AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vaishnavi Gowda: ವೈಷ್ಣವಿಗೆ ಬಂದ ಮದುವೆ ಪ್ರಪೋಸಲ್ಸ್​ ಸಂಖ್ಯೆ​ ಕೇಳಿ ಅಚ್ಚರಿಪಟ್ಟ ಕಿಚ್ಚ ಸುದೀಪ್​

ಬಿಗ್​ ಬಾಸ್​ ಮನೆ ಸೇರಿದ ವೈಷ್ಣವಿ ಗೌಡ ಎಲ್ಲರಿಗೂ ಇಷ್ಟವಾಗಿದ್ದರು. ಎಷ್ಟೇ ಕಷ್ಟದ ಸ್ಥಿತಿ ಬಂದರೂ ಅವರು ಸಿಟ್ಟು ಮಾಡಿಕೊಳ್ಳದೇ ಮೌನ ವಹಿಸಿದ್ದೇ ಹೆಚ್ಚು. ಇದು ಅನೇಕರಿಗೆ ಇಷ್ಟವಾಗಿದೆ.

Vaishnavi Gowda: ವೈಷ್ಣವಿಗೆ ಬಂದ ಮದುವೆ ಪ್ರಪೋಸಲ್ಸ್​ ಸಂಖ್ಯೆ​ ಕೇಳಿ ಅಚ್ಚರಿಪಟ್ಟ ಕಿಚ್ಚ ಸುದೀಪ್​
ಸುದೀಪ್​-ವೈಷ್ಣವಿ
ರಾಜೇಶ್ ದುಗ್ಗುಮನೆ
|

Updated on: Jun 23, 2021 | 7:38 PM

Share

ವೈಷ್ಣವಿ ಅವರು ಬಿಗ್​ ಬಾಸ್​ ಮನೆಯಲ್ಲಿ ಇದ್ದಷ್ಟು ದಿನ ಮದುವೆ ವಿಚಾರ ಮಾತನಾಡಿದ್ದರು. ಮೊದಲ ಇನ್ನಿಂಗ್ಸ್​ ಮುಗಿಸಿ ಹೊರ ಹೋದ ನಂತರದಲ್ಲಿ ಇದರ ಎಫೆಕ್ಟ್​ ಗೊತ್ತಾಗಿದೆ. ಅವರಿಗೆ ಸಾಕಷ್ಟು ಮದುವೆ ಪ್ರಪೋಸಲ್​ ಬಂದಿತ್ತು. ಈ ವಿಚಾರ ಕೇಳಿ ಸುದೀಪ್​ ಶಾಕ್​ ಆಗಿದ್ದಾರೆ.

ಬಿಗ್​ ಬಾಸ್​ ಮನೆ ಸೇರಿದ ವೈಷ್ಣವಿ ಗೌಡ ಎಲ್ಲರಿಗೂ ಇಷ್ಟವಾಗಿದ್ದರು. ಎಷ್ಟೇ ಕಷ್ಟದ ಸ್ಥಿತಿ ಬಂದರೂ ಅವರು ಸಿಟ್ಟು ಮಾಡಿಕೊಳ್ಳದೇ ಮೌನ ವಹಿಸಿದ್ದೇ ಹೆಚ್ಚು. ಇದು ಅನೇಕರಿಗೆ ಇಷ್ಟವಾಗಿದೆ. ಇದರ ಜತೆಗೆ ವೈಷ್ಣವಿ, ನಾನೂ ಒಂದು ಮದುವೆ ಆಗಬೇಕು ಎಂದು ಪದೇಪದೇ ಹೇಳಿದ್ದರು. ವೈಷ್ಣವಿ ಮನೆಯಿಂದ ಹೊರ ಬರುತ್ತಿದ್ದಂತೆಯೇ, ಸಾಕಷ್ಟು ಜನರು ಮದುವೆ ಆಗೋಕೆ ತುದಿಗಾಲಿನಲ್ಲಿ ನಿಂತಿದ್ದರು.

