2 ಲಕ್ಷ ಮೌಲ್ಯದ ಬ್ರ್ಯಾಂಡೆಡ್ ಬ್ಯಾಗ್​ ತಂದ ಬಿಗ್​ ಬಾಸ್​ ಸ್ಪರ್ಧಿ; ಸಿಟ್ಟಾದ ಅಮ್ಮ ಬ್ಯಾಗ್​ ಹೇಗೆ ಎಸೆದ್ರು?

ಆಶು ರೆಡ್ಡಿ ಬ್ಯಾಗ್​ ತಂದ ವಿಚಾರವನ್ನು ಖುಷಿಯಿಂದ ತಾಯಿಗೆ ಹೇಳಿದ್ದಾರೆ. ಆಗ ಅವರ ತಾಯಿ ಬ್ಯಾಗ್​ನ ಬೆಲೆ ಕೇಳಿದ್ದಾರೆ. ಇದಕ್ಕೆ ಆಶು ‘2 ಲಕ್ಷ ರೂಪಾಯಿ’ ಎಂದು ಉತ್ತರಿಸಿದ್ದಾರೆ.

2 ಲಕ್ಷ ಮೌಲ್ಯದ ಬ್ರ್ಯಾಂಡೆಡ್ ಬ್ಯಾಗ್​ ತಂದ ಬಿಗ್​ ಬಾಸ್​ ಸ್ಪರ್ಧಿ; ಸಿಟ್ಟಾದ ಅಮ್ಮ ಬ್ಯಾಗ್​ ಹೇಗೆ ಎಸೆದ್ರು?
2 ಲಕ್ಷ ಮೌಲ್ಯದ ಬ್ರ್ಯಾಂಡೆಡ್ ಬ್ಯಾಗ್​ ತಂದ ಬಿಗ್​ ಬಾಸ್​ ಸ್ಪರ್ಧಿ; ಸಿಟ್ಟಾದ ಅಮ್ಮ ಬ್ಯಾಗ್​ ಹೇಗೆ ಎಸೆದ್ರು?
Follow us
ರಾಜೇಶ್ ದುಗ್ಗುಮನೆ
|

Updated on: Jun 23, 2021 | 5:22 PM

ಸೆಲೆಬ್ರಿಟಿಗಳು ಸದಾ ಬ್ರ್ಯಾಂಡೆಡ್​ ವಸ್ತುಗಳನ್ನು ಧರಿಸೋಕೆ ಇಷ್ಟಪಡುತ್ತಾರೆ. ಅವರು ಧರಿಸೋ ಬಟ್ಟೆಯ ಬೆಲೆಯನ್ನು ಅವರೇ ಹೇಳಿಕೊಳ್ಳಬೇಕೆಂದೇನು ಇಲ್ಲ. ಅಭಿಮಾನಿಗಳೇ ಈ ಬಗ್ಗೆ ಹುಡುಕಾಟ ನಡೆಸಿ ಬೆಲೆ ಕಂಡು ಹಿಡಿಯುತ್ತಾರೆ. ಈಗ ಬ್ರ್ಯಾಂಡೆಡ್​ ಬ್ಯಾಗ್​ ವಿಚಾರಕ್ಕೆ ಬಿಗ್​ ಬಾಸ್​ ಮಾಜಿ ಸ್ಪರ್ಧಿ ಸಾಕಷ್ಟು ಸುದ್ದಿಯಾಗಿದ್ದಾರೆ.

