ದಳಪತಿ ವಿಜಯ್​ಗೆ 100 ಕೋಟಿ ಸಂಭಾವನೆ ಕೊಡಲು ಮುಂದಾದ ನಿರ್ಮಾಪಕ; ಅಬ್ಬಬ್ಬಾ ಯಾವುದು ಈ ಸಿನಿಮಾ?

Thalapathy Vijay Remuneration: ಇದೇ ಮೊದಲ ಬಾರಿಗೆ ಟಾಲಿವುಡ್​ಗೆ ದಳಪತಿ ವಿಜಯ್​ ಕಾಲಿಡುತ್ತಿರುವುದರಿಂದ ಸಹಜವಾಗಿಯೇ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿದೆ. ತೆಲುಗಿನ ಜೊತೆ ತಮಿಳಿನಲ್ಲಿಯೂ ಈ ಚಿತ್ರ ಸಿದ್ಧವಾಗಲಿದೆ.

ದಳಪತಿ ವಿಜಯ್​ಗೆ 100 ಕೋಟಿ ಸಂಭಾವನೆ ಕೊಡಲು ಮುಂದಾದ ನಿರ್ಮಾಪಕ; ಅಬ್ಬಬ್ಬಾ ಯಾವುದು ಈ ಸಿನಿಮಾ?
ದಳಪತಿ ವಿಜಯ್​
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on: Jun 17, 2021 | 4:12 PM

ನಟ ದಳಪತಿ ವಿಜಯ್​ಗೆ ದೊಡ್ಡ ಫ್ಯಾನ್​ ಫಾಲೋಯಿಂಗ್​ ಇದೆ. ತಮಿಳು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸ್ಟಾರ್​ ಆಗಿ ಮೆರೆಯುತ್ತಿರುವ ಅವರು ಗಮನಾರ್ಹ ಸಿನಿಮಾಗಳನ್ನು ನೀಡುತ್ತ ಬಂದಿದ್ದಾರೆ. ತಮಿಳುನಾಡು ಮಾತ್ರವಲ್ಲದೆ ಅಕ್ಕಪಕ್ಕದ ರಾಜ್ಯಗಳಲ್ಲೂ ವಿಜಯ್​ ಸಿನಿಮಾಗಳು ಭರ್ಜರಿ ಪ್ರದರ್ಶನ ಕಾಣುತ್ತವೆ. ಸ್ಟಾರ್​ ನಿರ್ದೇಶಕ, ನಿರ್ಮಾಪಕರೆಲ್ಲ ವಿಜಯ್​ ಕಾಲ್​ಶೀಟ್​ಗಾಗಿ ಕಾದು ಕುಳಿತಿರುತ್ತಾರೆ. ಇಷ್ಟು ದಿನ ತಮಿಳುನಲ್ಲಿ ಬ್ಯುಸಿ ಆಗಿದ್ದ ವಿಜಯ್​ ಇದೇ ಮೊದಲ ಬಾರಿಗೆ ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಆ ಸಿನಿಮಾದಲ್ಲಿ ಅವರು ಪಡೆಯಲಿರುವ ಸಂಭಾವನೆ ಬಗ್ಗೆ ಗುಸುಗುಸು ಕೇಳಿಬರುತ್ತಿದೆ.

2021ರ ಜನವರಿಯಲ್ಲಿ ತೆರೆಕಂಡ ‘ಮಾಸ್ಟರ್’​ ಸಿನಿಮಾದಿಂದ ವಿಜಯ್​ಗೆ ದೊಡ್ಡ ಗೆಲುವು ಸಿಕ್ಕಿತು. ಸದ್ಯ ಅವರು ತಮ್ಮ 65ನೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರದ ಕೆಲಸಗಳು ಪ್ರಗತಿಯಲ್ಲಿ ಇರುವಾಗಲೇ 66ನೇ ಸಿನಿಮಾ ಬಗ್ಗೆ ಒಂದಕ್ಕಿಂತ ಒಂದು ಅಚ್ಚರಿಯ ಸುದ್ದಿ ಕೇಳಿಬರುತ್ತಿದೆ. ಅವರ 66ನೇ ಚಿತ್ರಕ್ಕೆ ಟಾಲಿವುಡ್​ನ ಖ್ಯಾತ ನಿರ್ಮಾಪಕ ದಿಲ್​ ರಾಜು ಬಂಡವಾಳ ಹೂಡಲಿದ್ದಾರೆ. ಕೇಳಿಬರುತ್ತಿರುವ ಮಾಹಿತಿ ಪ್ರಕಾರ, ವಿಜಯ್​ಗೆ ಅವರು ಬರೋಬ್ಬರಿ 100 ಕೋಟಿ ರೂ. ಸಂಭಾವನೆ ಕೊಡಲು ಸಿದ್ಧರಿದ್ದಾರಂತೆ!

