Meghana Raj: 2 ತಿಂಗಳ ಹಸುಗೂಸಿಗೆ ಕೊವಿಡ್​ ಬಂದಾಗ ಎದುರಾಗಿದ್ದ ಭಯದ ಪರಿಸ್ಥಿತಿ ಬಗ್ಗೆ ವಿವರಿಸಿದ ಮೇಘನಾ ರಾಜ್​

Jr Chiru: 2020ರ ಡಿಸೆಂಬರ್​ ಮೊದಲ ವಾರದಲ್ಲಿ ಮೇಘನಾ ರಾಜ್​ ಕುಟುಂಬದ ಎಲ್ಲರಿಗೂ ಕೊರೊನಾ ಪಾಸಿಟಿವ್​ ಆಗಿತ್ತು. ಆ ವಿಚಾರವನ್ನು ಅವರು ಡಿ.8ರಂದು ಸೋಶಿಯಲ್ ಮೀಡಿಯಾ ಮೂಲಕ ಖಚಿತಪಡಿಸಿದ್ದರು.

Meghana Raj: 2 ತಿಂಗಳ ಹಸುಗೂಸಿಗೆ ಕೊವಿಡ್​ ಬಂದಾಗ ಎದುರಾಗಿದ್ದ ಭಯದ ಪರಿಸ್ಥಿತಿ ಬಗ್ಗೆ ವಿವರಿಸಿದ ಮೇಘನಾ ರಾಜ್​
ಮೇಘನಾ ರಾಜ್​ - ಜ್ಯೂ. ಚಿರು
Follow us
ಮದನ್​ ಕುಮಾರ್​
| Updated By: Digi Tech Desk

Updated on:May 20, 2021 | 2:08 PM

ನಟಿ ಮೇಘನಾ ರಾಜ್​ ಪಾಲಿಗೆ 2020 ಕರಾಳ ವರ್ಷವಾಗಿತ್ತು. ಆ ವರ್ಷ ಜೂನ್​ 7ರಂದು ಪತಿ ಚಿರಂಜೀವಿ ಸರ್ಜಾ ನಿಧನರಾದರು. ನಂತರ ಪುತ್ರನ ಜನನದಿಂದ ಮೇಘನಾ ರಾಜ್​ ಮುಖದಲ್ಲಿ ನಗು ಆರಳಿತ್ತಾದರೂ ಡಿಸೆಂಬರ್​ ತಿಂಗಳಲ್ಲಿ ಮತ್ತೆ ಆತಂಕ ಮನೆ ಮಾಡುವಂತಾಗಿತ್ತು. ಅದಕ್ಕೆ ಕಾರಣ ಕೊರನಾ ವೈರಸ್​. ಆಗ ಮೇಘನಾ ರಾಜ್​-ಚಿರಂಜೀವಿ ಸರ್ಜಾ ಪುತ್ರನಿಗೆ ಕೇವಲ 2 ತಿಂಗಳು. ಅಷ್ಟರಲ್ಲಾಗಲೇ ಅವರ ಕುಟುಂಬದ ಎಲ್ಲರಿಗೂ ಕೊವಿಡ್​ 19 ಸೋಂಕು ತಗುಲಿತ್ತು. ಮೇಘನಾ ರಾಜ್​, ಸುಂದರ್​ ರಾಜ್​, ಪ್ರಮೀಳಾ ಜೋಷಾಯ್​ ಹಾಗೂ ಎರಡು ತಿಂಗಳ ಹಸುಗೂಸಿಗೂ ಕೊರೊನಾ ಪಾಸಿಟಿವ್​ ಆಗಿತ್ತು. ಆ ಸಂದರ್ಭದ ಬಗ್ಗೆ ಮೇಘನಾ ರಾಜ್​ ವಿವರಿಸಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮೇಘನಾ ರಾಜ್​ ಈ ಬಗ್ಗೆ ಮಾತನಾಡಿದ್ದಾರೆ. ‘ಮಗು ಜೊತೆ ನಾನು ಒಬ್ಬಳೇ ಇದ್ದೆ. ಕೊರೊನಾದಂತಹ ಪರಿಸ್ಥಿತಿಯಲ್ಲಿ ಮಗುವನ್ನು ಹೇಗೆ ನೋಡಿಕೊಳ್ಳಬೇಕು ಎಂಬುದು ಗೊತ್ತಾಗಲಿಲ್ಲ. ನಾನು ಮಾನಸಿಕವಾಗಿ ಕುಗ್ಗಿಹೋದೆ. ವೈದ್ಯರ ತಂಡ ಸಲಹೆ ನೀಡುತ್ತಿದ್ದರೂ ಕೂಡ ನಾನು ಆತಂಕಗೊಂಡಿದ್ದೆ. ಅದು ತುಂಬ ಭಯಭೀತ ದಿನಗಳಾಗಿದ್ದವು’ ಎಂದು ಮೇಘನಾ ರಾಜ್​ ಹೇಳಿದ್ದಾರೆ.

