ಮದುವೆ ಆಗಿ 6 ತಿಂಗಳಿಗೆ ವೈರಲ್ ಆಯ್ತು ಚಹಾಲ್-ಧನಶ್ರೀ ವಿಡಿಯೋ; ಕ್ರಿಕೆಟಿಗನ ಪತ್ನಿ ಹೇಳಿದ್ದೇನು?
Dhanashree Verma Yuzvendra Chahal: 2020ರ ಡಿಸೆಂಬರ್ 22ರಂದು ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬಳಿಕ ಹನಿಮೂನ್ಗಾಗಿ ಮಾಲ್ಡೀವ್ಸ್ಗೆ ತೆರಳಿದ್ದರು.
ಟೀಮ್ ಇಂಡಿಯಾ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರು ಡ್ಯಾನ್ಸರ್ ಧನಶ್ರೀ ವರ್ಮಾ ಜೊತೆ ಹಾಯಾಗಿ ಸಂಸಾರ ಮಾಡಿಕೊಂಡಿದ್ದಾರೆ. ಈ ಜೋಡಿಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಸದಾ ಸೋಶಿಯಲ್ ಮೀಡಿಯಾದಲ್ಲಿ ಒಂದಿಲ್ಲೊಂದು ವಿಷಯವನ್ನು ಈ ದಂಪತಿ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಈಗ ಧನಶ್ರೀ ವರ್ಮಾ ಅವರು ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಅದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ಜೊತೆಯಾಗಿ ಡ್ಯಾನ್ಸ್ ಮಾಡಿರುವ ಈ ವಿಡಿಯೋವನ್ನು ಅಭಿಮಾನಿಗಳು ಸಖತ್ ಇಷ್ಟಪಡುತ್ತಿದ್ದಾರೆ.
ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಆರು ತಿಂಗಳು ಕಳೆದಿದೆ. ಆ ಖುಷಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಸಲುವಾಗಿ ತನ್ನ ಸಂಗೀತ್ ಸಮಾರಂಭದ ಹಳೇ ವಿಡಿಯೋವನ್ನು ಧನಶ್ರೀ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಳೆದ ವರ್ಷ ಡಿಸೆಂಬರ್ನಲ್ಲಿ ಈ ಜೋಡಿಯ ಪ್ರೀ-ವೆಡ್ಡಿಂಗ್ ಸಮಾರಂಭಗಳು ಅದ್ದೂರಿಯಾಗಿ ನಡೆದಿದ್ದವು. ಆಗ ಇಬ್ಬರೂ ಚೆನ್ನಾಗಿ ಡ್ಯಾನ್ಸ್ ಮಾಡಿದ್ದರು. ಈವರೆಗೆ ಯಾರೋ ನೋಡಿರದ ಆ ವಿಡಿಯೋವನ್ನು ಧನಶ್ರೀ ಈಗ ಶೇರ್ ಮಾಡಿದ್ದಾರೆ.
ಸಂಗೀತ್ ಸಮಾರಂಭಕ್ಕೆ ಬಂದ ಅತಿಥಿಗಳ ಎದುರಿನಲ್ಲಿ ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ಬಿಂದಾಸ್ ಆಗಿ ಸ್ಟೆಪ್ಸ್ ಹಾಕಿದ್ದರು. ಮೂಲತಃ ಡ್ಯಾನ್ಸರ್ ಆಗಿರುವ ತಮ್ಮ ಪತ್ನಿಗೆ ಪೈಪೋಟಿ ನೀಡಲು ಚಹಾಲ್ ಸಿಕ್ಕಾಪಟ್ಟೆ ಶ್ರಮಪಟ್ಟಿದ್ದಾರೆ. ಅದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಅಲ್ಲಲ್ಲಿ ಅವರು ಸ್ಟೆಪ್ ಮಿಸ್ ಮಾಡಿದರೂ ಕೂಡ ಇಬ್ಬರ ನಡುವಿನ ಸೂಪರ್ ಕೆಮಿಸ್ಟ್ರಿಯಿಂದಾಗಿ ಆ ಲೋಪವೆಲ್ಲ ಮುಖ್ಯವಾಗುವುದೇ ಇಲ್ಲ.
ಬಾಲಿವುಡ್ನ ರೆಟ್ರೋ ಹಾಡುಗಳಾದ ‘ಚೆರಾಕೆ ದಿಲ್ ಮೇರಾ ಗೊರಿಯಾ ಚಲಿ..’, ‘ಸಾತೋ ಜನಮ್ ತುಜ್ಕೋ ಪಾತೆ..’ ಮುಂತಾದ ಹಾಡುಗಳಿಗೆ ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ಡ್ಯಾನ್ಸ್ ಮಾಡಿದ್ದಾರೆ. ‘ನೀವು ನಿಜಕ್ಕೂ ತುಂಬ ಚೆನ್ನಾಗಿ ಡ್ಯಾನ್ಸ್ ಮಾಡಿದ್ದೀರಿ. ನಿಮ್ಮ ಶ್ರಮವನ್ನು ಕಾಣಬಹುದು’ ಎಂದು ಈ ವಿಡಿಯೋಗೆ ಧನಶ್ರೀ ಅವರು ಕ್ಯಾಪ್ಷನ್ ಮೂಲಕ ಪತಿಗೆ ಶಹಬಾಷ್ ಎಂದಿದ್ದಾರೆ.
View this post on Instagram
2020ರ ಡಿಸೆಂಬರ್ 22ರಂದು ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬಳಿಕ ಹನಿಮೂನ್ಗಾಗಿ ಮಾಲ್ಡೀವ್ಸ್ಗೆ ತೆರಳಿದ್ದರು. ಸದ್ಯ ಇನ್ಸ್ಟಾಗ್ರಾಮ್ನಲ್ಲಿ ಧನಶ್ರೀ ಶೇರ್ ಮಾಡಿಕೊಂಡಿರುವ ಸಂಗೀತ್ ಸಮಾರಂಭದ ವಿಡಿಯೋವನ್ನು 20 ಲಕ್ಷಕ್ಕೂ ಅಧಿಕ ಮಂದಿ ನೋಡಿದ್ದಾರೆ. ಸಾವಿರಾರು ಜನರು ಕಮೆಂಟ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಪೂರ್ಣ ವಿಡಿಯೋವನ್ನು ಧನಶ್ರೀ ಯೂಟ್ಯೂಬ್ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
IPLನಲ್ಲಿ ಅತ್ತಿಗೆನೂ ನಿಮ್ ಜೊತೆ ಓಪನ್ ಮಾಡ್ತಾರಾ? -ರೋಹಿತ್ ವಿಡಿಯೋಗೆ ಚಹಾಲ್ ಟಾಂಗ್!
Published On - 8:24 am, Thu, 24 June 21