ಯುಜ್ವೇಂದ್ರ ಚಹಾಲ್​ ಹಾಗೂ ಧನಶ್ರೀ ವರ್ಮಾ ವ್ಯಾಯಾಮ ನೋಡಿ ಹುಬ್ಬೇರಿಸಿದ ನೆಟ್ಟಿಗರು; ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್

ಒಬ್ಬ ಸ್ಟಾರ್ ಆಟಗಾರ ಹಾಗೂ ಆತನ ಪತ್ನಿ ಮನೆಯಲ್ಲಿದ್ದಾಗ ಹೇಗೆ ಬೆವರು ಸುರಿಸಿ ವ್ಯಾಯಾಮ ಮಾಡುತ್ತಾರೆ ಎನ್ನುವುದನ್ನು ನೆಟ್ಟಿಗರು ಸಹಜ ಕುತೂಹಲದಿಂದಲೇ ವೀಕ್ಷಿಸಿದ್ದು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.

ಯುಜ್ವೇಂದ್ರ ಚಹಾಲ್​ ಹಾಗೂ ಧನಶ್ರೀ ವರ್ಮಾ ವ್ಯಾಯಾಮ ನೋಡಿ ಹುಬ್ಬೇರಿಸಿದ ನೆಟ್ಟಿಗರು; ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್
ಯುಜ್ವೇಂದ್ರ ಚಹಾಲ್, ಧನಶ್ರೀ ವರ್ಮಾ

ಭಾರತೀಯ ಕ್ರಿಕೆಟ್​ ಆಟಗಾರರ ಪೈಕಿ ಇತ್ತೀಚೆಗೆ ಮೈದಾನದಿಂದ ಆಚೆಗೂ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿರುವವರ ಪೈಕಿ ಯುಜ್ವೇಂದ್ರ ಚಹಾಲ್ ಮುಂಚೂಣಿಯಲ್ಲಿದ್ದಾರೆ. ತಮ್ಮ ಸಂಗಾತಿ ಧನಶ್ರೀ ವರ್ಮಾ ಜತೆ ಸಾಮಾಜಿಕ ಜಾಲತಾಣಗಳಲ್ಲಿ ಚಹಾಲ್ ಮಿಂಚುತ್ತಿದ್ದು, ಈ ಜೋಡಿಗೆ ಅಪಾರ ಅಭಿಮಾನಿ ವರ್ಗವೂ ಹುಟ್ಟಿಕೊಂಡಿದೆ. ನೃತ್ಯಪಟು ಆಗಿರುವ ಧನಶ್ರೀ ವರ್ಮಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ಈ ದಂಪತಿ ಜೊತೆಯಾಗಿ ವ್ಯಾಯಾಮ ಮಾಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಇಬ್ಬರೂ ದೇಹ ದಂಡಿಸುವ ಪರಿಗೆ ಅಭಿಮಾನಿಗಳು ಚಪ್ಪಾಳೆ ತಟ್ಟಿದ್ದಾರೆ.

