8 ಪಂದ್ಯ, 423 ರನ್, 26 ವಿಕೆಟ್: 45 ವರ್ಷದ ಕ್ರಿಕೆಟಿಗನ ಆಟಕ್ಕೆ ಎದುರಾಳಿ ತಂಡ ಸದ್ದಿಲ್ಲದೆ ಸೋಲೊಪ್ಪಿಕೊಂಡಿತು

ಈ ಕೌಂಟಿ ಋತುವಿನ ಎಂಟು ಪಂದ್ಯಗಳಲ್ಲಿ 47 ಸರಾಸರಿಯಲ್ಲಿ ಸ್ಟೀವನ್ಸ್ 423 ರನ್ ಗಳಿಸಿದರು ಮತ್ತು 26 ವಿಕೆಟ್ ಪಡೆದರು. ಅವರು ಎರಡು ಶತಕಗಳನ್ನು ಗಳಿಸಿದರು ಮತ್ತು 190 ರನ್ಗಳ ರೂಪದಲ್ಲಿ ಅತಿದೊಡ್ಡ ಇನ್ನಿಂಗ್ಸ್ ಆಡಿದರು.

8 ಪಂದ್ಯ, 423 ರನ್, 26 ವಿಕೆಟ್: 45 ವರ್ಷದ ಕ್ರಿಕೆಟಿಗನ ಆಟಕ್ಕೆ ಎದುರಾಳಿ ತಂಡ ಸದ್ದಿಲ್ಲದೆ ಸೋಲೊಪ್ಪಿಕೊಂಡಿತು
ಡ್ಯಾರೆನ್ ಸ್ಟೀವನ್ಸ್
Follow us
ಪೃಥ್ವಿಶಂಕರ
| Updated By: shruti hegde

Updated on:Jun 11, 2021 | 10:05 AM

ಡ್ಯಾರೆನ್ ಸ್ಟೀವನ್ಸ್ ಇಂಗ್ಲೆಂಡ್ ಕ್ರಿಕೆಟಿಗ. ವಯಸ್ಸು 45 ವರ್ಷಗಳು ಆದರೆ ಕ್ರಿಕೆಟ್ ಕ್ಷೇತ್ರದಲ್ಲಿ ಇನ್ನೂ ಸಕ್ರಿಯವಾಗಿದ್ದಾರೆ. ಇಲ್ಲಿಯವರೆಗೆ, ಕೌಂಟಿ ಕ್ರಿಕೆಟ್‌ನಲ್ಲಿ ಕೆಂಟ್ ತಂಡದ ಪರವಾಗಿ ಡ್ಯಾರೆನ್ ಸ್ಟೀವನ್ಸ್ ಬಾಲ್ ಮತ್ತು ಬ್ಯಾಟ್‌ನಿಂದ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಕೌಂಟಿ ಋತುವಿನ ಎಂಟು ಪಂದ್ಯಗಳಲ್ಲಿ 47 ಸರಾಸರಿಯಲ್ಲಿ ಸ್ಟೀವನ್ಸ್ 423 ರನ್ ಗಳಿಸಿದರು ಮತ್ತು 26 ವಿಕೆಟ್ ಪಡೆದರು. ಅವರು ಎರಡು ಶತಕಗಳನ್ನು ಗಳಿಸಿದರು ಮತ್ತು 190 ರನ್ಗಳ ರೂಪದಲ್ಲಿ ಅತಿದೊಡ್ಡ ಇನ್ನಿಂಗ್ಸ್ ಆಡಿದರು. ಅದೇ ಸಮಯದಲ್ಲಿ ಅವರು ಬೌಲಿಂಗ್‌ನಲ್ಲಿ ಎರಡು ಬಾರಿ ಐದು ವಿಕೆಟ್‌ಗಳನ್ನು ಪಡೆದಿದ್ದಾರೆ. ಈಗ ಅವರು ವೈಟಾಲಿಟಿ ಬ್ಲಾಸ್ಟ್ನಲ್ಲಿ ಮಿಂಚುತ್ತಿದ್ದಾರೆ. ಜೂನ್ 9 ರ ಹ್ಯಾಂಪ್‌ಶೈರ್ ವಿರುದ್ಧದ ಪಂದ್ಯದಲ್ಲಿ ಅವರು ಬ್ಯಾಟ್‌ನಿಂದ ಹೆಚ್ಚು ಸಾಧನೆ ಮಾಡಲಿಲ್ಲ ಆದರೆ ಬೌಲಿಂಗ್‌ನಲ್ಲಿ ಎರಡು ವಿಕೆಟ್‌ಗಳನ್ನು ಪಡೆದರು ಮತ್ತು ತಂಡದ 38 ರನ್‌ಗಳ ಗೆಲುವಿಗೆ ಗಮನಾರ್ಹ ಕೊಡುಗೆ ನೀಡಿದರು.

