ಬಿಗ್ ಬಾಸ್ ಬಗ್ಗೆ ಕಿಚ್ಚ ಸುದೀಪ್ ಉತ್ಸಾಹದ ಮಾತು; ಹೆಚ್ಚು ಖುಷಿ ಆಗಿದ್ದು ನಟಿ ಜೆನಿಲಿಯಾ
Bigg Boss Kannada Season 8: ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡ ‘ಬಿಗ್ ಬಾಸ್ ಕನ್ನಡ ಸೀಸನ್ 8’ರ ಎರಡನೇ ಇನ್ನಿಂಗ್ಸ್ಗಾಗಿ ಕಾಯುತ್ತಿದ್ದಾರೆ. ಅಂಥವರ ಸಾಲಿನಲ್ಲಿ ಮೊದಲು ಇರುವುದು ನಟಿ ಜೆನಿಲಿಯಾ ದೇಶಮುಖ್!
‘ಬಿಗ್ ಬಾಸ್ ಕನ್ನಡ ಸೀಸನ್ 8’ ಅರ್ಧಕ್ಕೆ ನಿಂತಾಗ ಬೇಜಾರು ಮಾಡಿಕೊಂಡಿದ್ದವರೆಲ್ಲ ಜೂ.23ಕ್ಕಾಗಿ ಕಾಯುತ್ತಿದ್ದಾರೆ. ಅಂದರೆ, ಬುಧವಾರ ಸಂಜೆ 6 ಗಂಟೆಗೆ ಅದ್ದೂರಿಯಾಗಿ ಬಿಗ್ ಬಾಸ್ ಎರಡನೇ ಇನ್ನಿಂಗ್ಸ್ ಶುರು ಆಗಲಿದೆ. 12 ಸ್ಪರ್ಧಿಗಳು ಹಣಾಹಣಿ ನಡೆಸುತ್ತಿರುವಾಗಲೇ ಅರ್ಧಕ್ಕೆ ನಿಂತಿದ್ದ ಈ ಕಾರ್ಯಕ್ರಮವನ್ನು ಮತ್ತೆ ಶುರು ಮಾಡುತ್ತಿದೆ ಕಲರ್ಸ್ ಕನ್ನಡ ವಾಹಿನಿ. ಈ ಖುಷಿಯ ಕ್ಷಣಕ್ಕಾಗಿ ಪ್ರೇಕ್ಷಕರು ಮಾತ್ರವಲ್ಲದೇ ಕಿಚ್ಚ ಸುದೀಪ್ ಕೂಡ ಕಾಯುತ್ತಿದ್ದಾರೆ. ಈ ಬಗ್ಗೆ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕೆಲವು ವಿಚಾರ ಹಂಚಿಕೊಂಡಿದ್ದಾರೆ.
‘ಬಿಗ್ ಬಾಸ್ ಪುನರಾರಂಭಗೊಳ್ಳುತ್ತಿದೆ. ಶೀಘ್ರದಲ್ಲೇ ವೇದಿಕೆ ಏರಲಿದ್ದೇನೆ. ಸ್ಪರ್ಧಿಗಳೆಲ್ಲರೂ ಬ್ರೇಕ್ ತೆಗೆದುಕೊಂಡಿದ್ದರು. ಹೊರಗೆ ಹೋಗಿದ್ದರು. ಅವರವರ ಸ್ಥಾನ ಮತ್ತು ಜನಪ್ರಿಯತೆ ಏನು ಎಂಬುದನ್ನು ತಿಳಿದುಕೊಂಡಿದ್ದಾರೆ. ಎಲ್ಲ ಎಪಿಸೋಡ್ಗಳನ್ನು ನೋಡಿಕೊಂಡಿದ್ದಾರೆ. ಒಬ್ಬರು ಇನ್ನೊಬ್ಬರ ಬಗ್ಗೆ ಏನು ಮಾತನಾಡಿಕೊಂಡಿದ್ದಾರೆ ಎಂಬುದು ಗೊತ್ತಾಗಿದೆ. ಈಗ ಮರುಪ್ರವೇಶ ಪಡೆಯುತ್ತಿದ್ದಾರೆ. ಇದು ಹೊಸತು. ಇದೇ ಮೋಜು’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
ಸುದೀಪ್ ಅವರ ಈ ಟ್ವೀಟ್ ಕಂಡು ಬಿಗ್ ಬಾಸ್ ವೀಕ್ಷಕರಿಗೆ ಖುಷಿ ಆಗಿದೆ. ಅಭಿಮಾನಿಗಳೆಲ್ಲ ತಾವು ಕೂಡ ಬಿಗ್ ಬಾಸ್ಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ಅಷ್ಟೇ, ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಸಹ ಕಿಚ್ಚನ ಈ ಶೋಗಾಗಿ ಕಾಯುತ್ತಿದ್ದಾರೆ. ಅಂಥವರ ಸಾಲಿನಲ್ಲಿ ಮೊದಲು ಇರುವುದು