Bigg Boss Kannada 8: ಬಿಗ್ ಬಾಸ್ ಮೊದಲ ದಿನದ ಸಂಚಿಕೆಯಲ್ಲಿ ಏನೆಲ್ಲಾ ಇರಲಿದೆ ಗೊತ್ತಾ?
ಬಿಗ್ ಬಾಸ್ ಆರಂಭಗೊಳ್ಳುತ್ತಿದೆ ಎನ್ನುವ ವಿಚಾರ ಅಭಿಮಾನಿಗಳಿಗೆ ಸಾಕಷ್ಟು ಖುಷಿ ನೀಡಿದೆ. ಮೂಲಗಳ ಪ್ರಕಾರ ಈ ಸೀಸನ್ ಇನ್ನೂ 50ದಿನಗಳ ಕಾಲ ನಡೆಯಲಿದೆ ಎನ್ನಲಾಗುತ್ತಿದೆ.
‘ಕನ್ನಡ ಬಿಗ್ ಬಾಸ್ ಸೀಸನ್ 8’ ಬುಧವಾರ (ಜೂನ್ 23) ಸೆಕೆಂಡ್ ಇನ್ನಿಂಗ್ಸ್ ಆರಂಭಿಸುತ್ತಿದೆ. ಕನ್ನಡ ಬಿಗ್ ಬಾಸ್ ಇತಿಹಾಸದಲ್ಲಿ ಈ ರೀತಿ ಆಗುತ್ತಿರುವುದು ಇದೇ ಮೊದಲು. ಬುಧವಾರ ಸಂಜೆ ಆರು ಗಂಟೆಯಿಂದಲೇ ಶೋ ಆರಂಭಗೊಳ್ಳಲಿದೆ. ಅಷ್ಟಕ್ಕೂ ಈ ವಿಶೇಷ ಶೋನಲ್ಲಿ ಏನೆಲ್ಲ ಇರಲಿದೆ ಎಂಬುದಕ್ಕೆ ಇಲ್ಲಿದೆ ಉತ್ತರ.
ಬಿಗ್ಬಾಸ್ ಸೀಸನ್ 8 ಅರ್ಧಕ್ಕೆ ನಿಲ್ಲುವಾಗ ಮನೆಯೊಳಗೆ ಅರವಿಂದ್ ಕೆ.ಪಿ, ಮಂಜು ಪಾವಗಡ, ಶಮಂತ್ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್, ರಘು ಗೌಡ, ಶುಭಾ ಪೂಂಜಾ, ವೈಷ್ಣವಿ ಗೌಡ, ದಿವ್ಯಾ ಸುರೇಶ್, ಪ್ರಿಯಾಂಕಾ ತಿಮ್ಮೇಶ್, ನಿಧಿ ಸುಬ್ಬಯ್ಯ, ಪ್ರಶಾಂತ್ ಸಂಬರಗಿ ಹಾಗೂ ದಿವ್ಯಾ ಉರುಡುಗ ಸೇರಿ 12 ಸ್ಪರ್ಧಿಗಳು ಇದ್ದರು. ಈಗ ಈ ಎಲ್ಲಾ ಸ್ಪರ್ಧಿಗಳು ಬುಧವಾರ ಮರಳಿ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆಯುತ್ತಿದ್ದಾರೆ. ಇವರ ಜತೆಗೆ ಇನ್ನೂ ಕೆಲ ಹೊಸ ಸ್ಪರ್ಧಿಗಳು ಮನೆ ಪ್ರವೇಶಿಸಲಿದ್ದಾರೆ ಎನ್ನಲಾಗುತ್ತಿದೆ.
ಅಂದಹಾಗೆ, ಮಹಾ ಸಂಚಿಕೆ ಆಗಿರುವುದರಿಂದ ಸಂಜೆ 6 ಗಂಟೆಯಿಂದಲೇ ಬಿಗ್ ಬಾಸ್ ಪ್ರಸಾರ ಆರಂಭಗೊಳ್ಳುತ್ತಿದೆ. ಪ್ರತಿ ಸ್ಪರ್ಧಿಗಳನ್ನು ಕಿಚ್ಚ ಸುದೀಪ್ ವೇದಿಕೆ ಮೇಲೆ ಕರೆದು ಮಾತನಾಡಿಸಿ, ಅವರನ್ನು ಮನೆ ಒಳಗೆ ಕಳುಹಿಸಲಿದ್ದಾರೆ ಎನ್ನಲಾಗುತ್ತಿದೆ. ಇನ್ನು, ಹೊಸ ಸ್ಪರ್ಧಿಗಳು ಬಂದರೆ ಅವರ ಪರಿಚಯವನ್ನು ಸುದೀಪ್ ಮಾಡಲಿದ್ದಾರೆ.
View this post on Instagram
ಸೀಸನ್ 8 ಅರ್ಧಕ್ಕೆ ನಿಲ್ಲುವುದಕ್ಕೂ ಕೆಲ ವಾರ ಮೊದಲು ಕಿಚ್ಚ ಸುದೀಪ್ಗೆ ಅನಾರೋಗ್ಯ ಕಾಡಿತ್ತು. ಈ ಕಾರಣಕ್ಕೆ ಅವರು ಬಿಗ್ ಬಾಸ್ ನಡೆಸಿಕೊಡೋಕೆ ಸಾಧ್ಯವಾಗಿರಲಿಲ್ಲ. ಇದಾದ ನಂತರದಲ್ಲಿ ಲಾಕ್ಡೌನ್ ನಿಯಮಗಳಿಂದ ಸುದೀಪ್ ಬಿಗ್ ಬಾಸ್ ವೇದಿಕೆ ಏರಿರಲಿಲ್ಲ. ಈಗ ಅನೇಕ ತಿಂಗಳ ನಂತರದಲ್ಲಿ ಸುದೀಪ್ ಬಿಗ್ ಬಾಸ್ ವೇದಿಕೆ ಏರುತ್ತಿದ್ದು ಅಭಿಮಾನಿಗಳು ಖುಷಿಯಾಗಿದ್ದಾರೆ. ಅಂದಹಾಗೆ, ಈ ವಾರಾಂತ್ಯದಲ್ಲಿ ಕಿಚ್ಚನ ಪಂಚಾಯ್ತಿ ನಡೆಯೋದು ಅನುಮಾನವಿದೆ. ಮುಂದಿನ ವಾರದಿಂದ ಎಲಿಮಿನೇಷನ್ ಪ್ರಕ್ರಿಯೆಗಳು ಆರಂಭಗೊಳ್ಳಬಹುದು.
ಸದ್ಯ, ಬಿಗ್ ಬಾಸ್ ಆರಂಭಗೊಳ್ಳುತ್ತಿದೆ ಎನ್ನುವ ವಿಚಾರ ಅಭಿಮಾನಿಗಳಿಗೆ ಸಾಕಷ್ಟು ಖುಷಿ ನೀಡಿದೆ. ಮೂಲಗಳ ಪ್ರಕಾರ ಈ ಸೀಸನ್ ಇನ್ನೂ 50 ದಿನಗಳ ಕಾಲ ನಡೆಯಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಬಿಗ್ ಬಾಸ್ 2ನೇ ಇನ್ನಿಂಗ್ಸ್ ಶುರುವಿಗೂ ಮುನ್ನ ದಿವ್ಯಾ ಉರುಡುಗಗೆ 5 ಲಕ್ಷ ಜನರ ಬೆಂಬಲ; ಏನಿದು ಲೆಕ್ಕಾಚಾರ?
Published On - 9:53 pm, Mon, 21 June 21