AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ಹೊಸ ಬದಲಾವಣೆಯೊಂದಿಗೆ ಬಿಗ್​ ಬಾಸ್​ ಮನೆ ಸೇರಿದ ರಘು ಗೌಡ

Bigg Boss 8 Second Innings | Raghu Gowda: ಆರಂಭದಲ್ಲಿ ಬಿಗ್​ ಬಾಸ್​ ಮನೆಯಲ್ಲಿ ತುಂಬಾನೇ ಸೈಲೆಂಟ್​ ಆಗಿದ್ದ ವ್ಯಕ್ತಿ ಎಂದರೆ ಅವರು ರಘು ಗೌಡ. ತುಂಬಾನೇ ಎಮೋಷನಲ್​ ಆಗುತ್ತಿದ್ದ ಅವರು, ಟಾಸ್ಕ್​ಗಳಲ್ಲಿ ಹಿಂದೆ ಬಿದ್ದಿದ್ದರು. ನಂತರ ವೇಗ ಪಡೆದುಕೊಂಡಂತೆ ಕಂಡರೂ ಯಾವುದೇ ಪ್ರಯೋಜನವಾಗಿಲ್ಲ.

Bigg Boss Kannada: ಹೊಸ ಬದಲಾವಣೆಯೊಂದಿಗೆ ಬಿಗ್​ ಬಾಸ್​ ಮನೆ ಸೇರಿದ ರಘು ಗೌಡ
ರಘು ಗೌಡ
ರಾಜೇಶ್ ದುಗ್ಗುಮನೆ
| Updated By: Digi Tech Desk|

Updated on:Jun 23, 2021 | 10:02 PM

Share

ಕನ್ನಡ ಬಿಗ್​ ಬಾಸ್​ ಸೀಸನ್​ 8 ಮೊದಲ ಇನ್ನಿಂಗ್ಸ್​ನಲ್ಲಿ ರಘು ಗೌಡ ಅವರು ತುಂಬಾನೇ ವಿಚಿತ್ರವಾಗಿದ್ದರು. ಅಷ್ಟೇ ಅಲ್ಲ, ಅವರು ನಡೆದುಕೊಳ್ಳುತ್ತಿದ್ದ ರೀತಿ ಅವರಿಗೇ ಇಷ್ಟವಾಗುತ್ತಿರಲಿಲ್ಲ. ಈಗ ಸೆಕೆಂಡ್​ ಇನ್ನಿಂಗ್ಸ್​ ಆರಂಭವಾಗಿದೆ. ರಘು ಗೌಡ ಸಾಕಷ್ಟು ಜೋಶ್​ನೊಂದಿಗೆ ಮನೆ ಒಳಗೆ ಬಂದಿದ್ದಾರೆ. ಅವರಲ್ಲಿ ಸಾಕಷ್ಟು ಬದಲಾವಣೆ ಆಗಿದೆಯಂತೆ.

ಆರಂಭದಲ್ಲಿ ಬಿಗ್​ ಬಾಸ್​ ಮನೆಯಲ್ಲಿ ತುಂಬಾನೇ ಸೈಲೆಂಟ್​ ಆಗಿದ್ದ ವ್ಯಕ್ತಿ ಎಂದರೆ ಅದು ರಘು ಗೌಡ. ತುಂಬಾನೇ ಎಮೋಷನಲ್​ ಆಗುತ್ತಿದ್ದ ಅವರು, ಟಾಸ್ಕ್​ಗಳಲ್ಲಿ ಹಿಂದೆ ಬಿದ್ದಿದ್ದರು. ನಂತರ ವೇಗ ಪಡೆದುಕೊಂಡಂತೆ ಕಂಡರೂ ಯಾವುದೇ ಪ್ರಯೋಜನವಾಗಿಲ್ಲ. ಬಿಗ್​ ಬಾಸ್​ ಮೊದಲ ಇನ್ನಿಂಗ್ಸ್​ ಕೊನೆಯ ಅವಧಿಯಲ್ಲಿ ಮತ್ತೆ ಮಂಕಾದರು. ಸಣ್ಣ ವಿಚಾರವನ್ನೂ ದೊಡ್ಡ ಮಟ್ಟದಲ್ಲಿ ಚಿಂತೆ ಮಾಡುತ್ತಿದ್ದರು.

