32 ವರ್ಷದ ಕೆರಿಯರ್​ನಲ್ಲಿ ಮೊಟ್ಟಮೊದಲ ಬಾರಿಗೆ ಬಯೋಪಿಕ್​ಗೆ ಸಹಿ ಹಾಕಿದ ಸಲ್ಮಾನ್​ ಖಾನ್​

ಸಲ್ಮಾನ್​ ಖಾನ್​ ನಟನೆಯ ಸಿನಿಮಾ ಎಂದರೆ ಅಲ್ಲಿ ಆ್ಯಕ್ಷನ್​ಗೆ ಕೊರತೆ ಇರುವುದಿಲ್ಲ. ಅದೇ ರೀತಿ, ಈ ಚಿತ್ರದಲ್ಲೂ ಸಾಕಷ್ಟು ಆ್ಯಕ್ಷನ್​ ಥ್ರಿಲ್ಲರ್​ ಅಂಶ ಇರಲಿದೆಯಂತೆ.

32 ವರ್ಷದ ಕೆರಿಯರ್​ನಲ್ಲಿ ಮೊಟ್ಟಮೊದಲ ಬಾರಿಗೆ ಬಯೋಪಿಕ್​ಗೆ ಸಹಿ ಹಾಕಿದ ಸಲ್ಮಾನ್​ ಖಾನ್​
32 ವರ್ಷದ ಕೆರಿಯರ್​ನಲ್ಲಿ ಮೊಟ್ಟಮೊದಲ ಬಾರಿಗೆ ಬಯೋಪಿಕ್​ಗೆ ಸಹಿ ಹಾಕಿದ ಸಲ್ಮಾನ್​ ಖಾನ್​
Rajesh Duggumane

|

Jun 18, 2021 | 7:51 PM

ಇತ್ತೀಚೆಗೆ ಸಾಕಷ್ಟು ಬಯೋಪಿಕ್​ಗಳು ತೆರೆಗೆ ಬಂದಿವೆ. ಕೆಲವು ಅದ್ಭುತ ಎನಿಸಿಕೊಂಡರೆ, ಇನ್ನೂ ಕೆಲವು ಕಳಪೆ ನಿರ್ದೇಶನದಿಂದ ಸೋತಿವೆ. ಸಾಕಷ್ಟು ಹೀರೋಗಳು ಈಗಾಗಲೇ ಬಯೋಪಿಕ್​ನಲ್ಲಿ ನಟಿಸಿದ್ದಾರೆ. ಸಲ್ಮಾನ್​ ಖಾನ್​ ಚಿತ್ರರಂಗಕ್ಕೆ ಬಂದು 32 ವರ್ಷ ಕಳೆದಿದೆ. ಆದರೆ, ಸಲ್ಲು ಮಾತ್ರ ಈವರೆಗೆ ಬಯೋಪಿಕ್​ನಲ್ಲಿ ನಟಿಸಿಲ್ಲ. ತಮ್ಮ ಕೆರಿಯರ್​ನಲ್ಲಿ ಸಲ್ಲು ಯಾವಾಗಲೂ ರೊಮ್ಯಾಂಟಿಕ್ ಡ್ರಾಮಾ ಹಾಗೂ ಆ್ಯಕ್ಷನ್​ ಸಿನಿಮಾಗಳನ್ನು ಮಾಡಿದ್ದೇ ಹೆಚ್ಚು. ಈಗ ಅವರು ಬಯೋಪಿಕ್​ ಮಾಡೋಕೆ ಸಹಿ ಹಾಕಿದ್ದಾರೆ ಎನ್ನಲಾಗುತ್ತಿದೆ.

ಹಾಗಾದರೆ ಸಲ್ಮಾನ್​ ಖಾನ್​ ಯಾರ ಬಯೋಪಿಕ್​ನಲ್ಲಿ ನಟಿಸಲಿದ್ದಾರೆ? ರವಿಂದ್ರ ಕೌಶಿಕ್​. ಭಾರತದ ಸ್ಪೈ ಆಗಿದ್ದ ರವೀಂದ್ರ ಅವರು ಬ್ಲ್ಯಾಕ್​ ಟೈಗರ್​ ಎಂದೇ ಖ್ಯಾತಿ ಪಡೆದುಕೊಂಡವರು. ಇವರ ಜೀವನ ಆಧರಿಸಿ ಬಯೋಪಿಕ್​ ಸಿದ್ಧಗೊಳ್ಳುತ್ತಿದೆ. ರಾಜ್​ಕುಮಾರ್​ ಗುಪ್ತಾ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಸಲ್ಲು ಸಹಿ ಹಾಕಿದ್ದಾರಂತೆ.

