ಮೇಘನಾ ರಾಜ್ ​- ಚಿರಂಜೀವಿ ಸರ್ಜಾ ಪುತ್ರ ಜ್ಯೂ. ಚಿರುಗೆ ಹೆಜ್ಜೆ ಹೆಜ್ಜೆಗೂ ಪ್ರೀತಿ ತೋರಿಸುತ್ತಿರುವ ಫ್ಯಾನ್ಸ್​

Meghana Raj: ಮೇ 22ಕ್ಕೆ ಜ್ಯೂ. ಚಿರುಗೆ 7 ತಿಂಗಳು ತುಂಬಿದೆ. ಆ ಖುಷಿಯನ್ನು ಸೋಶಿಯಲ್​ ಮೀಡಿಯಾದಲ್ಲಿ ಫ್ಯಾನ್ಸ್​ ಹಂಚಿಕೊಂಡಿದ್ದಾರೆ. ಆತನ ಹಲವು ಫೋಟೋಗಳನ್ನು ಪೋಸ್ಟ್​ ಮಾಡುವ ಮೂಲಕ ಅನೇಕರು ವಿಶ್​ ಮಾಡಿದ್ದಾರೆ.

ಮೇಘನಾ ರಾಜ್ ​- ಚಿರಂಜೀವಿ ಸರ್ಜಾ ಪುತ್ರ ಜ್ಯೂ. ಚಿರುಗೆ ಹೆಜ್ಜೆ ಹೆಜ್ಜೆಗೂ ಪ್ರೀತಿ ತೋರಿಸುತ್ತಿರುವ ಫ್ಯಾನ್ಸ್​
ಮೇಘನಾ ರಾಜ್​ - ಜ್ಯೂ. ಚಿರು
Follow us
ಮದನ್​ ಕುಮಾರ್​
| Updated By: Digi Tech Desk

Updated on:May 23, 2021 | 6:06 PM

ಸ್ಟಾರ್​ ಕಿಡ್​ಗಳನ್ನು ಅಭಿಮಾನಿಗಳು ಸಿಕ್ಕಾಪಟ್ಟೆ ಇಷ್ಟಪಡುತ್ತಾರೆ. ಆ ಕಾರಣಕ್ಕಾಗಿಯೇ ಬಾಲಿವುಡ್​ ಕಲಾವಿದರಾದ ಸೈಫ್​ ಅಲಿ ಖಾನ್​ ಮತ್ತು ಕರೀನಾ ಕಪೂರ್​ ಪುತ್ರ ತೈಮೂರ್​ ಅಲಿ ಖಾನ್​ ಮನೆ ಮಾತಾಗಿದ್ದಾನೆ. ಸೆಲೆಬ್ರಿಟಿಗಳು ತಮ್ಮ ಪುಟಾಣಿ ಮಕ್ಕಳಿಗಾಗಿ ಸೋಶಿಯಲ್​ ಮೀಡಿಯಾ ಪುಟಗಳನ್ನು ಕೂಡ ತೆರೆಯುತ್ತಾರೆ. ಕನ್ನಡದಲ್ಲಿ ಆಗಾಗ ಹೈಲೈಟ್​ ಆಗುತ್ತಿರುವ ಸ್ಟಾರ್​ ಕಿಡ್​ ಎಂದರೆ ಜ್ಯೂ. ಚಿರು. ಮೇಘನಾ ರಾಜ್​ ಮತ್ತು ಚಿರಂಜೀವಿ ಸರ್ಜಾ ದಂಪತಿಯ ಪುತ್ರನಾದ ಜ್ಯೂ. ಚಿರುಗೆ ಅಭಿಮಾನಿಗಳು ಸಖತ್​ ಪ್ರೀತಿ ತೋರಿಸುತ್ತಿದ್ದಾರೆ.

ಚಿರಂಜೀವಿ ಸರ್ಜಾ ಅವರ ಅಕಾಲಿಕ ಮರಣದ (2020 ಜೂ.7) ನಂತರ ಸರ್ಜಾ ಕುಟುಂಬದಲ್ಲಿ ನೋವು ಆವರಿಸಿತ್ತು. ಮತ್ತೆ ಅವರ ಕುಟುಂಬದಲ್ಲಿ ನಗು ಮೂಡಲು ಕಾರಣವಾಗಿದ್ದೇ ಜ್ಯೂ. ಚಿರು ಆಗಮನ. 2020ರ ಅ.22ರಂದು ಮೊದಲ ಮಗುವಿಗೆ ಮೇಘನಾ ರಾಜ್​ ಜನ್ಮ ನೀಡಿದರು. ಚಿರಂಜೀವಿ ಸರ್ಜಾ ಅಗಲಿಕೆಯ ನೋವಿನಲ್ಲಿದ್ದ ಅಭಿಮಾನಿಗಳಿಗೆ ಜ್ಯೂ. ಚಿರು ಆಗಮನದ ಸುದ್ದಿ ಸಂತಸ ಮೂಡಿಸಿತ್ತು. ಅಲ್ಲಿಂದೀಚೆಗೆ ಈ ಮಗುವಿಗೆ ಫ್ಯಾನ್ಸ್​ ಅಪಾರ ಪ್ರೀತಿ ತೋರಿಸುತ್ತಿದ್ದಾರೆ. ಪುಟಾಣಿಯ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿವೆ.

