ಆ್ಯಸಿಡ್​ ದಾಳಿಯಿಂದ ಕಂಗನಾ ಅಕ್ಕನ ಮುಖಕ್ಕೆ 53 ಸರ್ಜರಿ; ಕಡೆಗೂ ಯೋಗದಿಂದ ನಡೆದಿದ್ದು ಮ್ಯಾಜಿಕ್​

International Yoga Day: 21ನೇ ವಯಸ್ಸಿನಲ್ಲಿ ಕಂಗನಾ ರಣಾವತ್​ ಸಹೋದರಿ ರಂಗೋಲಿ ಚಂಡೇಲ್​ ಮೇಲೆ ಆ್ಯಸಿಡ್​ ದಾಳಿ ಆಗಿತ್ತು. ಅರ್ಧ ಮುಖ ಸುಟ್ಟು ಹೋಗಿತ್ತು. ಒಂದು ಕಣ್ಣಿನ ದೃಷ್ಟಿ ಹೋಗಿತ್ತು. ಒಂದು ಭಾಗದ ಸ್ತನಕ್ಕೂ ಹಾನಿ ಆಗಿತ್ತು!

ಆ್ಯಸಿಡ್​ ದಾಳಿಯಿಂದ ಕಂಗನಾ ಅಕ್ಕನ ಮುಖಕ್ಕೆ 53 ಸರ್ಜರಿ; ಕಡೆಗೂ ಯೋಗದಿಂದ ನಡೆದಿದ್ದು ಮ್ಯಾಜಿಕ್​
ಕಂಗನಾ ರಣಾವತ್​, ರಂಗೋಲಿ ಚಂಡೇಲ್​
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on: Jun 21, 2021 | 3:28 PM

ನಟಿ ಕಂಗನಾ ರಣಾವತ್​ ಅವರ ಅಕ್ಕ ರಂಗೋಲಿ ಚಂಡೇಲ್​ ಅವರ ಬದುಕಿನಲ್ಲಿ ಕಣ್ಣೀರಿನ ಕಥೆ ಇದೆ. ಚಿಕ್ಕ ವಯಸ್ಸಿನಲ್ಲಿಯೇ ಅವರ ಮೇಲೆ ಆ್ಯಸಿಡ್​ ದಾಳಿ ಆಗಿತ್ತು. ಆಗ ಅವರ ಮುಖ ಸುಟ್ಟು ವಿಕಾರಗೊಂಡಿತ್ತು. ಅಂಥ ದುಸ್ಥಿತಿಯಿಂದ ಅವರ ಮನಸ್ಸು ಕೂಡ ಛಿದ್ರ ಆಗಿತ್ತು. ಆಗ ಅವರ ಸಹಾಯಕ್ಕೆ ಬಂದಿದ್ದೇ ಯೋಗ ಎಂಬುದನ್ನು ಕಂಗನಾ ಹೇಳಿದ್ದಾರೆ. ವಿಶ್ವ ಯೋಗ ದಿನದ ಪ್ರಯುಕ್ತ ಅವರು ಕೆಲವು ಅಚ್ಚರಿಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

‘ರಂಗೋಲಿ ಬದುಕಿನಲ್ಲಿ ಯೋಗದ ಕುರಿತು ಒಂದು ಸ್ಫೂರ್ತಿದಾಯಕ ಕಥೆ ಇದೆ. ಅವಳು 21 ವರ್ಷದವಳಿದ್ದಾಗ ಅವಳ ಮೇಲೆ ಒಬ್ಬ ರೋಡ್​ ಸೈಡ್​ ರೋಮಿಯೋ ಆ್ಯಸಿಡ್​ ಎರಚಿದ್ದ. ಅವಳ ಅರ್ಧ ಮುಖ ಸುಟ್ಟು ಹೋಗಿತ್ತು. ಒಂದು ಕಣ್ಣಿನ ದೃಷ್ಟಿ ಹೋಗಿತ್ತು. ಒಂದು ಭಾಗದ ಸ್ತನಕ್ಕೂ ಹಾನಿ ಆಗಿತ್ತು. ನಂತರ 2ರಿಂದ 3 ವರ್ಷದಲ್ಲಿ ಅವಳಿಗೆ 53 ಸರ್ಜರಿ ಮಾಡಲಾಯಿತು. ಅಷ್ಟು ಮಾತ್ರವಲ್ಲ, ಅವಳ ಮಾನಸಿಕ ಆರೋಗ್ಯದ ಬಗ್ಗೆ ನನಗೆ ಚಿಂತೆ ಆಗಿತ್ತು. ಆಕೆ ಮಾತನಾಡುವುದನ್ನೇ ನಿಲ್ಲಿಸಿದ್ದಳು’ ಎಂದು ಕಂಗನಾ ಹಳೇ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ.

‘ಏನೇ ಆದರೂ ಕೂಡ ಆಕೆ ಒಂದು ಅಕ್ಷರವನ್ನೂ ಮಾತನಾಡುತ್ತಿರಲಿಲ್ಲ. ಎಲ್ಲವನ್ನೂ ದಿಟ್ಟಿಸಿ ನೋಡುತ್ತಿದ್ದಳು ಅಷ್ಟೇ. ಅವಳಿಗೆ ಒಬ್ಬ ವಾಯುಸೇನೆ ಅಧಿಕಾರಿ ಜೊತೆ ನಿಶ್ಚಿತಾರ್ಥ ಆಗಿತ್ತು. ಆದರೆ ಆ್ಯಸಿಡ್​ ದಾಳಿ ಆದ ಬಳಿಕ ಅವಳ ಮುಖವನ್ನು ನೋಡಿದ ಆ ಅಧಿಕಾರಿ ಹೊರಟು ಹೋದ. ಮತ್ತೆಂದೂ ಮರಳಿ ಬರಲಿಲ್ಲ. ಆಗಲೂ ಕೂಡ ರಂಗೋಲಿ ಒಂದು ಹನಿ ಕಣ್ಣೀರು ಸಹ ಹಾಕಲಿಲ್ಲ. ಒಂದು ಮಾತೂ ಆಡಲಿಲ್ಲ’ ಎನ್ನುವ ಮೂಲಕ ಆ ಭಯಾನಕ ಸ್ಥಿತಿಯನ್ನು ಕಂಗನಾ ವಿವರಿಸಿದ್ದಾರೆ.

‘ಅವಳ ಮನಸ್ಸು ತೀವ್ರ ಆಘಾತಕ್ಕೆ ಒಳಗಾಗಿದೆ ಎಂದು ವೈದ್ಯರು ಹೇಳಿದರು. ಅದಕ್ಕಾಗಿ ಹಲವು ಬಗೆಯ ಚಿಕಿತ್ಸೆ ನೀಡಿದರು. ಮನೋವೈದ್ಯರ ಸಲಹೆ ಕೂಡ ಪಡೆಯಲಾಯಿತು. ಆದರೆ ಯಾವುದೂ ಉಪಯೋಗಕ್ಕೆ ಬರಲಿಲ್ಲ. ಆಕೆ ಮಾತನಾಡಲೇಬೇಕು ಎಂದು ನಾನು ಬಯಸಿದ್ದೆ. ನಾನು ಹೋದಲ್ಲೆಲ್ಲ ಅವಳನ್ನು ಕರೆದುಕೊಂಡು ಹೋಗುತ್ತಿದ್ದೆ. ನನ್ನ ಯೋಗ ಕ್ಲಾಸ್​ಗೂ ಕರೆದುಕೊಂಡು ಹೋದೆ. ಅವಳು ನಿಧಾನಕ್ಕೆ ಯೋಗ ಮಾಡಲು ಆರಂಭಿಸಿದಳು. ಅವಳಲ್ಲಿ ಬದಲಾವಣೆ ಕಾಣಿಸಿಕೊಂಡಿತ್ತು. ನೋವು ಮತ್ತು ನನ್ನ ಜೋಕ್​ಗಳಿಗೆ ಅವಳು ಪ್ರತಿಕ್ರಿಯಿಸಲು ಶುರು ಮಾಡಿದ್ದು ಮಾತ್ರವಲ್ಲದೇ, ಅವಳು ಕಳೆದುಕೊಂಡಿದ್ದ ಒಂದು ಕಣ್ಣಿನ ದೃಷ್ಟಿ ಕೂಡ ಮರಳಿಬಂತು’ ಎಂದು ಕಂಗನಾ ಹೇಳಿದ್ದಾರೆ.

ಇದನ್ನೂ ಓದಿ:

ಲಾಕ್​ಡೌನ್​ ಎಫೆಕ್ಟ್​; ತೆರಿಗೆ ಕಟ್ಟಲೂ ಆಗದೆ ಒದ್ದಾಡುತ್ತಿದ್ದಾರೆ ಕಂಗನಾ ರಣಾವತ್​; ಅಳಲು ತೋಡಿಕೊಂಡ ನಟಿ

ಅತ್ಯಾಚಾರ ಆರೋಪ ಎದುರಿಸುತ್ತಿದ್ದ ಕಂಗನಾ ರಣಾವತ್ ಬಾಡಿಗಾರ್ಡ್ ಮಂಡ್ಯದಲ್ಲಿ ಅರೆಸ್ಟ್​

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