AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

18 ಸೈನಿಕರ ಸಾವು, ಭೂಗತ ಬಂಕರ್‌ಗಳ ಸವಾಲು: ಇರಾನ್ ಬಿಕ್ಕಟ್ಟಿನಲ್ಲಿ ಸಿಲುಕಿ ಅಸಾಂಪ್ರದಾಯಿಕ ಹಾದಿ ತುಳಿದ ಟ್ರಂಪ್ ಆಡಳಿತ

ಮಧ್ಯಪ್ರಾಚ್ಯದಲ್ಲಿ ಇರಾನ್ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಅಮೆರಿಕದ ಟ್ರಂಪ್ ಆಡಳಿತವು ಅಸಾಂಪ್ರದಾಯಿಕ ಮಾರ್ಗಗಳನ್ನು ಅನ್ವೇಷಿಸುತ್ತಿದೆ. ಇರಾನ್‌ನ ಆಳವಾದ ಭೂಗತ ಬಂಕರ್‌ಗಳನ್ನು ನಾಶಪಡಿಸುವ ಸವಾಲು ಮತ್ತು 18 ಸೈನಿಕರ ಪ್ರಾಣ ಹಾನಿಯಿಂದಾಗಿ, ಅಮೆರಿಕ ಮಿಲಿಟರಿ ಹೊಸ ಯುದ್ಧ ತಂತ್ರಗಳನ್ನು ಹುಡುಕಲು 'ಕ್ರೌಡ್‌ಸೋರ್ಸಿಂಗ್' ಮೊರೆ ಹೋಗಿದೆ. ಹಾರ್ಮುಜ್ ಜಲಸಂಧಿ ನಿಯಂತ್ರಣಕ್ಕಾಗಿ ಪೈಪೋಟಿ ಮುಂದುವರಿದಿದ್ದು, ಟ್ರಂಪ್ ಸಾಂಕೇತಿಕ ಗೆಲುವಿಗೆ ಯತ್ನಿಸುತ್ತಿದ್ದಾರೆ.

18 ಸೈನಿಕರ ಸಾವು, ಭೂಗತ ಬಂಕರ್‌ಗಳ ಸವಾಲು: ಇರಾನ್ ಬಿಕ್ಕಟ್ಟಿನಲ್ಲಿ ಸಿಲುಕಿ ಅಸಾಂಪ್ರದಾಯಿಕ ಹಾದಿ ತುಳಿದ ಟ್ರಂಪ್ ಆಡಳಿತ
ಡೊನಾಲ್ಡ್​ ಟ್ರಂಪ್
ನಯನಾ ರಾಜೀವ್
|

Updated on: Aug 04, 2026 | 8:39 AM

Share

ವಾಷಿಂಗ್ಟನ್, ಆಗಸ್ಟ್​ 04: ಮಧ್ಯಪ್ರಾಚ್ಯದಲ್ಲಿ ಇರಾನ್‌(Iran)ನೊಂದಿಗಿನ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಇರಾನ್ ಮೇಲೆ ಒತ್ತಡ ಹೇರಲು ಹಾಗೂ ಶಿಕ್ಷಿಸಲು ಹೊಸ, ಸೃಜನಶೀಲ ಮತ್ತು ಅಸಾಂಪ್ರದಾಯಿಕ ಮಾರ್ಗಗಳನ್ನು ಹುಡುಕುವಂತೆ ಅಮೆರಿಕ ಮಿಲಿಟರಿಯ ಜಂಟಿ ಪಡೆ ಯುಎಸ್ ಸೆಂಟ್ರಲ್ ಕಮಾಂಡ್ ತನ್ನ ಮಿಲಿಟರಿ ವಿಶ್ಲೇಷಕರಿಗೆ ಮತ್ತು ಕಿರಿಯ ಶ್ರೇಣಿಯ ಸೈನಿಕರಿಗೆ ಸೂಚಿಸಿದೆ.

ಸಿಎನ್‌ಎನ್ ವರದಿಯ ಪ್ರಕಾರ, ಸೆಂಟ್ಕಾಮ್‌ನ ಗುಪ್ತಚರ ವಿಭಾಗವು ಸೈನಿಕರಿಗೆ ಇ-ಮೇಲ್ ಕಳುಹಿಸುವ ಮೂಲಕ ಹೊಸ ತಂತ್ರಗಳಿಗೆಆಹ್ವಾನ ನೀಡಿದೆ. ಸಾಂಪ್ರದಾಯಿಕ ಸೈನಿಕ ಆಯ್ಕೆಗಳು ಮುಗಿಯುತ್ತ ಬಂದಿರುವುದರಿಂದ ಈ ರೀತಿ ‘ಕ್ರೌಡ್‌ಸೋರ್ಸಿಂಗ್’ ಶೈಲಿಯಲ್ಲಿ ಸಲಹೆಗಳನ್ನು ಆಹ್ವಾನಿಸಿರುವುದು ಅಮೆರಿಕ ಮಿಲಿಟರಿ ಇತಿಹಾಸದಲ್ಲೇ ಅತ್ಯಂತ ಅಪರೂಪದ ಹೆಜ್ಜೆಯಾಗಿದೆ.