ಬಿಗ್​ ಬಾಸ್​ ಎರಡನೇ ಇನ್ನಿಂಗ್ಸ್​ ಶುರುವಾಗುವುದಕ್ಕೂ ಮೊದಲು ಸುದೀಪ್​ ವೇದಿಕೆ ಮೇಲೆ ವೈಷ್ಣವಿ ಅವರನ್ನು ಮಾತನಾಡಿಸಿದರು. ‘ಬಿಗ್​ ಬಾಸ್​ ಮನೆಯಲ್ಲಿ ನಾನು ಮದುವೆ ಆಗುತ್ತೇನೆ ಎಂದು ಹೇಳಿದ ವಿಚಾರ ನನ್ನ ಅಮ್ಮನಿಗೆ ಇಷ್ಟವಾಗಿಲ್ಲ. ನೋಡುವವರು ನಮಗೆ ಯಾವುದೇ ಜವಾಬ್ದಾರಿ ಇಲ್ಲ ಅಂದುಕೊಳ್ಳುತ್ತಾರೆ ಎಂಬುದಾಗಿ ಅಮ್ಮ ಹೇಳಿದ್ದಾರೆ’ ಎಂದರು ವೈಷ್ಣವಿ.

ಬಿಗ್​ ಬಾಸ್​ ಮನೆಯಿಂದ ಹೊರ ಹೋದ ಮೇಲೆ ಎಷ್ಟು ಪ್ರಪೋಸಲ್​ ಬಂತು ಎಂದು ಸುದೀಪ್​, ವೈಷ್ಣವಿಗೆ ಕೇಳಿದರು. ‘ನಾನು ಹೊರ ಹೋದಮೇಲೆ 200-300 ಮದುವೆ ಪ್ರಪೋಸಲ್​ ಬಂತು. ಈ ಬಾರಿ ಮನೆಯಲ್ಲಿ ಮದುವೆ ಸುದ್ದಿ ಮಾತನಾಡಲ್ಲ. ಅಮ್ಮ ಬೇಜಾರು ಮಾಡ್ಕೋತಾರೆ’ ಎಂದರು ಅವರು. ವೈಷ್ಣವಿ ಮಾತನ್ನು ಕೇಳಿ ಸುದೀಪ್​ ಅಚ್ಚರಿ ಹೊರ ಹಾಕಿದರು. ‘ಇಷ್ಟು ಪ್ರಪೋಸ್​ನಲ್ಲಿ ಯಾರೂ ಇಷ್ಟವಾಗಿಲ್ಲವಾ’ ಎಂದು ಸುದೀಪ್ ಮರು ಪ್ರಶ್ನೆ ಎಸೆದರು., ‘ನಾನು ಯಾವ ಪ್ರಪೋಸಲ್​ ಕೂಡ ನೋಡಿಲ್ಲ. ನಂಗೆ ಆ ವೈಬ್​ ಸಿಕ್ಕಿಲ್ಲ’ ಎಂದು ವೈಷ್ಣವಿ ಮಾತು ಮುಗಿಸಿದರು.

ಇದನ್ನೂ ಓದಿ: 2 ಲಕ್ಷ ಮೌಲ್ಯದ ಬ್ರ್ಯಾಂಡೆಡ್ ಬ್ಯಾಗ್​ ತಂದ ಬಿಗ್​ ಬಾಸ್​ ಸ್ಪರ್ಧಿ; ಸಿಟ್ಟಾದ ಅಮ್ಮ ಬ್ಯಾಗ್​ ಹೇಗೆ ಎಸೆದ್ರು?

‘ಭಾಷಣ ಚೆನ್ನಾಗಿ ಮಾಡ್ತೀರಾ’; ಬಿಗ್​ ಬಾಸ್​ ವೇದಿಕೆ ಮೇಲೆ ದಿವ್ಯಾ ಉರುಡುಗಗೆ ಸುದೀಪ್ ಎಚ್ಚರಿಕೆ

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