2020ರ ಡಿಸೆಂಬರ್​ ಮೊದಲ ವಾರದಲ್ಲಿ ಮೇಘನಾ ರಾಜ್​ ಕುಟುಂಬದ ಎಲ್ಲರಿಗೂ ಕೊರೊನಾ ಪಾಸಿಟಿವ್​ ಆಗಿತ್ತು. ಆ ವಿಚಾರವನ್ನು ಅವರು ಡಿ.8ರಂದು ಸೋಶಿಯಲ್ ಮೀಡಿಯಾ ಮೂಲಕ ಖಚಿತಪಡಿಸಿದ್ದರು. ಮೇಘನಾ ರಾಜ್​ ಮತ್ತು ಅವರ ಪುತ್ರ ಮನೆಯಲ್ಲೇ ಐಸೋಲೇಟ್​ ಆಗಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾದರು. ಆದರೆ ಸುಂದರ್​ ರಾಜ್​ ಮತ್ತು ಪ್ರಮೀಳಾ ಜೋಷಾಯ್​ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಹಲವು ದಿನಗಳ ಬಳಿಕ ಅವರು ಕೂಡ ಚೇತರಿಸಿಕೊಂಡರು.

ಮೇಘನಾ ರಾಜ್​ ಪುತ್ರನಿಗೆ ಇನ್ನೂ ನಾಮಕರಣ ಆಗಿಲ್ಲ. ಎಲ್ಲರೂ ಆತನನ್ನು ಸದ್ಯಕ್ಕೆ ಜ್ಯೂನಿಯರ್​ ಚಿರು ಎಂದೇ ಕರೆಯುತ್ತಿದ್ದಾರೆ. ಪುತ್ರನ ಹಲವು ಪೋಟೋಗಳನ್ನು ಮೇಘನಾ ರಾಜ್​ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಸದ್ಯ ಅವರು ಚಿತ್ರರಂಗದಿಂದ ದೂರ ಇದ್ದಾರೆ. ಆದಷ್ಟು ಬೇಗ ಅವರು ಬಣ್ಣದ ಲೋಕಕ್ಕೆ ಕಮ್​ಬ್ಯಾಕ್​ ಮಾಡಲಿ ಎಂಬುದು ಅವರ ಅಭಿಮಾನಿಗಳ ಬಯಕೆ.

ಇದನ್ನೂ ಓದಿ:

Meghana Raj: ಮೇಘನಾ ರಾಜ್​ ಜನ್ಮದಿನಕ್ಕೆ ವೈರಲ್​ ಆಯ್ತು ಜ್ಯೂನಿಯರ್​ ಚಿರು ವಿಡಿಯೋ

Meghana Raj Birthday: ಮೇಘನಾ ರಾಜ್ ಬದುಕಲ್ಲಿ ನಗು ಅರಳಿಸಿದ ಜ್ಯೂ. ಚಿರು ಕಲರ್​ಫುಲ್​ ಫೋಟೋಗಳು

Published On - 12:44 pm, Thu, 20 May 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