ತೆಲುಗು ಬಿಗ್​ ಬಾಸ್​ನ ಭಾಗವಾಗಿದ್ದ ಆಶು ರೆಡ್ಡಿ ಸದಾ ಸುದ್ದಿಯಲ್ಲಿರುತ್ತಾರೆ. ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟಿವ್​ ಆಗಿರುವ ಅವರು ಅಭಿಮಾನಿಗಳ ಜತೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಬಿಗ್​ ಬಾಸ್​ ವಿನ್ನರ್​ ರಾಹುಲ್​ ಜತೆ ಅವರು ರಿಲೇಶನ್​ಶಿಪ್​ನಲ್ಲಿದ್ದಾರೆ ಅನ್ನೋ ವಿಚಾರ ಇತ್ತೀಚೆಗೆ ವರದಿಯಾಗಿತ್ತು. ಆದರೆ, ಈ ಬಗ್ಗೆ ಸ್ಪಷ್ಟನೆ ಇಲ್ಲ. ಅವರಿಗೆ ಇತ್ತೀಚೆಗೆ 2 ಲಕ್ಷ ಮೌಲ್ಯದ ಬ್ಯಾಗ್​ ಒಂದು ಗಿಫ್ಟ್​ ಆಗಿ ಸಿಕ್ಕಿತ್ತು. ಆದರೆ, ಅಮ್ಮನ ಬಳಿ 2 ಲಕ್ಷ ರೂಪಾಯಿ ಕೊಟ್ಟು ಬ್ಯಾಗ್​ ಖರೀದಿಸಿದ್ದಾಗಿ ಹೇಳಿಕೊಂಡಿದ್ದರು. ಈ ವಿಚಾರ ಕೇಳಿ ಅವರ ತಾಯಿ ಶಾಕ್​ ಆಗಿದ್ದಾರೆ.

ಆಶು ರೆಡ್ಡಿ ಬ್ಯಾಗ್​ ತಂದ ವಿಚಾರವನ್ನು ಖುಷಿಯಿಂದ ತಾಯಿಗೆ ಹೇಳಿದ್ದಾರೆ. ಆಗ ಅವರ ತಾಯಿ ಬ್ಯಾಗ್​ನ ಬೆಲೆ ಕೇಳಿದ್ದಾರೆ. ಇದಕ್ಕೆ ಆಶು ‘2 ಲಕ್ಷ ರೂಪಾಯಿ’ ಎಂದು ಉತ್ತರಿಸಿದ್ದಾರೆ. ಇದನ್ನು ಆಶು ತಾಯಿ ಗಂಭೀರವಾಗಿ ಸ್ವೀಕರಿಸದೆ, ನಿಜವಾಗಿಯೂ ಬ್ಯಾಗ್​ನ ಬೆಲೆ ಎಷ್ಟು ಎಂದು ಮರುಪ್ರಶ್ನೆ ಮಾಡಿದ್ದಾರೆ. ಆಗ ಆಶು ಅದೇ ಉತ್ತರವನ್ನು ಹೇಳಿದ್ದಾರೆ. ಇದರಿಂದ ಸಿಟ್ಟಾದ ತಾಯಿ ಬ್ಯಾಗ್​ ಎಸೆದಿದ್ದಾರೆ.

View this post on Instagram

A post shared by Ashu Reddy❤️ (@ashu_uuu)

‘ಮನೆಯಲ್ಲಿ ಈಗಾಗಲೇ ಸಾಕಷ್ಟು ಬ್ಯಾಗ್​ಗಳಿವೆ. ಹೀಗಿರುವಾಗ ಮತ್ತೊಂದು ಬ್ಯಾಗ್​ ತಂದಿದ್ದೇಕೆ? ಬ್ಯಾಗ್​ ಅಂಗಡಿ ಇಡುವ ಆಲೋಚನೆ ಇದೆಯೇ?’ ಎಂದು  ಆಶು ತಾಯಿ ಪ್ರಶ್ನೆ ಮಾಡಿದ್ದಾರೆ. ಸದ್ಯ, ಈ ವಿಡಿಯೋ ಸಾಕಷ್ಟು ವೈರಲ್​ ಆಗುತ್ತಿದೆ.

ಇದನ್ನೂ ಓದಿ: ಬರೋಬ್ಬರಿ 35 ಸಾವಿರ ರೂಪಾಯಿ ಕೊಟ್ಟು ಬ್ರ್ಯಾಂಡೆಡ್​ ಬೆಲ್ಟ್​ ಖರೀದಿಸಿದ ಮಗಳಿಗೆ ತಿರುಗೇಟು ಕೊಟ್ಟ ಅಮ್ಮ; ವಿಡಿಯೋ ವೈರಲ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