AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Happy Birthday Vijay: ದಳಪತಿ ವಿಜಯ್​ ಹುಟ್ಟುಹಬ್ಬ; ನೋಡಲೇಬೇಕಾದ 5 ಸಿನಿಮಾಗಳು ಯಾವವು?

Vijay Thalapathy Birthday: ಇಂದಿಗೂ ಅದೇ ಚಾರ್ಮ್​ ಉಳಿಸಿಕೊಂಡು ಬಹುಬೇಡಿಕೆಯ ಸ್ಟಾರ್​ ನಟನಾಗಿ ಮುಂದುವರಿಯುತ್ತಿರುವ ದಳಪತಿ ವಿಜಯ್​ ಈಗ 65ನೇ ಸಿನಿಮಾಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ.

Happy Birthday Vijay: ದಳಪತಿ ವಿಜಯ್​ ಹುಟ್ಟುಹಬ್ಬ; ನೋಡಲೇಬೇಕಾದ 5 ಸಿನಿಮಾಗಳು ಯಾವವು?
ದಳಪತಿ ವಿಜಯ್​
TV9 Web
| Edited By: |

Updated on: Jun 22, 2021 | 8:13 AM

Share

ಕಾಲಿವುಡ್​ನ ಖ್ಯಾತ ನಟ ದಳಪತಿ ವಿಜಯ್​ ಅವರಿಗೆ ಇಂದು (ಜೂ.22) ಜನ್ಮದಿನ. 1984ರಲ್ಲೇ ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅವರು, ನಂತರ ಹೀರೋ ಆಗಿ ಮಿಂಚಲು ಆರಂಭಿಸಿದರು. ಇಂದಿಗೂ ಅದೇ ಚಾರ್ಮ್​ ಉಳಿಸಿಕೊಂಡು ಬಹುಬೇಡಿಕೆಯ ಸ್ಟಾರ್​ ನಟನಾಗಿ ಮುಂದುವರಿಯುತ್ತಿದ್ದಾರೆ. ಈವರೆಗೂ 64 ಸಿನಿಮಾಗಳನ್ನು ಮಾಡಿರುವ ವಿಜಯ್​, ಈಗ 65ನೇ ಸಿನಿಮಾ ‘ಬೀಸ್ಟ್​’ಗಾಗಿ ತಯಾರಿ ನಡೆಸುತ್ತಿದ್ದಾರೆ. ಪ್ರತಿ ಚಿತ್ರದಲ್ಲಿಯೂ ಹೊಸದೇನಾದರೂ ಪ್ರಯತ್ನಿಸುವುದು ಅವರ ಗುಣ. ಆ ಕಾರಣಕ್ಕಾಗಿ ಅವರು ಪ್ರೇಕ್ಷಕರಿಗೆ ಹೆಚ್ಚು ಇಷ್ಟ ಆಗುತ್ತಾರೆ. ದಳಪತಿ ವಿಜಯ್​ ಅವರ ಈ 5 ದಿ ಬೆಸ್ಟ್​ ಸಿನಿಮಾಗಳನ್ನು ಪ್ರೇಕ್ಷಕರು ಮಿಸ್​ ಮಾಡಿಕೊಳ್ಳಬಾರದು.

ಪೋಕಿರಿ:

2007ರಲ್ಲಿ ಪೋಕಿರಿ ಸಿನಿಮಾ ತೆರೆಕಂಡಿತು. ಪ್ರಭುದೇವ ನಿರ್ದೇಶನ ಮಾಡಿದ್ದ ಈ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಷನ್​ ಇತ್ತು. ಪ್ರೇಕ್ಷಕರು ಚಿತ್ರವನ್ನು ಸಖತ್​ ಮೆಚ್ಚಿಕೊಂಡರು. ಚಿತ್ರಮಂದಿರದಲ್ಲಿ 200 ದಿನಗಳ ಕಾಲ ಪ್ರದರ್ಶನ ಕಂಡ ಪೋಕಿರಿ ಬ್ಲಾಕ್​ಬಸ್ಟರ್​ ಹಿಟ್​ ಎನಿಸಿಕೊಂಡಿತ್ತು.

ತುಪ್ಪಾಕಿ:

ತುಪ್ಪಾಕಿ (2012) ಸಿನಿಮಾದಲ್ಲಿ ಮಿಲಿಟರಿ ಅಧಿಕಾರಿಯ ಪಾತ್ರದಲ್ಲಿ ವಿಜಯ್​ ಕಾಣಿಸಿಕೊಂಡಿದ್ದರು. ಅವರಿಗೆ ನಟಿ ಕಾಜಲ್​ ಅಗರ್​ವಾಲ್ ಜೋಡಿ ಆಗಿದ್ದರು. ಎ.ಆರ್​. ಮುರುಗದಾಸ್​ ನಿರ್ದೇಶನ ಮಾಡಿದ್ದ ಈ ಚಿತ್ರಕ್ಕೆ ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿತು. ವಿಜಯ್​ ವೃತ್ತಿಜೀವನದಲ್ಲಿ 100 ಕೋಟಿ ರೂ. ಬಾಚಿಕೊಂಡ ಮೊದಲ ಸಿನಿಮಾ ತುಪ್ಪಾಕಿ.

