AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Meghana Raj: ಮೇಘನಾ ರಾಜ್​ ಮನೆಯಲ್ಲಿ ಮತ್ತೆ ಶೋಕ; ಕುಟುಂಬದ ಸದಸ್ಯನಂತಿದ್ದ ಬ್ರುನೋ ಸಾವು

ಬಹಳಷ್ಟು ಕಳೆದುಕೊಂಡೆ. ಇವನನ್ನು ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ನನ್ನ ಬೆಸ್ಟ್​ ಫ್ರೆಂಡ್​ ಬ್ರುನೋ ಇಂದು ಸಾವನ್ನಪ್ಪಿದ್ದಾನೆ. ಇವನ ಜೊತೆ ಜ್ಯೂನಿಯರ್​ ಚಿರು ಆಡವಾಡಬೇಕು ಎಂದುಕೊಂಡಿದ್ದೆ ಎಂದು ಮೇಘನಾ ರಾಜ್​ ಭಾವುಕವಾಗಿ ಪೋಸ್ಟ್​ ಮಾಡಿದ್ದಾರೆ.

Meghana Raj: ಮೇಘನಾ ರಾಜ್​ ಮನೆಯಲ್ಲಿ ಮತ್ತೆ ಶೋಕ; ಕುಟುಂಬದ ಸದಸ್ಯನಂತಿದ್ದ ಬ್ರುನೋ ಸಾವು
ಬ್ರುನೋ ಜೊತೆ ಮೇಘನಾ ರಾಜ್​
ಮದನ್​ ಕುಮಾರ್​
| Edited By: |

Updated on:May 21, 2021 | 10:45 AM

Share

ಸ್ಯಾಂಡಲ್​ವುಡ್​ ನಟಿ ಮೇಘನಾ ರಾಜ್​ ಮನೆಯಲ್ಲಿ ಮತ್ತೆ ದುಃಖ ಆವರಿಸಿದೆ. ಒಂದು ವರ್ಷದಿಂದೀಚೆಗೆ ಪತಿಯ ನಿಧನ ಮತ್ತು ಕೊರನಾ ವೈರಸ್​ ಕಾಟದಿಂದ ನೋವು ಅನುಭವಿಸಿದ್ದ ಅವರು ಈಗ ಪ್ರೀತಿಯ ಶ್ವಾನವನ್ನು ಕಳೆದುಕೊಂಡಿದ್ದಾರೆ. ಇದು ಅವರಿಗೆ ತೀವ್ರ ನೋವುಂಟು ಮಾಡಿದೆ. ಬ್ರುನೋ ಹೆಸರಿನ ಶ್ವಾನವನ್ನು ಅವರು ಬಹಳ ಪ್ರೀತಿಯಿಂದ ಸಾಕಿದ್ದರು. ಆದರೆ ಅದೀಗ ಕೊನೆಯುಸಿರೆಳೆದಿದೆ. ಆ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿರುವ ಮೇಘನಾ ರಾಜ್​ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘ಬಹಳಷ್ಟು ಕಳೆದುಕೊಂಡೆ. ಇವನನ್ನು ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ನನ್ನ ಬೆಸ್ಟ್​ ಫ್ರೆಂಡ್​ ಬ್ರುನೋ ಇಂದು ಸಾವನ್ನಪ್ಪಿದ್ದಾನೆ. ಇವನ ಜೊತೆ ಜ್ಯೂನಿಯರ್​ ಚಿರು ಆಡವಾಡಬೇಕು ಎಂದುಕೊಂಡಿದ್ದೆ. ಇವನ ಬೆನ್ನ ಮೇಲೆ ಕುಳಿತು ಜ್ಯೂನಿಯರ್​ ಚಿರು ಸವಾರಿ ಮಾಡಬೇಕು ಎಂದುಕೊಂಡಿದ್ದೆ. ಬ್ರುನೋಗೆ ಮಕ್ಕಳನ್ನು ಕಂಡರೆ ಆಗುತ್ತಿರಲಿಲ್ಲ. ಆದರೆ ಹೇಗೋ ಜ್ಯೂನಿಯರ್​ ಚಿರು ಜೊತೆ ಮೃದುವಾಗಿ ನಡೆದುಕೊಳ್ಳುತ್ತಿದ್ದ. ಬ್ರುನೋಗೆ ತನ್ನ ಯಜಮಾನನ ಬಗ್ಗೆ ಗೊತ್ತಿತ್ತು ಅನಿಸುತ್ತದೆ.’ ಎಂದು ಇನ್​ಸ್ಟಾಗ್ರಾಮ್​ನಲ್ಲಿ ಮೇಘನಾ ರಾಜ್​ ಬರೆದುಕೊಂಡಿದ್ದಾರೆ.

‘ನೀನಿಲ್ಲದ ಈ ಮನೆ ಮೊದಲಿನಂತೆ ಇರುವುದಿಲ್ಲ. ಮನೆಗೆ ಬರುತ್ತಿದ್ದ ಪ್ರತಿಯೊಬ್ಬರೂ ಬ್ರುನೋ ಎಲ್ಲಿ ಎಂದು ಕೇಳುತ್ತಿದ್ದರು. ತೀವ್ರವಾಗಿ ಅವನನ್ನು ನಾವು ಮಿಸ್​ ಮಾಡಿಕೊಳ್ಳುತ್ತೇವೆ. ನೀನೀಗ ಚಿರು ಜೊತೆ ಇದ್ದೀಯಾ ಮತ್ತು ಅವರ ಜೊತೆ ನೀನು ಯಾವಾಗಲೂ ಕೀಟಲೆ ಮಾಡುತ್ತಿರುತ್ತೀಯ ಎಂದು ನಂಬಿದ್ದೇನೆ’ ಎಂದು ಮೇಘನಾ ರಾಜ್​ ಭಾವುಕವಾಗಿ ಬರೆದುಕೊಂಡಿದ್ದಾರೆ. ಬ್ರುನೋ ಜೊತೆಗಿನ ಕೆಲವು ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಅಕುಲ್​ ಬಾಲಾಜಿ ನಡೆಸಿಕೊಡುತ್ತಿದ್ದ ಸೂಪರ್​ ಟಾಕ್​ಟೈಮ್​ ಶೋನಲ್ಲಿ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್​ ಜೊತೆ ಬ್ರುನೋ ಕಾಣಿಸಿಕೊಂಡಿತ್ತು.

View this post on Instagram

A post shared by Meghana Raj Sarja (@megsraj)

View this post on Instagram

A post shared by Meghana Raj Sarja (@megsraj)

ಮಗಳ ಆರೈಕೆಯಲ್ಲಿ ಸದ್ಯ ಮೇಘನಾ ಬ್ಯುಸಿ ಆಗಿದ್ದಾರೆ. ಎಲ್ಲೆಲ್ಲೂ ಕೊರೊನಾ ವೈರಸ್​ ಹರಡುತ್ತಿರುವ ಈ ಸಂದರ್ಭದಲ್ಲಿ ಅವರು ಬಹಳ ಎಚ್ಚರಿಕೆಯಿಂದ ಇದ್ದಾರೆ. ಕಳೆದ ವರ್ಷ ಡಿಸೆಂಬರ್​ನಲ್ಲಿ ಅವರ ಇಡೀ ಕುಟುಂಬಕ್ಕೆ ಕೊರೊನಾ ಪಾಸಿಟಿವ್​ ಆಗಿತ್ತು. ಆಗ ಅವರು ತುಂಬ ಭಯಭೀತರಾಗಿದ್ದರು. ಆ ದಿನಗಳ ಅನುಭವದ ಬಗ್ಗೆ ಅವರು ಇತ್ತೀಚೆಗೆ ಹೇಳಿಕೊಂಡಿದ್ದರು. ಸೋಶಿಯಲ್​ ಮೀಡಿಯಾ ಮೂಲಕ ಅವರು ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಸಿನಿಮಾಗಳಲ್ಲಿ ಅವರು ಮತ್ತೆ ನಟಿಸಲಿ ಎಂಬುದು ಫ್ಯಾನ್ಸ್​ ಬಯಕೆ.

ಇದನ್ನೂ ಓದಿ:

Meghana Raj: 2 ತಿಂಗಳ ಹಸುಗೂಸಿಗೆ ಕೊವಿಡ್​ ಬಂದಾಗ ಎದುರಾಗಿದ್ದ ಭಯದ ಪರಿಸ್ಥಿತಿ ಬಗ್ಗೆ ವಿವರಿಸಿದ ಮೇಘನಾ ರಾಜ್​

Meghana Raj Birthday: ಮೇಘನಾ ರಾಜ್ ಬದುಕಲ್ಲಿ ನಗು ಅರಳಿಸಿದ ಜ್ಯೂ. ಚಿರು ಕಲರ್​ಫುಲ್​ ಫೋಟೋಗಳು

Published On - 10:43 am, Fri, 21 May 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್