ಮೂವರಿಗೂ ಅರ್ಧಶತಕ ಗಳಿಸಲು ಸಾಧ್ಯವಾಗಲಿಲ್ಲ ಮೊದಲು ಆಡಿದ ಕೆಂಟ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಲಿ ರಾಬಿನ್ಸನ್ ಅವರ 48 ರನ್, ಜೋ ಡೆನ್ಲಿಯಿಂದ 44 ರನ್ ಮತ್ತು ನಾಯಕ ಡೇನಿಯಲ್ ಬೆಲ್ ಡ್ರಮ್ಮೊಂಡ್ ಅವರ 42 ರನ್ಗಳ ಸಹಾಯದಿಂದ ಆರು ವಿಕೆಟ್ಗೆ 176 ರನ್ ಗಳಿಸಿದರು. ನಂತರ ಫ್ರೆಡ್ ಕ್ಲಾಸ್ (ನಾಲ್ಕು ವಿಕೆಟ್), ಗ್ರಾಂಟ್ ಸ್ಟೀವರ್ಟ್ ಮತ್ತು ಡ್ಯಾರೆನ್ ಸ್ಟೀವನ್ಸ್ (ತಲಾ ಎರಡು ವಿಕೆಟ್) ಅವರ ಅದ್ಭುತ ಬೌಲಿಂಗ್ ಹ್ಯಾಂಪ್‌ಶೈರ್ ಒಂಬತ್ತು ವಿಕೆಟ್ ನಷ್ಟಕ್ಕೆ ಕೇವಲ 138 ರನ್ ಗಳಿಸಿ ಸೋಲೊಪ್ಪಿಕೊಳ್ಳುವಂತೆ ಮಾಡಿತು. ಮೊದಲು ಬ್ಯಾಟಿಂಗ್ ಮಾಡಿದ ಕೆಂಟ್ ತಂಡದ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳು ವೇಗವಾಗಿ ರನ್ ಗಳಿಸಿದರು. ಡೆನ್ಲಿ 23 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 44 ರನ್ ಗಳಿಸಿದರು. ಡ್ರಮ್ಮಂಡ್ 23 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 42 ರನ್ ಗಳಿಸಿದರು. ಮತ್ತು ರಾಬಿನ್ಸನ್ 36 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್‌ಗಳೊಂದಿಗೆ 48 ರನ್ ಗಳಿಸಿದರು. ಆದರೆ, ಉತ್ತಮ ಆರಂಭದ ನಂತರ ಮೂವರಿಗೂ ಅರ್ಧಶತಕ ಗಳಿಸಲು ಸಾಧ್ಯವಾಗಲಿಲ್ಲ.

