‘ಇಂಡಿಯಾ’ ಅನ್ನೋದು ಗುಲಾಮರ ಹೆಸರು ಎಂದ ಕಂಗನಾ ರಣಾವತ್​​ಗೆ ಕ್ಲಾಸ್​ ತೆಗೆದುಕೊಂಡ ನೆಟ್ಟಿಗರು

Kangana Ranaut: ಅನೇಕರು ಇದನ್ನು ವಿರೋಧಿಸಿದ್ದಾರೆ. ‘ದೇಶದ ಹೆಸರನ್ನು ಬದಲಿಸಿದ್ದರಿಂದ ಅಥವಾ ಬದಲಿಸುವುದರಿಂದ ಯಾವುದೇ ಬದಲಾವಣೆ ಆಗುವುದಿಲ್ಲ. ದೆಶದ ಜನತೆಯ ಆಲೋಚನೆ ಹಾಗೂ ನಡತೆ ಎರಡೂ ಬದಲಾಗಬೇಕು ಎಂದಿದ್ದಾರೆ.

‘ಇಂಡಿಯಾ’ ಅನ್ನೋದು ಗುಲಾಮರ ಹೆಸರು ಎಂದ ಕಂಗನಾ ರಣಾವತ್​​ಗೆ ಕ್ಲಾಸ್​ ತೆಗೆದುಕೊಂಡ ನೆಟ್ಟಿಗರು
ಕಂಗನಾ ರಣಾವತ್
Follow us
ರಾಜೇಶ್ ದುಗ್ಗುಮನೆ
|

Updated on:Jun 23, 2021 | 4:03 PM

ಕಂಗನಾ ರಣಾವತ್​ ಸದಾ ಪ್ರಚಲಿತದಲ್ಲಿರಲು ಪ್ರಯತ್ನಿಸುತ್ತಾರೆ. ಸಿನಿಮಾ ವಿಚಾರವಲ್ಲದೆ, ತಮ್ಮ ಅಭಿಪ್ರಾಯ ಹೊರ ಹಾಕುವ ಮೂಲಕ ಅವರು ಸುದ್ದಿಯಲ್ಲಿರುತ್ತಾರೆ. ಈಗ ಕಂಗನಾ ಹೊಸ ವಿಚಾರವನ್ನು ಚರ್ಚೆಗೆ ಎಳೆದು ತಂದಿದ್ದಾರೆ. ಇಂಡಿಯಾ ಅನ್ನೋ ಹೆಸರನ್ನು ಬದಲಿಸಿ ಭಾರತ ಎಂದು ನಮ್ಮ ದೇಶವನ್ನು ಕರೆಯಬೇಕು ಎಂದು ಕಂಗನಾ ಆಗ್ರಹಿಸಿದ್ದಾರೆ.

ಕೂ ಖಾತೆಯಲ್ಲಿ ಕಂಗನಾ ಈ ಬಗ್ಗೆ ಬರೆದುಕೊಂಡಿದ್ದಾರೆ. ‘ಭಾರತವು ತನ್ನ ಪ್ರಾಚೀನ ಆಧ್ಯಾತ್ಮಿಕತೆ ಮುಂದುವರಿಸಿಕೊಂಡು ಹೋದರೆ ಮಾತ್ರ ಏಳ್ಗೆ ಕಾಣಬಹುದು. ಪ್ರಾಚೀನ ಆಧ್ಯಾತ್ಮಿಕತೆ ನಮ್ಮ ನಾಗರಿಕತೆಯ ಆತ್ಮ. ನಾವು ಪಾಶ್ಚಿಮಾತ್ಯ ಪ್ರಪಂಚದ ಪ್ರತಿಬಿಂಬ ಆಗದೆ ನಮ್ಮ ವೇದಗಳು, ಗೀತಾ ಮತ್ತು ಯೋಗಗಳಲ್ಲಿ ಆಳವಾಗಿ ಬೇರೂರಿದರೆ ನಾವು ವಿಶ್ವ ನಾಯಕರಾಗಿ ಹೊರಹೊಮ್ಮುತ್ತೇವೆ. ದಯವಿಟ್ಟು ಆ ಗುಲಾಮರು ಇಟ್ಟ ಇಂಡಿಯಾ ಎನ್ನುವ ಹೆಸರನ್ನು ಭಾರತ ಎಂದು ಬದಲಾಯಿಸಬಹುದೇ?’ ಎಂದು ಪ್ರಶ್ನೆ ಮಾಡಿದ್ದಾರೆ.

‘ಬ್ರಿಟಿಷರು ನಮಗೆ ಇಂಡಿಯಾ ಎಂಬ ಗುಲಾಮಗಿರಿಯ ಹೆಸರನ್ನು ನೀಡಿದರು. ಇಂಡಿಯಾ ಎಂದರೆ ಸಿಂಧೂ ಕಣಿವೆಯ ಪೂರ್ವ ಎಂದರ್ಥ. ಇದು ಯಾವ ರೀತಿಯ ಹೆಸರು? ಭಾರತ ಎಂಬ ಹೆಸರಿನ ಅರ್ಥವನ್ನು ನೀವು ತಿಳಿದುಕೊಳ್ಳಬೇಕು. ಭಾ- ಭಾವ, ರ- ರಾಗ, ತ-ತಾಳ ಇದು ಭಾರತ ಶಬ್ದದ ಅರ್ಥ’ ಎಂದಿದ್ದಾರೆ ಅವರು.

ಅನೇಕರು ಇದನ್ನು ವಿರೋಧಿಸಿದ್ದಾರೆ. ‘ದೇಶದ ಹೆಸರನ್ನು ಬದಲಿಸಿದ್ದರಿಂದ ಅಥವಾ ಬದಲಿಸುವುದರಿಂದ ಯಾವುದೇ ಬದಲಾವಣೆ ಆಗುವುದಿಲ್ಲ. ದೇಶದ ಜನತೆಯ ಆಲೋಚನೆ ಹಾಗೂ ನಡತೆ ಎರಡೂ ಬದಲಾಗಬೇಕು. ಅಂದಾಗ ಮಾತ್ರ ನಿಜವಾದ ಬದಲಾವಣೆ ಸಾಧ್ಯ’ ಎಂದು ಹಲವರು ಹೇಳಿದ್ದಾರೆ. ಇನ್ನೂ ಕೆಲವರು, ‘ನೀವು ಹೇಳಿದಂತೆ ಈ ದೇಶಕ್ಕೆ ಹೆಸರು ಬಂದಿಲ್ಲ. ಶಂಕುತಲಾ ಮತ್ತು ದುಶ್ಯಂತನ ಮಗ ಭರತನಿಂದ ಭಾರತ ಎನ್ನುವ ಹೆಸರು ಬಂದಿದೆ’ ಎಂದು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: Kangana Ranaut: ಹೈಕೋರ್ಟ್​ ಮೆಟ್ಟಿಲೇರಿದ ಕಂಗನಾ ರಣಾವತ್​; ಈ ಬಾರಿ ಮತ್ತೇನು ಕಿರಿಕ್​?

ಆ್ಯಸಿಡ್​ ದಾಳಿಯಿಂದ ಕಂಗನಾ ಅಕ್ಕನ ಮುಖಕ್ಕೆ 53 ಸರ್ಜರಿ; ಕಡೆಗೂ ಯೋಗದಿಂದ ನಡೆದಿದ್ದು ಮ್ಯಾಜಿಕ್​

Published On - 3:50 pm, Wed, 23 June 21

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