ಇದೇ ಮೊದಲ ಬಾರಿಗೆ ಟಾಲಿವುಡ್​ಗೆ ವಿಜಯ್​ ಕಾಲಿಡುತ್ತಿರುವುದರಿಂದ ಸಹಜವಾಗಿಯೇ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿದೆ. ತೆಲುಗಿನ ಜೊತೆ ತಮಿಳಿನಲ್ಲಿಯೂ ಈ ಚಿತ್ರ ಸಿದ್ಧವಾಗಲಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಡಬ್​ ಮಾಡಿ ಬಿಡುಗಡೆ ಮಾಡುವ ಆಲೋಚನೆ ಕೂಡ ನಿರ್ಮಾಪಕರಿಗೆ ಇದೆ. ತೆಲುಗಿನ ಖ್ಯಾತ ನಿರ್ದೇಶಕ ವಂಶಿ ಪೈಡಿಪಲ್ಲಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿಲಿದ್ದಾರೆ. 100 ಕೋಟಿ ರೂ. ಸಂಭಾವನೆಯಲ್ಲಿ ಈಗಾಗಲೇ ಮುಂಗಡವಾಗಿ 10 ಕೋಟಿ ರೂ.ಗಳನ್ನು ವಿಜಯ್​ಗೆ ನೀಡಲಾಗಿದೆ ಎನ್ನುವ ಮಾಹಿತಿ ಕೇಳಿಬರುತ್ತಿದೆ. ಸಿನಿಮಾ ಸೆಟ್ಟೇರಿದ ಬಳಿಕ ಇನ್ನುಳಿದ ಮೊತ್ತವನ್ನು ನೀಡಲಾಗುವುದು ಎಂಬ ಸುದ್ದಿ ಟಾಲಿವುಡ್​ ಅಂಗಳಲ್ಲಿ ಹರಿದಾಡುತ್ತಿದೆ.

ಸಂಭಾವನೆ ವಿಚಾರವಾಗಿ ವಿಜಯ್​ ಅವರಾಗಲಿ, ದಿಲ್​ ರಾಜು ಅವರಾಗಲಿ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಹರಿದಾಡುತ್ತಿರುವ ಅಂತೆ-ಕಂತೆಗಳಿಗೂ ಅವರು ಉತ್ತರ ನೀಡಿಲ್ಲ. ಸದ್ಯ ಕೊರೊನಾ ಹಾವಳಿ ಇರುವುದರಿಂದ ಪ್ರೀ ಪ್ರೊಡಕ್ಷನ್​ ಕೆಲಸಗಳನ್ನು ಚಿತ್ರತಂಡ ಮುಗಿಸಿಕೊಳ್ಳುತ್ತಿದೆ. ಕೊರೊನಾ ಕಾಟ ಕಡಿಮೆ ಆದ ಬಳಿಕ ಅದ್ದೂರಿಯಾಗಿ ಸಿನಿಮಾ ಲಾಂಚ್​ ಮಾಡಲು ತೀರ್ಮಾನಿಸಲಾಗಿದೆ.

ಇದನ್ನೂ ಓದಿ:

ದಳಪತಿ 65 ಸಿನಿಮಾಗೆ ನಟಿ ಪೂಜಾ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

ತೆಲುಗಿನ ಖ್ಯಾತ ನಿರ್ದೇಶಕನೊಂದಿಗೆ ದಳಪತಿ ವಿಜಯ್​ ಮುಂದಿನ ಸಿನಿಮಾ; ಫ್ಯಾನ್ಸ್​ ಫುಲ್​ಖುಷ್​

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್