ಬಿಗ್​ ಬಾಸ್​ ಎರಡನೇ ಇನ್ನಿಂಗ್ಸ್​ನಲ್ಲಿ ರಘು ಗೌಡ ಕಾಲಿಗೆ ಬಿದ್ದಿದ್ದೇಕೆ ವೈಷ್ಣವಿ?

TV9 Web
| Updated By: ರಾಜೇಶ್ ದುಗ್ಗುಮನೆ

Updated on: Jun 23, 2021 | 1:33 PM

ಎಲ್ಲಾ ಸ್ಪರ್ಧಿಗಳು ಮರಳಿ ಬಿಗ್​ ಬಾಸ್​ ಮನೆಗೆ ಎಂಟ್ರಿ ಪಡೆದಿದ್ದಾರೆ. ಈ ಸಂಚಿಕೆ ಇಂದು (ಜೂನ್​ 23) ಪ್ರಸಾರವಾಗಲಿದೆ.  ಪ್ರೋಮೋದಲ್ಲಿ ಎದುರಾಗುವ ಸಾಕಷ್ಟು ಪ್ರಶ್ನೆಗೆ ಇಂದಿನ ಮಹಾಸಂಚಿಕೆಯಲ್ಲಿ ಉತ್ತರ ಸಿಗಲಿದೆ. 

ಬಿಗ್​ ಬಾಸ್​ ಸ್ಪರ್ಧಿಗಳು ಏನೇ ಮಾತನಾಡಿಕೊಂಡರೂ ಅದು ಕ್ಯಾಮೆರಾ ಹಾಗೂ ಪ್ರೇಕ್ಷಕರ ನಡುವೆ ಮಾತ್ರ ಇರುತ್ತದೆ. ಸ್ಪರ್ಧಿಗಳು ಸೀಕ್ರೆಟ್​ ಆಗಿ ಏನೇ ಮಾತನಾಡಿಕೊಂಡರು ಮತ್ತೊಂದು ಸ್ಪರ್ಧಿಗೆ ಅದು ತಿಳಿಯುವುದಿಲ್ಲ. ಇದು ಬಿಗ್​ ಬಾಸ್​ ಮನೆಯ ಅಲಿಖಿತ ನಿಯಮ. ಆದರೆ, ಇದೇ ಮೊದಲ ಬಾರಿಗೆ ಈ ನಿಯಮ ಮುರಿಯಲ್ಪಟ್ಟಿದೆ. ಎಲ್ಲಾ ಸ್ಪರ್ಧಿಗಳು 70 ದಿನದ ಎಪಿಸೋಡ್​ಗಳನ್ನು ನೋಡಿ ಮತ್ತೆ ಬಿಗ್​ ಬಾಸ್​ ಮನೆ ಒಳಗೆ ಹೋಗಿದ್ದಾರೆ. ಪರಿಣಾಮ ಮನೆಯಲ್ಲಿ ಮೊದಲ ದಿನವೇ ದೊಡ್ಡ ಬೆಂಕಿ ಹೊತ್ತಿಕೊಂಡಿದೆ.

ಬಿಗ್​ಬಾಸ್ ಸೀಸನ್​ 8 ಅರ್ಧಕ್ಕೆ ನಿಲ್ಲುವಾಗ ಮನೆಯೊಳಗೆ ಅರವಿಂದ್ ಕೆ.ಪಿ, ಮಂಜು ಪಾವಗಡ, ಶಮಂತ್ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್, ರಘು ಗೌಡ, ಶುಭಾ ಪೂಂಜಾ, ವೈಷ್ಣವಿ ಗೌಡ, ದಿವ್ಯಾ ಸುರೇಶ್, ಪ್ರಿಯಾಂಕಾ ತಿಮ್ಮೇಶ್, ನಿಧಿ ಸುಬ್ಬಯ್ಯ, ಪ್ರಶಾಂತ್​ ಸಂಬರಗಿ ಹಾಗೂ ದಿವ್ಯಾ ಉರುಡುಗ ಸೇರಿ 12 ಸ್ಪರ್ಧಿಗಳು ಇದ್ದರು. ಈಗ ಈ ಎಲ್ಲಾ ಸ್ಪರ್ಧಿಗಳು ಮರಳಿ ಬಿಗ್​ ಬಾಸ್​ ಮನೆಗೆ ಎಂಟ್ರಿ ಪಡೆದಿದ್ದಾರೆ. ಈ ಸಂಚಿಕೆ ಇಂದು (ಜೂನ್​ 23) ಪ್ರಸಾರವಾಗಲಿದೆ.  ಪ್ರೋಮೋದಲ್ಲಿ ವೈಷ್ಣವಿ, ರಘು ಕಾಲಿಗೆ ಬಿದ್ದಿದ್ದಾರೆ, ದಿವ್ಯಾ vs ದಿವ್ಯಾ ಕಾಳಗ ನಡೆದಿದೆ. ಇಂದಿನ ಮಹಾ ಸಂಚಿಕೆಯಲ್ಲಿ ಎಲ್ಲವೂ ಪ್ರಸಾರವಾಗಲಿದೆ.

ಇದನ್ನೂ ಓದಿ:ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ಹೊತ್ತಿಕೊಂಡಿತು ದ್ವೇಷದ ಬೆಂಕಿ; ಪ್ರಶಾಂತ್ ಸಂಬರಗಿ ಫೋಟೋ ಸುಟ್ಟ ಸ್ಪರ್ಧಿಗಳು