ಬಿಗ್​ ಬಾಸ್​ ಮನೆಯಿಂದ ಹೊರಗಿದ್ದಾಗ ಮಂಜು ಪಾವಗಡಗೆ ಬಂದಿತ್ತು ಒಂದು ವಿಚಿತ್ರ ಕರೆ

ಬಿಗ್​ ಬಾಸ್​ ಮನೆಯಿಂದ ಹೊರಗಿದ್ದಾಗ ಮಂಜು ಪಾವಗಡಗೆ ಬಂದಿತ್ತು ಒಂದು ವಿಚಿತ್ರ ಕರೆ
ಈಗ ಬಿಗ್​ ಬಾಸ್​ ಗೆದ್ದ ನಂತರದಲ್ಲಿ ಮಂಜು ಅವರು ಶಿವರಾಜ್​ಕುಮಾರ್​ ಅವರಿಂದ ಆಶೀರ್ವಾದ ಪಡೆದಿದ್ದಾರೆ. ಈ ಬಗ್ಗೆ ಮಾತನಾಡಿರುವ ಶಿವರಾಜ್​ಕುಮಾರ್​ ‘ಮಂಜು ಭೇಟಿ ಮಾಡಿದ್ದು ಹಾಗೂ ಅವರು ಗೆಲುವು ಖುಷಿ ಕೊಟ್ಟಿದೆ’ ಎಂದಿದ್ದಾರೆ.

ಮೊದಲ ಇನ್ನಿಂಗ್ಸ್​ ಮುಗಿದ ನಂತರ ಮನೆಗೆ ಹೋದಾಗ ಕೆಲವರು ಮಂಜುಗೆ ಕರೆಮಾಡಿ ಮಾತನಾಡಿದ್ದಾರೆ. ಸಾಕಷ್ಟು ಜನರು ಕರೆ ಮಾಡಿ ಹಲವು ವಿಚಾರಗಳನ್ನು ಚರ್ಚೆ ಮಾಡಿದ್ದರು.

TV9kannada Web Team

| Edited By: Madan Kumar

Jun 25, 2021 | 7:40 AM

ಕನ್ನಡ ಬಿಗ್​ ಬಾಸ್​ ಮನೆಯ ಮೊದಲ ಇನ್ನಿಂಗ್ಸ್​ನಲ್ಲಿ ಮಂಜು ಪಾವಗಡ ಸಾಕಷ್ಟು ಎಂಟರ್​ಟೇನ್​ಮೆಂಟ್​ ನೀಡಿದ್ದರು. ಆದರೆ, ಕೊನೆಯಲ್ಲಿ ಅವರು ಡಲ್​ ಆಗಿದ್ದರು. ಈ ಬಗ್ಗೆ ವೀಕ್ಷಕರು ಸಾಕಷ್ಟು ಬೇಸರ ಹೊರ ಹಾಕಿದ್ದರು. ಅವರು ಮನೆಗೆ ಹೋದ ನಂತರ ಸಾಕಷ್ಟು ಕರೆ ಬಂದಿತ್ತಂತೆ. ಅದರಲ್ಲಿ ಬಂದ ಒಂದು ವಿಚಿತ್ರ ಕರೆ ಬಗ್ಗೆ ಮಂಜು ಈಗ ಹೇಳಿಕೊಂಡಿದ್ದಾರೆ.

‘ಕನ್ನಡ ಬಿಗ್​ ಬಾಸ್ ಸೀಸನ್​ 8’ ಮೊದಲ ಇನ್ನಿಂಗ್ಸ್​ನಲ್ಲಿ ದಿವ್ಯಾ ಸುರೇಶ್​ ಜತೆ ಸೇರಿಕೊಂಡು ಮಂಜು ಪಾವಗಡ ತಮ್ಮತನವನ್ನು ಕಳೆದುಕೊಂಡರು ಎಂಬ ಮಾತು ಕೇಳಿಬಂದಿತ್ತು. ಅವರ ಹಿಂದೆ ಸುತ್ತಾಡುತ್ತಾ ಮನರಂಜನೆ ನೀಡುವುದನ್ನೇ ನಿಲ್ಲಿಸಿದ್ದರು ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದರು. ಮೊದಲ ಇನ್ನಿಂಗ್ಸ್​ ಮುಗಿದ ನಂತರ ಮನೆಗೆ ಹೋದಾಗ ಕೆಲವರು ಈ ಬಗ್ಗೆ ಮಂಜುಗೆ ಹೇಳಿದ್ದಾರೆ. ಸಾಕಷ್ಟು ಜನರು ಕರೆ ಮಾಡಿ ಹಲವು ವಿಚಾರಗಳನ್ನು ಚರ್ಚೆ ಮಾಡಿದ್ದರು.