ಸಲ್ಮಾನ್​ ಖಾನ್​ ನಟನೆಯ ಸಿನಿಮಾ ಎಂದರೆ ಅಲ್ಲಿ ಆ್ಯಕ್ಷನ್​ಗೆ ಕೊರತೆ ಇರುವುದಿಲ್ಲ. ಅದೇ ರೀತಿ, ಈ ಚಿತ್ರದಲ್ಲೂ ಸಾಕಷ್ಟು ಆ್ಯಕ್ಷನ್​ ಥ್ರಿಲ್ಲರ್​ ಅಂಶ ಇರಲಿದೆಯಂತೆ. ಅಷ್ಟೇ ಅಲ್ಲ ಸಿನಿಮಾದಲ್ಲಿ ಸಾಕಷ್ಟು ಟ್ವಿಸ್ಟ್​ಗಳು ಕೂಡ ಇರಲಿವೆಯಂತೆ.

ರವೀಂದ್ರ ಕೌಶಿಕ್​ ಭಾರತದ ಅತ್ಯುತ್ತಮ ಸ್ಪೈ ಎನ್ನುವ ಖ್ಯಾತಿ ಪಡೆದುಕೊಂಡಿದ್ದಾರೆ. ಈ ಸಿನಿಮಾ ಸ್ಕ್ರಿಪ್ಟ್​ಗಾಗಿ ರಾಜ್​ಕುಮಾರ್ ಬರೋಬ್ಬರಿ 5 ವರ್ಷ ಕೆಲಸ ಮಾಡಿದ್ದಾರಂತೆ. ಈ ಚಿತ್ರ ಸಂಪೂರ್ಣವಾಗಿ ರೆಟ್ರೋ ಶೈಲಿಯಲ್ಲಿ ಇರಲಿದೆಯಂತೆ. ಇನ್ನು, ಸಿನಿಮಾಗೆ ಬ್ಲ್ಯಾಕ್​ ಟೈಗರ್​ ಎಂದೇ  ಹೆಸರಿಡಲು ನಿರ್ಧರಿಸಲಾಗಿತ್ತು. ಆದರೆ, ಈಗಾಗಲೇ ಸಲ್ಮಾನ್​ ಖಾನ್ ‘ಏಕ್​ ಥಾ ಟೈಗರ್’​, ‘ಟೈಗರ್​ ಜಿಂದಾ ಹೈ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೀಗಾಗಿ, ಈ ಚಿತ್ರಕ್ಕೆ ಈ ಟೈಟಲ್​ ಫೈನಲ್​ ಮಾಡೋದು ಅನುಮಾನ ಎನ್ನಲಾಗುತ್ತಿದೆ.

ಈ ಮೊದಲು ರಾಜ್​ಕುಮಾರ್ ಗುಪ್ತಾ ರೇಡ್​, ನೋ ಒನ್​ ಕಿಲ್ಲಡ್​ ಜೆಸ್ಸಿಕಾ ಮೊದಲಾದ ಚಿತ್ರಗಳನ್ನು ನಿರ್ದೇಶನ ಮಾಡಿ ಭರವಸೆ ಮೂಡಿಸಿದ್ದಾರೆ. ಈಗ ಹೊಸ ಸಿನಿಮಾ ಬಗ್ಗೆ ಶೀಘ್ರವೇ ಘೋಷಣೆ ಆಗಲಿದೆ ಎನ್ನಲಾಗುತ್ತಿದೆ. ಇನ್ನು, ರವಿತೇಜ್​ ನಟನೆಯ ‘ಖಿಲಾಡಿ’ ಸಿನಿಮಾ ಹಿಂದಿ ರಿಮೇಕ್​ನಲ್ಲಿ ಸಲ್ಮಾನ್​ ಖಾನ್​ ನಟಿಸಲಿದ್ದಾರೆ ​ಎನ್ನುವ ಸುದ್ದಿ ಕೇಳಿ ಬಂದಿತ್ತು. ಸಲ್ಮಾನ್​ ಖಾನ್​ ಯಾವ ಚಿತ್ರವನ್ನು ಮೊದಲು ಎತ್ತಿ ಕೊಳ್ಳಲಿದ್ದಾರೆ ಎನ್ನುವ ಕುತೂಹಲ ಸದ್ಯದ್ದು.

ಇದನ್ನೂ ಓದಿ: Salman Khan: ರಿಮೇಕ್​ ಮಾಡೋಕೆ ಸಲ್ಮಾನ್​ ಖಾನ್​ ಕೊನೆಗೂ ಫೈನಲ್​ ಮಾಡಿದ್ರು ಸಿನಿಮಾ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada