IND vs WI T20 WC Highlights: ಭಾರತಕ್ಕೆ 5 ವಿಕೆಟ್ಗಳ ರೋಚಕ ಜಯ
India vs West Indies, T20 world Cup 2026 Highlights: ಟೀಂ ಇಂಡಿಯಾ 2026 ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆದುಕೊಂಡಿದೆ. ಭಾರತ ತಂಡವು ಅಂತಿಮ ಸೂಪರ್ 8 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿ ಟೂರ್ನಮೆಂಟ್‌ನಲ್ಲಿ ಅಂತಿಮ ತಂಡವಾಗಿ ಸೆಮಿಫೈನಲ್ಗೆ ಅರ್ಹತೆ ಪಡೆದುಕೊಂಡಿತು.

ಟೀಂ ಇಂಡಿಯಾ 2026 ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆದುಕೊಂಡಿದೆ. ಭಾರತ ತಂಡವು ಅಂತಿಮ ಸೂಪರ್ 8 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿ ಟೂರ್ನಮೆಂಟ್‌ನಲ್ಲಿ ಅಂತಿಮ ತಂಡವಾಗಿ ಸೆಮಿಫೈನಲ್ಗೆ ಅರ್ಹತೆ ಪಡೆದುಕೊಂಡಿತು. ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಸಂಜು ಸ್ಯಾಮ್ಸನ್, ಭಾರತ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 195 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಸಂಜು ಸ್ಯಾಮ್ಸನ್ ಅವರ ಅಜೇಯ 97 ರನ್ಗಳಿಂದ ಕೊನೆಯ ಓವರ್‌ನಲ್ಲಿ ಗೆಲುವು ದಾಖಲಿಸಿತು.
LIVE NEWS & UPDATES
-
IND vs WI Live: ಭಾರತಕ್ಕೆ ಗೆಲುವು
ಕೊನೆಯ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಸಂಜು ಸ್ಯಾಮ್ಸನ್ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಭಾರತ ವೆಸ್ಟ್ ಇಂಡೀಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿತು. ಸಂಜು ಸ್ಯಾಮ್ಸನ್ 50 ಎಸೆತಗಳಲ್ಲಿ ಅಜೇಯ 97 ರನ್ ಗಳಿಸುವ ಮೂಲಕ ಗೆಲುವಿನ ಹೀರೋ ಎನಿಸಿಕೊಂಡರು. ತಿಲಕ್ ವರ್ಮಾ ಕೂಡ 27 ರನ್ ಗಳಿಸಿದರು.
-
IND vs WI Live: ಒಂದು ಓವರ್‌ನಲ್ಲಿ 7 ರನ್‌ಗಳ ಅಗತ್ಯ
ಶಿವಂ ದುಬೆ 19ನೇ ಓವರ್‌ನಲ್ಲಿ ಎರಡು ಬೌಂಡರಿಗಳನ್ನು ಬಾರಿಸಿ ಅದ್ಭುತ ಬ್ಯಾಟಿಂಗ್ ಮಾಡಿದರು. ಆ ಓವರ್‌ನಲ್ಲಿ 10 ರನ್‌ಗಳು ಬಂದವು, ಭಾರತಕ್ಕೆ ಒಂದು ಓವರ್‌ನಲ್ಲಿ 7 ರನ್‌ಗಳ ಅಗತ್ಯವಿದೆ.
-
-
IND vs WI Live: 18 ಎಸೆತಗಳಲ್ಲಿ 25 ರನ್‌ಗಳ ಅಗತ್ಯ
ರೊಮಾರಿಯೊ ಶೆಫರ್ಡ್ ಅವರ ಓವರ್‌ನ ಕೊನೆಯ ಎಸೆತದಲ್ಲಿ ಪಾಂಡ್ಯ ಬೌಂಡರಿ ಬಾರಿಸಿದರು. ಆ ಓವರ್‌ನಲ್ಲಿ 11 ರನ್‌ಗಳು ಬಂದವು. ಭಾರತಕ್ಕೆ ಈಗ 18 ಎಸೆತಗಳಲ್ಲಿ 25 ರನ್‌ಗಳ ಅಗತ್ಯವಿದೆ, ಕೈಯಲ್ಲಿ ಆರು ವಿಕೆಟ್‌ಗಳಿವೆ.
