ದರ್ಶನ್ ಪರಿಚಯಿಸಿದ ಮತ್ತೊಬ್ಬ ದರ್ಶನ್ ಯಾರು? ಶೂಟಿಂಗ್ ಸಮಯದ ತಮಾಷೆ ನೆನಪಿಸಿಕೊಂಡ ಡಿ ಬಾಸ್!
Roberrt Success Meet: ನಾನೂ ದರ್ಶನ್, ಇವರೂ ದರ್ಶನ್ ಎಂದು ದರ್ಶನ್ ಹೆಸರಿನ ಇಬ್ಬರು ಸಿನಿಮಾ ಸೆಟ್ನಲ್ಲಿ ಇದ್ದ ಕ್ಷಣಗಳನ್ನು, ಅಲ್ಲಿ ಘಟಿಸಿದ ಹಾಸ್ಯ ಪ್ರಸಂಗಗಳನ್ನು ನೆನಪಿಸಿಕೊಂಡಿದ್ದಾರೆ.
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾದ ಸಕ್ಸಸ್ ಮೀಟ್ ಕಾರ್ಯಕ್ರಮ ಬೆಂಗಳೂರಿನ ಪ್ರತಿಷ್ಠಿತ ಹೊಟೇಲ್ ಒಂದರಲ್ಲಿ ನಡೆಯುತ್ತಿದೆ. ನಟ ದರ್ಶನ್, ನಟಿ ಆಶಾ ಭಟ್, ವಿನೋದ್ ಪ್ರಭಾಕರ್, ನಿರ್ಮಾಪಕ ಉಮಾಪತಿ ಗೌಡ ಮತ್ತಿತರರು ಚಿತ್ರದ ಸಕ್ಸಸ್ ಬಗ್ಗೆ ಮಾತನಾಡಿದ್ದಾರೆ. ಇಡೀ ಚಿತ್ರತಂಡ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದೆ. ಈ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾದಲ್ಲಿ ಕಷ್ಟಪಟ್ಟು ಕೆಲಸ ಮಾಡಿದ ಇಡೀ ತಂಡಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ವೇದಿಕೆಯಲ್ಲಿ ಮಾತು ಆರಂಭಿಸಿದ ದರ್ಶನ್ ಎಲ್ಲರಿಗೂ ಧನ್ಯವಾದ ಹೇಳಿದ ಬಳಿಕ, ವಿಶೇಷವಾಗಿ ಮೂವರನ್ನು ವೇದಿಕೆ ಮೇಲೆ ಕರೆದು ಎಲ್ಲರಿಗೂ ಪರಿಚಯಿಸಿದರು. ಈ ಮೂವರು ಇಡೀ ಚಿತ್ರ ತಯಾರಿಯ ಆರಂಭದ ದಿನಗಳಿಂದ ಇಂದಿನವರೆಗೂ ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದರು. ಇವರಿಗೆ ವಿಶೇಷ ಅಭಿನಂದನೆಗಳನ್ನು ತಿಳಿಸಲೇಬೇಕು ಎಂದಿದ್ದಾರೆ. ಚಿರಾಗ್ ಮತ್ತು ದರ್ಶನ್ ಎಂಬವರನ್ನು ವೇದಿಕೆಗೆ ಕರೆದು ಮಾತನಾಡಿದರು.
ನಾನೂ ದರ್ಶನ್, ಇವರೂ ದರ್ಶನ್ ಎಂದು ದರ್ಶನ್ ಹೆಸರಿನ ಇಬ್ಬರು ಸಿನಿಮಾ ಸೆಟ್ನಲ್ಲಿ ಇದ್ದ ಕ್ಷಣಗಳನ್ನು, ಅಲ್ಲಿ ಘಟಿಸಿದ ಹಾಸ್ಯ ಪ್ರಸಂಗಗಳನ್ನು ನೆನಪಿಸಿಕೊಂಡಿದ್ದಾರೆ. ನಾನು ದರ್ಶನ್, ಇವನ ಹೆಸರು ಏನು ಎಂದು ಕೇಳಿದರೆ ಅವನೂ ದರ್ಶನ್. ಸಾಲದ್ದಕ್ಕೆ, ನನ್ನ ಹೆಸರಿನ ಇನಿಶಿಯಲ್ ಎಸ್. ಇವನ ಹೆಸರೂ ಎಸ್. ದರ್ಶನ್. ಪಾಸ್ಪೋರ್ಟ್ ತರಿಸಿ ನೋಡಿದಾಗ ಅಲ್ಲೂ ಹಾಗೇ ಇದೆ. ಇಬ್ಬರ ಹೆಸರೂ ಒಂದೇ ಎಂದು ತಮಾಷೆಯಾಗಿ ಮಾತನಾಡಿದ್ದಾರೆ.
ಯಾರಾದ್ರೂ ಇವನಿಗೆ ‘ಏ ದರ್ಶನ್ ಬಾರೋ’ ಎಂದು ಬೈದರೆ ಅದು ನನಗೋ ಅವನಿಗೋ ಎಂಬಂತೆ ತಮಾಷೆ ಘಟಿಸುತ್ತಿತ್ತು. ಜೋರಾಗಿ ಕೂಗಿ ಬೈದವರು ಆಮೇಲೆ, ಸರ್ ನಿಮಗಲ್ಲ ಸರ್, ಈ ದರ್ಶನ್ಗೆ ಎಂದು ಹೇಳುತ್ತಿದ್ದರು ಎಂದು ಡಿ ಬಾಸ್ ತಮ್ಮ ಶೂಟಿಂಗ್ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಈ ಸಿನಿಮಾ ನನ್ನದೊಬ್ಬನದ್ದೇ ಅಲ್ಲ. ಇಲ್ಲಿ ಇಡೀ ಸಿನಿಮಾ ತಂಡದ ಪರಿಶ್ರಮ ಇದೆ. ಎಲ್ಲರೂ ಬಹಳಷ್ಟು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ನಿರ್ಮಾಪಕ ಉಮಾಪತಿ ಗೌಡ, ನಿರ್ದೇಶಕರ ತರುಣ್ ಸುಧೀರ್, ಹಾಸ್ಯ ನಟ ಶಿವರಾಜ್ ಕೆ.ಆರ್. ಪೇಟೆ, ಕಲಾ ನಿರ್ದೇಶಕ ಮೋಹನ್ ಬಿ. ಕೆರೆ, ಸಂಗೀತ ನಿರ್ದೇಶಕ ಹರಿಕೃಷ್ಣಅ ವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: Roberrt Review: ಹೇಗಿದೆ ಗೊತ್ತಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ? ಹಿಟ್ R ಪ್ಲಾಪ್?
ಇದನ್ನೂ ಓದಿ: Roberrt Collection: 59.8 ಕೋಟಿ ರೂ. ಬಾಚಿಕೊಂಡ ‘ರಾಬರ್ಟ್’! ಇಲ್ಲಿದೆ 4 ದಿನದ ಬಾಕ್ಸ್ ಆಫೀಸ್ ರಿಪೋರ್ಟ್
Published On - 9:38 pm, Tue, 16 March 21