‘ವರದನಾಯಕ’ ನಟಿ ಸಮೀರಾ ರೆಡ್ಡಿ ತೂಕ 90 ಕೆಜಿ! ಸ್ಲಿಮ್​ ಆಗಲು ಕಂಡುಕೊಂಡಿದ್ದಾರೆ ಸಿಂಪಲ್​ ಸೂತ್ರ

ಮದುವೆ-ಮಕ್ಕಳು ಆದ ಬಳಿಕ ಮಹಿಳೆಯರಿಗೆ ಫಿಟ್ನೆಸ್​ ಕಾಯ್ದುಕೊಳ್ಳುವುದು ಸ್ವಲ್ಪ ಕಷ್ಟ ಆಗುತ್ತದೆ. ಆ ಸವಾಲನ್ನು ನಟಿ ಸಮೀರಾ ರೆಡ್ಡಿ ಕೂಡ ಎದುರಿಸುತ್ತಿದ್ದಾರೆ. ಆ ಬಗ್ಗೆ ಅವರು ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ.

‘ವರದನಾಯಕ’ ನಟಿ ಸಮೀರಾ ರೆಡ್ಡಿ ತೂಕ 90 ಕೆಜಿ! ಸ್ಲಿಮ್​ ಆಗಲು  ಕಂಡುಕೊಂಡಿದ್ದಾರೆ ಸಿಂಪಲ್​ ಸೂತ್ರ
ಸಮೀರಾ ರೆಡ್ಡಿ
Follow us
ಮದನ್​ ಕುಮಾರ್​
|

Updated on: Mar 16, 2021 | 4:51 PM

ಕನ್ನಡ ಸಿನಿಮಾ ಪ್ರೇಕ್ಷಕರಿಗೆ ನಟಿ ಸಮೀರಾ ರೆಡ್ಡಿ ಹೆಸರು ಪರಿಚಿತ. ಬಹುಭಾಷೆಯಲ್ಲಿ ಮಿಂಚಿದ ಈ ನಟಿ ಸುದೀಪ್​ ಜೊತೆ ‘ವರದನಾಯಕ’ ಸಿನಿಮಾದಲ್ಲಿ ನಟಿಸಿದ್ದರು. ಆ ಚಿತ್ರದ ಬಳಿಕ ಅವರು ತೆರೆಮರೆಗೆ ಸರಿದರು. ನಂತರ ಸಂಸಾರದ ಕಡೆಗೆ ಗಮನ ನೀಡಿದ ಸಮೀರಾ ರೆಡ್ಡಿಗೆ ಈಗ ಫಿಟ್ನೆಸ್​ನದ್ದೇ ಚಿಂತೆ. ಯಾಕೆಂದರೆ, ಈಗ ಅವರ ತೂಕ ಬರೋಬ್ಬರಿ 90 ಕೆಜಿ!

2013ರಲ್ಲಿ ವರದನಾಯಕ ಸಿನಿಮಾ ತೆರೆಕಂಡಿತು. ಮರುವರ್ಷವೇ ಅವರು ಉದ್ಯಮಿ ಅಕ್ಷಯ್​ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ನಂತರ ಸಂಪೂರ್ಣ ಗಮನವನ್ನು ಸಂಸಾರದ ಕಡೆಗೆ ನೀಡಿದರು. 2015ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. 2019ರಲ್ಲಿ ಎರಡನೇ ಮಗುವಿಗೆ ತಾಯಿಯಾದರು. ಈ ವೇಳೆ ಅವರಿಗೆ ಫಿಟ್ನೆಸ್​ ಕಾಪಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಮತ್ತೆ ಫಿಟ್ನೆಸ್​ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ.

ಪ್ರತಿ ವಾರವೂ ಅರ್ಧ ಕೆಜಿ ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂಬ ಟಾರ್ಗೆಟ್​ ಇಟ್ಟುಕೊಂಡು, ಅದಕ್ಕೆ ತಕ್ಕಂತೆ ತಮ್ಮ ಜೀವನ ಶೈಲಿಯನ್ನು ಅವರು ರೂಢಿಸಿಕೊಳ್ಳುತ್ತಿದ್ದಾರೆ. ವಾರದ ಹಿಂದೆ 91 ಕೆಜಿ ಇದ್ದ ತಾವು ಈಗ 90.6 ಕೆಜಿ ಆಗಿರುವುದಾಗಿ ಹೇಳಿಕೊಂಡಿದ್ದಾರೆ. ಇದು ಗಮನಾರ್ಹ ಸಂಖ್ಯೆ ಅಲ್ಲದಿದ್ದರೂ ಕೂಡ ಸಮೀರಾ ರೆಡ್ಡಿ ಸಂಭ್ರಮಿಸುತ್ತಿದ್ದಾರೆ. ನಿಧಾನವಾದರೂ ಪರವಾಗಿಲ್ಲ. ತಾವು ಗುರಿ ಸಾಧಿಸುವುದು ಖಚಿತ ಎಂಬ ಭರವಸೆಯೊಂದಿಗೆ ಅವರು ಮುನ್ನುಗ್ಗುತ್ತಿದ್ದಾರೆ.

