SSR Dreams: ಸುಶಾಂತ್ ಸಿಂಗ್ ಕಂಡ ಆ 50 ಕನಸುಗಳ ಬಗ್ಗೆ ನಿಮಗೆ ಗೊತ್ತೇ?
Sushant Singh Rajput Death Anniversary: ಪದವಿ ಮುಗಿಯುವುದಕ್ಕೂ ಮೊದಲೇ ಸುಶಾಂತ್ ನಟನೆಗೆ ಕಾಲಿಡುವ ನಿರ್ಧಾರಕ್ಕೆ ಬಂದಿದ್ದರು. ಹೀಗಾಗಿ, ಪದವಿ ಪೂರ್ಣಗೊಂಡಿರಲಿಲ್ಲ. ಅವರಿಗೆ ಪದವಿ ಪಡೆಯುವ ಆಸೆ ಇತ್ತು.
ಸುಶಾಂತ್ ಸಿಂಗ್ ರಜಪೂತ್ ಕೇವಲ ನಟನಾಗಿರಲಿಲ್ಲ. ಅವರಲ್ಲಿ ಒಂದು ಅಗಾಧವಾದ ಕನಸಿತ್ತು. ಸಾರ್ವಜನಿಕವಾಗಿ ಕಾಣಿಸಿಕೊಂಡಾಗೆಲ್ಲ ಅವರು ನಗುತ್ತಲೇ ಮಾತನಾಡುತ್ತಿದ್ದರು. ಇಷ್ಟೆಲ್ಲ ಕನಸುಗಳನ್ನು ಕಂಡಿದ್ದ ಸುಶಾಂತ್ ನಿಧನರಾಗಿ ಸೋಮವಾರ (ಜೂನ್ 14) ಒಂದು ವರ್ಷ ಕಳೆಯಲಿದೆ. ಹಾಗಾದರೆ ಸುಶಾಂತ್ ಸಿಂಗ್ ಕಂಡ ಕನಸುಗಳೇನು? ಆ ಬಗ್ಗೆ ಇಲ್ಲಿದೆ ಮಾಹಿತಿ.
ಸುಶಾಂತ್ ಸಿಂಗ್ ಆಗಸದಲ್ಲಿ ಹಾರಾಡುವ ಕನಸು ಕಂಡಿದ್ದರು. ಅಂದರೆ, ಪೈಲಟ್ ಲೈಸೆನ್ಸ್ ಪಡೆದು ಫ್ಲೈಟ್ ಹಾರಿಸುವ ಕನಸನ್ನು ಕಂಡಿದ್ದರು. ಅವರಿಗೆ, ಆಗಸದಲ್ಲಿ ಹಾರಾಡುವುದು ಎಂದರೆ, ಒಂದು ಅದ್ಭುತ ಎನಿಸುತ್ತಿತ್ತಂತೆ.
ಇನ್ನು, ಆಸಕ್ತ 100 ಮಕ್ಕಳನ್ನು ಸುಶಾಂತ್ ನಾಸಾ ವರ್ಕ್ಶಾಪ್ಗೆ ಕಳಿಸಬೇಕು ಎಂದುಕೊಂಡಿದ್ದರು. ಈ ಬಗ್ಗೆ ಮಾತನಾಡಿದ್ದ ಅವರು, ನಾನು ಚಿಕ್ಕ ವಯಸ್ಸಿನಲ್ಲಿದ್ದಾಗ ನಾಸಾ ವರ್ಕ್ಶಾಪ್ಗೆ ಹೋಗಬೇಕು ಎಂದುಕೊಂಡಿದ್ದೆ. ಆದರೆ, ಅದು ಸಾಧ್ಯವಾಗಿಲ್ಲ. ನಟನಾದಮೇಲೆ ಅಲ್ಲಿಗೆ ತೆರಳೋಕೆ ಅವಕಾಶ ಸಿಕ್ಕಿತ್ತು ಎಂದಿದ್ದರು.
ಸುಶಾಂತ್ ಐರನ್ ಮ್ಯಾನ್ ಮ್ಯಾರಥಾನ್ನಲ್ಲಿ ಪಾಲ್ಗೊಳ್ಳುವ ಆಸೆ ಇಟ್ಟುಕೊಂಡಿದ್ದರು. ತಮ್ಮನ್ನು ತಾವು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂದು ಹೆಣ್ಣುಮಕ್ಕಳಿಗೆ ಹೇಳಿಕೊಡುವುದು, ಕೃಷಿ ಮಾಡೋದು ಹೇಗೆ ಎಂದು ಕಲಿಯುವುದು, ಮಳೆಯಲ್ಲಿ ಫುಟ್ಬಾಲ್ ಆಡುವುದು, ಯುರೋಪ್ ರಾಷ್ಟ್ರಗಳನ್ನು ರೈಲಿನಲ್ಲಿ ಸುತ್ತುವುದು, ಲ್ಯಾಂಬೋರ್ಗಿನಿ ಕಾರು ಖರೀದಿಸೋದು, ಪುಸ್ತಕ ಬರೆಯೋದು ಅವರ ಕನಸುಗಳ ಸಾಲಿನಲ್ಲಿದ್ದವು.
ಪದವಿ ಮುಗಿಯುವುದಕ್ಕೂ ಮೊದಲೇ ಸುಶಾಂತ್ ನಟನೆಗೆ ಕಾಲಿಡುವ ನಿರ್ಧಾರಕ್ಕೆ ಬಂದಿದ್ದರು. ಹೀಗಾಗಿ, ಪದವಿ ಪೂರ್ಣಗೊಂಡಿರಲಿಲ್ಲ. ಅವರಿಗೆ ಪದವಿ ಪಡೆಯುವ ಆಸೆ ಇತ್ತು. ಧ್ಯಾನ ಮಾಡಲು ಕೇದಾರನಾಥಕ್ಕೆ ಹೋಗಬೇಕು ಎಂದುಕೊಂಡಿದ್ದರು. ಇದೇ ರೀತಿಯಲ್ಲಿ ಸುಶಾಂತ್ ಒಟ್ಟು 50 ಆಸೆಗಳನ್ನು ಹೊಂದಿದ್ದರು. ಆದರೆ, ಆ ಎಲ್ಲ ಆಸೆಗಳು ಈಡೇರುವ ಮೊದಲೇ ಸುಶಾಂತ್ ಮೃತಪಟ್ಟಿದ್ದಾರೆ.
ಸುಶಾಂತ್ ಸಿಂಗ್ ಮೃತಪಟ್ಟು ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಸುಶಾಂತ್ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಟ್ವೀಟ್ ಮಾಡುವ ಮೂಲಕ ಸುಶಾಂತ್ಗೆ ನಮನ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ: SSR Case: ಸುಶಾಂತ್ ಸಿಂಗ್ ರಜಪೂತ್ ನಿಧನರಾಗಿ ಒಂದು ವರ್ಷ ಕಳೆಯುವುದರೊಳಗೆ ಆದ 30 ಪ್ರಮುಖ ಘಟನೆಗಳೇನು?
Published On - 7:38 pm, Sun, 13 June 21