ಹಲವು ವರ್ಷಗಳ ಶಾರುಖ್-ಸಲ್ಮಾನ್ ಜಗಳಕ್ಕೆ ಮದುವೆ ವಿಚಾರ ಕಾರಣ; ಕಿಂಗ್ ಖಾನ್ ಬಿಚ್ಚಿಟ್ಟ ರಹಸ್ಯ

2008ರಲ್ಲಿ ಮೊದಲ ಬಾರಿಗೆ ಕತ್ರಿನಾ ಬರ್ತ್​ಡೇ ಆಚರಣೆ ವೇಳೆ ಶಾರುಖ್​-ಸಲ್ಮಾನ್​ ಜಗಳವಾಡಿಕೊಂಡಿದ್ದರು. ಇದಾದ ನಂತರ ಸಾಕಷ್ಟು ವರ್ಷ ಇಬ್ಬರೂ ಮಾತನಾಡಿಕೊಂಡಿರಲಿಲ್ಲ.

ಹಲವು ವರ್ಷಗಳ ಶಾರುಖ್-ಸಲ್ಮಾನ್ ಜಗಳಕ್ಕೆ ಮದುವೆ ವಿಚಾರ ಕಾರಣ; ಕಿಂಗ್ ಖಾನ್ ಬಿಚ್ಚಿಟ್ಟ ರಹಸ್ಯ
ಸಲ್ಲು-ಶಾರುಖ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jun 24, 2021 | 6:07 PM

ಶಾರುಖ್​ ಖಾನ್​ ನಟನೆಯ ‘ಪಠಾಣ್​’ ಸಿನಿಮಾದಲ್ಲಿ ಸಲ್ಮಾನ್​ ಖಾನ್​ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಅವರು ಸಂಭಾವನೆ ಕೂಡ ಪಡೆಯುತ್ತಿಲ್ಲ. ಆದರೆ, ಮೊದಲು ಈ ರೀತಿ ಇರಲಿಲ್ಲ. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿರಲಿಲ್ಲ. ಈ ಬಗ್ಗೆ ಅನೇಕರು ಸಾಕಷ್ಟು ಬಾರಿ ಪ್ರಶ್ನೆ ಮಾಡಿದ್ದರು. ಆದರೆ, ಶಾರುಖ್​ ಅಥವಾ ಸಲ್ಮಾನ್​ ಈ ಬಗ್ಗೆ ಮೌನ ಮುರಿದಿರಲಿಲ್ಲ. 2016ರ ಸ್ಟಾರ್​ ಸ್ಕ್ರೀನ್ ಅವಾರ್ಡ್​ ಫಂಕ್ಷನ್​ನಲ್ಲಿ ಶಾರುಖ್​ ಫನ್ನಿಯಾಗಿ ಈ ಬಗ್ಗೆ ವಿವರಿಸಿದ್ದರು.

‘ನನ್ನ ಮತ್ತು ಸಲ್ಮಾನ್​ ನಡುವೆ ಜಗಳ ಏರ್ಪಡಲು ನಿಜವಾದ ಕಾರಣವನ್ನು ನಾನು ಹೇಳುತ್ತಿದ್ದೇನೆ. ನಮ್ಮಿಬ್ಬರ ನಡುವೆ ಜಗಳ ಏರ್ಪಡೋಕೆ ಕಾರಣ ಮದುವೆ ಎನ್ನುವ ವಿಚಾರ. ನಾನು ಸಲ್ಲುಗೆ ಮದುವೆ ಆಗುವಂತೆ ಫೋರ್ಸ್​ ಮಾಡಿದೆ. ಅಲ್ಲದೆ, ಮದುವೆ ಆಗಿದ್ದರಿಂದ ನನ್ನ ಜೀವನದಲ್ಲಿ ಖುಷಿ ಸಿಕ್ಕಿದೆ ಎಂದು ವಿವರಿಸಿದ್ದೆ. ಆಗ ಸಲ್ಮಾನ್​ ನನಗೆ ಮದುವೆ ಆಗದೆ ಇರುವುದೇ ಹೆಚ್ಚು ಖುಷಿ ನೀಡಿದೆ ಎಂದಿದ್ದರು’ ಎಂಬುದಾಗಿ ಶಾರುಖ್​ ಹೇಳಿದ್ದರು.

