AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸನ್ನಿ ಲಿಯೋನ್ ಹುಟ್ಟುಹಬ್ಬ ಆಚರಿಸಿದ ಯುವಕರ ತಂಡ; ಮಂಡ್ಯದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಮಾಜಿ ನೀಲಿ ತಾರೆ

ಸನ್ನಿ ಲಿಯೋನ್​ಗೆ ಶುಭಕೋರಿ ಹಾಕಿದ ಈ ಫ್ಲೆಕ್ಸ್ ಸಕ್ಕರೆನಾಡು ಮಂಡ್ಯದ್ದು ಎಂದು ಗೊತ್ತಾಗಿದೆ. ಮಂಡ್ಯ ತಾಲೂಕಿನ ಕೊಮ್ಮೇರಹಳ್ಳಿ ಯುವಕರ ತಂಡವೊಂದು ಮೇ 13 ರಂದು ತಮ್ಮೂರಿನಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್​ಗೆ ಶುಭಕೋರಿ ಬೃಹತ್ ಫ್ಲೆಕ್ಸ್ ಹಾಕಿ ಕೇಕ್ ಕಟ್ ಮಾಡಿರುವುದರ ಜೊತೆಗೆ ನೆರೆದಿದ್ದವರಿಗೆ ಬಿರಿಯಾನಿ ಕೂಡ ಹಂಚಿದ್ದರು ಎಂದು ಮೂಲಗಳು ತಿಳಿಸಿವೆ.

ಸನ್ನಿ ಲಿಯೋನ್ ಹುಟ್ಟುಹಬ್ಬ ಆಚರಿಸಿದ ಯುವಕರ ತಂಡ; ಮಂಡ್ಯದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಮಾಜಿ ನೀಲಿ ತಾರೆ
ಹಳ್ಳಿಯೊಂದರಲ್ಲಿ ಹಾಕಲಾಗಿರುವ ಸನ್ನಿ ಲಿಯೋನ್ ಫ್ಲೆಕ್ಸ್
preethi shettigar
|

Updated on: May 17, 2021 | 11:07 AM

Share

ಮಂಡ್ಯ: ಮೇ 13 ರಂದು ಖ್ಯಾತ ಬಾಲಿವುಡ್ ನಟಿ, ಮಾಜಿ ನೀಲಿ ತಾರೆ ಸನ್ನಿ ಲಿಯೋನ್ 40ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಅವರ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳು ದೇಶದಾದ್ಯಂತ ಶುಭಾಶಯ ಕೋರಿದ್ದರು. ಅದರಲ್ಲೂ ಕರ್ನಾಟಕದಲ್ಲಿ ಈ ಬಾರಿ ಸನ್ನಿಗೆ ಅಭಿಮಾನಿಗಳು ಶುಭಾಶಯ ಕೋರಿದ ರೀತಿ ಸ್ವಲ್ಪ ಭಿನ್ನವಾಗಿದ್ದು, ಈ ಬಗ್ಗೆ ಸ್ವತಃ ಸನ್ನಿ ಲಿಯೋನ್ ಕೂಡ ಸಂತಸ ವ್ಯಕ್ತಪಡಿಸಿದ್ದರು.

ವಿಶಾಲವಾದ ಅಭಿಮಾನಿ ಬಳಗವನ್ನು ಹೊಂದಿರುವ ಸನ್ನಿ ಲಿಯೋನ್​ಗೆ ಹಳ್ಳಿಯೊಂದರಲ್ಲಿ ಫ್ಲೆಕ್ಸ್ ಹಾಕಿಸಿ ಅದರ ಮೇಲೆ ಅನಾಥ ಮಕ್ಕಳ ತಾಯಿ, ಅಭಿಮಾನಿಗಳ‌ ದೇವತೆ ಎಂದು ಬರೆದು ಶುಭಕೋರಿ ಹಾಕಿದ್ದರು. ಈ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಕೂಡ ಆಗಿತ್ತು ಮತ್ತು ಇದೇ ಫೋಟೋವನ್ನು ಸನ್ನಿ ಲಿಯೋನ್ ತಮ್ಮ ಇನ್ಸ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿ ಕರ್ನಾಟಕದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದರು.

ಆದರೆ ಇದು ಯಾವ ಹಳ್ಳಿಯಲ್ಲಿನ ಫೋಟೊ ಎಂದು ಯಾರಿಗೂ ತಿಳಿದಿರಲಿಲ್ಲ ಸದ್ಯ ಸನ್ನಿ ಲಿಯೋನ್​ಗೆ ಶುಭಕೋರಿ ಹಾಕಿದ ಈ ಫ್ಲೆಕ್ಸ್ ಸಕ್ಕರೆನಾಡು ಮಂಡ್ಯದ್ದು ಎಂದು ಗೊತ್ತಾಗಿದೆ. ಮಂಡ್ಯ ತಾಲೂಕಿನ ಕೊಮ್ಮೇರಹಳ್ಳಿ ಯುವಕರ ತಂಡವೊಂದು ಮೇ 13 ರಂದು ತಮ್ಮೂರಿನಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್​ಗೆ ಶುಭಕೋರಿ ಬೃಹತ್ ಫ್ಲೆಕ್ಸ್ ಹಾಕಿ ಕೇಕ್ ಕಟ್ ಮಾಡಿರುವುದರ ಜೊತೆಗೆ ನೆರೆದಿದ್ದವರಿಗೆ ಬಿರಿಯಾನಿ ಕೂಡ ಹಂಚಿದ್ದರು ಎಂದು ಮೂಲಗಳು ತಿಳಿಸಿವೆ.

ಇದೇ 13 ರಂದು ಸನ್ನಿ ಲಿಯೋನ್​ಗೆ ಪ್ಲೆಕ್ಸ್ ಹಾಕಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದ ಬಗೆಗೆ ಮಾಹಿತಿ ಸಿಕ್ಕ ಕೂಡಲೇ ಮಂಡ್ಯ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪೊಲೀಸರು ಬರುವ ವೇಳೆಗೆ ಸನ್ನಿ ಹುಟ್ಟುಹಬ್ಬ ಆಚರಿಸಿದ ಯುವಕರು ಪ್ಲೆಕ್ಸ್ ತೆರವುಗೊಳಿಸಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ:

ಕರ್ನಾಟಕದ ಹಳ್ಳಿಗರ ಅಭಿಮಾನಕ್ಕೆ ಸನ್ನಿ ಲಿಯೋನ್​ ಫಿದಾ; ಅನಾಥ ಮಕ್ಕಳ ತಾಯಿ ಎಂದ ಫ್ಯಾನ್ಸ್​

ಬಾಲಿವುಡ್​ ಕಲಾವಿದ ಕಬೀರ್​ ಬೇಡಿ ಇಟಲಿಯಲ್ಲಿ ‘ಮಾದಕ ನಟ’ ಎನಿಸಿಕೊಳ್ಳಲು ಕಾರಣ ಆಗಿದ್ದು ಆ ಒಂದು ಧಾರಾವಾಹಿ

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