ಶಿವರಾಜ್​ಕುಮಾರ್​-ಸುಧಾರಾಣಿ ‘ಆನಂದ್’​ ಚಿತ್ರಕ್ಕೆ 35 ವರ್ಷ; ಅಪರೂಪದ ಫೋಟೋ ಹಂಚಿಕೊಂಡ ನಟಿ

35 years of Anand: ವಿಶೇಷ ಎಂದರೆ, ‘ಆನಂದ್​’ ಚಿತ್ರ ತೆರೆ ಕಾಣುವುದಕ್ಕೂ ಮುನ್ನ ಸುಧಾರಾಣಿ ಅವರ ಹೆಸರು ಜಯಶ್ರೀ ಆಗಿತ್ತು. ಪತ್ರಿಕೆಗಳಲ್ಲಿ ಬರುತ್ತಿದ್ದ ಕೆಲವು ಲೇಖನಗಳಲ್ಲೂ ಅವರ ಹೆಸರನ್ನು ಜಯಶ್ರೀ ಎಂದೇ ಬರೆಯಲಾಗುತ್ತಿತ್ತು.

ಶಿವರಾಜ್​ಕುಮಾರ್​-ಸುಧಾರಾಣಿ ‘ಆನಂದ್’​ ಚಿತ್ರಕ್ಕೆ 35 ವರ್ಷ; ಅಪರೂಪದ ಫೋಟೋ ಹಂಚಿಕೊಂಡ ನಟಿ
ಸುಧಾರಾಣಿ-ಶಿವರಾಜ್​ಕುಮಾರ್​
Follow us
|

Updated on: Jun 20, 2021 | 9:16 AM

ಕನ್ನಡ ಚಿತ್ರರಂಗದಲ್ಲಿ ಶಿವರಾಜ್​ಕುಮಾರ್​ ಮತ್ತು ಸುಧಾರಾಣಿ ಅವರದ್ದು ಹಿಟ್​ ಜೋಡಿ. ಒಂದೇ ಸಮಯಕ್ಕೆ ಚಿತ್ರರಂಗಕ್ಕೆ ಕಾಲಿಟ್ಟ ಈ ಮಹಾನ್​ ಕಲಾವಿದರು ಬಳಿಕ ಸ್ಯಾಂಡಲ್​ವುಡ್​ನಲ್ಲಿ ಮಾಡಿದ್ದು ದೊಡ್ಡ ಸಾಧನೆ. ನಾಯಕ-ನಾಯಕಿಯಾಗಿ ಇಬ್ಬರೂ ನಟಿಸಿದ ಮೊದಲ ಸಿನಿಮಾ ‘ಆನಂದ್​’. 1986ರಲ್ಲಿ ತೆರೆಕಂಡ ಆ ಚಿತ್ರಕ್ಕೀಗ 35 ವರ್ಷ ತುಂಬಿದೆ. ಅದನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ಸುಧಾರಾಣಿ ಅವರಿಗೆ ಈ ಸಿನಿಮಾದಿಂದ ಚಿತ್ರರಂಗದಲ್ಲಿ ಬಹುದೊಡ್ಡ ಯಶಸ್ಸು ಸಿಕ್ಕಿತ್ತು. ಡಾ. ರಾಜ್​ಕುಮಾರ್​ ಪುತ್ರನ ಮೊದಲ ಚಿತ್ರಕ್ಕೆ ಹೀರೋಯಿನ್​ ಆಗುವುದು ಎಂದರೆ ತಮಾಷೆಯ ಮಾತಲ್ಲ. ಅಂತಹ ಸುವರ್ಣ ಅವಕಾಶ ಅವರಿಗೆ ಒದಗಿಬಂದಿತ್ತು. ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಸುಧಾರಾಣಿ ಅವರು ನಂತರ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿ ಮೆರೆದರು. ಈಗ ‘ಆನಂದ್​’ ಚಿತ್ರ 35 ವಸಂತಗಳನ್ನು ಪೂರೈಸಿರುವುದಕ್ಕೆ ಸುಧಾರಾಣಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ವಿಶೇಷ ಎಂದರೆ, ಆಗಿನ್ನೂ ಸುಧಾರಾಣಿ ಅವರ ಹೆಸರು ಜಯಶ್ರೀ ಆಗಿತ್ತು. ಪತ್ರಿಕೆಗಳಲ್ಲಿ ಬರುತ್ತಿದ್ದ ಕೆಲವು ಲೇಖನಗಳಲ್ಲೂ ಅವರ ಹೆಸರನ್ನು ಜಯಶ್ರೀ ಎಂದೇ ಬರೆಯಲಾಗುತ್ತಿತ್ತು. ಆನಂದ್​ ಸಿನಿಮಾದಿಂದಾಗಿ ಅವರು ಸುಧಾರಾಣಿಯಾಗಿ ಬದಲಾದರು. ಚಿತ್ರಕ್ಕಾಗಿ ಶಿವರಾಜ್​ಕುಮಾರ್ ಜೊತೆ​ ಮಾಡಿಸಿದ್ದ ಫೋಟೋಶೂಟ್​, ಶೂಟಿಂಗ್​ ಸಮಯದ ಫೋಟೋ, ಶತದಿನೋತ್ಸವ ಸಂಭ್ರಮದ ಪೋಸ್ಟರ್,​ ಆಹ್ವಾನ ಪತ್ರಿಕೆ ಹಾಗೂ ಸೋಲೋ ಫೋಟೋಶೂಟ್​ ಮುಂತಾದ್ದನ್ನು ಸುಧಾರಾಣಿ ಈಗ ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಆ ಮೂಲಕ ಅವರು ನೆನಪಿನ ಪುಟ ತೆರೆದಿದ್ದಾರೆ.

