ಮೈತ್ರಿ ಪಡೆಗೆ ಠಕ್ಕರ್ ಕೊಡಲು ಪ್ಲ್ಯಾನ್: 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ ನಿರ್ಧಾರದ ಹಿಂದಿದೆ ಭಾರೀ ಲೆಕ್ಕಾಚಾರ
2028ರ ವಿಧಾನಸಭಾ ಚುನಾವಣೆಗೆ 180 ಕ್ಷೇತ್ರಗಳಲ್ಲಿ ಗೆಲ್ಲುವ ಟಾರ್ಗೆಟ್ ಫಿಕ್ಸ್ ಮಾಡಿಕೊಂಡಿರುವ ಮೈತ್ರಿಪಡೆಗೆ ಕೌಂಟರ್ ನೀಡಲು ಕಾಂಗ್ರೆಸ್ ಸಜ್ಜಾಗಿದೆ. ಕಳೆದ ಚುನಾವಣೆಯಲ್ಲಿ ಸೋತ 84 ಕ್ಷೇತ್ರಗಳಲ್ಲಿ 'ಭಾರತ್ ಜೋಡೋ ಪಾದಯಾತ್ರೆ-2' ನಡೆಸಲು ಕೆಪಿಸಿಸಿ ಪ್ಲಾನ್ ಮಾಡಿದೆ. ಆ ಮೂಲಕ ಪಕ್ಷ ಸಂಘಟನೆಗೆ ಬೂಸ್ಟ್ ನೀಡುವ ಜೊತೆಗೆ ಬಿ.ಕೆ. ಹರಿಪ್ರಸಾದ್ ವರ್ಚಸ್ಸಿಗೆ ಮತ್ತಷ್ಟು ಬಲ ತುಂಬುವ ಯತ್ನ ನಡೆಯಲಿದೆ ಎನ್ನಲಾಗಿದೆ.

ಬೆಂಗಳೂರು, ಸೆಪ್ಟೆಂಬರ್ 28: 2028ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಈಗಿನಿಂದಲೇ ತಾಲೀಮು ಆರಂಭಿಸಿದ್ದು, ತಂತ್ರ-ಪ್ರತಿತಂತ್ರಗಳು ಸಿದ್ಧವಾಗತೊಡಗಿವೆ. ಮುಂಬರಲಿರುವ ಚುನಾವಣೆಯಲ್ಲಿ 180 ಕ್ಷೇತ್ರಗಳನ್ನು ಗೆಲ್ಲಲು ವಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಮೈತ್ರಿ ನಾಯಕರು ಟಾರ್ಗೆಟ್ ಫಿಕ್ಸ್ ಮಾಡಿಕೊಂಡ ಬೆನ್ನಲ್ಲೇ, ಆಡಳಿತಾರೂಢ ಕಾಂಗ್ರೆಸ್ ಕೂಡ ತನ್ನದೇ ಆದ ಸ್ಟ್ರಾಟೆಜಿ ಮಾಡತೊಡಗಿದೆ. ರಾಜ್ಯದ ಬರೋಬ್ಬರಿ 84 ಕ್ಷೇತ್ರಗಳಲ್ಲಿ ಭಾರತ್ ಜೋಡೋ ಪಾದಯಾತ್ರೆ -2ನ್ನು ನಡೆಸಲು ಉದ್ದೇಶಿಸಲಾಗಿದ್ದು, ಈ ಬಗ್ಗೆ ಅದಾಗಲೇ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಘೋಷಣೆ ಕೂಡ ಮಾಡಿದ್ದಾರೆ.
ಕಾಂಗ್ರೆಸ್ ಪಾದಯಾತ್ರೆ ಹಿಂದೆ ಭಾರೀ ರಾಜಕೀಯ ಲೆಕ್ಕಾಚಾರ
- ಪಾದಯಾತ್ರೆ ಮೂಲಕ 180 ಕ್ಷೇತ್ರಗಳ ಟಾರ್ಗೆಟ್ ಫಿಕ್ಸ್ ಮಾಡಿಕೊಂಡಿರುವ ಮೈತ್ರಿಪಡೆಗೆ ಕೌಂಟರ್
- ಸೋತ ಕ್ಷೇತ್ರಗಳಲ್ಲಿ ಸಂಘಟನೆಗೆ ಬಲ ನೀಡಿ ಬಿಜೆಪಿಗೆ ಇಕ್ಕಟ್ಟಿಗೆ ಸಿಲುಕಿಸುವ ಪ್ಲ್ಯಾನ್
- 84 ಕ್ಷೇತ್ರಗಳಲ್ಲಿ ಹೊಸದಾಗಿ ಆಯ್ಕೆಯಾಗಲಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮಂಡಲ ಅಧ್ಯಕ್ಷರು
- ಇವರೆಲ್ಲರಿಗೂ ಪಾದಯಾತ್ರೆ ಮೂಲಕ ಸಂಘಟನೆಯ ಎನರ್ಜಿ ಡ್ರಿಂಕ್ ನೀಡಲಿರುವ ಹರಿಪ್ರಸಾದ್
- ನೂತನ ಡಿಸಿಸಿ ಅಧ್ಯಕ್ಷರಿಗೂ ಪಾದಯಾತ್ರೆ ಮೂಲಕ ತಮ್ಮನ್ನು ತಾವು ಪ್ರೂವ್ ಮಾಡಿಕೊಳ್ಳಲು ಅವಕಾಶ
- 84 ಸೋತ ಕ್ಷೇತ್ರಗಳ ಪೈಕಿ ಕನಿಷ್ಠ 40 ಕ್ಷೇತ್ರಗಳಲ್ಲಿ ಗೆಲ್ಲಲು ಪಾದಯಾತ್ರೆ ಮೂಲಕ ಕಾರ್ಯತಂತ್ರ
- 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪರಾಜಿತ ಅಭ್ಯರ್ಥಿಗಳಿಗೆ ಮರುಜೀವ ಸಿಗುವ ಸಾಧ್ಯತೆ
- ಈ ಕ್ಷೇತ್ರಗಳಲ್ಲಿನ ಪಾದಯಾತ್ರೆ ಮೂಲಕ ಅಕ್ಕಪಕ್ಕದ ಕ್ಷೇತ್ರಗಳಿಗೂ ಸಂಚಲನ ಸೃಷ್ಟಿ
- ಬಿಜೆಪಿ ಶಾಸಕರ ಕ್ಷೇತ್ರದಲ್ಲಿ ಯಾತ್ರೆ ಮೂಲಕ ಯಾವುದೇ ಹೊಂದಾಣಿಕೆ ಇಲ್ಲ ಎಂಬ ಮೆಸೇಜ್
- ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ಘೋಷಣೆಯಾದರೆ ಈ ಮೂಲಕವೇ ಪಕ್ಷ ಸಂಘಟನೆ
- ಪಾದಯಾತ್ರೆಯಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಭಾರೀ ಅನುಕೂಲ ಎಂಬ ಲೆಕ್ಕ
- ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ವರ್ಚಸ್ಸಿಗೆ ಮತ್ತಷ್ಟು ಬಲ ತುಂಬುವ ಯತ್ನ
- ಹರಿಪ್ರಸಾದ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಅಹಿಂದ ಮತ ಬ್ಯಾಂಕ್ ಗಟ್ಟಿಮಾಡಲು ಈ ಮೂಲಕ ಅವಕಾಶ
ಹರಿಪ್ರಸಾದ್ ಅವರು ನೀಡಿರುವ ಮಾಹಿತಿ ಪ್ರಕಾರ ಸೆಪ್ಟೆಂಬರ್ 30ರಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಿಂದ ಪಾದಯಾತ್ರೆ ಆರಂಭವಾಗಲಿದೆ. ರಾಜ್ಯದ ಒಟ್ಟು 84 ಕ್ಷೇತ್ರಗಳ ಪೈಕಿ ಪ್ರತಿಯೊಂದರಲ್ಲಿ ಸುಮಾರು 10 ಕಿಲೋಮೀಟರ್ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ. ಅಕ್ಟೋಬರ್ 20ರ ವರೆಗೆ ಪಾದಯಾತ್ರೆ ನಡೆಯಲಿದ್ದು, ಸಮಾರೋಪ ಎಲ್ಲಿ ಎಂಬ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. 42 ಕ್ಷೇತ್ರಗಳ ಪಾದಯಾತ್ರೆ ಪೂರ್ಣಗೊಂಡ ಬಳಿಕ ಆ ಬಗ್ಗೆ ತಿಳಿಸೋದಾಗಿ ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:59 pm, Mon, 28 September 26




