ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!: BMRCL ವಿರುದ್ಧ ವಿನೂತನ ಪ್ರತಿಭಟನೆ
Bangalore Pink Line Metro: ಬೆಂಗಳೂರಿನ ಪಿಂಕ್ ಲೈನ್ ಮೆಟ್ರೋ ಕಾಮಗಾರಿ ಆರು ನಿಲ್ದಾಣಗಳವರೆಗೆ ಪೂರ್ಣಗೊಂಡಿದ್ದರೂ, ಬಿಎಂಆರ್ಸಿಎಲ್ ಉದ್ಘಾಟನೆಯನ್ನು ವಿಳಂಬಗೊಳಿಸಿದೆ. ರೈಲ್ವೆ ಸುರಕ್ಷತಾ ಆಯುಕ್ತರ ಅನುಮತಿಗಾಗಿ ಕಾಯುತ್ತಿದೆ. ಈ ವಿಳಂಬದಿಂದ ಬೇಸತ್ತ ಸ್ಥಳೀಯರು, ತಾವೇ ರಿಬ್ಬನ್ ಕಟ್ ಮಾಡುವ ಮೂಲಕ ಮೆಟ್ರೋ ಮಾರ್ಗವನ್ನು ಉದ್ಘಾಟಿಸಿದ್ದಾರೆ. ಈ ವಿನೂತನ ಪ್ರತಿಭಟನೆ ಸಾರ್ವಜನಿಕರ ಗಮನ ಸೆಳೆದಿದೆ.
ಬೆಂಗಳೂರು, ಸೆಪ್ಟೆಂಬರ್ 28: ಪಿಂಕ್ ಲೈನ್ ಮೆಟ್ರೋ ಕಾಮಗಾರಿ ಆರು ನಿಲ್ದಾಣಗಳವರೆಗೆ ಸಂಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ. ಆದಾಗ್ಯೂ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ರೈಲ್ವೆ ಸುರಕ್ಷತಾ ಆಯುಕ್ತರ ಅನುಮತಿಗಾಗಿ ಕಾಯುತ್ತಿದೆ. ಈ ವಿಳಂಬದಿಂದಾಗಿ ಮೆಟ್ರೋ ಮಾರ್ಗವನ್ನು ಸಾರ್ವಜನಿಕ ಬಳಕೆಗೆ ತೆರೆಯುವುದು ತಡವಾಗಿದೆ. ಸತತ ವಿಳಂಬದಿಂದ ಬೇಸತ್ತ ಸ್ಥಳೀಯ ನಿವಾಸಿಗಳು ವಿಶಿಷ್ಟ ರೀತಿಯಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾವುದೇ ಅಧಿಕೃತ ಸಮಾರಂಭದ ನಿರೀಕ್ಷೆಯಿಲ್ಲದೆ, ಸ್ಥಳೀಯರೇ ಗುಲಾಬಿ ಮೆಟ್ರೋ ಮಾರ್ಗದ ರಿಬ್ಬನ್ ಕಟ್ ಮಾಡಿ, ಅದನ್ನು ಉದ್ಘಾಟಿಸಿದ್ದಾರೆ. ಈ ವಿನೂತನ ಪ್ರತಿಭಟನೆ ಸಾರ್ವಜನಿಕರ ಗಮನ ಸೆಳೆದಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Sep 28, 2026 02:24 PM
Follow Us

