‘ಭಾಷಣ ಚೆನ್ನಾಗಿ ಮಾಡ್ತೀರಾ’; ಬಿಗ್ ಬಾಸ್ ವೇದಿಕೆ ಮೇಲೆ ದಿವ್ಯಾ ಉರುಡುಗಗೆ ಸುದೀಪ್ ಎಚ್ಚರಿಕೆ
Bigg Boss 8 Second Innings: ಈ ಬಾರಿ ಪ್ರತಿ ಎಪಿಸೋಡ್ಗಳನ್ನು ಸ್ಪರ್ಧಿಗಳು ನೋಡಿಕೊಂಡು ಬಂದಿದ್ದಾರೆ. ಯಾವುದೇ ಕಾರಣಕ್ಕೂ ಒಂದೇ ವ್ಯಕ್ತಿಗೆ ಸ್ಟಿಕ್ ಆಗಬಾರದು ಎನ್ನುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಬಿಗ್ ಬಾಸ್ ಮೊದಲ ಇನ್ನಿಂಗ್ಸ್ನಲ್ಲಿ ದಿವ್ಯಾ ಸುರೇಶ್ ಹಾಗೂ ದಿವ್ಯಾ ಉರುಡುಗ ಬಗ್ಗೆ ವೀಕ್ಷಕರಿಂದ ಇದ್ದಿದ್ದು ಒಂದೇ ಆರೋಪ. ಇಬ್ಬರೂ ಒಂದೇ ವ್ಯಕ್ತಿ ಸುತ್ತ ಸುತ್ತುತ್ತಿದ್ದಾರೆ ಎಂದು. ಈಗ ಎರಡನೇ ಇನ್ನಿಂಗ್ಸ್ ಆರಂಭವಾಗಿದೆ. ಮಹಾ ಸಂಚಿಕೆ ಮೂಲಕ ಎಲ್ಲಾ ಸ್ಪರ್ಧಿಗಳೂ ಮನೆ ಒಳಗೆ ತೆರಳುತ್ತಿದ್ದಾರೆ. ಈ ವೇಳೆ ಇಬ್ಬರೂ ದಿವ್ಯಾಗೆ ಸುದೀಪ್ ಎಚ್ಚರಿಕೆ ನೀಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು 70 ದಿನ ಕಳೆದಿದ್ದರು. ಈ ವೇಳೆ ದಿವ್ಯಾ ಸುರೇಶ್, ಮಂಜು ಪಾವಗಡ ಜತೆ ಹೆಚ್ಚು ಒಡನಾಟ ಹೊಂದಿದ್ದರೆ, ಅರವಿಂದ್ ಕೆ.ಪಿ. ಜತೆ ದಿವ್ಯಾ ಉರುಡುಗ ಹೆಚ್ಚು ಆಪ್ತವಾಗಿದ್ದರು. ಮನೆ ಮಂದಿ ದಿವ್ಯಾಗೆ ಮಂಜು ಬಾಲ ಎಂದು ಹೀಯಾಳಿಸುತ್ತಿದ್ದರು. ದಿವ್ಯಾ ಉರುಡುಗಗೆ ಎದುರಿನಿಂದ ಯಾರೂ ಏನು ಹೇಳದಿದ್ದರೂ ಹಿಂದಿನಿಂದ ಮಾತನಾಡಿಕೊಳ್ಳುತ್ತಿದ್ದರು.
ಈ ಬಾರಿ ಪ್ರತಿ ಎಪಿಸೋಡ್ಗಳನ್ನು ಸ್ಪರ್ಧಿಗಳು ನೋಡಿಕೊಂಡು ಬಂದಿದ್ದಾರೆ. ಯಾವುದೇ ಕಾರಣಕ್ಕೂ ಒಂದೇ ವ್ಯಕ್ತಿಗೆ ಸ್ಟಿಕ್ ಆಗಬಾರದು ಎನ್ನುವ ನಿರ್ಧಾರ ತೆಗೆದುಕೊಂಡಿದ್ದಾರೆ. ಇದನ್ನು ಬಿಗ್ ಬಾಸ್ ವೇದಿಕೆ ಮೇಲೆ ಇಬ್ಬರೂ ಒಪ್ಪಿಕೊಂಡಿದ್ದಾರೆ. ಆದರೆ, ಮರುಕ್ಷಣವೇ ತಮ್ಮ ಹಳೆ ಚಾಳಿ ಮುಂದುವರಿಸಿದರು.
ನೀವು ಕ್ಯಾಪ್ಟನ್ ಆದಿರಿ ಎಂದುಕೊಳ್ಳಿ, ಯಾರನ್ನು ಸೇವ್ ಮಾಡ್ತೀರಾ ಎಂದು ಸುದೀಪ್ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ದಿವ್ಯಾ ಸುರೇಶ್, ಮಂಜು ಹೆಸರನ್ನು ಹೇಳಿದರು. ದಿವ್ಯಾ ಉರುಡುಗ ಎಂದಿನಂತೆ ಅರವಿಂದ್ ಹೆಸರನ್ನು ಉಚ್ಛರಿಸಿದರು.
ಆಗ ಸುದೀಪ್, ನೀವಿಬ್ಬರೂ ಭಾಷಣ ಚೆನ್ನಾಗಿ ಮಾಡ್ತೀರಾ. ಆದ್ರೆ ಇಬ್ಬರೂ ಎಲ್ಲಿದ್ದೀರೋ ಅಲ್ಲಿಯೇ ಇದ್ದೀರಾ. ಏನೂ ಬದಲಾಗಲಿಲ್ಲ ಎಂದರು. ಆಗ ದಿವ್ಯಾ ಸುರೇಶ್, ಪ್ರಿಯಾಂಕ ತಿಮ್ಮೇಶ್ ಹೆಸರು ಹೇಳಿದರು. ಆದರೆ, ದಿವ್ಯಾ ಉರುಡುಗ ಮಾತ್ರ ತಮ್ಮ ನಿರ್ಧಾರ ಬದಲಿಸಲಿಲ್ಲ.
ಬಿಗ್ಬಾಸ್ ಸೀಸನ್ 8 ಅರ್ಧಕ್ಕೆ ನಿಲ್ಲುವಾಗ ಮನೆಯೊಳಗೆ ಅರವಿಂದ್ ಕೆ.ಪಿ, ಮಂಜು ಪಾವಗಡ, ಶಮಂತ್ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್, ರಘು ಗೌಡ, ಶುಭಾ ಪೂಂಜಾ, ವೈಷ್ಣವಿ ಗೌಡ, ದಿವ್ಯಾ ಸುರೇಶ್, ಪ್ರಿಯಾಂಕಾ ತಿಮ್ಮೇಶ್, ನಿಧಿ ಸುಬ್ಬಯ್ಯ, ಪ್ರಶಾಂತ್ ಸಂಬರಗಿ ಹಾಗೂ ದಿವ್ಯಾ ಉರುಡುಗ ಸೇರಿ 12 ಸ್ಪರ್ಧಿಗಳು ಇದ್ದರು. ಈಗ ಈ ಎಲ್ಲಾ ಸ್ಪರ್ಧಿಗಳು ಮರಳಿ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಎರಡನೇ ಇನ್ನಿಂಗ್ಸ್ನಲ್ಲಿ ರಘು ಗೌಡ ಕಾಲಿಗೆ ಬಿದ್ದಿದ್ದೇಕೆ ವೈಷ್ಣವಿ?
Published On - 6:51 pm, Wed, 23 June 21