ಸಲ್ಮಾನ್ ಖಾನ್ ವಿರುದ್ಧ ಯಾವುದೇ ಹೇಳಿಕೆ ನೀಡಬೇಡಿ; ಕಮಾಲ್ ಆರ್ ಖಾನ್ಗೆ ಕೋರ್ಟ್ ಆದೇಶ
ಹಲವು ದಿನಗಳಿಂದ ಸಲ್ಮಾನ್ ಖಾನ್ ಅವರ ಮೇಲೆ ಕಮಾಲ್ ಖಾನ್ ಅವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತ ಬಂದಿದ್ದರು. ಸಲ್ಮಾನ್ ಖಾನ್ ಭ್ರಷ್ಟಾಚಾರಿ. ಅವರ ಬೀಯಿಂಗ್ ಹ್ಯೂಮನ್ ಬ್ರಾಂಡ್ ಮೂಲಕ ಮೋಸ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು.
ಸದಾ ಒಂದಿಲ್ಲೊಂದು ವಿಚಾರಕ್ಕೆ ಸಲ್ಮಾನ್ ಖಾನ್ ವಿರುದ್ಧ ಹರಿಹಾಯುತ್ತಿದ್ದ ನಟ, ಸಿನಿಮಾ ವಿಮರ್ಶಕ ಕಮಾಲ್ ಆರ್ ಖಾನ್ಗೆ ಮುಂಬೈ ಕೋರ್ಟ್ನಲ್ಲಿ ತೀವ್ರ ಹಿನ್ನಡೆ ಉಂಟಾಗಿದೆ. ಯಾವುದೇ ರೀತಿಯ ಮಾನಹಾನಿ ಆಗುವಂತಹ ವಿಚಾರಗಳನ್ನು ಸಲ್ಮಾನ್ ಖಾನ್ ವಿರುದ್ಧ ಪೋಸ್ಟ್ ಮಾಡದಂತೆ ಕೋರ್ಟ್ ಆದೇಶ ನೀಡಿದೆ.
ಹಲವು ದಿನಗಳಿಂದ ಸಲ್ಮಾನ್ ಖಾನ್ ಅವರ ಮೇಲೆ ಕಮಾಲ್ ಖಾನ್ ಅವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತ ಬಂದಿದ್ದರು. ಸಲ್ಮಾನ್ ಖಾನ್ ಭ್ರಷ್ಟಾಚಾರಿ. ಅವರ ಬೀಯಿಂಗ್ ಹ್ಯೂಮನ್ ಬ್ರಾಂಡ್ ಮೂಲಕ ಮೋಸ ಮಾಡಲಾಗುತ್ತಿದೆ. ಮನಿ ಲಾಂಡರಿಂಗ್ ಮಾಡಲಾಗುತ್ತಿದೆ. ಸಲ್ಮಾನ್ ಖಾನ್ ಸಿನಿಮಾ ನಿರ್ಮಾಣ ಸಂಸ್ಥೆಯಲ್ಲಿ ದರೋಡೆಕೋರರು ಇದ್ದಾರೆ ಎಂದೆಲ್ಲ ಕಮಾಲ್ ಖಾನ್ ಮಾತನಾಡಿದ್ದರು. ಈ ಕಾರಣಕ್ಕೆ ಕಮಾಲ್ ವಿರುದ್ಧ ಸಲ್ಲು ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ಮುಂಬೈ ಸಿವಿಲ್ ಕೋರ್ಟ್, ನೇರವಾಗಿ ಅಥವಾ ಪರೋಕ್ಷವಾಗಿ ಸಲ್ಮಾನ್ ವಿರುದ್ಧ ಅಥವಾ ಅವರಿಗೆ ಸಂಬಂಧಿಸಿದ ಉದ್ಯಮ, ಸಂಸ್ಥೆ ಬಗ್ಗೆ ಕಮಾಲ್ ಆರೋಪ ಮಾಡುವಂತಿಲ್ಲ. ಖ್ಯಾತಿ ಅನ್ನೋದನ್ನು ಯಾರೂ ಹಾಳು ಮಾಡಬಾರದು ಎಂದು ಹೇಳಿದೆ.
ತಾವು ರಾಧೆ ಸಿನಿಮಾವನ್ನು ನಿಷ್ಠುರವಾಗಿ ವಿಮರ್ಶೆ ಮಾಡಿದ್ದಕ್ಕಾಗಿಯೇ ಸಲ್ಮಾನ್ ಖಾನ್ ಅವರು ತಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ ಎಂದು ಕಮಾಲ್ ಖಾನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಒಟ್ಟಿನಲ್ಲಿ ರಾಧೆ ಸಿನಿಮಾವನ್ನು ವಿಮರ್ಶೆ ಮಾಡಿದ್ದಕ್ಕೂ ಈ ಮಾನನಷ್ಟ ಮೊಕದ್ದಮೆಗೂ ಯಾವುದೇ ಸಂಬಂಧ ಇಲ್ಲ ಎಂಬುದು ಬಯಲಾಗಿದೆ.
ಇದನ್ನೂ ಓದಿ: Salman Khan: ರಿಮೇಕ್ ಮಾಡೋಕೆ ಸಲ್ಮಾನ್ ಖಾನ್ ಕೊನೆಗೂ ಫೈನಲ್ ಮಾಡಿದ್ರು ಸಿನಿಮಾ
32 ವರ್ಷದ ಕೆರಿಯರ್ನಲ್ಲಿ ಮೊಟ್ಟಮೊದಲ ಬಾರಿಗೆ ಬಯೋಪಿಕ್ಗೆ ಸಹಿ ಹಾಕಿದ ಸಲ್ಮಾನ್ ಖಾನ್
Published On - 7:30 pm, Thu, 24 June 21