‘ಇಂದು ತುಂಬ ಕಷ್ಟಪಟ್ಟು ಎದ್ದೆ. ಆದರೂ ಯೋಗ ಮಾಡಲು 45 ನಿಮಿಷ ಹೊಂದಿಸಿಕೊಂಡೆ. ನಾನು ಯಾವುದೇ ಯೋಜನೆಯನ್ನು ಅರ್ಧಕ್ಕೆ ಬಿಡುವುದಿಲ್ಲ. ನಿರಂತರವಾಗಿ ಮತ್ತು ಶಿಸ್ತಿನಿಂದ ಮುಂದುವರಿಸುತ್ತೇನೆ’ ಎಂದು ಅವರು ಹೇಳಿದ್ದಾರೆ. ಆಹಾರ ಕ್ರಮದಲ್ಲಿ ಸಮೀರಾ ತುಂಬ ಬದಲಾವಣೆ ಮಾಡಿಕೊಂಡಿದ್ದಾರೆ. ದಿನದ ಮೂರು ನಿಗದಿತ ಸಮಯದಲ್ಲಿ ಮಾತ್ರ ಆಹಾರಾ ಸೇವಿಸುತ್ತಾರೆ. ಬೆಳ್ಳಗ್ಗೆ 11 ಗಂಟೆ, ಮಧ್ಯಾಹ್ನ 2 ಗಂಟೆ ಮತ್ತು ಸಂಜೆ 7 ಗಂಟೆಗೆ ಊಟ ಮಾಡುತ್ತಾರೆ.

ತಡರಾತ್ರಿ ತಿಂಡಿ (snacs) ತಿನ್ನುವುದಕ್ಕೆ ಅವರು ಬ್ರೇಕ್​ ಹಾಕಿದ್ದಾರೆ. ಚೆನ್ನಾಗಿ ನೀರು ಕುಡಿಯುತ್ತಾರೆ. ಪ್ರತಿ ದಿನ ಬೆಳಗ್ಗೆ ಹರ್ಬಲ್​ ಟೀ ಅಥವಾ ಬ್ಲಾಕ್​ ಕಾಫಿ ಕುಡಿಯುತ್ತಾರೆ. ಅದಕ್ಕೆ ಸಕ್ಕರೆ ಮತ್ತು ಹಾಲು ಬಳಸುವುದಿಲ್ಲ. ವಾರದಲ್ಲಿ 3 ದಿನ ಆನ್​ಲೈನ್​ ಕ್ಲಾಸ್​ ಮೂಲಕ ಯೋಗ ಮಾಡುವುದು, ವಾರದಲ್ಲಿ ನಾಲ್ಕು ಬಾರಿ ಸೈಕ್ಲಿಂಗ್​ ಮಾಡುವುದು ಹಾಗೂ ಪ್ರತಿದಿನ ಬ್ಯಾಡ್ಮಿಂಟನ್​ ಆಡುವುದನ್ನು ಸಮೀರಾ ರೂಢಿಸಿಕೊಂಡಿದ್ದಾರೆ. ಈ ಎಲ್ಲ ವಿಚಾರಗಳನ್ನು ಅವರು ಸೋಶಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:  ಫಿಟ್ನೆಸ್​ ಕಾಪಾಡಲು ವಜ್ರಕಾಯ ನಟಿ ಇದನ್ನ ಅಚ್ಚುಕಟ್ಟಾಗಿ ಪಾಲಿಸ್ತಾರೆ

ಫಿಟ್​ನೆಸ್​ಗಾಗಿ MG ರೋಡ್, ವಿಧಾನಸೌಧ ಸುತ್ತಮುತ್ತ ಸೈಕಲ್ ರೌಂಡ್ ಹೊಡೆದ ಅಪ್ಪು!