‘1986ರ ಜೂನ್​ 19. ನನ್ನ ಜೀವನದ ಬಹುಮುಖ್ಯ ದಿನ. ಆನಂದ್​ ಸಿನಿಮಾ ತೆರೆಕಂಡು 35 ವರ್ಷ ಕಳೆಯಿತು. ಇದು ಸಾಧ್ಯವಾಗಲು ಕಾರಣರಾದ ಎಲ್ಲರಿಗೂ ನನ್ನ ಧನ್ಯವಾದಗಳು. ನನ್ನ ಮೊದಲ ದಿನದ ಶೂಟಿಂಗ್​ನಿಂದ 100 ದಿನಗಳ ಸಮಾರಂಭದವರೆಗಿನ ಕೆಲವು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದೇನೆ’ ಎಂದು ಇನ್​ಸ್ಟಗ್ರಾಮ್​ನಲ್ಲಿ ಸುಧಾರಾಣಿ ಬರೆದುಕೊಂಡಿದ್ದಾರೆ.

ಶಿವಣ್ಣ ಚಿತ್ರರಂಗಕ್ಕೆ ಕಾಲಿಟ್ಟು 35 ವರ್ಷ ಆಯಿತು ಎಂದು ‘ಹ್ಯಾಟ್ರಿಕ್​​ ಹೀರೋ’ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಆನಂದ್​ ಚಿತ್ರದ ತುಣುಕುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡು ಸಂಭ್ರಮಿಸಲಾಗುತ್ತಿದೆ. ‘ಆನಂದ್​’ ಚಿತ್ರಕ್ಕೆ ಸಿಂಗೀತಂ ಶ್ರೀನಿವಾಸ್​ ರಾವ್​ ನಿರ್ದೇಶನ ಮಾಡಿದ್ದರು. ಪಾರ್ವತಮ್ಮ ರಾಜ್​ಕುಮಾರ್​ ನಿರ್ಮಾಪಕಿ ಆಗಿದ್ದರು. ರಾಜೇಶ್​, ತಾರಾ, ಜಯಂತಿ, ತೂಗುದೀಪ ಶ್ರೀನಿವಾಸ್​ ಮುಂತಾದವರು ಸಹ ನಟಿಸಿದ್ದರು.

ಇದನ್ನೂ ಓದಿ:

550ಕ್ಕೂ ಹೆಚ್ಚು ಬಾರಿ ರೀ-ರಿಲೀಸ್​ ಆದ ಶಿವರಾಜ್​ಕುಮಾರ್​-ಉಪೇಂದ್ರ ಓಂ ಚಿತ್ರಕ್ಕೆ 26 ವರ್ಷ; ಸಿನಿಮಾ ಮಾಡಿದ ದಾಖಲೆಗಳೆಷ್ಟು?

ಗ್ಲೆನ್​ ಮ್ಯಾಕ್ಸ್​​ವೆಲ್​​ಗೆ ಗೊತ್ತು ಸೆಂಚುರಿ ಸ್ಟಾರ್​ ಶಿವರಾಜ್​ಕುಮಾರ್​; ಶಿವಣ್ಣನ ಬಗ್ಗೆ ಮ್ಯಾಕ್ಸಿ ಹೇಳಿದ್ದೇನು?