-
IND vs WI Live: ಮತ್ತೊಂದು ದುಬಾರಿ ಓವರ್
ಶೆಮರ್ ಜೋಸೆಫ್ 14 ರನ್ ನೀಡಿದರು. ಹಾರ್ದಿಕ್ ಪಾಂಡ್ಯ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದರು ಮತ್ತು ಸಂಜು ಸ್ಯಾಮ್ಸನ್ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿದರು, ಇದರಿಂದಾಗಿ ಭಾರತಕ್ಕೆ ನಾಲ್ಕು ಓವರ್‌ಗಳಲ್ಲಿ 36 ರನ್‌ಗಳು ಬೇಕಾಗಿವೆ.
-
IND vs WI Live: ಸಂಜು-ತಿಲಕ್ ಅದ್ಭುತ ಪ್ರದರ್ಶನ
ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಅದ್ಭುತ ಜೊತೆಯಾಟವಾಡಿದರು. ರೋಸ್ಟನ್ ಚೇಸ್ ಅವರ ಓವರ್‌ನಲ್ಲಿ 15 ರನ್ ಬಂಧವು. ಕೊನೆಯ ಎಸೆತದಲ್ಲಿ ಸ್ಯಾಮ್ಸನ್ ಒಂದು ಬೌಂಡರಿ ಮತ್ತು ತಿಲಕ್ ಒಂದು ಸಿಕ್ಸರ್ ಬಾರಿಸಿದರು. ಭಾರತ ಗೆಲುವಿನಿಂದ 60 ರನ್ ದೂರದಲ್ಲಿದೆ.
-
-
IND vs WI Live: ಸೂರ್ಯಕುಮಾರ್ ಯಾದವ್ ಔಟ್
ಸೂರ್ಯಕುಮಾರ್ ಯಾದವ್ ಅವರನ್ನು ಶೆಮರ್ ಜೋಸೆಫ್ ಔಟ್ ಮಾಡಿದರು. ಭಾರತದ ನಾಯಕ ಕೇವಲ 18 ರನ್ ಗಳಿಸಿದರು. ಶೆರ್ಫೇನ್ ರುದರ್ಫೋರ್ಡ್ ಅದ್ಭುತ ಕ್ಯಾಚ್ ಹಿಡಿದರು.
-
IND vs WI Live: ಸ್ಯಾಮ್ಸನ್ ಅರ್ಧಶತಕ
ಸಂಜು ಸ್ಯಾಮ್ಸನ್ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಟಿ20 ವಿಶ್ವಕಪ್‌ನಲ್ಲಿ ಸ್ಯಾಮ್ಸನ್ ಅವರ ಮೊದಲ ಅರ್ಧಶತಕವಾಗಿತ್ತು. ದೊಡ್ಡ ಪಂದ್ಯದಲ್ಲಿ ಸ್ಯಾಮ್ಸನ್ ಅದ್ಭುತ ಇನ್ನಿಂಗ್ಸ್ ಆಡಿದರು.
-
IND vs WI Live: ಮತ್ತೊಂದು ಅತ್ಯುತ್ತಮ ಓವರ್
ರೊಮಾರಿಯೊ ಶೆಫರ್ಡ್ ಅವರ ಓವರ್‌ನಲ್ಲಿ ಸ್ಯಾಮ್ಸನ್ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದರು. ಸಂಜು ಸ್ಯಾಮ್ಸನ್ ಅವರ ಅದ್ಭುತ ಬ್ಯಾಟಿಂಗ್. ಅವರು ಅರ್ಧಶತಕದ ಸಮೀಪಿಸುತ್ತಿದ್ದಾರೆ.
-
IND vs WI Live: ಎರಡನೇ ಹೊಡೆತ
ನಾಲ್ಕನೇ ಓವರ್‌ನಲ್ಲಿ ಭಾರತದ ಎರಡನೇ ವಿಕೆಟ್ ಪತನವಾಯಿತು, ಇಶಾನ್ ಕಿಶನ್ 10 ರನ್ ಗಳಿಸಿ ಔಟಾದರು. ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸುತ್ತಿದ್ದಾಗ, ಶಿಮ್ರಾನ್ ಹೆಟ್ಮೈಯರ್ ಅವರಿಗೆ ಕ್ಯಾಚ್ ನೀಡಿದರು.
-
IND vs WI Live: ಮೊದಲ ವಿಕೆಟ್
ವೆಸ್ಟ್ ಇಂಡೀಸ್ ನೀಡಿದ್ದ 196 ರನ್ ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಮೊದಲ ಹಿನ್ನಡೆ ಅನುಭವಿಸಿತು. ಅಭಿಷೇಕ್ ಶರ್ಮಾ 10 ರನ್ ಗಳಿಸಿ ಔಟಾದರು.
