AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯ್ ರಾಘವೇಂದ್ರ ಟಾರ್ಚರ್​​ಗೆ ಸುಸ್ತಾದ ಅನುಶ್ರೀ; ಕೊನೆಗೂ ಮೂಡಿತು ನಗು

ವಿಜಯ್ ರಾಘವೇಂದ್ರ ಮತ್ತು ನಿರೂಪಕಿ ಅನುಶ್ರೀ ಅವರ ಗೆಳೆತನ ಹಲವು ವರ್ಷಗಳದ್ದು. 'ಸೆಕೆಂಡ್ ಕೇಸ್ ಆಫ್ ಸೀತಾರಾಮ' ಸಿನೆಮಾ ಪ್ರಚಾರಕ್ಕಾಗಿ ಇವರು ಮಾಡಿದ ಫನ್ ವಿಡಿಯೋ ವೈರಲ್ ಆಗಿದೆ. ವಿಜಯ್‌ಗೆ ಮಾಸ್ ಡೈಲಾಗ್ ಇಲ್ಲ ಎಂಬ ನೆಪದಲ್ಲಿ ಆರಂಭವಾದ ಈ ಸಂಭಾಷಣೆ, ಅನುಶ್ರೀಗೆ ತಮಾಷೆಯ 'ಟಾರ್ಚರ್' ನೀಡುತ್ತದೆ. ಅಂತಿಮವಾಗಿ, 'ಸೆಕೆಂಡ್ ಕೇಸ್ ಆಫ್ ಕೊಂಡಾಣ' ಸಿನೆಮಾವನ್ನು ಪ್ರೇಕ್ಷಕರಿಗೆ ತಲುಪಿಸಲು ಇಬ್ಬರೂ ವಿನಂತಿಸುತ್ತಾರೆ.

ವಿಜಯ್ ರಾಘವೇಂದ್ರ ಟಾರ್ಚರ್​​ಗೆ ಸುಸ್ತಾದ ಅನುಶ್ರೀ; ಕೊನೆಗೂ ಮೂಡಿತು ನಗು
ವಿಜಯ್-ಅನುಶ್ರೀ
ರಾಜೇಶ್ ದುಗ್ಗುಮನೆ
|

Updated on: Feb 20, 2026 | 7:29 AM

Share

ವಿಜಯ್ ರಾಘವೇಂದ್ರ ಹಾಗೂ ಆ್ಯಂಕರ್ ಅನುಶ್ರೀ (Anushree) ಮಧ್ಯೆ ಒಳ್ಳೆಯ ಗೆಳೆತನ ಇದೆ. ವಿಜಯ್ ರಾಘವೇಂದ್ರ ಅವರು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋಗೆ ಜಡ್ಜ್ ಆಗಿದ್ದು, ಅನುಶ್ರೀ ಆ್ಯಂಕರಿಂಗ್ ಮಾಡುತ್ತಿದ್ದಾರೆ. ಸೆಟ್​​ನಲ್ಲಿ ನಡೆದ ಒಂದು ಫನ್ ವಿಡಿಯೋನ ಅನುಶ್ರೀ ಹಂಚಿಕೊಂಡಿದ್ದಾರೆ. ಈ ವಾರ ರಿಲೀಸ್ ಆದ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ’ ಸಿನಿಮಾದ ಪ್ರಚಾರ ಮಾಡಲು ಈ ವಿಡಿಯೋ ಮಾಡಲಾಗಿದೆ.

ವಿಜಯ್ ರಾಘವೇಂದ್ರ ಅವರು 60ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಪೈಕಿ ಕೆಲವು ಹಿಟ್ ಆಗಿವೆ. ಆದರೆ, ಯಾವುದೇ ಸಿನಿಮಾದಲ್ಲಿ ಅವರಿಗೆ ಮಾಸ್ ಡೈಲಾಗ್ ಇಲ್ಲ. ಈ ಮಾಸ್ ಡೈಲಾಗ್ ಅಥವಾ ನೆನಪಿಕೊಳ್ಳುವ ಡೈಲಾಗ್ ಇಲ್ಲ ಎಂಬ ವಿಷಯದೊಂದಿಗೆ ವಿಡಿಯೋ ಆರಂಭ ಆಗುತ್ತದೆ. ‘ವಿಜಯ್ ನಿನ್ನ ಸಿನಿಮಾದ ಒಂದೊಳ್ಳೆಯ ಡೈಲಾಗ್ ಹೇಳು’ ಎಂದು ಅನುಶ್ರೀ ಕೇಳುತ್ತಾರೆ. ಆದರೆ, ಏನೇ ಮಾಡಿದರೂ ಯಾವ ಸಿನಿಮಾದಲ್ಲೂ ಡೈಲಾಗ್ ಸಿಗಲ್ಲ.

ಹಲವು ಸಿನಿಮಾಗಳ ಹೆಸರನ್ನು ಅನುಶ್ರೀ ಹೇಳುತ್ತಾರೆ. ಆದರೆ, ವಿಜಯ್ ರಾಘವೇಂದ್ರ ಅವರಿಂದ ನಕಾರಾತ್ಮಕ ಉತ್ತರವೇ ಬರುತ್ತದೆ. ಈ ವಿಷಯದಲ್ಲಿ ಅನುಶ್ರೀ ಫ್ರೆಸ್ಟ್ರೇಟ್ ಆಗುತ್ತಾರೆ. ಅವರಿಗೆ ಟಾರ್ಚರ್ ರೀತಿಯ ಫೀಲ್ ಆಗುತ್ತದೆ.