ಗಂಡ, ಹೆಂಡತಿ ಇಬ್ಬರೂ ವ್ಯಾಯಾಮ ಮಾಡುತ್ತಿರುವ ವಿಡಿಯೋವನ್ನು ಯುಜ್ವೇಂದ್ರ ಚಹಾಲ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಪ್ರತಿನಿತ್ಯವೂ ತಾವು ಹೀಗೆ ದೇಹ ದಂಡಿಸುವುದಾಗಿ ಹೇಳಿಕೊಂಡಿದ್ದಾರೆ. ಒಬ್ಬ ಸ್ಟಾರ್ ಆಟಗಾರ ಹಾಗೂ ಆತನ ಪತ್ನಿ ಮನೆಯಲ್ಲಿದ್ದಾಗ ಹೇಗೆ ಬೆವರು ಸುರಿಸಿ ವ್ಯಾಯಾಮ ಮಾಡುತ್ತಾರೆ ಎನ್ನುವುದನ್ನು ನೆಟ್ಟಿಗರು ಸಹಜ ಕುತೂಹಲದಿಂದಲೇ ವೀಕ್ಷಿಸಿದ್ದು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಆರಂಭದಲ್ಲಿ ಧನಶ್ರೀ ವರ್ಮಾ ಪಂಚ್​ ಕೊಡುವ ರೀತಿಯಲ್ಲಿ ವ್ಯಾಯಾಮ ಮಾಡುತ್ತಿದ್ದು, ನಂತರ ಟೈಮ್​ ಲ್ಯಾಪ್ಸ್​ ಮೋಡ್​ನಲ್ಲಿ ಇಡೀ ವಿಡಿಯೋ ಸಾಗುತ್ತದೆ. ಮೊಣಕೈ ಮೇಲೆ ಭಾರಬಿಟ್ಟು ಇಡೀ ದೇಹವನ್ನು ನಿಲ್ಲಿಸುವುದರಿಂದ ಹಿಡಿದು, ಪರಸ್ಪರ ಸಹಾಯದಿಂದ ಕೈಯಲ್ಲಿ ಒಂದು ಸುತ್ತು ನಡೆಯುವ ತನಕ ಬೇರೆ ಬೇರೆ ಬಗೆಯ ವ್ಯಾಯಾಮಗಳನ್ನು ಹಂಚಿಕೊಂಡಿದ್ದಾರೆ.

 

View this post on Instagram

 

A post shared by Yuzvendra Chahal (@yuzi_chahal23)

ಯುಜ್ವೇಂದ್ರ ಚಹಾಲ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದು ಸುಮಾರು 5.30ಲಕ್ಷ ಲೈಕ್ಸ್ ಹಾಗೂ 1,900ಕ್ಕೂ ಹೆಚ್ಚು ಕಮೆಂಟ್ಸ್​ ಹರಿದುಬಂದಿವೆ. ಇತ್ತ ಧನಶ್ರೀ ವರ್ಮಾ ಖಾತೆಯಲ್ಲಿಯೂ ಸರಿಸುಮಾರು ಇದಕ್ಕಿಂತಲೂ ಹೆಚ್ಚು ಪ್ರಮಾಣದ ಮೆಚ್ಚುಗೆಯನ್ನು ಗಳಿಸಿಕೊಂಡಿರುವ ಈ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ.

ಸೆಲೆಬ್ರಿಟಿಗಳು ಸೇರಿದಂತೆ ಅನೇಕರು ಈ ಜೋಡಿಯ ದೇಹ ದಂಡನೆಗೆ ಭೇಷ್ ಎಂದಿದ್ದು, ಇದೊಂದು ಪ್ರೇರಣಾದಾಯಕ ವಿಡಿಯೋ ಎಂದು ಹೇಳಿಕೊಂಡಿದ್ದಾರೆ. ಲಾಕ್​ಡೌನ್​ ಸಂದರ್ಭದಲ್ಲಿ ಮನೆಯಲ್ಲಿದ್ದು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ನಿಮ್ಮಿಬ್ಬರಿಗೂ ಅಭಿನಂದನೆಗಳು, ನಿಮ್ಮ ಜೋಡಿ ಚೆನ್ನಾಗಿದೆ. ಇಬ್ಬರೂ ಒಬ್ಬರಿಗೊಬ್ಬರು ಸಹಕರಿಸುತ್ತಾ ವ್ಯಾಯಾಮ ಮಾಡುವುದನ್ನು ನೋಡಲು ಖುಷಿಯಾಗುತ್ತದೆ ಎಂದು ಅಭಿಮಾನಿಗಳು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:
Viral Video : 2 ನಿಮಿಷಗಳ ವಿಡಿಯೋದಲ್ಲಿ ಕೋಲ್ಕತ್ತಾದ ಬೀದಿಗಳಲ್ಲಿ ವ್ಯಕ್ತಿಯೊಬ್ಬ ಪಿಟೀಲು ನುಡಿಸುವ ವಿಡಿಯೋ ವೈರಲ್ ಆಗುತ್ತಿದೆ! 

ತೂಕ ಇಳಿಸಿಕೊಳ್ಳಲು ವ್ಯಾಯಾಮ ಮಾಡಿ..ಆದರೆ ಈ ಮೂರು ಮಿಥ್ಯೆಗಳನ್ನು ನಂಬಬೇಡಿ