ಮೇ 22ಕ್ಕೆ ಜ್ಯೂ. ಚಿರುಗೆ 7 ತಿಂಗಳು ತುಂಬಿದೆ. ಆ ಖುಷಿಯನ್ನು ಸೋಶಿಯಲ್​ ಮೀಡಿಯಾದಲ್ಲಿ ಫ್ಯಾನ್ಸ್​ ಹಂಚಿಕೊಂಡಿದ್ದಾರೆ. ಆತನ ಹಲವು ಫೋಟೋಗಳನ್ನು ಪೋಸ್ಟ್​ ಮಾಡುವ ಮೂಲಕ ಅನೇಕರು ವಿಶ್​ ಮಾಡಿದ್ದಾರೆ. ಅದನ್ನು ಮೇಘನಾ ರಾಜ್​ ಅವರು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಪುತ್ರನ ಜೊತೆಗಿರುವ ಹೊಸದೊಂದು ಬ್ಲ್ಯಾಕ್​ ಆ್ಯಂಡ್​ ವೈಟ್​​ ಫೋಟೋವನ್ನು ಕೂಡ ಅವರು ಶೇರ್​ ಮಾಡಿಕೊಂಡಿದ್ದಾರೆ.

‘7 ತಿಂಗಳು! ಈ ಶುಭಾಶಯಗಳಿಗಾಗಿ ಎಲ್ಲರಿಗೂ ಧನ್ಯವಾದಗಳು’ ಎಂದು ಮೇಘನಾ ರಾಜ್​ ತಿಳಿಸಿದ್ದಾರೆ. ಚಿರು ಪುತ್ರನಿಗೆ ಇನ್ನೂ ನಾಮಕರಣ ಆಗಿಲ್ಲ. ಸದ್ಯಕ್ಕೆ ಆತನನ್ನು ಜ್ಯೂ. ಚಿರು ಎಂದೇ ಕರೆಯಲಾಗುತ್ತಿದೆ. ಆಗಾಗ ಮಗನ ಬಗ್ಗೆ ಅಪ್​ಡೇಟ್​ ನೀಡುತ್ತಿರುವ ಮೇಘನಾ ರಾಜ್​ ಅವರು ಅಭಿಮಾನಿಗಳ ಜೊತೆ ಸೋಶಿಯಲ್​ ಮೀಡಿಯಾ ಮೂಲಕ ಸಂಪರ್ಕದಲ್ಲಿದ್ದಾರೆ. ಆದಷ್ಟು ಬೇಗ ಅವರು ಚಿತ್ರರಂಗಕ್ಕೆ ಕಮ್​ಬ್ಯಾಕ್​ ಮಾಡಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ.

View this post on Instagram

A post shared by @megssarja

ಕಳೆದ ವರ್ಷ ಡಿಸೆಂಬರ್​ನಲ್ಲಿ ಮೇಘನಾ ರಾಜ್​ ಮತ್ತು ಅವರ ಕುಟುಂಬದವರಿಗೆ ಕೊವಿಡ್​ ಪಾಸಿಟಿವ್​ ಆಗಿತ್ತು. ಆಗ ಎರಡು ತಿಂಗಳ ಮಗುವಾಗಿದ್ದ ಜ್ಯೂ. ಚಿರುಗೆ ಸೋಂಕು ತಗುಲಿತ್ತು. ಆ ಸಂದರ್ಭದಲ್ಲಿ ತಾವು ತುಂಬಾ ಭಯಭೀತರಾಗಿದ್ದ ಬಗ್ಗೆ ಮೇಘನಾ ಇತ್ತೀಚೆಗೆ ಹೇಳಿಕೊಂಡಿದ್ದರು. ಮೇಘನಾ ಅವರ ತಂದೆ ಸುಂದರ್​ ರಾಜ್​ ಹಾಗೂ ತಾಯಿ ಪ್ರಮೀಳಾ ಜೋಷಾಯ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಮೇಘನಾ ಮತ್ತು ಜ್ಯೂ. ಚಿರು ಮನೆಯಲ್ಲೇ ಕ್ವಾರಂಟೈನ್​ ಆಗಿ ಚೇತರಿಸಿಕೊಂಡಿದ್ದರು.

ಇದನ್ನೂ ಓದಿ:

Meghana Raj: ಮೇಘನಾ ರಾಜ್​ ಮನೆಯಲ್ಲಿ ಮತ್ತೆ ಶೋಕ; ಕುಟುಂಬದ ಸದಸ್ಯನಂತಿದ್ದ ಬ್ರುನೋ ಸಾವು

Meghana Raj: 2 ತಿಂಗಳ ಹಸುಗೂಸಿಗೆ ಕೊವಿಡ್​ ಬಂದಾಗ ಎದುರಾಗಿದ್ದ ಭಯದ ಪರಿಸ್ಥಿತಿ ಬಗ್ಗೆ ವಿವರಿಸಿದ ಮೇಘನಾ ರಾಜ್​

Published On - 5:27 pm, Sun, 23 May 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್