ಜಾಕ್ವಲೀನ್​​​ ಫರ್ನಾಂಡಿಸ್​ ಜತೆ ಲಿವ್​ ಇನ್​ನಲ್ಲಿರೋಕೆ 175 ಕೋಟಿ ಮೌಲ್ಯದ ಫ್ಲ್ಯಾಟ್​ ಖರೀದಿಸಿದ ಬಾಯ್​ಫ್ರೆಂಡ್​

ಇತ್ತೀಚೆಗೆ ಜಾಕ್ವಲೀನ್ ಗೆಳೆಯನ ಜತೆಗೂಡಿ ಮುಂಬೈನಲ್ಲಿ ದುಬಾರಿ ಮೊತ್ತದ ಬಂಗಲೆ ಒಂದನ್ನು ಖರೀದಿ ಮಾಡಿದ್ದರು. ಇದರ ಬೆಲೆ 175 ಕೋಟಿ ರೂಪಾಯಿ ಎನ್ನಲಾಗಿದೆ.

ಜಾಕ್ವಲೀನ್​​​ ಫರ್ನಾಂಡಿಸ್​ ಜತೆ ಲಿವ್​ ಇನ್​ನಲ್ಲಿರೋಕೆ 175 ಕೋಟಿ ಮೌಲ್ಯದ ಫ್ಲ್ಯಾಟ್​ ಖರೀದಿಸಿದ ಬಾಯ್​ಫ್ರೆಂಡ್​
ಜಾಕ್ವಲೀನ್​​ ಫರ್ನಾಂಡಿಸ್​
Rajesh Duggumane

| Edited By: Madan Kumar

Jun 17, 2021 | 4:14 PM

ಬಾಲಿವುಡ್​ನ ಸಾಕಷ್ಟು ನಟಿಯರು ಪ್ರೀತಿಯಲ್ಲಿದ್ದರೂ ಅದನ್ನು ಸಾರ್ವಜನಿಕವಾಗಿ ಹೇಳಿಕೊಳ್ಳೋಕೆ ಇಷ್ಟಪಡುವುದಿಲ್ಲ. ಸಾರ್ವಜನಿಕವಾಗಿ ಕಾಣಿಸಿಕೊಂಡರೂ ಆ ವಿಚಾರವನ್ನು ಅವರು ಅಲ್ಲಗಳೆಯುತ್ತಾರೆ. ಬಾಲಿವುಡ್​ ನಟಿ ಜಾಕ್ವಲೀನ್ ಫರ್ನಾಂಡಿಸ್​ ಕೂಡ ತಮ್ಮ ರಿಲೇಶನ್​ಶಿಪ್ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ. ಈಗ ಅವರು ಲಿವ್​ ಇನ್​ ರಿಲೇಶನ್​ಶಿಪ್​ನಲ್ಲಿರೋಕೆ ಬಾಯ್​ಫ್ರೆಂಡ್​ ಹಣದಿಂದ ಮುಂಬೈನಲ್ಲಿ ಫ್ಲ್ಯಾಟ್​ ಒಂದನ್ನು ಖರೀದಿಸಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ಜಾಕ್ವಲೀನ್ ಗೆಳೆಯನ ಜತೆಗೂಡಿ ಮುಂಬೈನಲ್ಲಿ ದುಬಾರಿ ಮೊತ್ತದ ಬಂಗಲೆ ಒಂದನ್ನು ಖರೀದಿ ಮಾಡಿದ್ದರು. ಇದರ ಬೆಲೆ 175 ಕೋಟಿ ರೂಪಾಯಿ ಎನ್ನಲಾಗಿದೆ. ಅವರು ಶೀಘ್ರವೇ ಈ ಬಂಗಲೆಗೆ ಶಿಫ್ಟ್​ ಆಗಲಿದ್ದಾರೆ ಎನ್ನಲಾಗಿದೆ. ಹೀಗಿರುವಾಗಲೇ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ಜೋರಾಗಿ ಹರಿದಾಡುತ್ತಿದೆ.

ಜಾಕ್ವಲೀನ್​ ಸಾಕಷ್ಟು ವರ್ಷಗಳಿಂದ ರಿಲೇಶನ್​ಶಿಪ್​ನಲ್ಲಿದ್ದಾರೆ. ಆದರೆ, ಆ ಬಗ್ಗೆ ಅವರು ಎಲ್ಲಿಯೂ ಹೇಳಿಕೊಂಡಿಲ್ಲ. ಲಿವ್ ಇನ್​ ರಿಲೇಶನ್​ಶಿಪ್​ನಲ್ಲಿ ಇರೋಕೆ ಅವರು ಈ ಫ್ಲ್ಯಾಟ್​ ಖರೀದಿಸಿದ್ದಾರೆ ಎನ್ನುವ ಮಾತು ಜೋರಾಗಿದೆ. ಆದರೆ, ಈ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ಮಾಹಿತಿ ಸಿಕ್ಕಿಲ್ಲ.

ಜಾಕ್ವಲೀನ್ ಹೌಸ್​ಫುಲ್​ ಸರಣಿ ಮೂಲಕ ಖ್ಯಾತಿ ಹೆಚ್ಚಿಸಿಕೊಂಡರು. ಹೌಸ್​ಫುಲ್​ ಸರಣಿಯ ಮೂರು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಇತ್ತೀಚೆಗೆ ತೆರೆಗೆ ಬಂದ ‘ರಾಧೆ: ಯುವರ್ ಮೋಸ್ಟ್​ ವಾಂಟೆಡ್​ ಭಾಯ್’​ ಚಿತ್ರದಲ್ಲಿ ವಿಶೇಷ ಹಾಡಿಗೆ ಇವರು ಹೆಜ್ಜೆ ಹಾಕಿದ್ದರು. ಸದ್ಯ, ನಾಲ್ಕೈದು ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ.

ಕೊವಿಡ್​ ಎರಡನೇ ಅಲೆಯ ಲಾಕ್​ಡೌನ್​ ಸಂದರ್ಭದಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ಮನೆ ಖರೀದಿಸಿದ್ದಾರೆ. ಅಜಯ್​ ದೇವಗನ್​-ಕಾಜೋಲ್ ದಂಪತಿ​, ಅಮಿತಾಭ್​ ಬಚ್ಚನ್​, ಅರ್ಜುನ್​ ಕಪೂರ್ ಮುಂಬೈನಲ್ಲಿ ದುಬಾರಿ ಬೆಲೆಯ ಫ್ಲ್ಯಾಟ್​ ಖರೀದಿಸಿದ್ದಾರೆ. ಈಗ ಈ ಸಾಲಿಗೆ ಜಾಕ್ವಲೀನ್​ ಹೊಸ ಸೇರ್ಪಡೆ.

ಇದನ್ನೂ ಓದಿ: 20 ಕೋಟಿ ಕೊಟ್ಟು ಪ್ರೇಯಸಿ ಮಲೈಕಾ ಅರೋರಾ ಮನೆ ಸಮೀಪವೇ ಸ್ಕೈ ವಿಲ್ಲಾ ಖರೀದಿಸಿದ ಅರ್ಜುನ್​ ಕಪೂರ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada