Sunny Leone: ಸನ್ನಿ ಲಿಯೋನ್ಗೆ ಬಟ್ಟೆ ತೊಡಿಸಲು ಕಷ್ಟಪಟ್ಟ ಆರ್ಮಿ; ವಿಡಿಯೋ ವೈರಲ್
ಸನ್ನಿ ಲಿಯೋನ್: ನಾಲ್ಕು ಜನರು ಸೇರಿಕೊಂಡು ಸನ್ನಿ ಲಿಯೋನ್ ಅವರ ಗೌನ್ ಜಿಪ್ ಹಾಕಲು ಪ್ರಯತ್ನಿಸಿದ್ದಾರೆ. ಕಡೆಗೂ ಅವರು ಯಶಸ್ವಿ ಆದರೋ ಇಲ್ಲವೋ ಅಂತ ಹೇಳಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಒಂದಲ್ಲ ಒಂದು ಕಾರಣಕ್ಕೆ ನಟಿ ಸನ್ನಿ ಲಿಯೋನ್ ಸುದ್ದಿ ಆಗುತ್ತಲೇ ಇರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ಅವರು ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿ ಇರುತ್ತಾರೆ. ತಮ್ಮ ಜೀವನದ ಹಲವು ವಿಚಾರಗಳನ್ನು ಅವರು ಆಗಾಗ ಹಂಚಿಕೊಳ್ಳುತ್ತ ಇರುತ್ತಾರೆ. ಈಗ ಅವರಿಗೆ ಸಂಬಂಧಿಸಿದ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಮಾದಕ ತಾರೆಗೆ ಬಟ್ಟೆ ತೊಡಿಸಲು ಒಂದು ಗಂಪು ಕಷ್ಟಪಡುತ್ತಿರುವ ದೃಶ್ಯ ಅದರಲ್ಲಿದೆ. ಅದರ ಅಸಲಿಯತ್ತು ಏನು? ಅದನ್ನು ಸ್ವತಃ ಸನ್ನಿ ಲಿಯೋನ್ ವಿವರಿಸಿದ್ದಾರೆ.
ಒಂದು ಕಾಲದಲ್ಲಿ ನೀಲಿ ಚಿತ್ರಗಳ ನಟಿಯಾಗಿದ್ದ ಸನ್ನಿ ಲಿಯೋನ್ ನಂತರ ಬಾಲಿವುಡ್ಗೆ ಕಾಲಿಟ್ಟರು. ಹಲವು ಟಿವಿ ರಿಯಾಲಿಟಿ ಶೋಗಳಲ್ಲೂ ಅವರು ಕಾಣಿಸಿಕೊಂಡರು. ಎಂಟಿವಿಯ ಜನಪ್ರಿಯ Splitsvilla ಶೋಗೆ ಅವರು ನಿರೂಪಕಿಯಾಗಿಯೂ ಕೆಲಸ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ತಯಾರಾಗುತ್ತಿರುವಾಗ ಕಾಸ್ಟ್ಯೂಮ್ ಧರಿಸುವ ಕಷ್ಟ ಹೇಗಿತ್ತು ಎಂಬುದನ್ನು ವಿವರಿಸಲು ಸನ್ನಿ ಲಿಯೋನ್ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಯಾವುದೇ ಸೆಲೆಬ್ರಿಟಿ ಸಾರ್ವಜನಿಕವಾಗಿ ಸುಂದರವಾಗಿ ಕಾಣಲು ಅವರ ಹಿಂದೆ ಒಂದು ತಂಡ ಕೆಲಸ ಮಾಡುತ್ತದೆ. ಅವರ ಮೇಕಪ್, ಕಾಸ್ಟ್ಯೂಮ್, ಹೇರ್ಸ್ಟೈಲ್ ಎಲ್ಲವನ್ನೂ ಆ ತಂಡವೇ ನೋಡಿಕೊಳ್ಳುತ್ತದೆ. ಸನ್ನಿ ಜೊತೆಗೂ ಅಂತಹ ಒಂದು ಟೀಮ್ ಇದೆ. Splitsvilla ಕಾರ್ಯಕ್ರಮಕ್ಕಾಗಿ ಸನ್ನಿ ಗೌನ್ ಧರಿಸುತ್ತಿರುವಾಗ ಬೆನ್ನಿನ ಭಾಗದಲ್ಲಿರುವ ಜಿಪ್ ಹಾಕುವುದು ಕಷ್ಟವಾಗಿತ್ತು. ಜಿಪ್ ಮೇಲೇರಿಸಲು ಅವರ ಟೀಮ್ ಹರಸಾಹಸಪಟ್ಟಿದೆ. ಹೀಗೆ ಸರ್ಕಸ್ ಮಾಡುತ್ತಿರುವ ತಮ್ಮ ತಂಡವನ್ನು ‘ಆರ್ಮಿ’ ಎಂದು ಸನ್ನಿ ಲಿಯೋನ್ ಕರೆದಿದ್ದಾರೆ.
‘ಗೌನ್ ಸರಿಯಾಗಿ ಕಾಣುವಂತೆ ಮಾಡಲು ಒಂದು ಆರ್ಮಿಯೇ ಬೇಕಾಗುತ್ತದೆ’ ಎಂದು ಈ ವಿಡಿಯೋಗೆ ಸನ್ನಿ ಲಿಯೋನ್ ಕ್ಯಾಪ್ಷನ್ ನೀಡಿದ್ದಾರೆ. ನಾಲ್ಕು ಜನರು ಸೇರಿಕೊಂಡು ಗೌನ್ ಜಿಪ್ ಹಾಕಲು ಪ್ರಯತ್ನಿಸಿದ್ದಾರೆ. ಕಡೆಗೂ ಅವರು ಯಶಸ್ವಿ ಆದರೋ ಇಲ್ಲವೋ ಅಂತ ಹೇಳಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಸನ್ನಿ ಅಭಿಮಾನಿಗಳು ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
View this post on Instagram
ಸನ್ನಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಇತ್ತೀಚೆಗೆ ಅವರು ಬರ್ತ್ಡೇ (ಮೇ 13) ಆಚರಿಸಿಕೊಂಡರು. ಮಂಡ್ಯದ ಹಳ್ಳಿಯೊಂದರಲ್ಲಿ ಈ ಮಾದಕ ತಾರೆಯ ಹುಟ್ಟುಹಬ್ಬಕ್ಕೆ ದೊಡ್ಡ ಬ್ಯಾನರ್ ಮೂಲಕ ಶುಭಕೋರಲಾಗಿತ್ತು. ಆ ಫೋಟೋ ಸಖತ್ ವೈರಲ್ ಆಗಿತ್ತು.
ಇದನ್ನೂ ಓದಿ:
ಕರ್ನಾಟಕದ ಹಳ್ಳಿಗರ ಅಭಿಮಾನಕ್ಕೆ ಸನ್ನಿ ಲಿಯೋನ್ ಫಿದಾ; ಅನಾಥ ಮಕ್ಕಳ ತಾಯಿ ಎಂದ ಫ್ಯಾನ್ಸ್
ದೆಹಲಿಯ 10,000 ವಲಸೆ ಕಾರ್ಮಿಕರಿಗೆ ಆಹಾರ ನೀಡಲು ಸನ್ನಿ ಲಿಯೋನ್ ಮುಂದೆಜ್ಜೆ!
Published On - 8:02 am, Mon, 24 May 21