WTC Final: ಭಾರತದ ಸೋಲಿಗೆ ಕಿವೀಸ್ನ ಈ ಬೌಲರ್ ಪ್ರಮುಖ ಕಾರಣ! ಸೋಲಿನಲ್ಲೂ ಕೊಹ್ಲಿ ಕೊಂಚ ನಿರಾಳರಾಗಿದ್ಯಾಕೆ?
WTC Final: ಈ ಪಂದ್ಯದಲ್ಲಿ ಕೈಲ್ ಜಾಮಿಸನ್ ಏಳು ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್‌ನಲ್ಲಿ 31 ರನ್‌ಗಳಿಗೆ ಐದು ವಿಕೆಟ್ ಪಡೆದರು.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021 ಗೆಲ್ಲುವ ವಿರಾಟ್ ಕೊಹ್ಲಿ ಅವರ ಕನಸು ಭಗ್ನವಾಗಿದೆ. ಫೈನಲ್‌ನಲ್ಲಿ ನ್ಯೂಜಿಲೆಂಡ್, ಭಾರತ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿತು. ಪಂದ್ಯದ ಕೊನೆಯ ದಿನ ಭಾರತವು ಗೆಲುವಿಗೆ 139 ರನ್‌ಗಳ ಗುರಿ ನೀಡಿತ್ತು, ಇದನ್ನು ಕಿವಿ ತಂಡವು ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಗುರಿ ಮುಟ್ಟಿತು. ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ಅಜೇಯರಾಗಿ ಹಿಂದಿರುಗಿದರು. ಆದರೆ ಈ ಪಂದ್ಯದಲ್ಲಿ ಭಾರತದ ಸೋಲಿಗೆ ಕಾರಣ ನ್ಯೂಜಿಲೆಂಡ್ ತಂಡ ಮಾತ್ರವಲ್ಲ, ಅಲ್ಲಿನ ವಾತಾವರಣವೂ ನ್ಯೂಜಿಲೆಂಡ್ಗೆ ಸಹಕಾರ ನೀಡಿತು. ಇದರ ಜೊತೆಗೆ ತಂಡಕ್ಕೆ ಉತ್ತಮವಾಗಿ ನೆರವಾದ ಕೈಲ್ ಜಾಮಿಸನ್. ಈ ಪಂದ್ಯದಲ್ಲಿ ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಅವರ ಪ್ರದರ್ಶನ ಭಾರತದ ಸೋಲಿಗೆ ಅಡಿಪಾಯ ಹಾಕಿತು. ನಂತರ ಎರಡನೇ ಇನ್ನಿಂಗ್ಸ್‌ನಲ್ಲೂ ಅವರು ತಮ್ಮ ದಾಳಿಯಿಂದ ಭಾರತಕ್ಕೆ ದೊಡ್ಡ ನಷ್ಟವನ್ನುಂಟುಮಾಡಿದರು.
ಕೈಲ್ ಜಾಮಿಸನ್ ಏಳು ವಿಕೆಟ್ ಪಡೆದರು ಈ ಪಂದ್ಯದಲ್ಲಿ ಕೈಲ್ ಜಾಮಿಸನ್ ಏಳು ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್‌ನಲ್ಲಿ 31 ರನ್‌ಗಳಿಗೆ ಐದು ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್‌ನಲ್ಲಿ ಅವರು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಿಷಭ್ ಪಂತ್, ಇಶಾಂತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಅವರ ವಿಕೆಟ್ ಪಡೆದರು. ಹೀಗಾಗಿ ಭಾರತ ತಂಡವು ದೊಡ್ಡ ಸ್ಕೋರ್ ಗಳಿಸುವಲ್ಲಿ ವಿಫಲವಾಯಿತು. ನಂತರ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಅವರು ಭಾರತಕ್ಕೆ ಬಲವಾದ ಹೊಡೆತ ನೀಡಿದರು. ಈ ಬಾರಿ ಸತತ ಓವರ್‌ಗಳಲ್ಲಿ ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ವಿಕೆಟ್ ಪಡೆದರು. ಈ ಎರಡೂ ವಿಕೆಟ್‌ಗಳು ಬೇಗನೇ ಉರುಳಿದರಿಂದ, ದೊಡ್ಡ ಸ್ಕೋರ್ ಮಾಡುವ ಭಾರತದ ಕನಸು ಭಗ್ನವಾಯಿತು. ಇದರೊಂದಿಗೆ, ಡ್ರಾ ಆಯ್ಕೆಯು ಸಹ ನಾಶವಾಯಿತು.
ಜಾಮಿಸನ್ ಬ್ಯಾಟಿಂಗ್‌ನಲ್ಲೂ ಮಿಂಚಿದರು ಈ ಪಂದ್ಯದಲ್ಲಿ, ಕೊಹ್ಲಿ ಎರಡೂ ಬಾರಿ ಜೇಮೀಸನ್‌ಗೆ ಬಲಿಯಾದರು. ತಮಾಷೆಯೆಂದರೆ, ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರುಗಾಗಿ ಇಬ್ಬರೂ ಒಟ್ಟಿಗೆ ಆಡುತ್ತಾರೆ. ಕೆಲವು ತಿಂಗಳುಗಳ ನಂತರ, ದ್ವಿತೀಯಾರ್ಧದ ಐಪಿಎಲ್ನಲ್ಲಿ ಅವರು ಮತ್ತೆ ಒಟ್ಟಿಗೆ ಆಡುವುದನ್ನು ಕಾಣಬಹುದು. ಕೈಲ್ ಜೇಮೀಸನ್ ಬೌಲಿಂಗ್ ಜೊತೆಗೆ ಬ್ಯಾಟಿಂಗ್‌ನಿಂದ ಭಾರತವನ್ನು ತೊಂದರೆಗೊಳಿಸಿದರು. ಅವರು ಮೊದಲ ಇನ್ನಿಂಗ್ಸ್‌ನಲ್ಲಿ 21 ರನ್ ಗಳಿಸಿದರು. ಇದರೊಂದಿಗೆ ನ್ಯೂಜಿಲೆಂಡ್ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 32 ರನ್‌ಗಳ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು. ನಂತರ ಪಂದ್ಯದ ಫಲಿತಾಂಶದ ಸಮಯದಲ್ಲಿ ಈ ಮುನ್ನಡೆ ಬಹಳ ನಿರ್ಣಾಯಕವಾಗಿತ್ತು.
ಇದನ್ನೂ ಓದಿ: WTC Final: ನಾಯಕನ ಜವಾಬ್ದಾರಿ ಮರೆತ ಕೊಹ್ಲಿ, ಕೈಕೊಟ್ಟ ಬ್ಯಾಟ್ಸ್ಮನ್ಗಳು, ಭಾರತದ ಸೋಲಿಗೆ 5 ಕಾರಣಗಳಿವು