ನಟಿ ಜೆನಿಲಿಯಾ ದೇಶಮುಖ್! ಹೌದು, ಈ ಬಗ್ಗೆ ಅವರು ಟ್ವಿಟರ್ನಲ್ಲಿ ತಮ್ಮ ಎಗ್ಸೈಟ್ಮೆಂಟ್ ತೋರಿಸಿದ್ದಾರೆ. ಸುದೀಪ್ ಮಾಡಿರುವ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಅವರು, ‘ಅದ್ಭುತ.. ಈ ಸುದ್ದಿ ಸೂಪರ್ ಎಗ್ಸೈಟಿಂಗ್ ಆಗಿ ಕೇಳಿಸುತ್ತಿದೆ’ ಎಂದು ಬರೆದುಕೊಂಡಿದ್ದಾರೆ.
BigBoss, , resumes. Stepping on to the stage in a bit. The Contestants had a break,, been out,,,have known their positioning & popularity,,seen episodes,, known what each contestant has spoken about the other & now,,, “Re-entry” . This is NEW, This is FUN. ?? pic.twitter.com/0GE5FNEUuk
— Kichcha Sudeepa (@KicchaSudeep) June 22, 2021
Yo…. it isssssss …. ???? @geneliad https://t.co/fnlFOCYPQU
— Kichcha Sudeepa (@KicchaSudeep) June 22, 2021
ಬುಧವಾರ ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಎರಡನೇ ಇನ್ನಿಂಗ್ ಆರಂಭವಾಗಲಿದೆ. ಕಿಚ್ಚ ಸುದೀಪ್ ವೇದಿಕೆ ಏರಿ, ಎಲ್ಲ ಸ್ಪರ್ಧಿಗಳನ್ನು ಸ್ವಾಗತಿಸಲಿದ್ದಾರೆ. ಇದನ್ನು ಮಹಾಸಂಚಿಕೆ ಎಂದು ಕಲರ್ಸ್ ಕನ್ನಡ ವಾಹಿನಿ ಕರೆದಿದ್ದು, ಭರ್ಜರಿ ಮನರಂಜನೆ ಇರಲಿದೆ. ಕೊರೊನಾ ಹಾವಳಿಯಿಂದ ಬಿಗ್ ಬಾಸ್ ತಾತ್ಕಾಲಿಕವಾಗಿ ನಿಲ್ಲುವುದಕ್ಕಿಂತಲೂ ಕೆಲವು ವಾರ ಮೊದಲೇ ಕಿಚ್ಚ ಸುದೀಪ್ ಅವರಿಗೆ ಆರೋಗ್ಯ ಕೈ ಕೊಟ್ಟಿತ್ತು. ಹಾಗಾಗಿ ಅವರು ಕೊನೆಯ ನಾಲ್ಕೈದು ವಾರಗಳ ಎಪಿಸೋಡ್ನಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈಗ ಅವರನ್ನು ಮತ್ತೆ ಬಿಗ್ ಬಾಸ್ ವೇದಿಕೆ ಮೇಲೆ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ಇದನ್ನೂ ಓದಿ:
ಬಿಗ್ ಬಾಸ್ 2ನೇ ಇನ್ನಿಂಗ್ಸ್ ಶುರುವಿಗೂ ಮುನ್ನ ದಿವ್ಯಾ ಉರುಡುಗಗೆ 5 ಲಕ್ಷ ಜನರ ಬೆಂಬಲ; ಏನಿದು ಲೆಕ್ಕಾಚಾರ?
Bigg Boss Kannada 8: ಬಿಗ್ ಬಾಸ್ ಮೊದಲ ದಿನದ ಸಂಚಿಕೆಯಲ್ಲಿ ಏನೆಲ್ಲಾ ಇರಲಿದೆ ಗೊತ್ತಾ?