ಡ್ರಮ್ಮಂಡ್ ಮತ್ತು ಡೆನ್ಲಿ ಏಳು ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 86 ರನ್ ಸೇರಿಸಿದ್ದರು. ಆದರೆ ಇದರ ನಂತರ ನಾಲ್ಕು ವಿಕೆಟ್‌ಗಳು 25 ರನ್‌ಗಳ ಒಳಗೆ ಬಿದ್ದವು, ಇದರಿಂದಾಗಿ ತಂಡಕ್ಕೆ 200 ರನ್ ತಲುಪಲು ಸಾಧ್ಯವಾಗಲಿಲ್ಲ. ಮಧ್ಯಮ ಕ್ರಮಾಂಕದ ಅಲೆಕ್ಸ್ ಬ್ಲೇಕ್ (2) ಮತ್ತು ಜ್ಯಾಕ್ ಲೀನಿಂಗ್ (1) ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಮೇಸನ್ ಕ್ರೇನ್ ಹ್ಯಾಂಪ್‌ಶೈರ್ ಪರ ಅತಿ ಹೆಚ್ಚು ಮೂರು ವಿಕೆಟ್ ಪಡೆದರು.

ಕಳಪೆಯಾಯ್ತು ಹ್ಯಾಂಪ್‌ಶೈರ್ ಬ್ಯಾಟಿಂಗ್ ಗುರಿಯನ್ನು ಬೆನ್ನಟ್ಟಿದ ಹ್ಯಾಂಪ್‌ಶೈರ್ ಆರಂಭ ಕೆಟ್ಟದಾಗಿತ್ತು. ಡಾರ್ಸಿ ಶಾರ್ಟ್ (29) ಮತ್ತು ಜೇಮ್ಸ್ ವಿನ್ಸ್ (34) ಮೊದಲ ವಿಕೆಟ್‌ಗೆ 51 ರನ್ ಸೇರಿಸಿದರು. ಆದರೆ ಅವರ ನಂತರ ತಂಡದ ಉಳಿದ ಬ್ಯಾಟಿಂಗ್ ಆರ್ಡರ್ ತರಗೆಲೆಯಂತೆ ಉದುರಿದವು. ಶಾರ್ಟ್ ಮತ್ತು ವಿನ್ಸ್ ಅವರನ್ನು 45 ವರ್ಷದ ಡ್ಯಾರೆನ್ ಸ್ಟೀವನ್ಸ್ ಔಟ್ ಮಾಡಿದರು. ಈ ಇಬ್ಬರ ನಂತರ ವಿಕೆಟ್ ಉರುಳಲು ಆರಂಭಿಸಿದರು. ಜೋ ವಿದರ್ಲಿ (37), ಲಿಯಾಮ್ ಡಾಸನ್ (9), ಜೇಮ್ಸ್ ಫುಲ್ಲರ್ (1) ಮತ್ತು ಇಯಾನ್ ಹಾಲೆಂಡ್ (4) ಬೇಗನೆ ಔಟಾದರು. ಇದರೊಂದಿಗೆ, ಹ್ಯಾಂಪ್‌ಶೈರ್ ತಂಡವು ಕೇವಲ 138 ರನ್ ಗಳಿಸಲು ಸಾಧ್ಯವಾಯಿತು. ಸ್ಟೀವನ್ಸ್ ನಾಲ್ಕು ಓವರ್‌ಗಳಲ್ಲಿ 22 ರನ್‌ಗಳಿಗೆ ಎರಡು ವಿಕೆಟ್ ಪಡೆದರು.

ಇದನ್ನೂ ಓದಿ:

ಕ್ರಿಕೆಟ್ ಆಟದಲ್ಲಿ ಮುನಿಸು, ಬುದ್ಧಿವಾದ ಹೇಳಿದ್ದಕ್ಕೆ ದ್ವೇಷ; ಕೊಲೆಗೆ ಯತ್ನಿಸಿ ಮನೆ ಮೇಲೆ ಗುಂಡಿನ ದಾಳಿ ನಡೆಸಿದ ವ್ಯಕ್ತಿ

Published On - 9:59 am, Fri, 11 June 21

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