AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಂದು ಪ್ಯಾಡೆಡ್​ ಬ್ರಾ ಧರಿಸುತ್ತಿದ್ದೆ; ಇಂದು ಹೀಗಾಗಿದ್ದೇನೆ’: ವರದನಾಯಕ ನಟಿ ಸಮೀರಾ ವಿಡಿಯೋ ವೈರಲ್​!

ಎರಡು ಮಕ್ಕಳ ತಾಯಿ ಆಗಿರುವ ಸಮೀರಾ ರೆಡ್ಡಿ ಈಗ ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್​ ಆಗಿದ್ದಾರೆ. ತಮ್ಮ ಬದುಕಿನ ಕೆಲವು ಖಾಸಗಿ ವಿಚಾರಗಳನ್ನು ಅಭಿಮಾನಿಗಳ ಜೊತೆ ಶೇರ್​ ಮಾಡಿಕೊಳ್ಳುತ್ತಿದ್ದಾರೆ.

‘ಅಂದು ಪ್ಯಾಡೆಡ್​ ಬ್ರಾ ಧರಿಸುತ್ತಿದ್ದೆ; ಇಂದು ಹೀಗಾಗಿದ್ದೇನೆ’: ವರದನಾಯಕ ನಟಿ ಸಮೀರಾ ವಿಡಿಯೋ ವೈರಲ್​!
ಸಮೀರಾ ರೆಡ್ಡಿ
ಮದನ್​ ಕುಮಾರ್​
| Updated By: Skanda|

Updated on: Apr 04, 2021 | 10:58 AM

Share

ಸೌಂದರ್ಯದ ಬಗ್ಗೆ ಬಹುತೇಕರಿಗೆ ಭ್ರಮೆಗಳಿರುತ್ತವೆ. ನಾವು ಹೀಗೆಯೇ ಕಾಣಬೇಕು ಎಂದು ಜನರು ಎಲ್ಲಿಲ್ಲದ ಕಸರತ್ತು ಮಾಡುತ್ತಾರೆ. ಅದರಲ್ಲೂ ನಟಿಯರು ತಮ್ಮ ಬಾಹ್ಯ ಸೌಂದರ್ಯದ ಕಡೆಗೆ ಹೆಚ್ಚು ಗಮನ ನೀಡುತ್ತಾರೆ ಎಂದರೆ ತಪ್ಪಿಲ್ಲ. ಮೇಕಪ್​ ಮತ್ತು ಕಾಸ್ಟ್ಯೂಮ್​ ಸಲುವಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಖ್ಯಾತ ನಟಿ ಸಮೀರಾ ರೆಡ್ಡಿ ಕೂಡ ಹಾಗೆಯೇ ಇದ್ದರು. ದೇಹದ ಸೌಂದರ್ಯದ ಬಗ್ಗೆ ಅವರು ಸಾಕಷ್ಟು ತಲೆ ಕೆಡಿಸಿಕೊಳ್ಳುತ್ತಿದ್ದರು. ಆದರೆ ಈಗ ಬದಲಾಗಿದ್ದಾರೆ. ಆ ಬಗ್ಗೆ ಸ್ವತಃ ಸಮೀರಾ ಕೆಲವು ವಿಚಾರಗಳನ್ನು ಬಾಯಿ ಬಿಟ್ಟಿದ್ದಾರೆ.

2002ರಿಂದ 2013ರವರೆಗೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಸಮೀರಾ ರೆಡ್ಡಿ, 2014ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅವರು ನಟಿಸಿದ ಕೊನೇ ಸಿನಿಮಾ ಕನ್ನಡದ ‘ವರದನಾಯಕ’. ಆ ಚಿತ್ರದಲ್ಲಿ ಅವರು ಸುದೀಪ್​ಗೆ ಜೋಡಿ ಆಗಿದ್ದರು. ಆ ಸಿನಿಮಾದ ನಂತರ ಸಂಸಾರದ ಕಡೆಗೆ ಸಮೀರಾ ಹೆಚ್ಚು ಗಮನ ನೀಡಿದರು. ಎರಡು ಮಕ್ಕಳ ತಾಯಿ ಆಗಿರುವ ಅವರು ಈಗ ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್​ ಆಗಿದ್ದಾರೆ. ತಮ್ಮ ಬದುಕಿನ ಕೆಲವು ಖಾಸಗಿ ವಿಚಾರಗಳನ್ನು ಅಭಿಮಾನಿಗಳ ಜೊತೆ ಶೇರ್​ ಮಾಡಿಕೊಳ್ಳುತ್ತಿದ್ದಾರೆ.

