ಪೃಥ್ವಿರಾಜ್ ಸಿನಿಮಾ ವಿರುದ್ಧ ಮುಂದುವರಿದ ಪ್ರತಿಭಟನೆ; ಅಕ್ಷಯ್ ಕುಮಾರ್ ಪ್ರತಿಕೃತಿ ದಹನ
ಅಖಿಲ ಭಾರತಿಯ ಕ್ಷತ್ರೀಯ ಮಹಾಸಭಾ ಸಂಘಟನೆಯವರು ಚಂಡೀಗಢದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸಿನಿಮಾ ಹೆಸರನ್ನು ಬದಲಿಸಬೇಕು ಎನ್ನುವ ಆಗ್ರಹ ಇಟ್ಟಿರುವ ಇವರು, ಅಕ್ಷಯ್ಕುಮಾರ್ ಪ್ರತಿಕೃತಿ ದಹನ ಮಾಡಿದ್ದಾರೆ.
ಅಕ್ಷಯ್ ಕುಮಾರ್ ನಟನೆಯ ಪೃಥ್ವಿರಾಜ್ ಸಿನಿಮಾ ರಿಲೀಸ್ಗೂ ಮೊದಲೇ ವಿವಾದಕ್ಕೆ ತುತ್ತಾಗಿದೆ. ಟೈಟಲ್ ಬದಲಿಸಬೇಕು ಎಂದು ಪಟ್ಟು ಹಿಡಿದಿರುವ ಅನೇಕ ಸಂಘಟನೆಗಳು ಈಗ ಸಿನಿಮಾ ವಿರುದ್ಧ ಪ್ರತಿಭಟನೆ ಆರಂಭಿಸಿವೆ. ಅಲ್ಲದೆ, ಅಕ್ಷಯ್ ಕುಮಾರ್ ಅವರ ಪ್ರತಿಕೃತಿ ದಹನ ಮಾಡಿ, ಆಕ್ರೋಶ ಹೊರ ಹಾಕಿವೆ.
ಪೃಥ್ವಿರಾಜ್ ಚೌಹಾಣ್ ಅವರ ಜೀವನ ಆಧರಿಸಿ ಯಶ್ ರಾಜ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆ ಸಿನಿಮಾ ಮಾಡುತ್ತಿದೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಪೃಥ್ವಿರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ಕೆಲ ತಿಂಗಳಿಂದ ಸಿನಿಮಾ ಟೈಟಲ್ ಬದಲಿಸುವಂತೆ ಕರಣಿ ಸೇನಾ ಸೇರಿ ಅನೇಕ ಸಂಘಟನೆಗಳು ಪಟ್ಟು ಹಿಡಿದಿವೆ. ಸಿನಿಮಾದ ಶೀರ್ಷಿಕೆಯನ್ನು, ‘ವೀರ ಯೋಧ ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್’ ಎಂಬುದಾಗಿ ಬದಲಾಯಿಸಬೇಕು ಎನ್ನುವ ಆಗ್ರಹ ಇಡಲಾಗಿದೆ. ಆದರೆ ಇದಕ್ಕೆ ಚಿತ್ರತಂಡ ಒಪ್ಪಿಲ್ಲ.
ಅಖಿಲ ಭಾರತಿಯ ಕ್ಷತ್ರೀಯ ಮಹಾಸಭಾ ಸಂಘಟನೆಯವರು ಚಂಡೀಗಢದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸಿನಿಮಾ ಹೆಸರನ್ನು ಬದಲಿಸಬೇಕು ಎನ್ನುವ ಆಗ್ರಹ ಇಟ್ಟಿರುವ ಇವರು, ಅಕ್ಷಯ್ಕುಮಾರ್ ಪ್ರತಿಕೃತಿ ದಹನ ಮಾಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
2019ರಲ್ಲಿ ಅಕ್ಷಯ್ ಕುಮಾರ್ ಈ ಸಿನಿಮಾವನ್ನು ಘೋಷಿಸಿದ್ದರು. 2020ರ ದೀಪಾವಳಿಗೆ ಸಿನಿಮಾ ತೆರೆಕಾಣಬೇಕಿತ್ತು. ಆದರೆ, ಕೊವಿಡ್ ಕಾರಣದಿಂದ ಚಿತ್ರದ ಕೆಲಸಗಳು ವಿಳಂಬವಾಗಿದ್ದವು. ನವೆಂಬರ್ 5ರಂದು ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಕರಣಿ ಸೇನಾ ವಿಧಿಸಿರುವ ಷರತ್ತುಗಳು: *
- ಈ ಚಿತ್ರ ತೆರೆಕಾಣುವುದಕ್ಕೂ ಮೊದಲು ಅದನ್ನು ನಮಗೆ ತೋರಿಸಬೇಕು.
- ಈ ಸಿನಿಮಾವನ್ನು ರಜಪೂತ್ ಸಮಾಜದವರಿಗೂ ಪ್ರದರ್ಶಿಸಬೇಕು.
- ಸಿನಿಮಾದ ಶೀರ್ಷಿಕೆಯನ್ನು, ‘ವೀರ ಯೋಧ ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್’ಎಂಬುದಾಗಿ ಬದಲಾಯಿಸಬೇಕು.
ಇದನ್ನೂ ಓದಿ: Viral Photo: ಅಕ್ಷಯ್ ಕುಮಾರ್ -ಟ್ವಿಂಕಲ್ ಖನ್ನಾ ಇಂಟರೆಸ್ಟಿಂಗ್ ಫೋಟೋ ವೈರಲ್!