AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನ ಗೆಳೆಯನನ್ನೇ ನೋಡಿದಂತಾಗುತ್ತಿದೆ’; ಜ್ಯೂ. ಚಿರು ದಿಟ್ಟಿಸಿ ನೋಡುವ ಫೋಟೋ ಹಂಚಿಕೊಂಡ ಪನ್ನಗಭರಣ

ಇತ್ತೀಚೆಗೆ ಪನ್ನಗಭರಣ ಅವರು ಮೇಘನಾ ಮನೆಗೆ ತೆರಳಿದ್ದರು. ಈ ವೇಳೆ ಜ್ಯೂ. ಚಿರುವನ್ನು ಎತ್ತಿಕೊಂಡಿದ್ದಾರೆ. ಈ ಫೋಟೋದಲ್ಲಿ ಪನ್ನಗಭರಣ ಅವರನ್ನೇ ಮಗು ದಿಟ್ಟಿಸಿ ನೋಡುತ್ತಿದೆ.

‘ನನ್ನ ಗೆಳೆಯನನ್ನೇ ನೋಡಿದಂತಾಗುತ್ತಿದೆ’; ಜ್ಯೂ. ಚಿರು ದಿಟ್ಟಿಸಿ ನೋಡುವ ಫೋಟೋ ಹಂಚಿಕೊಂಡ ಪನ್ನಗಭರಣ
ಜ್ಯೂ. ಚಿರು ದಿಟ್ಟಿಸಿ ನೋಡುವ ಫೋಟೋ ಹಂಚಿಕೊಂಡ ಪನ್ನಗಭರಣ
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Jun 24, 2021 | 6:52 PM

Share

ಪನ್ನಗಭರಣ ಅವರು ಚಿರುಗೆ ತುಂಬಾನೇ ಆಪ್ತರಾಗಿದ್ದರು. ಸಮಯ ಸಿಕ್ಕಾಗೆಲ್ಲ ಇಬ್ಬರೂ ಒಟ್ಟಾಗಿ ಸಮಯ ಕಳೆಯುತ್ತಿದ್ದರು. ಚಿರು ಮೃತಪಟ್ಟ ನಂತರ ಪನ್ನಗಭರಣ ಅವರು ತುಂಬಾನೇ ದುಃಖಪಟ್ಟಿದ್ದರು. ಆಪ್ತ ಸ್ನೇಹಿತನನ್ನು ಕಳೆದುಕೊಂಡಿದ್ದು ಅವರಿಗೆ ತೀವ್ರ ನೋವನ್ನುಂಟು ಮಾಡಿದೆ. ಈಗ ಅವರಿಗೆ ಚಿರಂಜೀವಿ ಸರ್ಜಾ ಅವರನ್ನು ಮರಳಿ ಪಡೆದಂತಾಗಿದೆಯಂತೆ. ಅದಕ್ಕೆ ಕಾರಣ ಜ್ಯೂ. ಚಿರು.

ಕಳೆದ ವರ್ಷ ಚಿರು ಹಾಗೂ ಮೇಘನಾ ರಾಜ್​ ದಂಪತಿಗೆ ಗಂಡು ಮಗು ಜನಿಸಿತ್ತು. ಮಗುವನ್ನು ನೋಡುವ ಮೊದಲೇ ಚಿರು ಮೃತಪಟ್ಟಿದ್ದರು. ಇದು ಚಿರು ಕುಟುಂಬಕ್ಕೆ ಸಾಕಷ್ಟು ನೋವನ್ನುಂಟು ಮಾಡಿದೆ. ಆದರೆ, ಈ ನೋವನ್ನು ದೂರ ಮಾಡುವ ಕೆಲಸ ಮಾಡಿದ್ದಾನೆ ಜ್ಯೂ. ಚಿರು. ಸರ್ಜಾ ಕುಟುಂಬದವರು, ಅವರ ಗೆಳಯರು ಜ್ಯೂ. ಚಿರುವನ್ನು ಸಾಕಷ್ಟು ಇಷ್ಟಪಡುತ್ತಿದ್ದಾರೆ. ಅಲ್ಲದೆ, ಆ ಮಗುವಿನಲ್ಲಿ ಚಿರುವನ್ನು ಕಾಣುತ್ತಿದ್ದಾರೆ.