ಬೇರೆ ಎಲ್ಲ ನಟಿಯರಂತೆ ಸಮೀರಾ ರೆಡ್ಡಿ ಕೂಡ ತಮ್ಮ ದೇಹದ ಸೌಂದರ್ಯಕ್ಕಾಗಿ ತುಂಬ ತಲೆ ಕೆಡಿಸಿಕೊಳ್ಳುತ್ತಿದ್ದರು. ಆದರೆ ಈಗ ಅವರು ಬದಲಾಗಿದ್ದಾರೆ. ನಾವು ಹೇಗಿದ್ದೇವೆಯೋ ಹಾಗೆಯೇ ನಮ್ಮನ್ನು ನಾವು ಒಪ್ಪಿಕೊಳ್ಳಬೇಕು ಎಂಬುದನ್ನು ಅರಿತುಕೊಂಡಿದ್ದಾರೆ. ಅಭಿಮಾನಿಗಳಿಗೂ ಈ ಮಾತನ್ನು ಮನವರಿಕೆ ಮಾಡಿಸುವ ಸಲುವಾಗಿ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

‘ಪ್ಯಾಡೆಡ್​ ಬ್ರಾಗಳು, ಕಲರ್ಡ್​ ಕಾಂಟೆಕ್ಟ್​ ಲೆನ್ಸ್​ಗಳು, ಎಡಿಟ್​ ಮಾಡಿದ ಫೋಟೋಗಳ ಕಾಲದಿಂದ ಈಗ ನಾನು ನಾನಾಗಿಯೇ ಇರುವ ಸ್ವತಂತ್ರದವರಗೆ ಸಾಗಿ ಬಂದಿದ್ದೇನೆ. ಯಾವುದೇ ಒತ್ತಡ ಇಲ್ಲ’ ಎಂಬ ಕ್ಯಾಪ್ಷನ್​ನೊಂದಿಗೆ ಸಮೀರಾ ಶೇರ್​ ಮಾಡಿಕೊಂಡಿರುವ ವಿಡಿಯೋ ವೈರಲ್​ ಆಗುತ್ತಿದೆ. ಸಮೀರಾ ಅವರ ಈ ಬದಲಾವಣೆ ಬಗ್ಗೆ ಹಲವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸೌಂದರ್ಯದ ಬಗ್ಗೆ ಇರುವ ಭ್ರಮೆಯನ್ನು ಕಳಚಿ ಹಾಕುವಲ್ಲಿ ಅವರ ಪ್ರಯತ್ನ ಗಮನ ಸೆಳೆಯುತ್ತಿವೆ. ಸಮೀರಾ ಪೋಸ್ಟ್​ಗಳಿಗೆ ಅನೇಕರು ಪಾಸಿಟಿವ್​ ಆಗಿ ಕಾಮೆಂಟ್​ ಮಾಡುತ್ತಿದ್ದಾರೆ.

ಇನ್ನು, ಮದುವೆ-ಮಕ್ಕಳು ಆದ ಬಳಿಕ ಫಿಟ್​ನೆಸ್​ ಕಡೆಗೆ ಗಮನ ನೀಡಲು ಸಮೀರಾಗೆ ಸಾಧ್ಯವಾಗಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಅವರು ಸ್ಲಿಮ್​ ಆಗುವ ಪ್ರಯತ್ನ ನಡೆಸುತ್ತಿದ್ದಾರೆ. ತಮ್ಮ ದಿನಚರಿಯಲ್ಲಿ ಸಿಕ್ಕಾಪಟ್ಟೆ ಬದಲಾವಣೆ ಮಾಡಿಕೊಂಡಿದ್ದಾರೆ. ಆ ಬಗ್ಗೆಯೂ ಅವರು ಆಗಾಗ ಮಾಹಿತಿ ಹಂಚಿಕೊಳ್ಳುತ್ತಿರುತ್ತಾರೆ.

ಪ್ರತಿ ವಾರವೂ ಅರ್ಧ ಕೆಜಿ ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂಬ ಟಾರ್ಗೆಟ್​ ಇಟ್ಟುಕೊಂಡು, ಅದಕ್ಕೆ ತಕ್ಕಂತೆ ತಮ್ಮ ಜೀವನ ಶೈಲಿಯನ್ನು ಅವರು ರೂಢಿಸಿಕೊಳ್ಳುತ್ತಿದ್ದಾರೆ. ನಿಧಾನವಾದರೂ ಪರವಾಗಿಲ್ಲ. ತಾವು ಗುರಿ ಸಾಧಿಸುವುದು ಖಚಿತ ಎಂಬ ಭರವಸೆಯೊಂದಿಗೆ ಅವರು ಮುನ್ನುಗ್ಗುತ್ತಿದ್ದಾರೆ.

ಇದನ್ನೂ ಓದಿ: ‘ವರದನಾಯಕ’ ನಟಿ ಸಮೀರಾ ರೆಡ್ಡಿ ತೂಕ 90 ಕೆಜಿ! ಸ್ಲಿಮ್​ ಆಗಲು ಕಂಡುಕೊಂಡಿದ್ದಾರೆ ಸಿಂಪಲ್​ ಸೂತ್ರ

(Sameera Reddy video post about padded bras and pure freedom goes viral on social media)

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