ಕಳೆದ ಕೆಲವು ವಾರಗಳಿಂದ ಅಮೆರಿಕ ಪಡೆಗಳು ಇರಾನ್‌ನ ಪ್ರಮುಖ ಮಿಲಿಟರಿ ನೆಲೆಗಳ ಮೇಲೆ ನಿರಂತರ ವಾಯುದಾಳಿಗಳನ್ನು ನಡೆಸುತ್ತಿದ್ದರೂ, ಇರಾನ್ ತನ್ನ ಪಟ್ಟು ಸಡಿಲಿಸಿಲ್ಲ. ಕೇವಲ ವಾಯುಪಡೆಯಿಂದಲೇ ಯುದ್ಧದ ಎಲ್ಲಾ ಗುರಿಗಳನ್ನು ತಲುಪಲು ಸಾಧ್ಯವಿಲ್ಲ ಎಂದು ಅಮೆರಿಕದ ಹಿರಿಯ ಸೇನಾಧಿಕಾರಿ ಜನರಲ್ ಡ್ಯಾನ್ ಕೇನ್ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ಮತ್ತಷ್ಟು ಓದಿ: ಇರಾನ್ ಜತೆ ಮತ್ತೆ ಶಾಂತಿ ಮಾತುಕತೆ, ದಾಳಿ ರದ್ದು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು

ಇರಾನ್‌ನ ಪ್ರಮುಖ ಪರಮಾಣು ನೆಲೆಗಳು ಪಿಕಾಕ್ಸ್ ಪರ್ವತ ಶ್ರೇಣಿಯ ಅತ್ಯಂತ ಆಳವಾದ ಭೂಗರ್ಭದಲ್ಲಿ ಬಂಕರ್‌ಗಳಲ್ಲಿ ಇರುವುದರಿಂದ, ಕೇವಲ ಬಾಂಬ್‌ಗಳಿಂದ ಅವುಗಳನ್ನು ನಾಶಪಡಿಸುವುದು ಅಸಾಧ್ಯವಾಗಿದೆ. ಗ್ರೌಂಡ್ ಟ್ರೂಪ್ಸ್​​ ಕಳುಹಿಸುವುದು ಅತ್ಯಂತ ಅಪಾಯಕಾರಿ ಎಂಬುದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಭಿಪ್ರಾಯವಾಗಿದೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಪ್ರಸ್ತುತ ಸಂಘರ್ಷದಲ್ಲಿ ಈಗಾಗಲೇ 18 ಅಮೆರಿಕ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ವಾರ ಇರಾನ್ ಮೇಲೆ ಬೃಹತ್ ಪ್ರಮಾಣದ ‘ಅಭೂತಪೂರ್ವ ದಾಳಿ’ ನಡೆಸಲು ಟ್ರಂಪ್ ಯೋಜಿಸಿದ್ದರು. ಆದರೆ ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ (MBS) ಟ್ರಂಪ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಯುದ್ಧದ ತೀವ್ರತೆ ತಗ್ಗಿಸುವಂತೆ ಮತ್ತು ‘ವಿಷನ್ 2030’ ಯೋಜನೆಗೆ ಧಕ್ಕೆಯಾಗದಂತೆ ತಡೆಯುವಂತೆ ವಿನಂತಿಸಿದ ನಂತರ ಆ ಬೃಹತ್ ದಾಳಿಯನ್ನು ಅಮೆರಿಕ ಹಿಂಪಡೆದಿತ್ತು.

ಸಾಂಕೇತಿಕ ಗೆಲುವಿಗೆ ಟ್ರಂಪ್ ಪ್ಲಾನ್: ಯುದ್ಧದಿಂದ ಗೌರವಾನ್ವಿತವಾಗಿ ಹೊರಬರಲು ಟ್ರಂಪ್ ಈಗ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಇರಾನ್‌ಗೆ ಸಂಪೂರ್ಣ ಶರಣಾಗತಿಯಾಗಲು ಸವಾಲು ಎಸೆಯುವ ಜೊತೆಗೆ, ಸಾಂಕೇತಿಕ ದಾಳಿಗಳನ್ನು ನಡೆಸಿ ಯುದ್ಧ ಕೊನೆಗೊಳಿಸಲು ವಾಷಿಂಗ್ಟನ್ ಚಿಂತಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೇಲೆ ಹಿಡಿತ ಸಾಧಿಸಲು ಅಮೆರಿಕ ಮತ್ತು ಇರಾನ್ ನಡುವೆ ಭಾರಿ ಪೈಪೋಟಿ ನಡೆಯುತ್ತಿದೆ. ಅಮೆರಿಕದ ನೌಕಾಪಡೆ ಜಲಸಂಧಿಗೆ ಉಕ್ಕಿನ ಗೋಡೆಯಂತೆ ದಿಗ್ಬಂಧನ ಹೇರಿದ್ದರೆ, ಇರಾನ್ ವಿನಾಯಿತಿ ನೀಡಲು ನಿರಾಕರಿಸಿದೆ. ಅಮೆರಿಕದ ಸಿಐಎ ಹಾಗೂ ಡಿಫೆನ್ಸ್ ಇಂಟೆಲಿಜೆನ್ಸ್ ಏಜೆನ್ಸಿ ನೀಡಿದ ಆಂತರಿಕ ವರದಿಯ ಪ್ರಕಾರ, ಪ್ರಸ್ತುತ ಅಮೆರಿಕ ನಡೆಸುತ್ತಿರುವ ವಾಯುದಾಳಿಗಳು ಇರಾನ್ ಸರ್ಕಾರದ ರಾಜತಾಂತ್ರಿಕ ನಿಲುವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