ಇತ್ತೀಚೆಗೆ ಪನ್ನಗಭರಣ ಅವರು ಮೇಘನಾ ಮನೆಗೆ ತೆರಳಿದ್ದರು. ಈ ವೇಳೆ ಜ್ಯೂ. ಚಿರುವನ್ನು ಎತ್ತಿಕೊಂಡಿದ್ದಾರೆ. ಈ ಫೋಟೋದಲ್ಲಿ ಪನ್ನಗಭರಣ ಅವರನ್ನೇ ಮಗು ದಿಟ್ಟಿಸಿ ನೋಡುತ್ತಿದೆ. ಈ ಫೋಟೋವನ್ನು ಹಂಚಿಕೊಂಡು ಅವರು ಸಂಭ್ರಮಿಸಿದ್ದಾರೆ. ಅಲ್ಲದೆ, ಇದಕ್ಕೆ ವಿಶೇಷ ಕ್ಯಾಪ್ಶನ್​ ಕೂಡ ನೀಡಿದ್ದಾರೆ.

‘ಆತ ನನ್ನನ್ನು ನೋಡುವ ರೀತಿ ನನಗೆ ಇಷ್ಟವಾಗಿದೆ. ನನ್ನ ಗೆಳೆಯ ನೋಡಿದಂತೆ ನೋಡುತ್ತೀಯಾ. ಹೌದು, ನಾನು ನಿನ್ನನ್ನು ಮರಳಿ ಪಡೆದಿದ್ದೇನೆ’ ಎಂದಿದ್ದಾರೆ ಅವರು. ಈ ಫೋಟೋ ನೋಡಿದ ಚಿರು ಅಭಿಮಾನಿಗಳು ಫೋಟೋಗೆ ಕಮೆಂಟ್​ ಮಾಡಿ ಖುಷಿಪಟ್ಟಿದ್ದಾರೆ.

ಜೂನ್ 7ರಂದು ಚಿರಂಜೀವಿ ಸರ್ಜಾ ಅವರ ಮೊದಲ ಪುಣ್ಯ ತಿಥಿ ನೆರವೇರಿತು. ಕನಕಪುರ ರಸ್ತೆಯ ನೆಲಗುಳಿ ಬಳಿ ಇರುವ ಬೃಂದಾವನ ಫಾರ್ಮ್​ಹೌಸ್​ನಲ್ಲಿ ಚಿರು ಸಮಾಧಿಗೆ ತೆರಳಿ ಕುಟುಂಬಸ್ಥರು ಹಾಗೂ ಆಪ್ತರು ಪೂಜೆ ಸಲ್ಲಿಸಿದ್ದಾರೆ. ನಿರ್ದೇಶಕ ಪನ್ನಗಭರಣ ಕೂಡ ಅಲ್ಲಿಗೆ ತೆರಳಿ ಪೂಜೆ ಸಲ್ಲಿಸಿದ್ದರು.

ಇದನ್ನೂ ಓದಿ: Chiranjeevi Sarja Death Anniversary: ಚಿರಂಜೀವಿ ಸರ್ಜಾ ಅಗಲಿದ ಕಹಿ ನೆನಪಿಗೆ ಒಂದು ವರ್ಷ; ಫೋಟೋ ಹಂಚಿಕೊಂಡ ಮೇಘನಾ ರಾಜ್

ಚಿರಂಜೀವಿ ಸರ್ಜಾ ಪುತ್ರ ಜ್ಯೂ. ಚಿರುಗೆ ಈ ಹಾಡು ಸಖತ್ ಇಷ್ಟ; ವಿಡಿಯೋ ವೈರಲ್​

Published On - 5:22 pm, Thu, 24 June 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