ತಾಜಾ ಸುದ್ದಿ
ಅಸ್ಸಾಂನಲ್ಲಿ ಭೀಕರ ಪ್ರವಾಹ; ಪ್ರಾಣ ಒತ್ತೆಯಿಟ್ಟು ಕರುವನ್ನು ಕಾಪಾಡಿದ ಜನ
ಅಸ್ಸಾಂನಲ್ಲಿ ಭೀಕರ ಪ್ರವಾಹ; ಪ್ರಾಣ ಒತ್ತೆಯಿಟ್ಟು ಕರುವನ್ನು ಕಾಪಾಡಿದ ಜನ
ರಾತ್ರಿ ಆದ್ರೂ ಜನಸಾಗರ ಕಂಡು ಕೈ ಎತ್ತಿ ಮುಗಿದ ರೋಹಿತ್, ಕೊಹ್ಲಿ
ರಾತ್ರಿ ಆದ್ರೂ ಜನಸಾಗರ ಕಂಡು ಕೈ ಎತ್ತಿ ಮುಗಿದ ರೋಹಿತ್, ಕೊಹ್ಲಿ
ಟೀಂ ಇಂಡಿಯಾ ವಿಜಯೋತ್ಸವದಲ್ಲಿ ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಫ್ಯಾನ್ಸ್
ಟೀಂ ಇಂಡಿಯಾ ವಿಜಯೋತ್ಸವದಲ್ಲಿ ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಫ್ಯಾನ್ಸ್
ಮುಂಬೈನಲ್ಲಿ ಜನಸಾಗರ ಮಧ್ಯೆ ಕಪ್ ಹಿಡಿದು ಕುಣಿದ ಬ್ಯೂ ಬಾಯ್ಸ್: ವಿಡಿಯೋ ನೋಡಿ
ಮುಂಬೈನಲ್ಲಿ ಜನಸಾಗರ ಮಧ್ಯೆ ಕಪ್ ಹಿಡಿದು ಕುಣಿದ ಬ್ಯೂ ಬಾಯ್ಸ್: ವಿಡಿಯೋ ನೋಡಿ
ಬ್ರಹ್ಮಾವರ ತಾಲ್ಲೂಕಿನ ಮಡಿಸಾಲು ಹಳ್ಳ ಉಕ್ಕಿ ತಗ್ಗುಪ್ರದೇಶಗಳು ಜಲಾವೃತ
ಬ್ರಹ್ಮಾವರ ತಾಲ್ಲೂಕಿನ ಮಡಿಸಾಲು ಹಳ್ಳ ಉಕ್ಕಿ ತಗ್ಗುಪ್ರದೇಶಗಳು ಜಲಾವೃತ
ಮುಂಬೈ ಏರ್‌ಪೋರ್ಟ್‌ನಲ್ಲಿ ಟೀಂ ಇಂಡಿಯಾದ ಆಟಗಾರರಿಗೆ ವಾಟರ್ ಸೆಲ್ಯೂಟ್‌
ಮುಂಬೈ ಏರ್‌ಪೋರ್ಟ್‌ನಲ್ಲಿ ಟೀಂ ಇಂಡಿಯಾದ ಆಟಗಾರರಿಗೆ ವಾಟರ್ ಸೆಲ್ಯೂಟ್‌
ದರ್ಶನ್ ಹಾಗೆ ಮಾಡಿರಲು ಸಾಧ್ಯವಿಲ್ಲ: ಸುಮಲತಾ ಅಂಬರೀಶ್
ದರ್ಶನ್ ಹಾಗೆ ಮಾಡಿರಲು ಸಾಧ್ಯವಿಲ್ಲ: ಸುಮಲತಾ ಅಂಬರೀಶ್
ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮುಂಬೈ ಬಂದ ಟೀಮ್ ಇಂಡಿಯಾಗೆ ಭವ್ಯ ಸ್ವಾಗತ
ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮುಂಬೈ ಬಂದ ಟೀಮ್ ಇಂಡಿಯಾಗೆ ಭವ್ಯ ಸ್ವಾಗತ
ಟೀಂ ಇಂಡಿಯಾ ವಿಜಯೋತ್ಸವಕ್ಕೆ ಕಡಲ ಕಿನಾರೆಯಲ್ಲಿ ಜನ ಸಾಗರ: ವಿಹಂಗಮ ನೋಟ
ಟೀಂ ಇಂಡಿಯಾ ವಿಜಯೋತ್ಸವಕ್ಕೆ ಕಡಲ ಕಿನಾರೆಯಲ್ಲಿ ಜನ ಸಾಗರ: ವಿಹಂಗಮ ನೋಟ
ದರ್ಶನ್ ಕುಟುಂಬ  ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವೆ: ಸುಮಲತಾ ಅಂಬರೀಶ್
ದರ್ಶನ್ ಕುಟುಂಬ  ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವೆ: ಸುಮಲತಾ ಅಂಬರೀಶ್