Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಎದೆ ಭಾಗ ಎದ್ದು ಕಾಣುವಂತೆ ಏನಾದ್ರು ತುಂಬಿಕೊಂಡು ಬಾ’ ಎಂದಿದ್ದ ನಿರ್ದೇಶಕ; ನೀನಾ ಗುಪ್ತಾ ಬಿಚ್ಚಿಟ್ಟ ಸತ್ಯ

Subhash Ghai: ‘ಸರಿ ಇಲ್ಲ ಎಂದು ಕೂಗಿದ ಸುಭಾಷ್​ ಘಾಯ್​, ಏನಾದರು ತುಂಬಿಕೊಂಡು ಬಾ ಅಂತ ಹೇಳಿದರು. ನನಗೆ ತುಂಬಾ ಮುಜುಗರ ಆಯಿತು’ ಎಂದು ನೀನಾ ಗುಪ್ತಾ ವಿವರಿಸಿದ್ದಾರೆ.

‘ಎದೆ ಭಾಗ ಎದ್ದು ಕಾಣುವಂತೆ ಏನಾದ್ರು ತುಂಬಿಕೊಂಡು ಬಾ’ ಎಂದಿದ್ದ ನಿರ್ದೇಶಕ; ನೀನಾ ಗುಪ್ತಾ ಬಿಚ್ಚಿಟ್ಟ ಸತ್ಯ
‘ಚೋಲಿ ಕೆ ಪೀಚೆ ಕ್ಯಾ ಹೈ..’ ಹಾಡಿಯಲ್ಲಿ ನೀನಾ ಗುಪ್ತಾ
Follow us
TV9 Web
| Updated By: Digi Tech Desk

Updated on:Jun 17, 2021 | 2:12 PM

ಸಮಾಜಕ್ಕೆ ತಲೆ ಕೆಡಿಸಿಕೊಳ್ಳದೇ ತಮಗೆ ಬೇಕಾದಂತೆ ಬದುಕಿದವರು ನಟಿ ನೀನಾ ಗುಪ್ತಾ. ಮೊದಲಿನಿಂದಲೂ ಅವರು ತಮ್ಮ ನೇರ ನಡೆ-ನುಡಿಯ ಕಾರಣದಿಂದ ಖ್ಯಾತರಾಗಿದ್ದಾರೆ. ಇತ್ತೀಚೆಗೆ ಅವರು ತಮ್ಮ ಆಟೋಬಯೋಗ್ರಫಿ ‘ಸಚ್​ ಕಹೂ ತೋ’ ಬಿಡುಗಡೆ ಮಾಡಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನೀನಾ ಗುಪ್ತಾ, ಈ ಪುಸ್ತಕದ ಮೂಲಕ ಅನೇಕ ವಿಚಾರಗಳನ್ನು ಬಯಲಿಗೆ ಎಳೆದಿದ್ದಾರೆ. ಬಾಲಿವುಡ್​ನ ಖ್ಯಾತ ನಿರ್ದೇಶಕ ಸುಭಾಷ್​ ಘಾಯ್​ ಬಗ್ಗೆ ಅವರು ಕೆಲವೊಂದು ಶಾಕಿಂಗ್​ ವಿಚಾರಗಳನ್ನು ಬರೆದುಕೊಂಡಿದ್ದಾರೆ. ಅದು ಈಗ ಚರ್ಚೆಗೆ ಕಾರಣವಾಗುತ್ತ, ವೈರಲ್​ ಆಗುತ್ತಿದೆ.