ಅಂತೆಯೇ ಒಂದು ದಿನ ಮಂಜುಗೆ ಅನಾಮೇಧಯ ವ್ಯಕ್ತಿಯಿಂದ ಕರೆ ಬಂದಿತ್ತು. ಆ  ವ್ಯಕ್ತಿ 30-35 ಬಾರಿ ಕರೆ ಮಾಡಿದ್ದರು. ಆದರೆ, ಮಂಜು ಕಾಲ್​ ಎತ್ತಿರಲಿಲ್ಲ. ಯಾವುದೋ ಫ್ಯಾನ್​ ವೂಟ್​ನಲ್ಲಿ ಬಿಗ್​ ಬಾಸ್​ ಸಾಕಷ್ಟು ಬಾರಿ ನೋಡಿದ್ದಾನೆ. ಈಗ ಕರೆ ಮಾಡಿ ಆ ಬಗ್ಗೆ ಕೇಳುತ್ತಾನೆ ಎಂದು ಮಂಜು ಭಾವಿಸಿದ್ದರು.

ಕೊನೆಗೆ ಕರೆ ಸ್ವೀಕರಿಸಿದೆ. ಕಾಲ್​ ಮಾಡಿದ ವ್ಯಕ್ತಿ, ‘ನೀವು ಮಂಜು ಪಾವಗಡ ಅವರ ಎಂದು ಕೇಳಿದರು. ನಾನು ಹೌದು ಎಂದೆ. ‘ಚೆನ್ನಾಗಿದ್ದೀರಾ? ನೀವು ಚೆನ್ನಾಗಿ ಆ್ಯಕ್ಟ್​ ಮಾಡ್ತೀರ.  ಆದರೆ, ಎರಡೂವರೆ ತಿಂಗಳಿಂದ ಮಜಾ ಭಾರತದಲ್ಲಿ ಕಾಣುತ್ತಿಲ್ಲ. ಎಲ್ಲೋದ್ರಿ ಎಂದು ಕೇಳಿದ್ರು. ನನಗೆ ಏನು ಹೇಳಬೇಕು ಎಂಬುದೇ ಗೊತ್ತಾಗಿಲ್ಲ’ ಎಂದರು. ಈ ವಿಚಾರ ಕೇಳಿ ಮನೆ ಮಂದಿಯೆಲ್ಲ ಬಿದ್ದು ಬಿದ್ದು ನಕ್ಕರು.

ಬಿಗ್​ಬಾಸ್ ಸೀಸನ್​ 8 ಅರ್ಧಕ್ಕೆ ನಿಲ್ಲುವಾಗ ಮನೆಯೊಳಗೆ ಅರವಿಂದ್ ಕೆ.ಪಿ, ಮಂಜು ಪಾವಗಡ, ಶಮಂತ್ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್, ರಘು ಗೌಡ, ಶುಭಾ ಪೂಂಜಾ, ವೈಷ್ಣವಿ ಗೌಡ, ದಿವ್ಯಾ ಸುರೇಶ್, ಪ್ರಿಯಾಂಕಾ ತಿಮ್ಮೇಶ್, ನಿಧಿ ಸುಬ್ಬಯ್ಯ, ಪ್ರಶಾಂತ್​ ಸಂಬರಗಿ ಹಾಗೂ ದಿವ್ಯಾ ಉರುಡುಗ ಸೇರಿ 12 ಸ್ಪರ್ಧಿಗಳು ಇದ್ದರು. ಈಗ ಈ ಎಲ್ಲಾ ಸ್ಪರ್ಧಿಗಳು ಬುಧವಾರ (ಜೂನ್​ 23) ಮರಳಿ ಬಿಗ್​ ಬಾಸ್​ ಮನೆಗೆ ಎಂಟ್ರಿ ಪಡೆದಿದ್ದಾರೆ.

ಇದನ್ನೂ ಓದಿ: Bigg Boss Kannada: ಬಿಗ್​ ಬಾಸ್​ ಮತ್ತೆ ಶುರುವಾಗಲು ಕಾರಣವಾದ ಪ್ರಮುಖ ವ್ಯಕ್ತಿ ಯಾರು? ಆ ಸ್ಪರ್ಧಿಯ ಮೇಲಿದೆ ಗುಮಾನಿ

Follow us on

Related Stories

Most Read Stories

Click on your DTH Provider to Add TV9 Kannada