Bigg Boss Kannada: ದಿವ್ಯಾ ಸುರೇಶ್ ಜತೆ ಅಂತರ ಕಾಯ್ದುಕೊಳ್ಳುವ ಸೂಚನೆ ನೀಡಿದ ಮಂಜು ಪಾವಗಡ
ಕೊನೆಯ ದಿನಗಳಲ್ಲಿ ದಿವ್ಯಾ ಸುರೇಶ್ ಹಾಗೂ ಮಂಜು ತುಂಬಾನೇ ಕ್ಲೋಸ್ ಆಗಿದ್ದರು. ದಿವ್ಯಾ ನಡೆದುಕೊಳ್ಳುತ್ತಿದ್ದ ರೀತಿ ಮಂಜುಗೆ ಇಷ್ಟವಾಗುತ್ತಿರಲಿಲ್ಲ. ಅಲ್ಲದೆ, ದಿವ್ಯಾ ಅವರನ್ನು ಸಂಭಾಳಿಸುವುದರಲ್ಲೇ ಅವರ ಟೈಮ್ ಕಳೆಯಿತು. ಇದು ಮಂಜೂಗೂ ಅರಿವಾಗಿದೆ.
‘ಕನ್ನಡ ಬಿಗ್ ಬಾಸ್ ಸೀಸನ್ 8’ ಮೊದಲ ಇನ್ನಿಂಗ್ಸ್ನಲ್ಲಿ ದಿವ್ಯಾ ಸುರೇಶ್ ಜತೆ ಸೇರಿಕೊಂಡು ಮಂಜು ಪಾವಗಡ ತಮ್ಮತನವನ್ನು ಕಳೆದುಕೊಂಡರು ಎಂಬ ಮಾತು ಕೇಳಿಬಂದಿತ್ತು. ಅವರ ಹಿಂದೆ ಸುತ್ತಾಡುತ್ತಾ ಮನರಂಜನೆ ನೀಡುವುದನ್ನೇ ನಿಲ್ಲಿಸಿದ್ದರು ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದರು. ಆದರೆ, ಈ ಬಾರಿ ಅಂಥ ತಪ್ಪು ಮಾಡುವುದಿಲ್ಲ ಎಂದು ಮಂಜು ಪಾವಗಡ ಹೇಳಿಕೊಂಡಿದ್ದಾರೆ.
‘ಯಾರ್ ಜೊತೆ ಹೆಂಗಿರಬೇಕು ಅನ್ನೋದು ಅರ್ಥ ಆಗಿದೆ. ನಮ್ಮ ಬುದ್ದಿಯೂ ಮಂಕಾಗುತ್ತೆ. ಈಗ ಬಹಳ ಅರ್ಥ ಆಗಿದೆ. ಯಾಕೆ ಎಂಟರ್ಟೆನ್ಮೆಂಟ್ ಮಾಡಿಲ್ಲ ಎಂದು ಕೇಳಿದ್ರು. ಆಗ ನನಗೆ ರಿಯಲೈಸ್ ಆಯ್ತು. ಕಳೆದ ಬಾರಿ ಮಾಡಿದ ತಪ್ಪನ್ನು ಈ ಬಾರಿ ಮಾಡಲ್ಲ’ ಎಂದರು ಮಂಜು.
ಕೊನೆಯ ದಿನಗಳಲ್ಲಿ ದಿವ್ಯಾ ಸುರೇಶ್ ಹಾಗೂ ಮಂಜು ತುಂಬಾನೇ ಕ್ಲೋಸ್ ಆಗಿದ್ದರು. ದಿವ್ಯಾ ನಡೆದುಕೊಳ್ಳುತ್ತಿದ್ದ ರೀತಿ ಮಂಜುಗೆ ಇಷ್ಟವಾಗುತ್ತಿರಲಿಲ್ಲ. ಅಲ್ಲದೆ, ದಿವ್ಯಾ ಅವರನ್ನು ಸಂಭಾಳಿಸುವುದರಲ್ಲೇ ಅವರ ಟೈಮ್ ಕಳೆಯಿತು. ಇದು ಮಂಜೂಗೂ ಅರಿವಾಗಿದೆ. ಈ ಬಗ್ಗೆಯೂ ಮಾತನಾಡಿದ ಮಂಜು, ‘ಅನೇಕರು ಕರೆ ಮಾಡಿ ಯಾಕೆ ದಿವ್ಯಾ ಹಿಂದೆ ಸುತ್ತುತ್ತಿದ್ದೆ ಎಂದು ನೇರವಾಗಿ ಪ್ರಶ್ನೆ ಮಾಡಿದರು. ಈಗ ನನಗೆಲ್ಲವೂ ಅವರಿವಾಗಿದೆ’ ಎಂದು ಹೇಳಿದರು.
ಬಿಗ್ ಬಾಸ್ ಮನೆಯ ಜರ್ನಿಯಲ್ಲಿ ಬೈಕ್ ರೈಡ್ ಸಿಂಗಲ್ ರೈಡ್ ಇರುತ್ತೋ ಅಥವಾ ಡಬಲ್ ರೈಡ್ ಇರುತ್ತದೆಯೋ ಎಂದು ಸುದೀಪ್ ನೇರವಾಗಿ ಪ್ರಶ್ನೆ ಮಾಡಿದರು. ಆಗ, ಮಂಜು, ನಾನು ಸಿಂಗಲ್ ರೈಡ್ ಹೋಗುತ್ತೇನೆ ಎಂದು ಹೇಳುವ ಮೂಲಕ ದಿವ್ಯಾ ಅವರಿಂದ ಅಂತರ ಕಾಯ್ದುಕೊಳ್ಳುವ ಸೂಚನೆ ನೀಡಿದರು.
ಬಿಗ್ಬಾಸ್ ಸೀಸನ್ 8 ಅರ್ಧಕ್ಕೆ ನಿಲ್ಲುವಾಗ ಮನೆಯೊಳಗೆ ಅರವಿಂದ್ ಕೆ.ಪಿ, ಮಂಜು ಪಾವಗಡ, ಶಮಂತ್ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್, ರಘು ಗೌಡ, ಶುಭಾ ಪೂಂಜಾ, ವೈಷ್ಣವಿ ಗೌಡ, ದಿವ್ಯಾ ಸುರೇಶ್, ಪ್ರಿಯಾಂಕಾ ತಿಮ್ಮೇಶ್, ನಿಧಿ ಸುಬ್ಬಯ್ಯ, ಪ್ರಶಾಂತ್ ಸಂಬರಗಿ ಹಾಗೂ ದಿವ್ಯಾ ಉರುಡುಗ ಸೇರಿ 12 ಸ್ಪರ್ಧಿಗಳು ಇದ್ದರು. ಈಗ ಈ ಎಲ್ಲಾ ಸ್ಪರ್ಧಿಗಳು ಬುಧವಾರ (ಜೂನ್ 23) ಮರಳಿ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದಿದ್ದಾರೆ.
ಇದನ್ನೂ ಓದಿ:
Bigg Boss Kannada: ಹೊಸ ಬದಲಾವಣೆಯೊಂದಿಗೆ ಬಿಗ್ ಬಾಸ್ ಮನೆ ಸೇರಿದ ರಘು ಗೌಡ