ಸುಭಾಷ್​ ಘಾಯ್​ ನಿರ್ದೇಶನದ ‘ಖಳನಾಯಕ್​’ ಸಿನಿಮಾ ದೊಡ್ಡಮಟ್ಟದಲ್ಲಿ ಸೌಂಡು ಮಾಡಿತ್ತು. 1993ರಲ್ಲಿ ಬಿಡುಗಡೆ ಆದ ಆ ಚಿತ್ರದಲ್ಲಿ ಸಂಜಯ್​ ದತ್​, ಮಾಧುರಿ ದೀಕ್ಷಿತ್​ ಮುಖ್ಯಭೂಮಿಕೆ ನಿಭಾಯಿಸಿದ್ದರು. ನಟಿ ನೀನಾ ಗುಪ್ತಾ ಅವರು ‘ಚೋಲಿ ಕೆ ಪೀಚೆ ಕ್ಯಾ ಹೈ..’ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಆ ಹಾಡು ಎಷ್ಟು ಫೇಮಸ್​ ಆಗಿತ್ತು ಎಂಬುದನ್ನು ಹೊಸದಾಗಿ ಹೇಳಬೇಕಾದ್ದಿಲ್ಲ. ಆ ಗೀತೆಯ ಶೂಟಿಂಗ್​ ಸಂದರ್ಭದಲ್ಲಿ ಏನಾಯಿತು ಎಂಬುದನ್ನು ಈಗ ನೀನಾ ಗುಪ್ತಾ ವಿವರಿಸಿದ್ದಾರೆ.

‘ಮೊದಲ ಬಾರಿಗೆ ನಾನು ಹಾಡು ಕೇಳಿದಾಗ ತುಂಬ ಆಕರ್ಷಕವಾಗಿದೆ ಎಂಬುದು ತಿಳಿಯಿತು. ಆದರೆ ಅದರಲ್ಲಿ ನನ್ನ ಪಾತ್ರ ಏನು ಎಂಬುದನ್ನು ನಿರ್ದೇಶಕ ಸುಭಾಷ್ ಘಾಯ್​ ತಿಳಿಸಿದಾಗ ಅದನ್ನು ಮಾಡಲು ನಾನು ಸಿದ್ಧಳಾಗಿರಲಿಲ್ಲ. ನನಗೆ ಗುಜರಾತಿ ಬುಡಕಟ್ಟು ಜನಾಂಗದ ಕಾಸ್ಟ್ಯೂಮ್​ ತೊಡಿಸಿದರು. ಸರಿಯಾಗಿದೆಯಾ ಎಂಬುದನ್ನು ತಿಳಿದುಕೊಳ್ಳಲು ನನ್ನನ್ನು ಸುಭಾಶ್​ ಘಾಯ್​ ಎದುರು ನಿಲ್ಲಿಸಿದರು. ಇಲ್ಲ ಇಲ್ಲ ಇಲ್ಲ ಎಂದು ಸುಭಾಷ್​ ಘಾಯ್​ ಕೂಗಿದರು’ ಎಂದು ಆ ದಿನದ ನೆನಪಿನ ಪುಟವನ್ನು ತೆರೆದಿದ್ದಾರೆ ನೀನಾ ಗುಪ್ತಾ.

‘ಸರಿ ಇಲ್ಲ ಎಂದು ಕೂಗಿದ ಸುಭಾಷ್​ ಘಾಯ್​, ಏನಾದರು ತುಂಬಿಕೊಂಡು ಬಾ ಎಂದು ಹೇಳಿದರು. ನನಗೆ ತುಂಬಾ ಮುಜುಗರ ಆಯಿತು. ಅವರು ನನ್ನ ಬ್ಲೌಸ್​ ಬಗ್ಗೆ ಮಾತನಾಡುತ್ತಿದ್ದರು. ಅದನ್ನು ತುಂಬಿಕೊಂಡು ಬರಬೇಕು ಎಂದು ಹೇಳಿದರು. ಅದರಲ್ಲಿ ಅವರ ವೈಯಕ್ತಿಕ ಆಸಕ್ತಿ ಏನೂ ಇರಲಿಲ್ಲ ಎಂಬುದು ನನಗೆ ಗೊತ್ತಿತ್ತು. ದೃಶ್ಯಕ್ಕಾಗಿ ಅವರು ಏನೋ ಪ್ಲ್ಯಾನ್​ ಮಾಡಿದ್ದರು’ ಎಂದು ನೀನಾ ಗುಪ್ತಾ ಬರೆದುಕೊಂಡಿದ್ದಾರೆ.