-
IND vs WI Live: ಭಾರತಕ್ಕೆ ಬಿಗ್ ಟಾರ್ಗೆಟ್
ವೆಸ್ಟ್ ಇಂಡೀಸ್ ತಂಡವು ಭಾರತಕ್ಕೆ 196 ರನ್‌ಗಳ ಗುರಿಯನ್ನು ನೀಡಿತು. ಜೇಸನ್ ಹೋಲ್ಡರ್ ಅಜೇಯ 37 ಮತ್ತು ರೋವ್‌ಮನ್ ಪೊವೆಲ್ ಅಜೇಯ 34 ರನ್ ಗಳಿಸಿ ವೆಸ್ಟ್ ಇಂಡೀಸ್ ತಂಡವನ್ನು ದೊಡ್ಡ ಮೊತ್ತಕ್ಕೆ ಮುನ್ನಡೆಸಿದರು. ಮೊದಲ 10 ಓವರ್‌ಗಳಲ್ಲಿ ಕೇವಲ 82 ರನ್‌ಗಳು ಮಾತ್ರ ಗಳಿಸಿತು, ಮತ್ತು ವೆಸ್ಟ್ ಇಂಡೀಸ್ ಕೊನೆಯ 10 ಓವರ್‌ಗಳಲ್ಲಿ 113 ರನ್‌ಗಳನ್ನು ಗಳಿಸಿತು.
-
IND vs WI Live: 2ನೇ ಕ್ಯಾಚ್ ಬಿಟ್ಟ ಅಭಿ
19ನೇ ಓವರ್‌ನಲ್ಲಿ ಅಭಿಷೇಕ್ ಶರ್ಮಾ ಮತ್ತೊಂದು ಕ್ಯಾಚ್ ಕೈಚೆಲ್ಲಿದರು. 19ನೇ ಓವರ್‌ನ ಮೂರನೇ ಎಸೆತದಲ್ಲಿ ಪೊವೆಲ್ ಅವರ ಸರಳ ಕ್ಯಾಚ್ ಅನ್ನು ಅಭಿ ಕೈಚೆಲ್ಲಿದರು, ಈ ಟೂರ್ನಮೆಂಟ್‌ನಲ್ಲಿ ಭಾರತ ಕೈಬಿಟ್ಟ ಒಟ್ಟು ಕ್ಯಾಚ್ಗಳ ಸಂಖ್ಯೆ 13 ಕ್ಕೆ ತಲುಪಿತು.
-
IND vs WI Live: 24 ರನ್ ಬಿಟ್ಟುಕೊಟ್ಟ ಅರ್ಶ್ದೀಪ್
ಅರ್ಶ್ದೀಪ್ ಸಿಂಗ್ ಅವರ ಒಂದೇ ಓವರ್ ನಲ್ಲಿ ರೋವ್ಮನ್ ಪೊವೆಲ್ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿ 24 ರನ್ ಕಲೆಹಾಕಿದರು. ವೆಸ್ಟ್ ಇಂಡೀಸ್ ಸ್ಕೋರ್ 150 ದಾಟಿತು.
-
IND vs WI Live: 14 ಓವರ್ ಪೂರ್ಣ
ವರುಣ್ ಚಕ್ರವರ್ತಿ ತಮ್ಮ ಮೂರನೇ ಓವರ್‌ನಲ್ಲಿ ಕೇವಲ 6 ರನ್‌ಗಳನ್ನು ಬಿಟ್ಟುಕೊಟ್ಟರು. ವೆಸ್ಟ್ ಇಂಡೀಸ್ 14 ಓವರ್‌ಗಳಲ್ಲಿ ಕೇವಲ 119 ರನ್‌ಗಳನ್ನು ಗಳಿಸಿದೆ. ಈಗ ಈ ತಂಡವು ದೊಡ್ಡ ಹೊಡೆತಗಳನ್ನು ಆಡಬೇಕಾಗಿದೆ.
