Bigg Boss Kannada: ಬಿಗ್ ಬಾಸ್ ಮತ್ತೆ ಶುರುವಾಗಲು ಕಾರಣವಾದ ಪ್ರಮುಖ ವ್ಯಕ್ತಿ ಯಾರು? ಆ ಸ್ಪರ್ಧಿಯ ಮೇಲಿದೆ ಗುಮಾನಿ
BBK8: ಬಿಗ್ ಬಾಸ್ ಕನ್ನಡ ಸೀಸನ್ 8ಕ್ಕೆ ಮರು ಚಾಲನೆ ಸಿಕ್ಕಿದ್ದಕ್ಕೆ ಒಬ್ಬ ಸ್ಪರ್ಧಿಯೇ ಕಾರಣ ಎಂದು ಹಲವರು ಹೇಳುತ್ತಿದ್ದಾರೆ. ಈ ವಿಚಾರದಲ್ಲಿ ಯಾರಿಗೂ ಅನುಮಾನವೇ ಇಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಕನ್ನಡ ಕಿರುತೆರೆ ಪ್ರೇಕ್ಷಕರು ಕಾತರದಿಂದ ಕಾದಿದ್ದ ಬಿಗ್ ಬಾಸ್ ಕನ್ನಡ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್ ಶುರುವಾಗಿದೆ. ಈ ಜನಪ್ರಿಯ ಕಾರ್ಯಕ್ರಮಕ್ಕೆ ಬುಧವಾರ (ಜೂ.23) ಅದ್ದೂರಿಯಾಗಿ ಮರುಚಾಲನೆ ನೀಡಲಾಗಿದೆ. ಕಿಚ್ಚ ಸುದೀಪ್ ಎಂದಿನ ಚಾರ್ಮ್ನಲ್ಲಿ ವೇದಿಕೆ ಏರಿದರು. 12 ಸ್ಪರ್ಧಿಗಳನ್ನು ಮತ್ತೆ ದೊಡ್ಮನೆ ಒಳಗೆ ಕಳಿಸಲಾಗಿದೆ. ಕೊರೊನಾ ಎರಡನೇ ಅಲೆ ಜೋರಾದಾಗ ಈ ಶೋ ಅರ್ಧಕ್ಕೆ ನಿಲ್ಲಿಸಬೇಕಾಗಿತ್ತು. ಶೋ ಮತ್ತೆ ಶುರುವಾಗುತ್ತೋ ಇಲ್ಲವೋ ಎಂಬ ಅನುಮಾನ ಕಾಡುತ್ತಿತ್ತು. ಕಡೆಗೂ ಬಿಗ್ ಬಾಸ್ ಮರಳಿ ಬಂದಿದೆ. ಆದರೆ ಇದಕ್ಕೆ ಕಾರಣವಾದ ಪ್ರಮುಖ ವ್ಯಕ್ತಿ ಯಾರು?
‘ಬಿಗ್ ಬಾಸ್ ಕನ್ನಡ ಸೀಸನ್ 8’ಕ್ಕೆ ಮರು ಚಾಲನೆ ಸಿಗಲು ಕಾರಣ ಆಗಿರುವವರು ಯಾರು ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆದಿದೆ. ಶಮಂತ್ ಬ್ರೋ ಗೌಡ ಅವರೇ ಕಾರಣ ಎಂದು ಕೆಲವರು ಹೇಳುತ್ತಿದ್ದಾರೆ! ಈಗಾಗಲೇ ವೀಕ್ಷಕರಿಗೆ ಗೊತ್ತಿರುವಂತೆ ಶಮಂತ್ ಲಕ್ಕಿ ಬಾಯ್. ಈ ವಿಚಾರದಲ್ಲಿ ಯಾರಿಗೂ ಅನುಮಾನವೇ ಇಲ್ಲ. ಈ ಹಿಂದೆ ಎಲಿಮಿನೇಟ್ ಆಗಿದ್ದರೂ ಕೂಡ ಅವರು ಅದೃಷ್ಟದ ಬಲದಿಂದ ಬಚಾವ್ ಆಗಿದ್ದರು. ಈಗ ಅವರ ಅದೃಷ್ಟದಿಂದಲೇ ಶೋ ಮತ್ತೆ ಶುರುವಾಗಿದೆ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.
ಶಮಂತ್ ಪಾಲಿಗೆ ಅದೃಷ್ಟ ಒಲಿದಿರುವುದು ಒಂದೆರಡು ಬಾರಿ ಅಲ್ಲ. ಮೊದಲ ಎರಡು ವಾರ ಅವರು ಸುಲಭವಾಗಿ ಬ್ಯಾಕ್ ಟು ಬ್ಯಾಕ್ ಕ್ಯಾಪ್ಟನ್ ಆಗುವ ಮೂಲಕ ಎಲಿಮಿನೇಷನ್ನಿಂದ ಪಾರಾಗಿದ್ದರು. ನಂತರ ಒಮ್ಮೆ ಇಡೀ ಮನೆಮಂದಿಯೆಲ್ಲ ಬೆಡ್ರೂಮ್ ಬಿಟ್ಟುಕೊಟ್ಟು, ಅವರನ್ನು ನಾಮಿನೇಷನ್ನಿಂದ ಪಾರು ಮಾಡಿದ್ದರು. ಒಂದು ವಾರ ಶಮಂತ್ ಎಲಿಮಿನೇಟ್ ಎಂದು ಸುದೀಪ್ ಘೋಷಿಸಿಯೂ ಆಗಿತ್ತು. ಆದರೆ ಅವರ ಬದಲು ವೈಲ್ಡ್ ಕಾರ್ಡ್ ಸ್ಪರ್ಧಿ ವೈಜಯಂತಿ ಅಡಿಗ ಅವರು ಸ್ವತಃ ಮನೆಯಿಂದ ಹೊರ ಹೋಗುವ ಮೂಲಕ ಶಮಂತ್ರನ್ನು ಸೇವ್ ಮಾಡಿದ್ದರು.
ಈ ಎಲ್ಲ ಘಟನೆಗಳು ನಡೆದ ಬಳಿಕ ಶಮಂತ್ ಲಕ್ಕಿ ಬಾಯ್ ಎಂಬುದನ್ನು ಎಲ್ಲರೂ ಒಪ್ಪಿಕೊಂಡಿದ್ದರು. ಆ ಬಗ್ಗೆ ಸಿಕ್ಕಾಪಟ್ಟೆ ತಮಾಷೆಯನ್ನೂ ಮಾಡಿದ್ದರು. ಆ ತಮಾಷೆಯ ಸರಣಿ ಈಗಲೂ ಮುಂದುವರಿದಿದೆ. ಶೋ ಅರ್ಧಕ್ಕೆ ನಿಲ್ಲುವಾಗ ಕೊನೆಗೆ ಉಳಿದಿದ್ದ 12 ಜನರಲ್ಲಿ ಲಕ್ಕಿ ಬಾಯ್ ಶಮಂತ್ ಕೂಡ ಇರುವುದರಿಂದಲೇ ಈ ಶೋಗೆ ಮರುಚಾಲನೆ ಸಿಕ್ಕಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ಇದನ್ನೂ ಓದಿ:
ಬಿಗ್ ಬಾಸ್ ಬಗ್ಗೆ ಕಿಚ್ಚ ಸುದೀಪ್ ಉತ್ಸಾಹದ ಮಾತು; ಹೆಚ್ಚು ಖುಷಿ ಆಗಿದ್ದು ನಟಿ ಜೆನಿಲಿಯಾ
‘ಭಾಷಣ ಚೆನ್ನಾಗಿ ಮಾಡ್ತೀರಾ’; ಬಿಗ್ ಬಾಸ್ ವೇದಿಕೆ ಮೇಲೆ ದಿವ್ಯಾ ಉರುಡುಗಗೆ ಸುದೀಪ್ ಎಚ್ಚರಿಕೆ