ಹೀಗೆ ವಾದ ಪ್ರತಿವಾದ ನಡೆದು ಜಗಳವಾಗಿತ್ತಂತೆ. ಈ ವಿಚಾರ ಕೇಳಿ ವೇದಿಕೆ ಕೆಳಗಿದ್ದ ಸೆಲೆಬ್ರಿಟಿಗಳು ನಕ್ಕಿದ್ದರು. ಆದರೆ, ಶಾರುಖ್​ ಈ ಬಗ್ಗೆ ನಿಜವಾದ ಕಾರಣವನ್ನು ಹೇಳಲಿಲ್ಲ. ಶಾರುಖ್​ 1991, ಅಕ್ಟೋಬರ್​ 25ರಂದು ಗೌರಿ ಖಾನ್​ ಅವರನ್ನು ವರಿಸಿದ್ದರು. ಈ ದಂಪತಿಗೆ ಆರ್ಯನ್​ ಖಾನ್​, ಸುಹಾನಾ ಖಾನ್​ ಹಾಗೂ ಅಬ್ರಾಮ್​ ಹೆಸರಿನ ಮೂರು ಮಕ್ಕಳಿದ್ದಾರೆ.

2008ರಲ್ಲಿ ಮೊದಲ ಬಾರಿಗೆ ಕತ್ರಿನಾ ಬರ್ತ್​ಡೇ ಆಚರಣೆ ವೇಳೆ ಶಾರುಖ್​-ಸಲ್ಮಾನ್​ ಜಗಳವಾಡಿಕೊಂಡಿದ್ದರು. ಇದಾದ ನಂತರ ಸಾಕಷ್ಟು ವರ್ಷ ಇಬ್ಬರೂ ಮಾತನಾಡಿಕೊಂಡಿರಲಿಲ್ಲ. ನಂತರ ಒಮ್ಮೆ ಬಾಬಾ ಸಿದ್ಧಿಕಿ ಅವರ ಇಫ್ತಾರ್ ಕೂಟದಲ್ಲಿ ಸಲ್ಲು-ಶಾರುಖ್​ ಹಗ್​ ಮಾಡುವ ಮೂಲಕ ತಮ್ಮ ನಡುವೆ ಇದ್ದ ವೈಮನಸ್ಸು ದೂರವಾಗಿದೆ ಎನ್ನುವ ಸೂಚನೆ ನೀಡಿದ್ದರು. ಸಲ್ಮಾನ್​ ನಟನೆಯ ‘ಟ್ಯೂಬ್​ಲೈಟ್’​ ಸಿನಿಮಾದಲ್ಲಿ ಶಾರುಖ್​ ಅತಿಥಿ ಪಾತ್ರ ಮಾಡಿದ್ದರು. ಅಂತೆಯೇ ಶಾರುಖ್​ ನಟನೆಯ ‘ಜೀರೋ’ ಸಿನಿಮಾದಲ್ಲಿ ಸಲ್ಲು ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ಮೈ ಕಾಣುವಂತೆ ಬಟ್ಟೆ ಧರಿಸಿ ಬಂದಿದ್ದ ಕತ್ರಿನಾ ಕೈಫ್​ ಜೊತೆ ಈ ರೀತಿ ನಡೆದುಕೊಂಡಿದ್ರಾ ಸಲ್ಮಾನ್​ ಖಾನ್​?

32 ವರ್ಷದ ಕೆರಿಯರ್​ನಲ್ಲಿ ಮೊಟ್ಟಮೊದಲ ಬಾರಿಗೆ ಬಯೋಪಿಕ್​ಗೆ ಸಹಿ ಹಾಕಿದ ಸಲ್ಮಾನ್​ ಖಾನ್​

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