ಇದನ್ನೂ ಓದಿ: ವಿಜಯ್ ರಾಘವೇಂದ್ರ ಮತ್ತು ಅನುಶ್ರೀ ಕಾಮಿಡಿ ಪ್ರಮೋಷನ್: ವಿಡಿಯೋ

ವಿಜಯ್ ‘ಕಳ್ಳ ಮಳ್ಳ ಸುಳ್ಳ’ ಸಿನಿಮಾ ಹೆಸರು ಹೇಳುತ್ತಿದ್ದಂತೆ, ‘ಆ ಮೂರು ನೀನೇ’ ಎನ್ನುತ್ತಾರೆ ಅನುಶ್ರೀ. ‘ನಾನು ಕಳ್ಳನೂ ಅಲ್ಲ, ಮಳ್ಳನೂ ಅಲ್ಲ, ಸುಳ್ಳನೂ ಅಲ್ಲ’ ಎಂದು ವಿಜಯ್ ಉತ್ತರಿಸುತ್ತಾರೆ. ಆಗ, ಅನುಶ್ರೀ, ‘ಇವನು ಸೀತಾರಾಮ್’ ಎನ್ನುತ್ತಾರೆ. ‘ನೀನು ಮೆಂಟಲ್ ಕೇಸ್ ರೀತಿ ಆಡ್ತಾ ಇದೀಯಾ’ ಎಂದು ವಿಜಯ್ ಹೇಳುತ್ತಾರೆ. ‘ಇದು ಮೆಂಟಲ್ ಕೇಸ್ ಅಲ್ಲ, ಸೆಕೆಂಡ್ ಕೇಸ್ ಆಫ್ ಸೀತಾರಾಮ’ ಎಂದರು ಅವರು. ‘20ಕ್ಕೆ ಸೆಕೆಂಡ್ ಕೇಸ್ ಆಫ್ ಸೀತಾರಾಮ ಸಿನಿಮಾ ರಿಲೀಸ್ ಆಗುತ್ತಿದೆ. ದಯವಿಟ್ಟು ನೋಡಿ’ ಎಂದು ವಿಜಯ್ ಹಾಗೂ ಅನುಶ್ರೀ ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ಭೂಮಿ ಹಿಂದಿರುಗಿಸಬೇಕೆಂದು ಆಂದೋಲನ ಘೋಷಿಸಿದ ಕುಮಾರಸ್ವಾಮಿ
ಭೂಮಿ ಹಿಂದಿರುಗಿಸಬೇಕೆಂದು ಆಂದೋಲನ ಘೋಷಿಸಿದ ಕುಮಾರಸ್ವಾಮಿ
ಸ್ನೇಹಿತನಿಗೆ ಸೀಟ್‌ ಕೊಡಿಸಲು ಡೀಲ್‌; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು
ಸ್ನೇಹಿತನಿಗೆ ಸೀಟ್‌ ಕೊಡಿಸಲು ಡೀಲ್‌; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು
ಏತ ನೀರಾವರಿ ಹೆಸರಲ್ಲಿ ಅವೈಜ್ಞಾನಿಕ ಕಾಮಗಾರಿ: ಸಾವಿರಾರು ಮರಗಳಿಗೆ ಅಪಾಯ
ಏತ ನೀರಾವರಿ ಹೆಸರಲ್ಲಿ ಅವೈಜ್ಞಾನಿಕ ಕಾಮಗಾರಿ: ಸಾವಿರಾರು ಮರಗಳಿಗೆ ಅಪಾಯ
ಮಳೆ ಅಬ್ಬರ, ಭೂಕುಸಿತ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್
ಮಳೆ ಅಬ್ಬರ, ಭೂಕುಸಿತ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್
ಕರ್ನಾಟಕದ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದೆ ಕೇಂದ್ರ ತಂಡ
ಕರ್ನಾಟಕದ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದೆ ಕೇಂದ್ರ ತಂಡ
ಚಾಮರಾಜನಗರ ಆದಿವಾಸಿಗಳಿಗೆ ಆಹಾರ ಕಿಟ್ ಸ್ಥಗಿತ
ಚಾಮರಾಜನಗರ ಆದಿವಾಸಿಗಳಿಗೆ ಆಹಾರ ಕಿಟ್ ಸ್ಥಗಿತ
ಗದಗದ ಕೆಆರ್​ಡಿಎಲ್​ ಎಇಇ ಪತ್ರ ಬರೆದು ನಾಪತ್ತೆ ವಿಚಾರಕ್ಕೆ ಸಿಎಂ ಹೀಗಂದ್ರು
ಗದಗದ ಕೆಆರ್​ಡಿಎಲ್​ ಎಇಇ ಪತ್ರ ಬರೆದು ನಾಪತ್ತೆ ವಿಚಾರಕ್ಕೆ ಸಿಎಂ ಹೀಗಂದ್ರು
ಬಿಗ್ ಬಾಸ್ ಕನ್ನಡ: ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ಸುದೀಪ್ ಸ್ವಾಗತ
ಬಿಗ್ ಬಾಸ್ ಕನ್ನಡ: ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ಸುದೀಪ್ ಸ್ವಾಗತ
ಖರ್ಗೆ ಜತೆ ಏನೇನು ಮಾತುಕತೆಯಾಯ್ತು? ಸಿಎಂ ಡಿಕೆ ಶಿವಕುಮಾರ್ ಮಾಹಿತಿ
ಖರ್ಗೆ ಜತೆ ಏನೇನು ಮಾತುಕತೆಯಾಯ್ತು? ಸಿಎಂ ಡಿಕೆ ಶಿವಕುಮಾರ್ ಮಾಹಿತಿ