ಫಿಟ್ನೆಸ್​ ಕಾಪಾಡಲು ‘ವಜ್ರಕಾಯ’ ನಟಿ ಇದನ್ನ ಅಚ್ಚುಕಟ್ಟಾಗಿ ಪಾಲಿಸ್ತಾರೆ

ವಜ್ರಕಾಯ ಚಿತ್ರದಲ್ಲಿ ಪಟಾಕ ಪಾರ್ವತಿಯಾಗಿ ಸಿಡಿದಿದ್ದ ನಭಾ ನಟೇಶ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ನಭಾ ನಟೇಶ್ ಸ್ಯಾಂಡಲ್​ವುಡ್ ಚಿತ್ರದ ಮೂಲಕ ಸಿನಿಜರ್ನಿ ಆರಂಭಿಸಿದ ತಾರೆ. ಆದರೆ ಆ ಬಳಿಕ ಸಾಹೇಬ ಎಂಬ ಚಿತ್ರದಲ್ಲಿ ಬಣ್ಣಹಚ್ಚಿದ್ದು ಬಿಟ್ಟರೆ ಕನ್ನಡದಲ್ಲಿ ಎಲ್ಲೂ ಕಾಣಿಸಿಕೊಳ್ಳದ ಇವರು ಟಾಲಿವುಡ್​ನಲ್ಲಿ ಮಾತ್ರ ಸಕ್ರಿಯ ನಟಿಯಾಗಿದ್ದಾರೆ. ಬ್ಯೂಟಿಫುಲ್ ನಭಾ ಅವರ ಅಭಿನಯ ಮತ್ತು ಸೌಂದರ್ಯಕ್ಕೆ ಪ್ರೇಕ್ಷಕರು ಬಹುಪರಾಕ್ ಅಂದಿದ್ದಾರೆ. ಹಾಲುಗೆನ್ನೆ ಚೆಲುವೆ ನಭಾ ನಟೇಶ್ ನಟನೆಯ ಜೊತೆಗೆ ಸೌಂದರ್ಯದಲ್ಲೂ ಪರ್ಪೆಕ್ಟ್. ಬ್ಯೂಟಿಫುಲ್ ನಭಾ ಅವರ […]

ಫಿಟ್ನೆಸ್​ ಕಾಪಾಡಲು 'ವಜ್ರಕಾಯ' ನಟಿ ಇದನ್ನ ಅಚ್ಚುಕಟ್ಟಾಗಿ ಪಾಲಿಸ್ತಾರೆ
Follow us
ಸಾಧು ಶ್ರೀನಾಥ್​
|

Updated on:Oct 30, 2019 | 2:06 PM

ವಜ್ರಕಾಯ ಚಿತ್ರದಲ್ಲಿ ಪಟಾಕ ಪಾರ್ವತಿಯಾಗಿ ಸಿಡಿದಿದ್ದ ನಭಾ ನಟೇಶ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ನಭಾ ನಟೇಶ್ ಸ್ಯಾಂಡಲ್​ವುಡ್ ಚಿತ್ರದ ಮೂಲಕ ಸಿನಿಜರ್ನಿ ಆರಂಭಿಸಿದ ತಾರೆ. ಆದರೆ ಆ ಬಳಿಕ ಸಾಹೇಬ ಎಂಬ ಚಿತ್ರದಲ್ಲಿ ಬಣ್ಣಹಚ್ಚಿದ್ದು ಬಿಟ್ಟರೆ ಕನ್ನಡದಲ್ಲಿ ಎಲ್ಲೂ ಕಾಣಿಸಿಕೊಳ್ಳದ ಇವರು ಟಾಲಿವುಡ್​ನಲ್ಲಿ ಮಾತ್ರ ಸಕ್ರಿಯ ನಟಿಯಾಗಿದ್ದಾರೆ.

ಬ್ಯೂಟಿಫುಲ್ ನಭಾ ಅವರ ಅಭಿನಯ ಮತ್ತು ಸೌಂದರ್ಯಕ್ಕೆ ಪ್ರೇಕ್ಷಕರು ಬಹುಪರಾಕ್ ಅಂದಿದ್ದಾರೆ. ಹಾಲುಗೆನ್ನೆ ಚೆಲುವೆ ನಭಾ ನಟೇಶ್ ನಟನೆಯ ಜೊತೆಗೆ ಸೌಂದರ್ಯದಲ್ಲೂ ಪರ್ಪೆಕ್ಟ್. ಬ್ಯೂಟಿಫುಲ್ ನಭಾ ಅವರ ಫಿಟ್ನೆಸ್ ಗುಟ್ಟು ನಿತ್ಯ ಪಾಲಿಸುವ ಡಯಟ್ ಚಾರ್ಟ್ ಅಂತೆ. ನಭಾ ಅಚ್ಚುಕಟ್ಟಾಗಿ ಫುಡ್ ಮೆನು ಪಾಲಿಸ್ತಾರೆ. ಬೆಳಗಿನ ಒಂದು ಲೋಟ ಬಿಸಿನೀರು ಕುಡಿಯುವುದರೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸ್ತಾರಂತೆ ನಭಾ.

ಇನ್ನು ಡಯಟ್ ಚಾರ್ಟ್​ನಲ್ಲಿ ಇವರು ಆಹಾರದ ಪ್ರಮಾಣ, ಗುಣಮಟ್ಟ ಮತ್ತು ಯಾವ ಸಮಯದಲ್ಲಿ ಸೇವಿಸಬೇಕು ಎಂಬುದರ ಕಡೆಗೆ ಹೆಚ್ಚಿನ ಗಮನ ಹರಿಸ್ತಾರೆ. ಯಾಕಂದ್ರೆ ನಾವು ಸೇವಿಸುವ ಆಹಾರ ಫಿಟ್ನೆಸ್​ ಮತ್ತು ಸೌಂದರ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತೆ. ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡುವುದು ಆರೋಗ್ಯಕರ ಮೈಕಟ್ಟಿನ ಸೂತ್ರ ಅಂತಾರೆ ಫಿಟ್ನೆಸ್ ಪ್ರೀಕ್ ನಭಾ.

ಈ ಕಾರಣದಿಂದ ರಾತ್ರಿ ಊಟವನ್ನು ಇವರು 7.30 ಹೊತ್ತಿಗೆ ಮಾಡ್ತಾರಂತೆ. ಇದ್ರ ನಂತ್ರ ಯಾವುದೇ ಹೆವೀ ಫುಡ್ ಸೇವಿಸಲ್ವಂತೆ. ಮಲಗುವ ಟೈಮ್​ಗೆ ಆಹಾರ ಸೇವಿಸದೆ, ರಾತ್ರಿ ಊಟವನ್ನು ಬೇಗನೇ ಮಾಡಿ ಮುಗಿಸಿ ಅನ್ನೋ ಕಿವಿಮಾತು ಕೂಡಾ ಹೇಳ್ತಾರೆ. ಹಾಗೆಯೇ ಕೂದಲಿನ ಆರೈಕೆಗಾಗಿ ನಭಾ ಕನಿಷ್ಟ ಮೂರು ಅಥವಾ ನಾಲ್ಕು ಬಾರಿ ಆಯಿಲ್ ಮಸಾಜ್ ಮಾಡ್ತಾರಂತೆ. 

Published On - 8:27 am, Wed, 30 October 19