-
IND vs WI Live: ಬುಮ್ರಾಗೆ ವಿಕೆಟ್
12ನೇ ಓವರ್‌ನ ಮೂರನೇ ಎಸೆತದಲ್ಲಿ ಬುಮ್ರಾ ಭಾರತಕ್ಕೆ ಎರಡನೇ ಬ್ರೇಕ್‌ಥ್ರೂ ನೀಡಿದರು. ಹೆಟ್ಮೈಯರ್ 27 ರನ್‌ಗಳಿಗೆ ಔಟಾದರು. ಸಂಜು ಸ್ಯಾಮ್ಸನ್ ಕ್ಯಾಚ್ ಪಡೆದರು. ಎಂಟು ಟಿ20 ಪಂದ್ಯಗಳಲ್ಲಿ ಬುಮ್ರಾ ಹೆಟ್ಮೈಯರ್ ಅವರನ್ನು ಐದನೇ ಬಾರಿಗೆ ಔಟ್ ಮಾಡಿದರು.
-
IND vs WI Live: ಹೋಪ್ ಔಟ್
ವರುಣ್ ಚಕ್ರವರ್ತಿ ದಾಳಿಗೆ ಇಳಿದು ವಿಕೆಟ್ ಪಡೆದರು. ಅವರು ತಮ್ಮ ಐದನೇ ಎಸೆತದಲ್ಲಿ ವೆಸ್ಟ್ ಇಂಡೀಸ್ ನಾಯಕ ಶೈ ಹೋಪ್ ಅವರನ್ನು ಬೌಲ್ಡ್ ಮಾಡಿದರು.
-
IND vs WI Live: ಪವರ್‌ಪ್ಲೇ ಅಂತ್ಯ
ಪವರ್‌ಪ್ಲೇನಲ್ಲಿ ವೆಸ್ಟ್ ಇಂಡೀಸ್ 45 ರನ್ ಗಳಿಸಿತು, ಯಾವುದೇ ವಿಕೆಟ್ ಬೀಳಲಿಲ್ಲ. ಟೀಮ್ ಇಂಡಿಯಾ ಎರಡು ಅವಕಾಶಗಳನ್ನು ಕಳೆದುಕೊಂಡಿತು. ರೋಸ್ಟನ್ ಚೇಸ್ ಅವರನ್ನು ರನ್ ಔಟ್ ಮಾಡುವ ಅವಕಾಶವನ್ನು ತಪ್ಪಿಸಿಕೊಂಡರು ಮತ್ತು ಒಂದು ಕ್ಯಾಚ್ ಅನ್ನು ಸಹ ಕೈಬಿಡಲಾಯಿತು. ಕಳಪೆ ಫೀಲ್ಡಿಂಗ್ ಟೀಮ್ ಇಂಡಿಯಾಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಬಹುದು.
-
IND vs WI Live: ಮತ್ತೊಂದು ದುಬಾರಿ ಓವರ್
ಅರ್ಶ್ದೀಪ್ ಸಿಂಗ್ ಅವರ ಓವರ್‌ನಲ್ಲಿ 10 ರನ್ ಬಂತು. ರೋಸ್ಟನ್ ಚೇಸ್ ಎರಡು ಬೌಂಡರಿಗಳನ್ನು ಬಾರಿಸಿದರು.
-
IND vs WI Live: ವೆಸ್ಟ್ ಇಂಡೀಸ್ ತಂಡ
ಶೈ ಹೋಪ್ (ನಾಯಕ), ಶಿಮ್ರಾನ್ ಹೆಟ್ಮೈರ್, ರೋವ್ಮನ್ ಪೊವೆಲ್, ರೋಸ್ಟನ್ ಚೇಸ್, ಶೆರ್ಫೇನ್ ರುದರ್ಫೋರ್ಡ್, ಜೇಸನ್ ಹೋಲ್ಡರ್, ಮ್ಯಾಥ್ಯೂ ಫೋರ್ಡ್, ರೊಮಾರಿಯೊ ಶೆಫರ್ಡ್, ಗುಡಕೇಶ್ ಮೋತಿ, ಶಮರ್ ಜೋಸೆಫ್, ಅಕಿಲ್ ಹೊಸೈನ್.
-
IND vs WI Live: ಭಾರತ ತಂಡ
ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಜಸ್ಪ್ರಿತ್ ಬುಮ್ರಾ, ವರುಣ್ ಚಕ್ರವರ್ತಿ
-
IND vs WI T20 WC Live: ಟಾಸ್ ಗೆದ್ದ ಭಾರತ
ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ವೆಸ್ಟ್ ಇಂಡೀಸ್ ಮೊದಲು ಬ್ಯಾಟಿಂಗ್ ಮಾಡಲಿದೆ.
Published On - Mar 01,2026 6:34 PM