ವೈಷ್ಣವಿ ಹಾಗೂ ರಘು ಒಟ್ಟಿಗೆ ಇರುತ್ತಾರೆ ಎನ್ನುವ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದಕ್ಕೂ ಕೂಡ ರಘು ದೊಡ್ಡ ಮಟ್ಟದಲ್ಲಿ ತಲೆಕೆಡಿಸಿಕೊಂಡಿದ್ದರು. ಆದರೆ, ಈಗ ಈ ಆಲೋಚನೆಗಳನ್ನು ಅವರು ಬದಿಗಿಟ್ಟಿದ್ದಾರೆ.

ಎರಡನೇ ಇನ್ನಿಂಗ್ಸ್​ಗಾಗಿ ಬಿಗ್​ ಬಾಸ್​ ವೇದಿಕೆ ಏರಿದ ರೌಘು, ‘ನಾನು ಅನಾವಶ್ಯಕ ಡೌಟ್​ ಪಡೋದಿಲ್ಲ. ಹಳೆಯ ಎಪಿಸೋಡ್​ಗಳನ್ನು ನೋಡುವಾಗ ಹೆಂಡತಿ ನನಗೆ ಬೈದಿದ್ದರು. ಸುಮ್ಮನೆ ಅಳ್ತೀಯಲ್ಲ ಎಂದಿದ್ದರು. ಈ ಬಾರಿ ಸ್ಯಾಡ್​ ಸಂತೋಷ್​ ಆಗೋ ಸೀನ್​ ಇಲ್ಲ. ಪಾಸಿಟಿವ್​ ಅಂಶಗಳನ್ನು ಮಾತ್ರ ತೆಗೆದುಕೊಂಡು, ಕೆಟ್ಟ ಅಂಶಗಳನ್ನು ಬಿಟ್ಟು ಬಿಡ್ತೀನಿ’ ಎಂದರು.

ಬಿಗ್​ಬಾಸ್ ಸೀಸನ್​ 8 ಅರ್ಧಕ್ಕೆ ನಿಲ್ಲುವಾಗ ಮನೆಯೊಳಗೆ ಅರವಿಂದ್ ಕೆ.ಪಿ, ಮಂಜು ಪಾವಗಡ, ಶಮಂತ್ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್, ರಘು ಗೌಡ, ಶುಭಾ ಪೂಂಜಾ, ವೈಷ್ಣವಿ ಗೌಡ, ದಿವ್ಯಾ ಸುರೇಶ್, ಪ್ರಿಯಾಂಕಾ ತಿಮ್ಮೇಶ್, ನಿಧಿ ಸುಬ್ಬಯ್ಯ, ಪ್ರಶಾಂತ್​ ಸಂಬರಗಿ ಹಾಗೂ ದಿವ್ಯಾ ಉರುಡುಗ ಸೇರಿ 12 ಸ್ಪರ್ಧಿಗಳು ಇದ್ದರು. ಈಗ ಈ ಎಲ್ಲಾ ಸ್ಪರ್ಧಿಗಳು ಬುಧವಾರ (ಜೂನ್​ 23) ಮರಳಿ ಬಿಗ್​ ಬಾಸ್​ ಮನೆಗೆ ಎಂಟ್ರಿ ಪಡೆದಿದ್ದಾರೆ.

ಇದನ್ನೂ ಓದಿ: ಕೊವಿಡ್​ನಿಂದ ಕುಟುಂಬದವರನ್ನು ಕಳೆದುಕೊಂಡಿದ್ದಾರೆ ದಿವ್ಯಾ ಉರುಡುಗ; ಬಿಗ್​ ಬಾಸ್​ ಮನೆಯಲ್ಲಿ ಭಾವುಕ ನುಡಿ

Published On - 9:33 pm, Wed, 23 June 21

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