ಕತ್ತಿ:

2014ರಲ್ಲಿ ಕತ್ತಿ ಸಿನಿಮಾ ಬಿಡುಗಡೆ ಆಯಿತು. ವಿಜಯ್​ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರಕ್ಕೂ ಎ.ಆರ್​. ಮುರುಗದಾಸ್​ ನಿರ್ದೇಶನ ಮಾಡಿದ್ದರು. ಸಮಂತಾ ಅಕ್ಕಿನೇನಿ ಮತ್ತು ನೀಲ್​ ನಿತಿನ್​ ಮುಕೇಶ್​ ಅವರು ವಿಜಯ್ ಜೊತೆ ಇನ್ನುಳಿದ ಪ್ರಮುಖ ಪಾತ್ರಗಳನ್ನು ಮಾಡಿದ್ದರು. ಬಾಕ್ಸ್​ ಆಫೀಸ್​ನಲ್ಲಿ 130 ಕೋಟಿ ರೂ.ಗಳನ್ನು ಈ ಸಿನಿಮಾ ಕಲೆಕ್ಷನ್​ ಮಾಡಿತ್ತು ಎನ್ನಲಾಗಿದೆ.

ಮೆರ್ಸಲ್​:

ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್​ ಆ್ಯಕ್ಷನ್​-ಕಟ್​ ಹೇಳಿದ್ದ ಈ ಚಿತ್ರ 2017ರಲ್ಲಿ ರಿಲೀಸ್​ ಆಗಿತ್ತು. ವಿಶೇಷ ಎಂದರೆ ಈ ಸಿನಿಮಾದಲ್ಲಿ ವಿಜಯ್​ ತ್ರಿಪಾತ್ರ ಮಾಡಿದ್ದರು. ನಿತ್ಯಾ ಮೆನನ್​, ಕಾಜಲ್​ ಅಗರ್​ವಾಲ್​ ಮತ್ತು ಸಮಂತಾ ಅಕ್ಕಿನೇನಿ ನಾಯಕಿಯರಾಗಿ ನಟಿಸಿದ್ದರು. ಮೆಡಿಕಲ್​ ಸ್ಕ್ಯಾಮ್​ ಕುರಿತ ಕಥೆಯಲ್ಲಿ ವಿಜಯ್​ ಮಾಡಿದ ವೆಟ್ರಿಮಾರನ್​ ಎಂಬ ಪಾತ್ರ ಎಲ್ಲರಿಗೂ ಇಷ್ಟ ಆಯಿತು.

ಬಿಗಿಲ್​:

ಸ್ಪೋರ್ಟ್ಸ್​ ಡ್ರಾಮಾ ಕಥೆಯುಳ್ಳ ಸಿನಿಮಾ ಬಿಗಿಲ್​. ಅಪ್ಪ ಮತ್ತು ಮಗನಾಗಿ ವಿಜಯ್​ ಅವರು ದ್ವಿಪಾತ್ರ ಮಾಡಿದ್ದರು. 2019ರಲ್ಲಿ ಬಂದ ಈ ಚಿತ್ರಕ್ಕೂ ಅಟ್ಲೀ ಕುಮಾರ್​ ಅವರೇ ನಿರ್ದೇಶನ ಮಾಡಿದ್ದರು. ತಂದೆಯ ಪಾತ್ರದಲ್ಲಿ ವಿಜಯ್​ ನಟನೆ ಹೆಚ್ಚು ಗಮನ ಸೆಳೆದಿತ್ತು. ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದಲೂ ಈ ಸಿನಿಮಾ ಭಾರಿ ಮೆಚ್ಚುಗೆ ಪಡೆದುಕೊಂಡಿತ್ತು.

ಇದನ್ನೂ ಓದಿ:

‘ಬೀಸ್ಟ್’​ ಅವತಾರದಲ್ಲಿ ದಳಪತಿ ವಿಜಯ್​; ಹೊಸ ಲುಕ್​ ನೋಡಿ ಫ್ಯಾನ್ಸ್​ ಫಿದಾ

ದಳಪತಿ ವಿಜಯ್​ಗೆ 100 ಕೋಟಿ ಸಂಭಾವನೆ ಕೊಡಲು ಮುಂದಾದ ನಿರ್ಮಾಪಕ; ಅಬ್ಬಬ್ಬಾ ಯಾವುದು ಈ ಸಿನಿಮಾ?

Follow Us
ಸಂಕಷ್ಟದ ಸಮಯದಲ್ಲಿ 63 ರನ್ ಚಚ್ಚಿದ ರಜತ್ ಪಾಟಿದರ್
ಸಂಕಷ್ಟದ ಸಮಯದಲ್ಲಿ 63 ರನ್ ಚಚ್ಚಿದ ರಜತ್ ಪಾಟಿದರ್
ಗೆಳೆಯ ಹಸುವಿಗಾಗಿ ಬ್ರೆಡ್ ಕಚ್ಚಿಕೊಂಡು ಬಂದ ನಾಯಿ; ಈ ಸ್ನೇಹಕ್ಕೆ ಏನಂತೀರಿ!
ಗೆಳೆಯ ಹಸುವಿಗಾಗಿ ಬ್ರೆಡ್ ಕಚ್ಚಿಕೊಂಡು ಬಂದ ನಾಯಿ; ಈ ಸ್ನೇಹಕ್ಕೆ ಏನಂತೀರಿ!
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ವೃಂದಾವನದ ಯಮುನಾ ನದಿಯಲ್ಲಿ ಬೋಟ್ ಮುಳುಗಿ 10 ಜನ ಸಾವು
ವೃಂದಾವನದ ಯಮುನಾ ನದಿಯಲ್ಲಿ ಬೋಟ್ ಮುಳುಗಿ 10 ಜನ ಸಾವು
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