ರಲ್ಲಿ ದರ್ಶನ್​ ಜೊತೆ ‘ಪೊರ್ಕಿ’ ಸಿನಿಮಾದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಪ್ರಣಿತಾ ಕಾಲಿಟ್ಟರು. ಚೊಚ್ಚಲ ಚಿತ್ರದಲ್ಲಿಯೇ ದರ್ಶನ್​ಗೆ ನಾಯಕಿಯಾಗುವ ಅವಕಾಶ ಸಿಕ್ಕಿದ್ದರಿಂದ ಅವರಿಗೆ ದೊಡ್ಡಮಟ್ಟದ ಜನಪ್ರಿಯತೆ ಸಿಕ್ಕಿತ್ತು. ನಂತರ ತಮಿಳು ಮತ್ತು ತೆಲುಗಿನಲ್ಲಿಯೂ ಅವರು ಗುರುತಿಸಿಕೊಂಡರು. ಭೀಮ ತೀರದಲ್ಲಿ, ಬ್ರಹ್ಮ, ಮಾಸ್​ ಲೀಡರ್​ ಮುಂತಾದ ಸಿನಿಮಾಗಳಲ್ಲಿ ಸ್ಟಾರ್​ ನಟರ ಜೊತೆ ತೆರೆ ಹಂಚಿಕೊಂಡರು. ನಟನೆ ಮಾತ್ರವಲ್ಲದೇ ಅನೇಕ ಸಮಾಜಮುಖಿ ಕೆಲಸಗಳಲ್ಲೂ ಪ್ರಣಿತಾ ತೊಡಗಿಕೊಂಡಿದ್ದಾರೆ. ಆ ಮೂಲಕ ಅವರು ತಮ್ಮದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Pranitha Marriage: ಉದ್ಯಮಿ ಜೊತೆ ಪ್ರಣಿತಾ ಗುಟ್ಟಾಗಿ ಮದುವೆ ಆಗಿದ್ದೇಕೆ? ಅಸಲಿ ಕಾರಣ ತಿಳಿಸಿದ ನಟಿ

Published On - 5:17 pm, Mon, 31 May 21

ರಾಹುಲ್ ಬರುವ ಮೊದಲು ಶಾಸಕರ, ಕಾರ್ಯಕರ್ತರ ಸಭೆ: ಶಿವಕುಮಾರ್
ರಾಹುಲ್ ಬರುವ ಮೊದಲು ಶಾಸಕರ, ಕಾರ್ಯಕರ್ತರ ಸಭೆ: ಶಿವಕುಮಾರ್
ಸಿದ್ದರಾಮಯ್ಯರಿಂದ ಶಾಸಕರನ್ನೆಲ್ಲ ತಮ್ಮೆಡೆ ಸೆಳೆದುಕೊಳ್ಳುವ ಹುನ್ನಾರ: ಅಶೋಕ
ಸಿದ್ದರಾಮಯ್ಯರಿಂದ ಶಾಸಕರನ್ನೆಲ್ಲ ತಮ್ಮೆಡೆ ಸೆಳೆದುಕೊಳ್ಳುವ ಹುನ್ನಾರ: ಅಶೋಕ
ಸತೀಶ್ ಜಾರಕಿಹೊಳಿ ಸೇರಿದಂತೆ ಯಾರೂ ತನ್ನ ಪರ ಮಾತಾಡಲಿಲ್ಲ: ಕರೆಮ್ಮ, ಶಾಸಕಿ
ಸತೀಶ್ ಜಾರಕಿಹೊಳಿ ಸೇರಿದಂತೆ ಯಾರೂ ತನ್ನ ಪರ ಮಾತಾಡಲಿಲ್ಲ: ಕರೆಮ್ಮ, ಶಾಸಕಿ
ಧರ್ಮಸ್ಥಳ ಪ್ರಕರಣ: 2ನೇ ದಿನವೂ ಶವಗಳಿಗಾಗಿ ಮುಂದುವರಿದ ಶೋಧ
ಧರ್ಮಸ್ಥಳ ಪ್ರಕರಣ: 2ನೇ ದಿನವೂ ಶವಗಳಿಗಾಗಿ ಮುಂದುವರಿದ ಶೋಧ
ಶಾಸಕರೊಂದಿಗೆ ಸಭೆ ನಡೆಸುವುದು ಸಿಎಂರ ಪರಮೋಚ್ಛ ಅಧಿಕಾರ: ಸುರೇಶ್
ಶಾಸಕರೊಂದಿಗೆ ಸಭೆ ನಡೆಸುವುದು ಸಿಎಂರ ಪರಮೋಚ್ಛ ಅಧಿಕಾರ: ಸುರೇಶ್
ಬೆಳಗಿನ ಜಾವ 3.50ಕ್ಕೆ ಸಂಭವಿಸಿರುವ ಅಪಘಾತ, ಲಾರಿಯ ಆರ್ಧಭಾಗ ರಸ್ತೆ ಮೇಲಿದೆ
ಬೆಳಗಿನ ಜಾವ 3.50ಕ್ಕೆ ಸಂಭವಿಸಿರುವ ಅಪಘಾತ, ಲಾರಿಯ ಆರ್ಧಭಾಗ ರಸ್ತೆ ಮೇಲಿದೆ
ಕೆಎಂಎಫ್​​ಗೆ ಮೆಜಾರಿಟಿ ಇರುವ ಪಕ್ಷದವರು ಅಧ್ಯಕ್ಷರಾಗುತ್ತಾರೆ: ಜಾರಕಿಹೊಳಿ
ಕೆಎಂಎಫ್​​ಗೆ ಮೆಜಾರಿಟಿ ಇರುವ ಪಕ್ಷದವರು ಅಧ್ಯಕ್ಷರಾಗುತ್ತಾರೆ: ಜಾರಕಿಹೊಳಿ
ಪ್ರತಿಭಟನೆ ಸ್ವರೂಪವನ್ನು ಸಿಎಂ, ಡಿಸಿಎಂ ಇನ್ನೂ ನಿರ್ಧರಿಸಿಲ್ಲ: ಪರಮೇಶ್ವರ್
ಪ್ರತಿಭಟನೆ ಸ್ವರೂಪವನ್ನು ಸಿಎಂ, ಡಿಸಿಎಂ ಇನ್ನೂ ನಿರ್ಧರಿಸಿಲ್ಲ: ಪರಮೇಶ್ವರ್
ಪೊಲೀಸರು ಹಿಡಿದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
ಪೊಲೀಸರು ಹಿಡಿದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
12 ವೈಡ್, 1 ನೋ ಬಾಲ್... ಓವರ್ ಮುಗಿಯುವ ಮುನ್ನವೇ ಪಂದ್ಯವೇ ಮುಗಿದು ಹೋಯ್ತು!
12 ವೈಡ್, 1 ನೋ ಬಾಲ್... ಓವರ್ ಮುಗಿಯುವ ಮುನ್ನವೇ ಪಂದ್ಯವೇ ಮುಗಿದು ಹೋಯ್ತು!