Father’s Day: ಚಿರಂಜೀವಿ ಸರ್ಜಾ ಪುತ್ರ ಜ್ಯೂ. ಚಿರುಗೆ ಈ ಹಾಡು ಸಖತ್ ಇಷ್ಟ; ವಿಡಿಯೋ ವೈರಲ್​

Chiranjeevi Sarja | Meghana: ಚಿರಂಜೀವಿ ಸರ್ಜಾ ಮತ್ತು ಅದಿತಿ ಪ್ರಭುದೇವ ಜೋಡಿಯಾಗಿ ‘ಸಿಂಗ’ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾದ ‘ವಾಟ್​ ಎ ಬ್ಯೂಟಿಫುಲ್​ ಹುಡುಗಿ ಶಿವ ಶಿವ..’ ಎಂದರೆ ಜ್ಯೂ. ಚಿರುಗೆ ಸಖತ್​ ಇಷ್ಟ.

Father's Day: ಚಿರಂಜೀವಿ ಸರ್ಜಾ ಪುತ್ರ ಜ್ಯೂ. ಚಿರುಗೆ ಈ ಹಾಡು ಸಖತ್ ಇಷ್ಟ; ವಿಡಿಯೋ ವೈರಲ್​
ಚಿರಂಜೀವಿ ಸರ್ಜಾ, ಜ್ಯೂ. ಚಿರು
Follow us
TV9 Web
| Updated By: ಮದನ್​ ಕುಮಾರ್​

Updated on: Jun 20, 2021 | 11:41 AM

ನಟಿ ಮೇಘನಾ ರಾಜ್​ ಅವರು ಸದ್ಯ ತಮ್ಮ ಮಗನ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿದ್ದರೂ ಸೋಶಿಯಲ್​ ಮೀಡಿಯಾ ಮೂಲಕ ಅವರು ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇದ್ದಾರೆ. ಇನ್ನು, ಅವರ ಪುತ್ರ ಜ್ಯೂ. ಚಿರು ಕೂಡ ಸ್ಟಾರ್​ ಆಗಿದ್ದಾನೆ. ಆತನ ಫೋಟೋ ಮತ್ತು ವಿಡಿಯೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಮೇಘನಾ ರಾಜ್​ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇಂದು (ಜೂ.20) ಅಪ್ಪಂದಿರ ದಿನಾಚರಣೆ ಸಲುವಾಗಿ ಚಿರಂಜೀವಿ ಸರ್ಜಾ ಪುತ್ರನ ಹೊಸ ವಿಡಿಯೋ ಪೋಸ್ಟ್​ ಮಾಡಿದ್ದಾರೆ ಮೇಘನಾ.

ಚಿರಂಜೀವಿ ಪುತ್ರನಿಗೆ ಇನ್ನೂ ಹೆಸರಿಟ್ಟಿಲ್ಲ. ಸದ್ಯಕ್ಕೆ ಜೂ. ಚಿರು ಎಂದೇ ಕರೆಯಲಾಗುತ್ತಿದೆ. ಲಾಕ್​ಡೌನ್​, ಕೊರೊನಾ ಭೀತಿ ಕಾರಣದಿಂದ ಎಲ್ಲಿಯೂ ಸುತ್ತಾಡದೇ ಮನೆಯಲ್ಲಿ ಇರುವ ಜ್ಯೂ. ಚಿರು ಲ್ಯಾಪ್​ಟಾಪ್​ನಲ್ಲಿ ಸಿನಿಮಾ ಹಾಡುಗಳನ್ನು ಎಂಜಾಯ್​ ಮಾಡುತ್ತಿದ್ದಾನೆ. ಅದರಲ್ಲೂ ಅಪ್ಪ ಚಿರಂಜೀವಿ ಸರ್ಜಾ ನಟನೆಯ ಹಾಡುಗಳೆಂದರೆ ಅವನಿಗೆ ಸಖತ್​ ಇಷ್ಟ. ಪದೇಪದೇ ಅದೇ ಹಾಡುಗಳನ್ನು ರಿಪೀಟ್​ ಮೋಡ್​ನಲ್ಲಿ ನೋಡುತ್ತಿದ್ದಾನೆ. ಈ ವಿಡಿಯೋವನ್ನು ಮೇಘನಾ ರಾಜ್​ ಈಗ ಶೇರ್​ ಮಾಡಿಕೊಂಡಿದ್ದಾರೆ.

