IPLನಲ್ಲಿ ಅತ್ತಿಗೆನೂ ನಿಮ್ ಜೊತೆ ಓಪನ್ ಮಾಡ್ತಾರಾ? -ರೋಹಿತ್ ವಿಡಿಯೋಗೆ ಚಹಾಲ್ ಟಾಂಗ್!
ಮುಂಬೈ: ಸಾಕಷ್ಟು ವಿಳಂಬದ ಬಳಿಕ ಕ್ರಿಕೆಟ್ ಪ್ರೇಮಿಗಳ ಬಹುದಿನದ ಕನಸು ನನಸಾಗಿದೆ. ಕ್ರಿಕೆಟ್ ಲೋಕದ ಬಹುನಿರೀಕ್ಷಿತ IPL 2020ಗೆ ವೇದಿಕೆ ಸಜ್ಜಾಗಿದೆ. ಮುಂದಿನ ತಿಂಗಳಲ್ಲಿ ಪಂದ್ಯಾವಳಿಯು ಪ್ರಾರಂಭವಾಗಲಿದ್ದು ಈ ಬಾರಿ ಕೊರೊನಾ ಕಾಟದಿಂದ ಎಲ್ಲಾ ಮ್ಯಾಚ್ಗಳನ್ನು UAEನಲ್ಲಿ ಆಯೋಜಿಸಲಾಗಿದೆ. ಅಂತೆಯೇ, ಎಲ್ಲಾ ತಂಡಗಳು ಈ ಸಲ ಕಪ್ ನಮ್ದೇ ಅಂತಾ ಹೇಳಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಇದರಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಒಬ್ಬರು. ಹಾಗಾಗಿ, ನಿನ್ನೆ ರೋಹಿತ್ ಶರ್ಮಾ ತಮ್ಮ ಪತ್ನಿ […]
ಮುಂಬೈ: ಸಾಕಷ್ಟು ವಿಳಂಬದ ಬಳಿಕ ಕ್ರಿಕೆಟ್ ಪ್ರೇಮಿಗಳ ಬಹುದಿನದ ಕನಸು ನನಸಾಗಿದೆ. ಕ್ರಿಕೆಟ್ ಲೋಕದ ಬಹುನಿರೀಕ್ಷಿತ IPL 2020ಗೆ ವೇದಿಕೆ ಸಜ್ಜಾಗಿದೆ. ಮುಂದಿನ ತಿಂಗಳಲ್ಲಿ ಪಂದ್ಯಾವಳಿಯು ಪ್ರಾರಂಭವಾಗಲಿದ್ದು ಈ ಬಾರಿ ಕೊರೊನಾ ಕಾಟದಿಂದ ಎಲ್ಲಾ ಮ್ಯಾಚ್ಗಳನ್ನು UAEನಲ್ಲಿ ಆಯೋಜಿಸಲಾಗಿದೆ.
ಅಂತೆಯೇ, ಎಲ್ಲಾ ತಂಡಗಳು ಈ ಸಲ ಕಪ್ ನಮ್ದೇ ಅಂತಾ ಹೇಳಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಇದರಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಒಬ್ಬರು.
ಹಾಗಾಗಿ, ನಿನ್ನೆ ರೋಹಿತ್ ಶರ್ಮಾ ತಮ್ಮ ಪತ್ನಿ ರಿತಿಕಾ ಜೊತೆ ಸೇರಿ ಸಿಕ್ಕಾಪಟ್ಟೆ ವರ್ಕ್ ಔಟ್ ಮಾಡ್ತಿರೋ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಪತ್ನಿಯೊಟ್ಟಿಗೆ ಬಸ್ಕಿ ಹೊಡೆಯೋದು, ಸ್ಟ್ರೆಚ್ಚಿಂಗ್ ಮಾಡೋದು ಹೀಗೆ ತಮ್ಮ ದೈನಂದಿನ ವರ್ಕ್ಔಟ್ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
ರೋಹಿತ್ರ ಈ ವಿಡಿಯೋಗೆ ಫ್ಯಾನ್ಸ್ಗಳಿಂದ ಸಿಕ್ಕಾಪಟ್ಟೆ likes ಸಿಕ್ಕಿದೆ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ತಮ್ಮದೇ ರೀತಿಯಲ್ಲಿ ರೋಹಿತ್ ಕಾಲೆಳೆದಿದ್ದಾರೆ. ಏನ್ ಅಣ್ಣಾ IPLನಲ್ಲಿ ನಿಮ್ಮ ಜೊತೆ ಅತ್ತಿಗೆ ಸಹ ಓಪನ್ ಮಾಡ್ತಾರಾ? ಅಂತಾ ರೋಹಿತ್ ಅಕೌಂಟ್ನಲ್ಲಿ ಕಾಮೆಂಟ್ ಮಾಡಿ ಗೂಗ್ಲಿ ಹಾಕಿದ್ದಾರೆ.
https://www.instagram.com/p/CETiCOyBCg2/