‘ಆ ದಿನ ನಾನು ಶೂಟಿಂಗ್​ನಲ್ಲಿ ಪಾಲ್ಗೊಳ್ಳಲಿಲ್ಲ. ಮರುದಿನ ನಾನು ಹೆಚ್ಚು ಪ್ಯಾಡೆಡ್​ ಆಗಿರುವಂತಹ ಬ್ರಾ ಧರಿಸಿ, ಬೇರೆ ಕಾಸ್ಟ್ಯೂಮ್​ನಲ್ಲಿ ಅವರ ಮುಂದೆ ಹೋಗಿ ನಿಂತುಕೊಂಡೆ. ಅವರಿಗೆ ಖುಷಿ ಆಯಿತು ಎನಿಸುತ್ತದೆ. ತಮಗೆ ಏನು ಬೇಕು ಎಂಬ ವಿಚಾರದಲ್ಲಿ ಸುಭಾಷ್​ ಹೆಚ್ಚು ನಿರ್ದಿಷ್ಟವಾಗಿ ಇರುತ್ತಿದ್ದರು. ಅದಕ್ಕಾಗಿಯೇ ಅವರು ಒಳ್ಳೆಯ ನಿರ್ದೇಶಕನಾಗಿದ್ದು’ ಎಂದು ತಮ್ಮ ಆತ್ಮಚರಿತ್ರೆಯಲ್ಲಿ ನೀನಾ ಗುಪ್ತಾ ಬರೆದಿದ್ದಾರೆ.

(‘ಚೋಲಿ ಕೆ ಪೀಚೆ ಕ್ಯಾ ಹೈ..’ ಹಾಡು)

ಇದನ್ನೂ ಓದಿ:

‘ಅಂದು ಪ್ಯಾಡೆಡ್​ ಬ್ರಾ ಧರಿಸುತ್ತಿದ್ದೆ; ಇಂದು ಹೀಗಾಗಿದ್ದೇನೆ’: ವರದನಾಯಕ ನಟಿ ಸಮೀರಾ ವಿಡಿಯೋ ವೈರಲ್​!

ಕ್ರಿಕೆಟಿಗನ ಜತೆಗಿನ ಸಂಬಂಧದಿಂದ ಬಾಲಿವುಡ್ ನಟಿಗೆ ಮಗು; ನಾನು ತಂದೆ ಆಗ್ತೀನಿ ಎಂದು ಮುಂದೆ ಬಂದಿದ್ದ ಗೆಳೆಯ

Published On - 2:03 pm, Thu, 17 June 21

ಸಿಹಿ ಸುದ್ದಿ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ರೈತರಿಗೆ ಯುಗಾದಿ ಬೋನಸ್​
ಸಿಹಿ ಸುದ್ದಿ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ರೈತರಿಗೆ ಯುಗಾದಿ ಬೋನಸ್​
ಔರಂಗಜೇಬನ ಸಮಾಧಿ ಸಂಬಂಧಿತ ವಿವಾದ, ನಾಗ್ಪುರದಲ್ಲಿ ಹಿಂಸಾಚಾರ
ಔರಂಗಜೇಬನ ಸಮಾಧಿ ಸಂಬಂಧಿತ ವಿವಾದ, ನಾಗ್ಪುರದಲ್ಲಿ ಹಿಂಸಾಚಾರ
Daily Devotional: ದೇವಾಲಯದ ಹೊಸ್ತಿಲು ಮುಟ್ಟಿ ನಮಸ್ಕರಿಸುವುದರ ಹಿಂದಿನ ಫಲ
Daily Devotional: ದೇವಾಲಯದ ಹೊಸ್ತಿಲು ಮುಟ್ಟಿ ನಮಸ್ಕರಿಸುವುದರ ಹಿಂದಿನ ಫಲ
ಸೂರ್ಯ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ಸೂರ್ಯ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ನಮ್ಮ ಫ್ಯಾನ್ಸ್ ’ಬೊಂಬಾಟ್’ ಎಂದ ಕಿಂಗ್ ಕೊಹ್ಲಿ; ವಿಡಿಯೋ
ನಮ್ಮ ಫ್ಯಾನ್ಸ್ ’ಬೊಂಬಾಟ್’ ಎಂದ ಕಿಂಗ್ ಕೊಹ್ಲಿ; ವಿಡಿಯೋ
ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