ಚಿರಂಜೀವಿ ಸರ್ಜಾ ಮತ್ತು ಅದಿತಿ ಪ್ರಭುದೇವ ಜೋಡಿಯಾಗಿ ‘ಸಿಂಗ’ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾದ ‘ವಾಟ್​ ಎ ಬ್ಯೂಟಿಫುಲ್​ ಹುಡುಗಿ ಶಿವ ಶಿವ..’ ಎಂದರೆ ಜ್ಯೂ. ಚಿರುಗೆ ಸಖತ್​ ಇಷ್ಟ. ‘ಇದು ಪ್ಲ್ಯಾನ್​ ಮಾಡಿ ಆಗಿರುವುದಲ್ಲ. ಈ ಕೀಬೋರ್ಡ್​ ಎಂದರೆ ಅವನಿಗೆ ತುಂಬ ಕುತೂಹಲ. ಖುಷಿಯಿಂದ ಅದನ್ನು ಒತ್ತುತ್ತಿದ್ದ. ಅವನು ಎಂಥ ಬುದ್ಧಿವಂತ ಎಂದರೆ ಸರಿಯಾದ ಬಟನ್​ ಪ್ರೆಸ್​ ಮಾಡಿದ. ಆಗ ಅಪ್ಪನ ಸಿನಿಮಾದ ಫೇವರೀಟ್​ ಸಾಂಗ್​ ಬಂತು. ಮತ್ತೆ ಬೇಕು ಎಂದ. ನಾನು ಖುಷಿಯಿಂದ ಪದೇಪದೇ ಪ್ಲೇ ಮಾಡಿದೆ. ಹ್ಯಾಪಿ ಫಾದರ್ಸ್​ ಡೇ’ ಎಂದು ಮೇಘನಾ ರಾಜ್​ ಬರೆದುಕೊಂಡಿದ್ದಾರೆ.

View this post on Instagram

A post shared by Meghana Raj Sarja (@megsraj)

ಸದ್ಯ ಈ ವಿಡಿಯೋ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್​ ಅಭಿಮಾನಿಗಳ ಬಳಗದಲ್ಲಿ ವೈರಲ್​ ಆಗುತ್ತಿದೆ. ಚಿರು ಹೃದಯಾಘಾತದಿಂದ ನಿಧನರಾಗಿ ಒಂದು ವರ್ಷ ಕಳೆದಿದೆ. ನಟನೆಯಿಂದ ಮೇಘನಾ ಸ್ವಲ್ಪ ಅಂತರ ಕಾಯ್ದುಕೊಂಡಿದ್ದಾರೆ. ಅವರು ಆದಷ್ಟು ಬೇಗ ಕಮ್​ಬ್ಯಾಕ್​ ಮಾಡಲಿ. ಒಳ್ಳೆಯ ಪಾತ್ರ ಮತ್ತು ಸಿನಿಮಾ ಮೂಲಕ ಬೆಳ್ಳಿತೆರೆಗೆ ಮರಳಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ.

ಇದನ್ನೂ ಓದಿ:

Meghana Raj: 2 ತಿಂಗಳ ಹಸುಗೂಸಿಗೆ ಕೊವಿಡ್​ ಬಂದಾಗ ಎದುರಾಗಿದ್ದ ಭಯದ ಪರಿಸ್ಥಿತಿ ಬಗ್ಗೆ ವಿವರಿಸಿದ ಮೇಘನಾ ರಾಜ್​

Meghana Raj: ಮೇಘನಾ ರಾಜ್​ ಜನ್ಮದಿನಕ್ಕೆ ವೈರಲ್​ ಆಯ್ತು ಜ್ಯೂನಿಯರ್​ ಚಿರು ವಿಡಿಯೋ

ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