ಗುಟ್ಕಾ ಪ್ರಚಾರ: ಶಾರುಖ್, ಅಜಯ್, ಟೈಗರ್ ಶ್ರಾಫ್ಗೆ ನೊಟೀಸ್
Notice to Shah Rukh Khan: ಶ್ರೀಮಂತ ಗುಟ್ಕಾ ಸಂಸ್ಥೆಗಲು ಭಾರತದ ದೊಡ್ಡ ದೊಡ್ಡ ಸ್ಟಾರ್ ನಟರನ್ನು ಮಾತ್ರವಲ್ಲ, ಹಾಲಿವುಡ್ನ ಸ್ಟಾರ್ ನಟರನ್ನು ಕರೆತಂದು ಪ್ರಚಾರ ಮಾಡಿಸುತ್ತಾರೆ. ಈಗ ಭಾರತದ ಸೂಪರ್ ಸ್ಟಾರ್ಗಳಾದ ಶಾರುಖ್ ಖಾನ್, ಅಜಯ್ ದೇವಗನ್, ಟೈಗರ್ ಶ್ರಾಫ್ ಇನ್ನೂ ಕೆಲವು ಸ್ಟಾರ್ ನಟರು ಗುಟ್ಕಾ ಜಾಹೀರಾತಿನಲ್ಲಿ ನಟಿಸುತ್ತಿದ್ದಾರೆ. ಆದರೆ ಇದೀಗ ನೆರೆಯ ಮಹಾರಾಷ್ಟ್ರ ಸರ್ಕಾರವು ಇಂಥಹಾ ನಟರಿಗೆ ಶಾಕ್ ನೀಡಿದೆ.

ಮುಖ್ಯಾಂಶಗಳು
- ಶಾರುಖ್, ಅಜಯ್, ಟೈಗರ್ ಶ್ರಾಫ್ಗೆ ನೊಟೀಸ್
- ಗುಟ್ಕಾ ಪ್ರಚಾರ ಮಾಡಿದ್ದಕ್ಕಾಗಿ ಈ ನೊಟೀಸ್ ನೀಡಲಾಗಿದೆ.
- ನೊಟೀಸ್ನಲ್ಲಿ ಏನಿದೆ? ಇಲ್ಲಿದೆ ಮಾಹಿತಿ
ಕೋಟ್ಯಂತರ ಜನರು ಅಭಿಮಾನಿಗಳಿರುವ, ಫಾಲೋ ಮಾಡುವ ಸಿನಿಮಾ (Cinema) ನಟ-ನಟಿಯರು ಪಾನ್ ಗುಟ್ಕಾ, ಮದ್ಯ, ಅನಾರೋಗ್ಯಕರ ತಿಂಡಿ-ತಿನಿಸುಗಳನ್ನು ಪ್ರಮೋಟ್ ಮಾಡುವುದು ಸರಿಯಲ್ಲ ಎಂಬ ವಾದ ವರ್ಷಗಳಿಂದಲೂ ನಡೆಯುತ್ತಲೇ ಇದೆ. ಆದರೆ ಈ ಶ್ರೀಮಂತ ಗುಟ್ಕಾ ಸಂಸ್ಥೆಗಲು ಭಾರತದ ದೊಡ್ಡ ದೊಡ್ಡ ಸ್ಟಾರ್ ನಟರನ್ನು ಮಾತ್ರವಲ್ಲ, ಹಾಲಿವುಡ್ನ ಸ್ಟಾರ್ ನಟರನ್ನು ಕರೆತಂದು ಪ್ರಚಾರ ಮಾಡಿಸುತ್ತಾರೆ. ಈಗ ಭಾರತದ ಸೂಪರ್ ಸ್ಟಾರ್ಗಳಾದ ಶಾರುಖ್ ಖಾನ್, ಅಜಯ್ ದೇವಗನ್, ಟೈಗರ್ ಶ್ರಾಫ್ ಇನ್ನೂ ಕೆಲವು ಸ್ಟಾರ್ ನಟರು ಗುಟ್ಕಾ ಜಾಹೀರಾತಿನಲ್ಲಿ ನಟಿಸುತ್ತಿದ್ದಾರೆ. ಆದರೆ ಇದೀಗ ನೆರೆಯ ಮಹಾರಾಷ್ಟ್ರ ಸರ್ಕಾರವು ಇಂಥಹಾ ನಟರಿಗೆ ಶಾಕ್ ನೀಡಿದೆ.
ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತವು (FDA) ಬಾಲಿವುಡ್ ನಟರಾದ ಅಜಯ್ ದೇವಗನ್, ಶಾರುಖ್ ಖಾನ್ ಮತ್ತು ಟೈಗರ್ ಶ್ರಾಫ್ ಅವರಿಗೆ ‘ವಿಮಲ್’ ಜಾಹೀರಾತಿನಲ್ಲಿ ನಟಿಸುತ್ತಿರುವ ಕುರಿತು ಶೋಕಾಸ್ ನೋಟಿಸ್ ಜಾರಿ ಮಾಡಿದೆ. ರಾಜ್ಯದಲ್ಲಿ ನಿಷೇಧಿತ ಉತ್ಪನ್ನವಾದ ‘ವಿಮಲ್ ಪಾನ್ ಮಸಾಲ’ದ ಪರವಾಗಿ ಇದು ಪರೋಕ್ಷ ಜಾಹೀರಾತಿಗೆ (surrogate advertising) ಸಮನಾಗಿದೆ ಎಂದು ಎಫ್ಡಿಎ ಆರೋಪಿಸಿದೆ.
ಮಹಾರಾಷ್ಟ್ರದಲ್ಲಿ ತಂಬಾಕು ಮತ್ತು ಪಾನ್ ಮಸಾಲ ಮಾರಾಟ ಹಾಗೂ ಪ್ರಚಾರದ ವಿರುದ್ಧ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತವು ಕ್ರಮ ಜರುಗಿಸುತ್ತಿದೆ. ಇದೀಗ ಈ ಮೂವರು ನಟರು ನಿಯಂತ್ರಕರ ಪರಿಶೀಲನೆಗೆ ಒಳಪಟ್ಟಿದ್ದಾರೆ. ತಮ್ಮ ವಿರುದ್ಧ ಏಕೆ ಕಾನೂನು ಕ್ರಮ ಜರುಗಿಸಬಾರದು ಎಂಬುದಕ್ಕೆ 15 ದಿನಗಳೊಳಗೆ ಲಿಖಿತ ವಿವರಣೆ ನೀಡುವಂತೆ ನಟರಿಗೆ ನೊಟೀಸ್ ಮೂಲಕ ಸೂಚಿಸಲಾಗಿದೆ.
ಗುಟ್ಕಾ, ತಂಬಾಕು ಜಾಹೀರಾತಿನಲ್ಲಿ ತಮ್ಮ ಪಾತ್ರದ ಬಗ್ಗೆ ವಿವರಣೆ ನೀಡುವಂತೆ ಅಜಯ್ ದೇವಗನ್, ಶಾರುಖ್ ಖಾನ್ ಮತ್ತು ಟೈಗರ್ ಶ್ರಾಫ್ ಅವರಿಗೆ ಕೇಳಲಾಗಿದೆ. ಈಗ ಈ ನಟರು ನಟಿಸುತ್ತಿರುವ ‘ವಿಮಲ್ ಇಲಾಯ್ಚಿ’ (ವಿಮಲ್ ಏಲಕ್ಕಿ) ಜಾಹೀರಾತು ‘ವಿಮಲ್ ಪಾನ್ ಮಸಾಲ’ ಬ್ರ್ಯಾಂಡ್‌ನೊಂದಿಗೆ ಸಂಬಂಧವನ್ನು ಸೃಷ್ಟಿಸುತ್ತದೆ ಮತ್ತು ಇದು 2006 ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಪರೋಕ್ಷ ಪ್ರಚಾರಕ್ಕೆ ಸಮನಾಗಿದೆ ಎಂದು ಎಫ್ಡಿಎ ಹೇಳಿದೆ.
ಇದನ್ನೂ ಓದಿ:ಚೀನಾದಲ್ಲೂ ‘ರಾಮಾಯಣ’ ಸಿನಿಮಾದ ಟ್ರೇಲರ್ ನೋಡಿ ಫಿದಾ ಆದ ಪ್ರೇಕ್ಷಕರು
ನೋಟಿಸ್‌ನಲ್ಲಿ, ‘ಉಲ್ಲೇಖಿತ ಜಾಹೀರಾತಿನ ಪರಿಶೀಲನೆಯ ನಂತರ, ಈ ಜಾಹೀರಾತು ಪ್ರಾಥಮಿಕವಾಗಿ ಪಾನ್ ಮಸಾಲದೊಂದಿಗೆ ಸಂಬಂಧ ಹೊಂದಿರುವ ವಿಮಲ್ ಬ್ರ್ಯಾಂಡ್ ಗೆ ಪ್ರಚಾರ ನೀಡುತ್ತಿದೆ ಎಂದು ಕಂಡುಬರುತ್ತದೆ. ಮಹಾರಾಷ್ಟ್ರ ರಾಜ್ಯದಲ್ಲಿ ಪಾನ್ ಮಸಾಲ ತಯಾರಿಕೆ, ಸಂಗ್ರಹಣೆ, ಸಾಗಣೆ, ವಿತರಣೆ ಮತ್ತು ಮಾರಾಟವನ್ನು ಆಹಾರ ಸುರಕ್ಷತಾ ಆಯುಕ್ತರು ಜುಲೈ 13, 2026 ರಂದು ಹೊರಡಿಸಿದ ನಿಷೇಧ ಆದೇಶದ ಅಡಿಯಲ್ಲಿ ಒಂದು ವರ್ಷದ ಅವಧಿಗೆ ನಿಷೇಧಿಸಲಾಗಿದೆ’ ಎಂದು ತಿಳಿಸಲಾಗಿದೆ.
FDA ಈ ಪ್ರಕರಣದಲ್ಲಿ ಮೊದಲ ಬಾರಿಗೆ ಪರೋಕ್ಷ ಜಾಹೀರಾತಿನ ಬಗ್ಗೆ ತನಿಖೆ ನಡೆಸುತ್ತಿದೆ. ಈ ಮೂವರು ನಟರು ಬ್ರ್ಯಾಂಡ್ ರಾಯಭಾರಿಗಳಾಗಿ ಜಾಹೀರಾತಿನಲ್ಲಿ ಭಾಗವಹಿಸಿದ್ದರು. ಮಹಾರಾಷ್ಟ್ರದಲ್ಲಿ 2012 ರಿಂದ ತಂಬಾಕು ಅಥವಾ ನಿಕೋಟಿನ್ ಹೊಂದಿರುವ ಗುಟ್ಕಾ ಮತ್ತು ಪಾನ್ ಮಸಾಲವನ್ನು ನಿಷೇಧಿಸಲಾಗಿದೆ. ಆಯುಕ್ತ ತುಕಾರಾಂ ಮುಂಧೆ ಅವರ ನೇತೃತ್ವದಲ್ಲಿ, ಮಹಾರಾಷ್ಟ್ರ FDA ತಂಬಾಕು ಮಾರಾಟ ಮತ್ತು ಪ್ರಚಾರದ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




